Sathya: ಗಂಡನನ್ನು ಉಳಿಸಿಕೊಳ್ಳಲು ಸತ್ಯ ಮಾಸ್ಟರ್ ಪ್ಲಾನ್; ಸಿಕ್ಕಿಬೀಳ್ತಾಳಾ ಕೀರ್ತನಾ?
ಗಂಡನನ್ನು ಹೇಗಾದರೂ ಮಾಡಿ ಜೈಲ್‌ನಿಂದ ಬಿಡಿಸಿಕೊಳ್ಳಬೇಕು. ಹಾಗೆಯೇ ಆತ ಯಾವುದೇ ತಪ್ಪು ಮಾಡಿಲ್ಲ ಎನ್ನುವುದನ್ನು ಸಾರಿ ಸಾರಿ ಎಲ್ಲರ ಬಳಿಯೂ ಹೇಳಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ ಸತ್ಯ. ಅದಕ್ಕಾಗಿ ಬಾಲನ ಸಹಾಯ ಕೇಳುತ್ತಾಳೆ. ಮೆಡಿಕಲ್‌ಗೆ ಮಾತ್ರೆ ಸರಬರಾಜು ಆಗುತ್ತಿರುವುದರಿಂದ ಕಾರ್ತಿಕ್ ಕಂಪನಿಯಿಂದ ಬರುತ್ತಿದ್ದ ಮಾತ್ರೆಯನ್ನು ಯಾರು ತಂದು ಕೊಡುತ್ತಿದ್ದಾರೆ ಎನ್ನುವುದನ್ನು ಆಲೋಚನೆ ಮಾಡುತ್ತಿರುತ್ತಾರೆ. ಹಾಗೆಯೇ ಅದನ್ನೆಲ್ಲ ಪತ್ತೆ ಹಚ್ಚಲು ಬಾಲನ ಬಳಿ ಹೇಳುತ್ತಾಳೆ.
ಕಾರ್ತಿಕ್ ಏನು ತಪ್ಪು ಮಾಡಿಲ್ಲ ಎನ್ನುವ ವಿಚಾರ ಸತ್ಯಗೆ ತಿಳಿದಿದೆ. ಆದರೆ, ಅದನ್ನು ಯಾರ ಬಳಿಯೂ ಹೇಳಲಿಲ್ಲ. ಸ್ವತಃ ಬಂದು ಗಂಡನ ಯೋಗ ಕ್ಷೇಮ ವಿಚಾರಣೆ ಮಾಡುತ್ತಾಳೆ. ಇನ್ನೂ ಊರ್ಮಿಳಾ ಬಳಿ ಕಾರ್ತಿಕ್, ಸತ್ಯಗೆ ಆಗುತ್ತಿರುವ ಅವಮಾನಗಳನ್ನು ಬಗ್ಗೆ ಹಾಗೆಯೇ ಆಕೆ ನನ್ನನ್ನು ರಿಲೀಸ್ ಮಾಡಲು ಕಷ್ಟ ಪಡುತ್ತಿರುವ ವಿಚಾರವನ್ನು ಊರ್ಮಿಳಾ ಬಳಿ ಹೇಳುತ್ತಾರೆ. ಇದನ್ನು ಕೇಳಿದ ಊರ್ಮಿಳಾ ಮಾತ್ರ ಮೌನವಾಗಿ ಇರುತ್ತಾಳೆ ಯಾಕೆಂದರೆ ಆಕೆ ಕೂಡ ತಪ್ಪು ಮಾಡಿದ್ದಾಳೆ.

ಸತ್ಯಗೆ ಇಲ್ಲ ಸಲ್ಲದ ಮಾತುಗಳಿಂದ ನಿಂದಿಸಿದ ಊರ್ಮಿಳಾಗೆ ಸತ್ಯ ಬಳಿ ಇನ್ನೂ ಹೇಗೆ ಮುಖಕ್ಕೆ ಮುಖ ಕೊಟ್ಟು ಮಾತನಾಡುವುದು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಇತ್ತ ಕಾರ್ತಿಕ್, ಸತ್ಯ ಮಾಡುತ್ತಿರುವ ಕೆಲಸದ ಬಗ್ಗೆ ಅಮ್ಮನಿಗೆ ತಿಳಿ ಹೇಳುವಂತೆ ಚಿಕ್ಕಮ್ಮ ಬಳಿ ಹೇಳುತ್ತಾನೆ. ಆದರೆ, ಊರ್ಮಿಳಾ ಮಾತನ್ನು ಕೇಳಲು ಸೀತಾ ತಯಾರಿಲ್ಲ. ಕೀರ್ತನಾ ಅದೇನೇ ಮಾತನಾಡಿದರೂ, ಊರ್ಮಿಳಾ ಸತ್ಯ ಪರ ವಹಿಸುತ್ತಾಳೆ. ಅಷ್ಟರಲ್ಲಿ ಸೀತಾ ಊರ್ಮಿಳಾಗೆ ಖಡಕ್ ಎಚ್ಚರಿಕೆ ನೀಡುತ್ತಾಳೆ.
ಬಾಲನ ಬಳಿ ಸಹಾಯ ಕೇಳಿದ ಸತ್ಯ
ಕಾರ್ತಿಕ್ ಏನೇ ಹೇಳಿದರೂ ಅದನ್ನು ಮನದಲ್ಲಿ ಇಟ್ಟುಕೊಂಡ ಊರ್ಮಿಳಾ ಏನು ಮಾತನಾಡದೆ ಸುಮ್ಮನಾಗುತ್ತಾರೆ. ಇತ್ತ ಸತ್ಯ ಮಾತ್ರ ಸತ್ಯದ ಹುಡುಕಾಟದಲ್ಲಿ ಇರುತ್ತಾಳೆ. ಸತ್ಯಗೆ ತಾನು ಏನೇ ಮಾಡಿದರು ನ್ಯಾಯದ ಪರವಾಗಿ ಇರಬೇಕು. ಹಾಗೆಯೇ ತನ್ನ ಗಂಡ ತಪ್ಪೇ ಮಾಡದೇ ಜೈಲು ಪಾಲಾಗಿದ್ದಾನೆ. ಅಮುಲ್ ಬೇಬಿ ಯಾವತ್ತೂ ತಪ್ಪು ಮಾಡಿದವನು ಅಲ್ಲ. ಆದರೆ ಇದೀಗ ಆತ ತಪ್ಪು ಮಾಡಿದ್ದಾನೆ ಎಂದು ಬಿಂಬಿಸಿದ್ದು ಯಾರು? ಎನ್ನುವ ಆಲೋಚನೆ ಇದೀಗ ಶುರು ಆಗಿದೆ. ಹಾಗೆಯೇ ಬಾಲ ಮೂರು ಜನರನ್ನು ಸತ್ಯ ಎದುರು ತಂದು ನಿಲ್ಲಿಸಿದ್ದಾರೆ.

ಭರದಲ್ಲಿ ತನಿಖೆ ಮಾಡುತ್ತಿರುವ ಸತ್ಯ
ಸತ್ಯ, ಈ ಮೂವರು ಮಾತ್ರೆಯನ್ನು ಇತರ ಮೆಡಿಕಲ್ ಗೆ ಆಸ್ಪತ್ರೆಗೆ ತಂದು ಕೊಡುವವರು? ಇವರ ಹಿಂದೆ ಇರುವ ಆ ವ್ಯಕ್ತಿ ಯಾರು ಇರಬಹುದು? ಎಂದು ಆಲೋಚನೆ ಮಾಡುತ್ತಿದ್ದಾಗ ಸತ್ಯ ಕೊಂಚ ಜೋರಾಗಿಯೇ ಆ ಮೂವರ ಬಳಿ ಮಾತನಾಡುತ್ತಾಳೆ. ಹಾಗೆಯೇ "ಯಾಕೆ ಈ ರೀತಿ ಮಾಡುತ್ತಿದ್ದೀರಿ. ನಿಮ್ಮ ಹಿಂದೆ ಇರುವ ಆ ವ್ಯಕ್ತಿ ಯಾರು?" ಎನ್ನುವುದನ್ನು ಕೇಳುತ್ತಾಳೆ. ಹಾಗೆಯೇ ಎರಡು ಪೆಟ್ಟು ಕೊಡುತ್ತಾಳೆ. ಸತ್ಯಗೆ ಹೆದರಿದ ಆತ ಆಕೆ ಹೇಳಿದ ಹಾಗೆ ಕೇಳುತ್ತಿದ್ದ. ಸತ್ಯ "ಯಾರು ನಿಮ್ಮ ಯಜಮಾನರು ಅವರಿಗೆ ಹೇಳಿ. ನಮಗೆ ಒಂದು ದೊಡ್ಡ ಆಪರ್ ಸಿಕ್ಕಿದೆ. ನಿಮ್ಮನ್ನು ಭೇಟಿ ಆಗಲು ಹೇಳುತ್ತಿದ್ದಾರೆ." ಎಂದು ಹೇಳಿ ನಿಮ್ಮ ಓನರ್‌ಗೆ ಎನ್ನುತ್ತಾರೆ.
ಕಾರ್ತಿಕ್ ಮ್ಯಾನೇಜರ್‌ಗೆ ಖೆಡ್ಡ ತೋಡಿದ ಸತ್ಯ
ಆ ಮೂವರು ಕಾರ್ತಿಕ್ ಮ್ಯಾನೇಜರ್‌ಗೆ ಕರೆ ಮಾಡುತ್ತಾರೆ. ಹಾಗೆಯೇ ಆತನಿಗೆ ಕರೆ ಮಾಡಿದಾಗ ಮೇಡಂ ಜೊತೆ ಕೇಳಿ ಹೇಳುತ್ತೇನೆ. ಸರಿ ನಿಮ್ಮ ಜೊತೆ ನಾನು ಬರುತ್ತೇನೆ ಎಂದು ಹೇಳುತ್ತಾರೆ. ಇದರಿಂದ ಸತ್ಯಗೆ ಈ ಕೇಸ್‌ನ ಹಿಂದಿರುವುದು ಬೇರೆ ಯಾರೂ ಅಲ್ಲ. ಒಬ್ಬ ಮಹಿಳೆ ಎನ್ನುವುದು ಗೊತ್ತಾಗುತ್ತದೆ.


Click it and Unblock the Notifications











