Sathya Serial: ಸತ್ಯ ಕೈಗೆ ಸಿಕ್ಕಿಬಿದ್ದ ರವಿ; ಇನ್ನೂ ಕೀರ್ತನಾ ಗತಿ?

By ಪೂರ್ವ

ಸೀತಾಗೆ ತನ್ನ ಮಗ ಜೈಲಿನಲ್ಲಿ ಇರುವುದು ಅತೀವವಾದ ಸಂಕಟಕ್ಕೆ ಸಿಲುಕಿಸಿದೆ. ದಿನಪೂರ್ತಿ ಮಗನನ್ನು ನೆನೆದು ಅಳುತ್ತಿರುತ್ತಾರೆ. ಹೆಂಡತಿಯ ಸ್ಥಿತಿ ನೋಡಿದ ರಾಮಚಂದ್ರರಾಯರು ಸಮಾಧಾನ ಮಾಡಲು ಬರುತ್ತಾರೆ. ಆದರೆ, ಅದನ್ನು ನೋಡಿದ ಸೀತಾ ಮಾತ್ರ ನನಗೆ ನನ್ನ ಮಗ ಮನೆಗೆ ಬಂದರೇನೆ ನನಗೆ ಕೊಂಚ ನೆಮ್ಮದಿ. ಇಲ್ಲವಾದರೆ ನನಗೆ ಯಾವುದೇ ಮನಸ್ಸಿಗೆ ನೆಮ್ಮದಿ ಇಲ್ಲ. ನನ್ನ ಮಗ ಜೈಲಿನಲ್ಲಿ ಅದೆಷ್ಟು ಕಷ್ಟಪಡುತ್ತಿದ್ದಾನೋ ಏನೋ? ಎಂದು ಬಹಳ ಜೋರಾಗಿ ಅಳುತ್ತಾರೆ.

ರಾಮಚಂದ್ರ ರಾಯರು "ನೋಡು ಸೀತಾ, ನಾನು ಕೈ ಕಟ್ಟಿ ಕುಳಿತುಕೊಂಡಿಲ್ಲ. ನಾನು ನನ್ನ ಕೈಯಲ್ಲಿ ಆದ ಪ್ರಯತ್ನವನ್ನು ಮಾಡುತ್ತಿದ್ದೇನೆ. ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಕಾನೂನಾತ್ಮಕವಾಗಿ ಆತನನ್ನು ಜೈಲಿನಿಂದ ಹೊರಗೆ ತೆಗೆದುಕೊಂಡು ಬರಬೇಕು. ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ" ಎಂದಾಗ ಸೀತಾಗೆ ಅಳು ಉಮ್ಮಳಿಸಿ ಬರುತ್ತದೆ.

Sathya Kannada serial may 20th episode update

"ಏನ್ರೀ ನಾನು ಏನು ಪಾಪ ಮಾಡಿದೆ ಎಂದು ಆ ದೇವರು ನಮಗೆ ಇಷ್ಟೆಲ್ಲ ಕಷ್ಟ ನೀಡುತ್ತಿದ್ದಾನೆ. ನನಗೆ ಬಹಳ ಬೇಸರ ಆಗುತ್ತಿದೆ" ಎಂದು ಹೇಳುತ್ತಾರೆ. ಇದನ್ನು ಕೇಳಿದ ರಾಮಚಂದ್ರ ರಾಯರಿಗೆ ಹೆಂಡತಿಗೆ ಯಾವ ರೀತಿ ಸಮಾಧಾನ ಮಾಡುವುದು ಎಂದು ತಿಳಿಯದೇ ಮೌನವಾಗಿ ಇರುತ್ತಾರೆ. ಊರ್ಮಿಳಾ, ಕಾರ್ತಿಕ್ ಹೇಳಿರುವ ವಿಚಾರವನ್ನು ಸೀತಾ ಹೇಳಲು ಟ್ರೈ ಮಾಡುತ್ತಾರೆ. ಆದರೆ, ಸತ್ಯ ಹೆಸರು ಕೇಳಿದರೆ ಸೀತಾಗೆ ಬಹಳ ಸಿಟ್ಟು ಬರುತ್ತದೆ. ಇನ್ನೂ ಯಾಕೆ ಇಲ್ಲ ಸಲ್ಲದ ಉಸಾಬರಿ ಎಂದು ಯೋಚನೆ ಮಾಡುತ್ತಾಳೆ. ಇತ್ತ ಸತ್ಯ ಯಾವುದು ಸರಿ ಎಂಬುವುದನ್ನು ಆಲೋಚನೆ ಮಾಡುತ್ತಿರುತ್ತಾಳೆ.

ಹಾಗೆಯೇ ಚುರುಕಿನಿಂದಾ ಇನ್ವೆಸ್ಟಿಗೇಷನ್ ಶುರು ಮಾಡಿ ಇರುತ್ತಾಳೆ. ಸತ್ಯ, ಬಾಲನ ಬಳಿ ಸಹಾಯ ಕೇಳುತ್ತಾಳೆ. ಹಾಗೆಯೇ ಮೆಡಿಕಲ್ ರೆಪ್ ಅನ್ನು ಹಿಡಿದು ಬುದ್ದಿ ಕಲಿಸುತ್ತಾರೆ. ಆ ಮೂಲಕ ಕಾರ್ತಿಕ್ ಮ್ಯಾನೇಜರ್ ರವಿ ಅವರನ್ನು ಮೀಟ್ ಮಾಡುತ್ತಾರೆ. ಬಾಲ, ರವಿ ಜೊತೆ ಹೇಳುತ್ತಾನೆ "ನನಗೆ ಮೂರು ಲೋಡ್ ಟ್ಯಾಬ್ಲೆಟ್ ಬೇಕು" ಎಂದು ಹೇಳಿದಾಗ ಆತನಿಗೆ ಶಾಕ್ ಆಗುತ್ತದೆ. ಮೂರು ಲೋಡ್ ಟ್ಯಾಬ್ಲೆಟ್. ಆ ರೀತಿ ಟ್ಯಬ್ಲೆಟ್ ಯಾರು ನಮ್ಮಿಂದ ತೆಗೆದುಕೊಂಡು ಹೋಗಿಲ್ಲ. ಅದಕ್ಕೆ ಸ್ವಲ್ಪ ನನಗೆ ಕನ್ಫ್ಯೂಷನ್ ಆಯಿತು ಎಂದು ಹೇಳುತ್ತಾನೆ.

ರವಿ ಜೊತೆ ಬಾಲ ನಾಟಕ

ಬಾಲ ಮಾತನಾಡುತ್ತಿರುವುದು ಸತ್ಯ ಎಂದು ತಿಳಿದು ಎಲ್ಲಾ ವಿಚಾರ ಹೇಳುತ್ತಾನೆ ರವಿ. ಹಾಗೆಯೇ ಬಾಲ ಮಾತನಾಡುತ್ತಿರುವುದು ನೋಡಿ ಗೊಂದಲ ಕೂಡ ಆಗುತ್ತಾನೆ. ಇದೇನಪ್ಪಾ ಇವರು ಈ ರೀತಿ ಮಾತನಾಡುತ್ತಿದ್ದಾರಲ್ಲ ಎಂದು ಅನುಮಾನ ಶುರು ಆಗುತ್ತದೆ . ಆದರೆ ಆತನಿಗೆ ಬ್ಯುಸಿನೆಸ್ ಬರುವುದು ಬಹಳ ದೊಡ್ಡ ಸವಾಲು ಆಗಿರುತ್ತದೆ. ಹೇಗಾದರೂ ಮಾಡಿ ಇವರಿಗೆ ಮಾತ್ರೆಯನ್ನು ಕಳುಹಿಸಿ ಹಣ ಮಾಡಬೇಕು ಎನ್ನುವ ಉದ್ದೇಶ ಆತನಿಗೆ . ಇದಕ್ಕೆ ಕೀರ್ತನ ಬೆಂಬಲ ಇರುತ್ತದೆ. ಕೀರ್ತನಾ ತನ್ನ ತಮ್ಮನ ಮೇಲೆ ಆಪಾದನೆ ಬಂದಾಗಲೂ ಹಾಗೆಯೇ ಆತ ಜೈಲು ಪಾಲಾದಗಳು. ಆಕೆ ಮೌನಿ ಆಗುತ್ತಾಳೆ. ಒಳಗೊಳಗೇ ಖುಷಿ ಪಡುತ್ತಿದ್ದಳು. ಇತ್ತ ಬಾಲ ಮಾತ್ರ ರವಿಯ ಜೊತೆ ಹೇಳುತ್ತಾನೆ. ನಿಮ್ಮ ಮೇಡಂ ಅವರನ್ನು ಕರೆಯಿಸಿ ನಾನು ಅವರ ಬಳಿ ಮಾತನಾಡಬೇಕಿತ್ತು ಎಂದಾಗ ರವಿ ಹೇಳುತ್ತಾನೆ.

Sathya Kannada serial may 20th episode update

ಸತ್ಯ ಎಂಟ್ರಿಗೆ ತಂಡ ಹೊಡೆದ ರವಿ

ನಮ್ಮ ಮೇಡಂ ಹಾಗೆಲ್ಲ ಬರುವುದು ಇಲ್ಲ. ನಿಮಗೆ ನನ್ನ ಬಳಿ ಎನು ಮಾತನಾಡಬೇಕಿತ್ತು ಮಾತನಾಡಿ ಎಂದು ಹೇಳಿದಾಗ ಬಾಲ ಹೇಳುತ್ತಾನೆ ನೀವು ನಿಮ್ಮ ಮೇಡಂ ಕರೆಯದೆ ಹೋದರೆ ನಾನು ನನ್ನ ಮೇಡಂನನ್ನೂ ಕರೆಯುತ್ತೇನೆ ಎಂದಾಗ ರವಿಗೆ ಅರ್ಥವಾಗದೆ ಹೋಗುತ್ತದೆ. ಕೊನೆಗೆ ಸತ್ಯ ಬರುತ್ತಾಳೆ. ಇದೀಗ ಕಥೆಯಲ್ಲಿ ರೋಚಕತೆ ಬಂದಿದೆ ಸತ್ಯ ಬಂದಿದ್ದನ್ನು ನೋಡಿದ ರವಿ ಗೆ ದಿಕ್ಕೇ ತೋಚದಂತಾಗಿದೆ.

ಕಾರ್ತಿಕ್ ಯೋಗ ಕ್ಷೇಮ ವಿಚಾರಿಸಿದ ಸತ್ಯ

ಕಾರ್ತಿಕ್‌ಗೆ ಸತ್ಯ ಹೇಳುತ್ತಾಳೆ "ಅಮುಲ್ ಬೇಬಿ ಇನ್ವೆಸ್ಟಿಗೇಷನ್ ಕೊನೆಯ ಹಂತ ತಲುಪಿದೆ. ತಪ್ಪಿತಸ್ಥರು ಆದಷ್ಟು ಬೇಗ ಸಿಗುತ್ತಾರೆ. ಆದರೆ ನೀನು ಮಾಡದ ತಪ್ಪಿಗೆ ಅದೆಷ್ಟು ಶಿಕ್ಷೆ ಅನುಭವಿಸಿದೆ ಅಲ್ವಾ. ನನ್ನನ್ನು ಕ್ಷಮಿಸು" ಎಂದು ಬೇಸರದಿಂದ ಹೇಳುತ್ತಾಳೆ. ಕಾರ್ತಿಕ್‌ಗೆ ಅದಾಗಲೇ ತಿಳಿದು ಹೋಗಿರುತ್ತದೆ. ಇದರಲ್ಲಿ ಸತ್ಯದ್ದು ಏನು ತಪ್ಪಿಲ್ಲ ಎನ್ನುವುದು ಖಚಿತ ಆಗುತ್ತದೆ.

More from Filmibeat

English summary
Sathya Kannada serial may 20th episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X