Sathya:ಜೈಲಿನಿಂದ ಕಾರ್ತಿಕ್ ರಿಲೀಸ್; ಸತ್ಯಳನ್ನು ಮನೆಯಿಂದ ಹೊರ ಹಾಕಿದ ಸೀತಾ ಮುಂದೇನು?
ಸತ್ಯ ಕೊನೆಗೂ ತನ್ನ ಗಂಡನ ತಪ್ಪು ಏನು ಇಲ್ಲ. ಆತ ಒಳ್ಳೆಯವನು ಎಂದು ಎಲ್ಲರ ಮುಂದೆ ಪ್ರೂ ಮಾಡಿ ಬಿಟ್ಟಿದ್ದಾಳೆ. ಸತ್ಯ ವಿಚಾರಣೆ ನಡೆಸಲು ಕಾರ್ತಿಕ್‌ನನ್ನು ಅರೆಸ್ಟ್ ಮಾಡಲಾಗಿತ್ತು. ಆದರೆ, ಸತ್ಯಗೆ ಇದರಿಂದಾಗಿ ಬಹಳ ಅವಮಾನ ನೋವೇ ಸಿಕ್ಕಿತು. ಆಕೆ ಏನೇ ಮಾಡಲು ಹೋದರು ಆಕೆಗೆ ತನ್ನ ಮನೆಯವರಿಂದಲೇ ಸಪೋರ್ಟ್ ಸಿಗದೆ ಹೋಗಿತ್ತು. ಸೀತಾ ಅಂತೂ ಸತ್ಯಳನ್ನು ಮನೆಯಿಂದ ಹೊರಗಡೆ ಹಾಕಿದ್ದರು.
"ನಾನು ಆಕೆಯನ್ನು ಮನೆಯಿಂದ ಹೊರಗೆ ಹಾಕಿ ಬಿಟ್ಟೆ. ಇನ್ನಾದರೂ ಆಕೆ ನನ್ನನ್ನು ಒಪ್ಪಿಕೊಳ್ಳುತ್ತಾಳಾ? ನನ್ನ ಮನೆಗೆ ಬರುತ್ತಾಳಾ?" ಎನ್ನುವುದು ಸೀತಾ ಮನಸ್ಸಿದಲ್ಲಿ ಕುಳಿತು ಬಿಡುತ್ತದೆ. ಇನ್ನೂ ಸತ್ಯ, ಕಾರ್ತಿಕ್ ಯಾವ ತಪ್ಪೂ ಮಾಡಿಲ್ಲ ಎನ್ನುವುದನ್ನು ಸಾಬೀತು ಪಡಿಸಲು ಇಷ್ಟೆಲ್ಲ ಕಸರತ್ತು ಮಾಡಬೇಕಾಯಿತು. ಆರೋಪಿಗಳ ಬಳಿ ಪ್ಲಾನ್ ಮಾಡಿ ಬರಮಾಡಿಕೊಂಡ ಸತ್ಯ ಗ್ಯಾಂಗ್, ಅವರ ಜೊತೆ ನಾಟಕೀಯವಾಗಿ ವರ್ತನೆ ಮಾಡಬೇಕಾಯಿತು. ಹಾಗೆಯೇ ಯಾವ ರೀತಿ ಈ ಮಾತ್ರೆಗಳ ಮಾರಾಟ ದಂಧೆಯನ್ನು ಶುರು ಮಾಡಿದ್ದು ಹಾಗೆಯೇ ಯಾಕಾಗಿ ಎನ್ನುವ ಪ್ರಶ್ನೆ ಮೂಡಿತ್ತು.

ಈ ಮಾತ್ರೆಗಳಿಂದ ಅನೇಕ ಜನರ ಪ್ರಾಣಕ್ಕೆ ಕಂಟಕ ಆಗಿತ್ತು. ಆದ ಕಾರಣ ಒಂದು ಮಗುವಿಗೆ ಮಾತು ಕೊಟ್ಟಿರುತ್ತಾರೆ ಸತ್ಯ. ಈ ಮೆಡಿಕಲ್ ಮಾಫಿಯಾವನ್ನು ನಾನು ಹೇಗಾದರೂ ನಿರ್ನಾಮ ಮಾಡಿಯೇ ಮಾಡುತ್ತೇನೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಆ ಮಗುವಿಗೆ ಖುಷಿ ಆಗುತ್ತದೆ. ಆ ಪ್ರಕಾರವಾಗಿ ಸತ್ಯ ನಡೆದು ಕೊಳ್ಳುತ್ತಾಳೆ. ಇದೀಗ ಆರೋಪಿಗಳನ್ನು ಪತ್ತೆ ಹಚ್ಚಿದ ಸತ್ಯ. ತನ್ನ ಗಂಡನನ್ನು ರಿಲೀಸ್ ಮಾಡಿಸಿದ್ದಾಳೆ. ಗಂಡನ ಮೇಲೆ ಸತ್ಯಗೆ ಆಗಾಧವಾದ ಪ್ರೀತಿ. ಆದ ಕಾರಣ ತನ್ನ ಗಂಡನ ವಿರುದ್ಧವಾಗಿ ನಡೆದ ಎಲ್ಲಾ ಪಿತೂರಿಗೆ ಅಂತ್ಯ ಹಾಡಲೇ ಬೇಕು ಎಂದು ಆಲೋಚನೆ ಮಾಡುತ್ತಿರುತ್ತಾರೆ.
ಮೆಡಿಕಲ್ ಮಾಫಿಯಾ ಸರ್ವನಾಶ
ಇತ್ತ ಸತ್ಯ ಮಾಧ್ಯಮದವರ ಜೊತೆ "ನಾನು ಮೆಡಿಕಲ್ ಮಾಫಿಯಾವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿಸಿದ್ದೇನೆ. ಅದಕ್ಕೆ ಸಂಬಂಧ ಪಟ್ಟ ಆರೋಪಿಗಳನ್ನು ಅರೆಸ್ಟ್ ಮಾಡಿದ್ದೇನೆ. ತನ್ನ ಗಂಡನ ಮೇಲೆ ಹೈಯರ್ ಆಫೀಸರ್‌ಗೆ ಸಾಕಷ್ಟು ಅನುಮಾನ ಇದ್ದವು. ಆದ ಕಾರಣ ಅವರನ್ನು ಅರೆಸ್ಟ್ ಮಾಡುವ ಪ್ರಮೇಯ ಒದಗಿ ಬಂದಿತ್ತು. ಇದೀಗ ಅವರು ನಿರಪರಾಧಿ ಎಂದು ಹೇಳುತ್ತೇನೆ" ಎಂದು ಖುಷಿ ವ್ಯಕ್ತ ಪಡಿಸುತ್ತಿರುವುದನ್ನು ನೋಡಿದ ಸೀತಾಗೆ ಖುಷಿ ಬಹಳ ಹೆಚ್ಚಾಗುತ್ತದೆ. ತನ್ನ ಮಗ ಜೈಲಿನಿಂದ ಹೊರಗೆ ಬಂದ ಎಂದು ಸೀತಾ ಬಹಳ ಖುಷಿ ಪಡುತ್ತಾಳೆ.

ಸತ್ಯ ಬಗ್ಗೆ ಸೀತಾಗೆ ಹೆಚ್ಚಿದ ಆತಂಕ
ಆದರೆ ಆಕೆಗೆ ಸತ್ಯಾಳದ್ದೇ ಭಯ. ತಾನು ಆಕೆಗೆ ಅದೆಷ್ಟು ನಿಂದನೆ ಮಾಡಿದ್ದೆ. ಎಷ್ಟೆಲ್ಲ ಕಾಟ ಕೊಟ್ಟೆ. ಆದರೆ ಆಕೆ ಅದೆಲ್ಲವನ್ನೂ ಸಹಿಸಿಕೊಂಡು ನನ್ನದು ಏನು ತಪ್ಪಿಲ್ಲ ಎಂದು ಅದೆಷ್ಟೇ ಬಾರಿ ನನ್ನ ಜೊತೆ ಹೇಳಿದರೂ, ನಾನು ಆಕೆಯ ಮಾತನ್ನು ಕೇಳದೆ ಬಹಳ ಕಟುವಾಗಿ ಆಕೆಯನ್ನು ನಿಂದನೆ ಮಾಡಿದ್ದೇನೆ ಎಂದು ಬಹಳ ಬೇಸರದಿಂದ ಹೇಳುತ್ತಾಳೆ. ಹಾಗೆಯೇ ಆ ಕರಾಳ ದಿನಗಳನ್ನು ನೆನಪಿಸಿಕೊಂಡಾಗ ಮಾತ್ರ ಸೀತಾಗೆ ನಡುಕ ಹೆಚ್ಚಾಗುತ್ತದೆ. ಸಂತೋಷದಿಂದ ಅರಳಿದ್ದ ಆಕೆಯ ಮುಖ ಮಾತ್ರ ಬಾಡಿ ಹೋಗಿತ್ತು.
ಊರ್ಮಿಳಾ ಮಾತಿಗೆ ಸೀತಾ ಸಪ್ಪೆ
ಊರ್ಮಿಳಾಗೆ ಮಾತ್ರ ಬಾಡಿ ಹೋದ ಅಕ್ಕನ ಮುಖ ನೋಡಿ ಇದೇನಪ್ಪಾ ಈಗಷ್ಟೇ ಬಹಳ ಖುಷಿಯಲ್ಲಿ ಇದ್ದ ಅಕ್ಕ ಸಡನ್ ಆಗಿ ಯಾಕೆ ಹೀಗೆ ಆಡುತ್ತಿದ್ದಾರೆ ಎಂದು ಆಲೋಚನೆ ಮಾಡುತ್ತಾಳೆ.


Click it and Unblock the Notifications











