Sathya:ಕೋಪದ ಕೈಗೆ ಬುದ್ದಿ ಕೊಟ್ಟ ಕೀರ್ತನಾ; ರಿವಾಲ್ವರ್ ಹಿಡಿದ ಕೀರ್ತನಾ ನೋಡಿ ಬೆದರಿದ ಸತ್ಯ
ಸತ್ಯ, ಕಾರ್ತಿಕ್‌ನನ್ನು ಹೇಗಾದರೂ ಜೈಲಿನಿಂದ ಪಾರು ಮಾಡಿ ಕಾರ್ತಿಕ್ ತಪ್ಪು ಮಾಡಿಲ್ಲ ಎನ್ನುವುದನ್ನು ಸಾರಿ ಸಾರಿ ಎಲ್ಲರಿಗೂ ಹೇಳುತ್ತಾಳೆ. ತನ್ನ ಗಂಡನನ್ನು ಯಾರೆಲ್ಲ ತುಚ್ಚವಾಗಿ ನೋಡಿದ್ದಾರೋ ಅವರೆಲ್ಲರಿಗೂ ಉತ್ತಮವಾದ ಪಾಠವನ್ನು ಸತ್ಯ ಮಾಡಿದ್ದಾಳೆ. ತನ್ನ ಗಂಡನ ಕಷ್ಟ ಸುಖದಲ್ಲಿ ಸತ್ಯ ಬಾಗಿ ಆಗಿದ್ದಾಳೆ. ಆಕೆಯನ್ನು ಮನೆ ಬಿಟ್ಟು ಹೋಗುವ ಹಾಗೆ ಮಾಡಿ ಎಲ್ಲರೂ ತಪ್ಪು ಮಾಡಿದ್ದರು.
ಆದರೆ, ಆ ತಪ್ಪುಗಳನ್ನೆಲ್ಲ ಸತ್ಯ ತಲೆಗೆ ಹಾಕಿಕೊಳ್ಳದೆ ಮುಂದೆ ಒಂದು ದಿನ ಖಂಡಿತವಾಗಿಯೂ ಇವರಿಗೆ ನಾನು ಕಾರ್ತಿಕ್‌ನನ್ನು ಅರೆಸ್ಟ್ ಮಾಡಿರುವುದು ಯಾಕೆ ಎನ್ನುವುದು ತಿಳಿಯುತ್ತದೆ ಎಂದು ಯೋಚನೆ ಮಾಡಿ ಕಾರ್ತಿಕ್‌ನನ್ನು ಹೇಗಾದರೂ ಮಾಡಿ ಜೈಲಿನಿಂದ ಬಿಡಿಸಿಕೊಂಡು ಮನೆಯವರೆಲ್ಲ ಖುಷಿಗೆ ಪಾತ್ರಳಾಗಿದ್ದಳು.

ಹಾಗೆಯೇ ನಿಜವಾದ ಅಪರಾಧಿಯಾಗಿದ್ದ ಕೀರ್ತನಾಳನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಲಾಗುತ್ತದೆ. ಕೀರ್ತನಾಗೆ ಮಾತ್ರ ಇದು ಸಹಿಸಲಾಗುವುದಿಲ್ಲ. ಆಕೆ ಜಾಮೀನು ಪಡೆದುಕೊಂಡು ವಾಪಸ್ ಮನೆಗೆ ಬರುತ್ತಾಳೆ. ಕೀರ್ತನಾ ಬರುವುದನ್ನು ನೋಡಿದ ಸೀತಾಗೆ ಬಹಳ ಕೋಪ ಬರುತ್ತದೆ. ಕೀರ್ತನಾಳನ್ನು ಮನೆಯ ಹೊಸ್ತಿಲಲ್ಲಿ ನಿಲ್ಲಿಸುತ್ತಾರೆ ಸೀತಾ. ಕೀರ್ತನಾ ನೀನು ಈ ಮನೆಯ ಹೊಸಿಲು ತುಳಿಯುವುದು ಬೇಡ. ನಮ್ಮ ಸಂಸಾರವನ್ನು ಚೆನ್ನಾಗಿರಲು ಬಿಟ್ಟುಬಿಡು. ದಯವಿಟ್ಟು ನೀನು ನಮ್ಮ ಸಂಸಾರದ ಸುದ್ದಿಗೆ ಬರಬೇಡ. ನೀನು ಇಲ್ಲಿಯ ತನಕ ಮಾಡಿದ್ದೆ ಸಾಕು ಎಂದಾಗ ಕೀರ್ತನಾಗೆ ಬಹಳ ಅಳು ಬರುತ್ತದೆ.
ನಾನು ಅಂತಹ ದೊಡ್ಡ ತಪ್ಪು ಏನು ಮಾಡಿದೆ. ನನಗೆ ಹಣದ ಅಗತ್ಯ ಇತ್ತಮ್ಮ ಆದ ಕಾರಣ ನಾನು ಹಾಗೆ ಮಾಡಿದೆ ಎಂದಾಗ ಸೀತಾ ಇನ್ನಷ್ಟು ಕೋಪ ಬಂದು ಸತ್ಯಗೆ ಹೇಳುತ್ತಾಳೆ. ಸತ್ಯ ಆಕೆಯನ್ನು ಮನೆಯಿಂದ ಹೊರಗೆ ಹಾಕು. ಇವಳು ಇಲ್ಲಿಯೇ ಇದ್ದರೆ ಎಲ್ಲಾ ಹಾಳು ಮಾಡಿ ಬಿಡುತ್ತಾಳೆ ಎಂದು ಹೇಳಿದಾಗ ಸತ್ಯ ಕಿರ್ತನಾಳನ್ನು ಮನೆಯ ಹೊರಗೆ ಹಾಕಬೇಕು ಎನ್ನುವಷ್ಟರಲ್ಲಿ ಆಕೆಯ ಬಳಿ ಇದ್ದ ರಿವಾಲ್ವರ್ ತೆಗೆದು ಸತ್ಯ ಕಡೆ ಗುರಿ ಇಡುತ್ತಾಳೆ. ಇದನ್ನು ನೋಡಿದ ಮನೆಮಂದಿ ಬಹಳ ಶಾಕ್‌ಗೆ ಒಳಗಾಗುತ್ತಾರೆ.
ಕೀರ್ತನಾ ಮಾತಿಗೆ ಚಾಟಿ ಬೀಸಿದ ಸೀತಾ
"ಕೀರ್ತನಾ ಇದೇನು ಮಾಡುತ್ತಿದ್ದೀಯಾ? ನೀನು ಬಹಳ ದೊಡ್ಡ ತಪ್ಪು ಮಾಡುತ್ತಿದ್ದಿಯಾ ಕೀರ್ತನಾ? ಹೀಗೆಲ್ಲ ನೀನು ಮಾಡಬೇಡ" ಎಂದು ಸೀತಾ ಭಯದಿಂದ ಹೇಳುತ್ತಾರೆ. ಇದನ್ನು ಕೇಳಿದ ಕೀರ್ತನಾ ಅಮ್ಮನ ಬಳಿ ಹೇಳುತ್ತಾರೆ. "ಅಮ್ಮ ನಿನಗೆ ನಿನ್ನ ಸೊಸೆಯೇ ಮುಖ್ಯವಾದಳು. ನಿನಗೆ ನಿನ್ನ ಮಗಳು ಏನು ಅಲ್ಲ ಅಲ್ವಾ? ನಾನು ನಿನಗೆ ಇಷ್ಟು ಬೇಗ ಬೇಡವಾದೆನಾ ಅಮ್ಮ? ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು. ಇನ್ಮೇಲೆ ಇಂತಹ ತಪ್ಪನ್ನು ನಾನು ಯಾವತ್ತೂ ಮಾಡುವುದಿಲ್ಲ" ಎಂದು ಕೇಳಿಕೊಂಡಾಗ ಸೀತಾ ಮಾತನಾಡುವುದೇ ಇಲ್ಲ. ಕೊನೆಗೆ ರಿವಾಲ್ವರ್‌ನನ್ನು ಆಕೆಯ ಹಣೆಯ ಮೇಲೆ ಇಟ್ಟುಕೊಳ್ಳುತ್ತಾರೆ.

ಕೀರ್ತನಾ ಮಾತಿಗೆ ಹೆದರದ ಸೀತಾ
ಆ ಬಳಿಕ ಬ್ಲಾಕ್ ಮೇಲ್ ಮಾಡುತ್ತಾಳೆ. ಇದನ್ನು ನೋಡಿದ ಮನೆ ಮಂದಿಗೆ ಕೊಂಚ ಭಯವಾದರು ಸೀತಾ ಮಾತ್ರ ತನ್ನ ಮಗಳು ಮಾತ್ರ ಆಕೆಯನ್ನು ಶೂಟ್ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆಕೆ ಅಷ್ಟು ಪೆದ್ದು ಹುಡುಗಿ ಅಲ್ಲ. ಆಕೆ ಬಹಳ ಗಟ್ಟಿಗಿತ್ತಿ ಎಂದು ಅಂದುಕೊಂಡು ಇರುತ್ತಾಳೆ ಸೀತಾ. ಆಕೆ ಏನೇ ಮಾಡಿದರು ಎಷ್ಟೇ ಹೆದರಿಸಿದರು ಸೀತಾ ಮಾತ್ರ ನೀನು ಗುಂಡು ಹಾರಿಸಿಕೊ ನಾನು ಏನು ಹೇಳುವುದು ಇಲ್ಲ. ನೀನು ಸತ್ತರೆ ಒಂದು ತಂಬಿಗೆ ನೀರನ್ನು ಮೈ ಮೇಲೆ ಹಾಕಿಕೊಂಡು ನಾವು ತೆಪ್ಪಗಿರುತ್ತೇವೆ. ನಿನ್ನಿಂದಾಗಿ ನಾವೆಲ್ಲ ತುಂಬಾ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ.
ತಲೆಗೆ ಪಿಸ್ತೂಲ್ ಹಿಡಿದು ನಿಂತ ಕೀರ್ತನಾ
ತಂದೆ ತಾಯಿಗಳು ನಾವು ನಿನ್ನಿಂದಾಗಿ ತಲೆ ತಗ್ಗಿಸಬೇಕಾಗಿ ಬಂದಿದೆ ಎಂದಾಗ ಟೆನ್, ನೈನ್ ಎಂದು ಕೌಂಟ್ ಮಾಡುತ್ತಿರುವುದನ್ನು ನೋಡಿದ ಸತ್ಯ ಮಾತ್ರ ಸೀತಾಗೆ ಏನೋ ಹೇಳುತ್ತಾಳೆ. ಆದರೆ, ಸೀತಾ ಮಾತ್ರ ಕೀರ್ತನಾಳನ್ನು ಮನೆ ಒಳಗೆ ಸೇರಿಸಲು ಕೇಳುವುದು ಇಲ್ಲ. ಕೊನೆಗೆ ಕೀರ್ತನಾ ಗುಂಡು ಹರಿಸಿಕೊಳ್ಳುವ ಸದ್ದು ಕೋಟೆ ಮನೆಯಲ್ಲಿ ಅಪ್ಪಳಿಸುತ್ತದೆ.


Click it and Unblock the Notifications











