Sathya Serial: ಸತ್ಯ ಎದುರಾಗಿದೆ ಮತ್ತೊಂದು ಸವಾಲು.. ಏನದು?
ಸತ್ಯ, ಕೀರ್ತನಾಗೆ ಸಾಕಷ್ಟು ಬುದ್ದಿ ಮಾತು ಹೇಳುತ್ತಾಳೆ. ಕೀರ್ತನಾ ನೀನು ಇದೀಗ ಬದಲಾಗ ಬೇಕಿದೆ. ಈ ಮನೆಯ ಮಗಳು ನೀನು. ನಿನ್ನ ಕಷ್ಟಕ್ಕೆ ಈ ಮನೆಯವರು ಹೆಗಲು ಕೊಟ್ಟಿದ್ದಾರೆ. ಅಂತಹ ನಿನ್ನ ಮನೆಯವರಿಗೆ ಸದಾ ನೋವನ್ನು ನೀನು ನೀಡುತ್ತಿದ್ದಿಯಾ. ಹಾಗೆಯೇ ನೀನು ನನ್ನ ಮೇಲೆ ಅದೆಷ್ಟೇ ಕಿಡಿಕಾರಿದರು ಕಾರ್ತಿಕ್ ಒಂದು ಮಾತು ನಿನ್ನ ವಿರುದ್ಧವಾಗಿ ಹೇಳಿರಲಿಲ್ಲ. ನೀನೆಂದರೆ ಆಕೆಗೆ ಅಷ್ಟೊಂದು ಇಷ್ಟ. ಏನೇ ಮಾಡಿದರೂ ಏನೇ ಹೇಳಿದರೂ ಕಾರ್ತಿಕ್ ಒಂದು ಮಾತು ನಿನ್ನ ವಿರುದ್ಧವಾಗಿ ಮಾತನಾಡಲಿಲ್ಲ. ಅಂತಹ ತಮ್ಮನಿಗೆ ನೀನು ಎಂತಹ ಸ್ಥಿತಿ ತಂದಿಟ್ಟು ಬಿಟ್ಟೆಯಲ್ಲಾ ಯಾಕೆ ಹೀಗೆಲ್ಲ ಮಾಡಿದೆ ಎಂದು ಕೀರ್ತನಾ ಬಳಿ ಕೇಳಿದಾಗ ಆಕೆಯ ಬಳಿ ಉತ್ತರ ಇರುವುದು ಇಲ್ಲ.
ಆಕೆಗೆ ಸತ್ಯ ಎಂದರೆ ಬಹಳ ಕೋಪ. ಮನೆ ಮಂದಿ ಎಲ್ಲರೂ ಸತ್ಯಳನ್ನು ತಲೆಯಲ್ಲಿ ಹೊತ್ತುಕೊಂಡು ಮೆರೆಸುತ್ತಾರೆ. ಆದರೆ, ನಾನು ಅಂತಹ ದೊಡ್ಡ ತಪ್ಪು ಏನು ಮಾಡಿದೆ. ನನಗೆ ಕೂಡ ಆಸೆಗಳು ಇರುವುದು ಇಲ್ವಾ. ನನ್ನ ತಂದೆ, ತಾಯಿಯ ಜೊತೆ ಖುಷಿಯಾಗಿ ಇರಬೇಕು. ಅವರ ಮೆಚ್ಚಿನ ಮಗಳಾಗಿ ಇರಬೇಕು ಎನ್ನುವ ಆಸೆ ಇರುವುದು ಇಲ್ವಾ. ಆದರೆ ಈ ಸತ್ಯ ಹೆಸರನ್ನು ಎತ್ತಿದಾಗ ಮಾತ್ರ ನನಗೆ ಬಹಳಷ್ಟು ಕೋಪ ಬರುತ್ತದೆ. ಏನು ಮಾಡಬೇಕು ಎಂದು ತಿಳಿಯುವುದು ಇಲ್ಲ ಎಂದು ಯೋಚಿಸುತ್ತಿರುವಾಗ ಊರ್ಮಿಳಾ ಕೂಡ ಕೀರ್ತನಾ ಬಳಿಗೆ ಬಂದು ಬುದ್ದಿ ಹೇಳುತ್ತಾಳೆ.

"ಸತ್ಯ ನಿನಗೆ ಬುದ್ದಿ ಹೇಳಿದ್ದಾಳೆ. ಆದರೆ, ಅವಳ ಜಾಗದಲ್ಲಿ ನಾನು ಇದ್ದಿದ್ದರೆ ಖಂಡಿತವಾಗಿಯೂ ನಿನ್ನ ಕ್ಷಮಿಸುತ್ತ ಇರಲಿಲ್ಲ. ಯಾವ ಹೆಣ್ಣು ಕೂಡ ತನ್ನ ಗಂಡನಿಗೆ ಈ ರೀತಿ ಕಾಟ ಕೊಡುತ್ತಿರುವ ಹೆಣ್ಣನ್ನು ಕ್ಷಮಿಸುವುದಿಲ್ಲ. ಆದರೆ ನೀನು ಮಾಡಿದ್ದಾದರೂ ಏನು ತಮ್ಮನನ್ನೇ ಜೈಲಿನಲ್ಲಿ ಕುರಿಸಿ ಮಜಾ ತೆಗೆದುಕೊಳ್ಳುತ್ತಿದ್ದೆ." ಎಂದಿದ್ದಾರೆ.
ನಿನಗೆ ಗೊತ್ತಿತ್ತು ಕಾರ್ತಿಕ್ ಯಾವ ತಪ್ಪೂ ಮಾಡಿಲ್ಲ ಎನ್ನುವುದು ಆದರೂ ನೀನು ಆತನ ವಿರುದ್ಧವಾಗಿ ಹೋದೆ. ಸತ್ಯ ಆಗಿದ್ದಕ್ಕೆ ಇದೆಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಕೂತಿದ್ದಾಳೆ. ಆದರೆ, ನಾನು ಮಾತ್ರ ಖಂಡಿತ ಸುಮ್ಮನೆ ಕುಳಿತುಕೊಂಡು ಇರುತ್ತಿರಲಿಲ್ಲ. ನನಗೆ ಹಾಗೆ ಕುಳಿತುಕೊಳ್ಳಲು ಆಗುವುದು ಇಲ್ಲ. ದಯವಿಟ್ಟು ಬದಲಾಗಿ ಕೀರ್ತನಾ ಇಲ್ಲ ಎಂದಾದರೆ, ನಿನ್ನನ್ನು ಕತ್ತು ಹಿಡಿದು ಮನೆಹೊರಗೆ ನಾನೇ ದಬ್ಬುತ್ತೇನೆ. ನೆನಪಿನಲ್ಲಿ ಇರಲಿ ಎಂದು ಎಚ್ಚರಿಸಿ ಅಲ್ಲಿಂದ ಹೋಗುತ್ತಾಳೆ. ಕೀರ್ತನಾಗೆ ಮಾತ್ರ ಬಹಳ ಬೇಸರ. ನನ್ನ ಮನೆಯಲ್ಲಿ ಆ ಸತ್ಯನನ್ನು ವಹಿಸಿಕೊಂಡು ಎಷ್ಟು ಜನ ಬರುತ್ತಾರೆ. ಆದರೆ, ನಾನು ಯಾರಿಗೆ ಕೂಡ ಬೇಡವಾಗೀ ಬಿಟ್ಟೆ ಎಂದು ಹಳೆಯ ದ್ವೇಷವನ್ನು ಮುಂದುವರೆಸಲು ಹೋಗಿದ್ದಾಳೆ ಕೀರ್ತನಾ.
ರಾಮಚಂದ್ರರಾಯರ ಮನದಲ್ಲಿ ಸಂತಸ
ಇನ್ನೂ ರಾಮಚಂದ್ರ ರಾಯರು ಬಹಳ ಖುಷಿ ಪಡುತ್ತಿದ್ದಾರೆ. ಯಾಕೆಂದರೆ, ಅಮೆರಿಕದಿಂದ ಅವರ ಗೆಳೆಯ ಬರುತ್ತಿದ್ದಾರೆ ಜೊತೆಗೆ ಮನೆಗೆ ಊಟಕ್ಕೆ ಕೂಡ ಆಗಮಿಸುತ್ತಿರುವುದು ಎಲ್ಲರಿಗೂ ಖುಷಿ ನೀಡಿದೆ. ಅದಕ್ಕಾಗಿ ಮನೆಯಲ್ಲಿ ವಿವಿಧ ಖಾದ್ಯಗಳನ್ನು ಮಾಡಲಾಗುತ್ತಿದೆ. ಹೋಳಿಗೆ ಆಗಿರಬಹುದು, ಹಾಗೆಯೇ ಅಡುಗೆ ಗಳ ತಯಾರಿಯನ್ನು ಎಲ್ಲರೂ ಒಟ್ಟಾಗಿ ಮಾಡುತ್ತಿದ್ದಾರೆ. ಇತ್ತ ರಾಮಚಂದ್ರ ರಾಯರು ಕೆಲಸದವರನ್ನು ಕರೆಯಿಸಿ ನೋಡಿ ಗಾರ್ಡನ್ ಎಲ್ಲಾ ಚೆನ್ನಾಗಿ ಇರಬೇಕು, ನನ್ನ ಗೆಳೆಯ ಬರುತ್ತಿದ್ದಾನೆ ಇವತ್ತು. ಎಲ್ಲರೂ ಚೆನ್ನಾಗಿ ಇವತ್ತು ಕೆಲಸ ಮಾಡಿ ಎಂದು ಹೇಳುತ್ತಿರುತ್ತಾನೆ. ಇದನ್ನು ನೋಡಿದ ಸೀತಾ ನಗುತ್ತಾಳೆ.

ಗಂಡನನ್ನು ನೋಡಿ ನಕ್ಕ ಸೀತಾ
ಇವರ ಗೆಳೆಯ ಮನೆಗೆ ಬರುತ್ತಾರೆ ಎಂದು ತಿಳಿದು ಅದೆಷ್ಟು ಖುಷಿಯಲ್ಲಿ ಇದ್ದಾರೆ. ಅವರ ಕಾಲು ನೆಲದ ಮೇಲೆ ನಿಲ್ಲುತ್ತಿಲ್ಲ ಎಂದು ನಗುತ್ತಾ ಊರ್ಮಿಳಾ ಬಳಿ ಹೇಳಿದಾಗ ರಾಮಚಂದ್ರ ರಾಯರು ಕೊಂಚ ಜೋರಾಗಿ ಹೇಳುತ್ತಾರೆ. ಏನಿದು ಅಕ್ಕ ತಂಗಿ ಲಲ್ಲೆ ಹೊಡೆಯುತ್ತಿದ್ದಿರಾ ಅಡುಗೆ ಎಲ್ಲಾ ಆಗಿದೆಯೋ ಎಂದೆಲ್ಲ ಪ್ರಶ್ನೆ ಮಾಡಿದಾಗ ಊರ್ಮಿಳಾ ಹೇಳುತ್ತಾಳೆ. ಹೋಳಿಗೆ ಎಲ್ಲಾ ರೆಡಿ ಆಗಿದೆ ಬಾವ. ಇನ್ನೇನು ಸ್ವಲ್ಪ ಸಮಯದಲ್ಲಿ ಅಡುಗೆ ಕೆಲಸ ಪೂರ್ತಿ ಆಗಿ ಬಿಡುತ್ತದೆ ಎಂದಾಗ ರಾಮಚಂದ್ರ ರಾಯರು ಬಹಳ ಖುಷಿ ಪಡುತ್ತಾರೆ.
ಆಫೀಸ್ ನಿಂದಾ ಮನೆಗೆ ಬೇಗ ಬಂದ ಸತ್ಯ
ಹೋಳಿಗೆ ಮಾಡಿದ್ದು ಬಹಳ ಒಳ್ಳೆಯದೇ ಆಯಿತು. ಅವರು ಯಾವತ್ತೂ ಹೋಳಿಗೆ ತಿಂದಿದ್ದಾರೋ ಏನೋ ಎಂದು ಹೇಳುತ್ತಾರೆ. ಆಗಲೇ ಸತ್ಯ ಕೂಡ ಬರುತ್ತಾಳೆ. ಇವತ್ತು ಕೆಲಸ ಎಲ್ಲಾ ಮುಗಿತೆನಮ್ಮ ಎಂದಾಗ ಸತ್ಯ "ಇವತ್ತು ನಿಮ್ಮ ಗೆಳೆಯ ಬರುತ್ತಾರೆ ಎಂದು ಹೇಳಿದಿರಿ ಅಲ್ವಾ . ನನ್ನ ಕೆಲಸ ಎಲ್ಲಾ ಮುಗಿದು ಹೋಯಿತು. ಹಾಗೆ ಬಂದೆ" ಎಂದಾಗ ರಾಮಚಂದ್ರರಾಯರು ಖುಷಿಯಿಂದ ವೆರಿ ಗುಡ್ ಎಂದು ಹೇಳುತ್ತಾರೆ. ಇತ್ತ ಪೊಲೀಸ್ ಕಾನ್‌ಸ್ಟೇಬಲ್ ಮಗಳನ್ನು ಕಿಡ್ನಾಪ್ ಮಾಡಲಾಗುತ್ತದೆ. ತನ್ನ ಮಗಳು ಬಂದಿಲ್ಲ ಇನ್ನೂ ಮನೆಗೆ ಎಂದು ಬಹಳ ಭಯದಲ್ಲಿ ಕಾನ್‌ಸ್ಟೇಬಲ್ ಸತ್ಯಗೆ ಕರೆ ಮಾಡಿ ಹೇಳಿದಾಗ, "ಮಗಳ ಫೋನ್‌ಗೆ ಕರೆ ಮಾಡಿದ್ರಾ?" ಎಂದು ಕೇಳುತ್ತಾಳೆ. ಇದನ್ನು ಕೇಳಿದ ಕಾನ್‌ಸ್ಟೇಬಲ್ "ಹೌದು ಆದರೆ ಸ್ವಿಚ್ ಆಪ್ ಬರುತ್ತಿದೆ" ಎಂದು ಹೇಳಿದಾಗ ಸತ್ಯಗೆ ಏನು ಮಾಡಬೇಕು ತಿಳಿಯದಾಗುತ್ತದೆ.


Click it and Unblock the Notifications











