ಪುಟ್ಟಕ್ಕನ ಮಕ್ಕಳು: ಪುಟ್ಟಕ್ಕನ ಕಣ್ಣಿಗೆ ಮಕ್ಕಳೇ ತಾಯಿಯಂತೆ ಕಾಣುತ್ತಿದ್ದಾರೆ!
ಹೆತ್ತ ತಾಯಿ ಮಕ್ಕಳಿಗೆ ಯಾವುದೇ ಕಷ್ಟ ಬಾರದಿರುವಂತೆ ಸಾಕುವುದು ಆಕೆಯ ಕರ್ತವ್ಯ ಎಂದೇ ಭಾವಿಸುತ್ತಾಳೆ. ಅದರಂತೆಯೇ ತನಗೆ ನೋವಾದರೂ ಆ ನೋವನ್ನು ಮಕ್ಕಳ ತನಕ ತರುವುದೇ ಇಲ್ಲ. ತಾನು ಹಸಿದು ಮಲಗಿದರು ಮಕ್ಕಳ ಹೊಟ್ಟೆ ತುಂಬಿಸುತ್ತಾಳೆ. ಗಂಡನ ಸಹಾಯವೇ ಇಲ್ಲದೆ ಯಾವ ಕೊರತೆಯೂ ಬಾರದಂತೆ ಮಕ್ಕಳನ್ನು ಸಾಕುತ್ತಾಳೆ. ಅದೇ ಸಾಲಿಗೆ ಸೇರುವುದು ಪುಟ್ಟಕ್ಕ. ಮಕ್ಕಳನ್ನು ತಾಯಿ ಅಷ್ಟು ಕಾಳಜಿಯಿಂದ ಸಾಕಿ ಸಲಹುತ್ತಾಳೆ ಎಂದಾಗ, ಮಕ್ಕಳಿಗೂ ಆ ಕಷ್ಟದ ಪರಿವೆ ಇರಲೇಬೇಕು.
ಪುಟ್ಟಕ್ಕನ ಕಷ್ಟಗಳಿಗೆ ಅಕ್ಷರಶಃ ಸ್ಪಂದಿಸುವಂತೆಯೆ ಇದ್ದಾರೆ ಮಕ್ಕಳು. ಅವ್ವನ ಕಷ್ಟದಲ್ಲೂ ಭಾಗಿಯಾಗುತ್ತಾರೆ. ಅವ್ವನ ದುಡಿಮೆಗೂ ಹೆಗಲು ನೀಡುತ್ತಾರೆ. ಅಂತಹ ಮುತ್ತಿನಂಥ ಮಕ್ಕಳನ್ನೇ ಪುಟ್ಟಕ್ಕ ಪಡೆದಿದ್ದಾರೆ. ಇದೀಗ ಪುಟ್ಟಕ್ಕನ ಕಣ್ಣಿಗೆ ತನ್ನ ಮಕ್ಕಳೇ ತಾಯಿಯಾಗಿ ಕಾಣುತ್ತಿದ್ದಾರೆ. ಇಷ್ಟು ಅರ್ಥ ಮಾಡಿಕೊಂಡು ಜೊತೆ ನಿಲ್ಲುವ ಮಕ್ಕಳು ಎಷ್ಟು ಕಡೆ ಸಿಗುತ್ತಾರೆ ಅಲ್ಲವಾ.

ಪುಟ್ಟಕ್ಕನಿಗೆ ನೋವು ಕೊಡುವ ರಾಜೇಶ್ವರಿ
ಹಾಗೇ ನೋಡಿದರೆ ಪುಟ್ಟಕ್ಕನ ಸ್ಥಾನವನ್ನು ಕಿತ್ತುಕೊಂಡಿರುವುದು ರಾಜೇಶ್ವರಿ. ಗಂಡನನ್ನು ಕಿತ್ತುಕೊಂಡರು, ಆಸ್ತಿಯನ್ನು ಕಿತ್ತುಕೊಂಡರು ಪುಟ್ಟಕ್ಕ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ನನ್ನ ಹಣೆಯಲ್ಲಿ ಬರೆದಿದ್ದದ್ದೇ ಅಷ್ಟು ಅಂತ ಸುಮ್ಮನಾಗಿ ಬಿಟ್ಟಿದ್ದಾರೆ. ಗಂಡ ಬಿಟ್ಟು ಹೋದಾಗ ಮೂರು ಹೆಣ್ಣು ಮಕ್ಕಳನ್ನು ಸಾಕುವುದು ಸುಲಭವಾಗಿರಲಿಲ್ಲ. ಆದರೂ ಮನಸ್ಸೊಳಗೆ ಅದೆಷ್ಟೇ ನೋವಿದ್ದರೂ, ಗಂಡನ ಆಸರೆ ಅನಿವಾರ್ಯತೆ ಎಂಬ ಪರಿಸ್ಥಿತಿ ಬಂದರೂ ಎದೆಗುಂದದೆ ಇಲ್ಲಿವರೆಗೂ ಮಕ್ಕಳನ್ನು ಸಾಕಿದ್ದಾಳೆ ನಮ್ಮ ಪುಟ್ಟಕ್ಕ. ಇದೇ ಹಠವನ್ನು ಕಂಡು ರಾಹೇಶ್ವರಿಗೆ ಸಹಿಸಲು ಆಗುತ್ತಿಲ್ಲ. ಹೇಗಾದರೂ ಮಾಡಿ ಪುಟ್ಟಕ್ಕನ ಜೀವನವನ್ನು ಬಲಿ ಪಡೆಯಬೇಕೆಂದು ಪಣ ತೊಟ್ಟಿದ್ದಾಳೆ.

ರಾಜೇಶ್ವರಿಯಿಂದ ಠಾಣೆ ಮೆಟ್ಟಿಲೇರಿದ ಪುಟ್ಟಕ್ಕ
ಪುಟ್ಟಕ್ಕನದ್ದು ಒಂದೇ ಮನವಿ. ಹೆಣ್ಣು ಮಕ್ಕಳಿಗೆ ತಂದೆಯಾಗಿ ನಿನ್ನ ಕರ್ತವ್ಯ ಮಾಡಯ್ಯ ಎಂದು ಗೋಪಾಲನ ಬಳಿ ಮನವಿ ಮಾಡಿದ್ದಾಳೆ ಪುಟ್ಟಕ್ಕ. ಇದಕ್ಕೆ ರಾಜೇಶ್ವರಿಯ ಕುತಂತ್ರ ಬೆರೆತು ಮನೆ, ಮೆಸ್ಸು ಬರೆದುಕೊಡುವಂತೆ ಒತ್ತಾಯಿಸುತ್ತಿದ್ದಾಳೆ. ಗೋಪಾಲ ಮಾನವೀಯತೆ, ಕರ್ತವ್ಯ ಎಲ್ಲವನ್ನು ಮರೆತಿದ್ದಾನೆ. ಇದೇ ಕಾರಣಕ್ಕೆ ರಾಜಿ ಏನು ಹೇಳುತ್ತಾಳೋ ಅದನ್ನಷ್ಟೇ ಪಾಲಿಸುತ್ತಾನೆ. ಇದೇ ಕಾರಣಕ್ಕೆ ಮನೆ, ಮೆಸ್ಸು ಬರೆದುಕೊಡುತ್ತೇನೆ ಎಂದಾಗ ಮಗಳ ಮದುವೆಯ ಮಾತುಕಥೆಗೆ ಬಂದಿದ್ದಾರೆ. ಈ ವೇಳೆ ರಾಜವ್ವನ ತಮ್ಮನಿಂದ ಆಗಬಾರದ್ದೆಲ್ಲಾ ಆಗಿ, ಪುಟ್ಟಕ್ಕ ಪೊಲೀಸ್ ಠಾಣೆ ಮೆಟ್ಟಿಲೇರುವ ಹಾಗೇ ಆಗಿತ್ತು. ಆದರೆ ಊರ ಜನರ ಬೆಂಬಲ ಮತ್ತೆ ಪುಟ್ಟಕ್ಕನನ್ನು ಅಷ್ಟೇ ಸೇಫಾಗಿ ಮನೆಗೆ ಬರುವಂತೆ ಮಾಡಿದೆ.

ಊರ ಜನರ ಬೆಂಬಲಕ್ಕೆ ಪುಟ್ಟಕ್ಕ ಋಣಿ
ಪುಟ್ಟಕ್ಕನ ಮೆಸ್‌ನಲ್ಲಿ ಅವಾಂತರ ಸೃಷ್ಟಿಸಬೇಕೆಂದುಕೊಂಡು ರಾಜೇಶ್ವರಿ ಮತ್ತು ಆಕೆಯ ತಮ್ಮ ಕಾಳಿ ಪುಟ್ಟಕ್ಕನ ಮೆಸ್ ಮುಂದೆಯೇ ಬಾರ್ ಒಂದನ್ನು ಓಪನ್ ಮಾಡಿದ್ದಾರೆ. ಇಷ್ಟು ದಿನ ಜಗಳವಾಗಬಾರದು ಎಂಬ ಕಾರಣಕ್ಕೆ ಪುಟ್ಟಕ್ಕ ಸುಮ್ಮನೆ ಇದ್ದಳು. ಆದರೆ ಅಲ್ಲಿ ಶಾಂತವ್ವನ ಗಂಡ ಇದೆ ಕಳ್ಳ ಭಟ್ಟಿ ಕುಡಿದು ಪರಿಸ್ಥಿತಿ ಚಿಂತಾಜನಕವಾಗಿದೆ. ಇತ್ತ ಕಾಳಿ ಕುಡಿದು ಮನೆಗೆ ನುಗ್ಗಿಮದುವೆ ಮಾತುಕತೆ ಮುರಿದು ಬೀಳುವಂತೆ ಮಾಡಿದ್ದಾನೆ. ಈ ಎಲ್ಲಾ ಕೋಪ ಪುಟ್ಟಕ್ಕನ ತಾಳ್ಮೆಯನ್ನು ಒಡೆದಿತ್ತು. ಪುಟ್ಟಕ್ಕ ಬಾರ್ ಒಳಗೆ ನುಗ್ಗಿ ಎಲ್ಲವನ್ನು ಧ್ವಂಸ ಮಾಡಿದಳು. ಇದಕ್ಕೆ ಕೋಪಗೊಂಡ ರಾಜೇಶ್ವರಿ ಪುಟ್ಟಕ್ಕನ ವಿರುದ್ಧ ದೂರು ನೀಡಿ, ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದಳು. ಆದರೆ ಊರ ಬೆಂಬಲ ಪುಟ್ಟಕ್ಕನ ಪರವಾಗಿಯೇ ಇದ್ದಿದ್ದರಿಂದ ಪುಟ್ಟಕ್ಕ ಬಹಳ ಬೇಗ ಮನೆಗೆ ವಾಪಾಸ್ ಆದಳು.
ಅವ್ವನನ್ನು ತಾಯಿಯಂತೆ ಸಂಭಾಳಿಸಿದ ಮಕ್ಕಳು
ಪುಟ್ಟಕ್ಕನ ಮಕ್ಕಳು ಎಂದರೆ ಸುಮ್ಮನೇನಾ. ಒಂದೊಂದು ಒಂದು ರೀತಿಯ ಮುತ್ತುಗಳಿದ್ದಂತೆ. ರಾಜೇಶ್ವರಿಯ ಕೆಟ್ಟತನದಿಂದ ನಲುಗಿ ಹೋಗಿದ್ದ ಪುಟ್ಟಕ್ಕನನ್ನು ನಾಜೂಕಾಗಿ ಸಮಾಧಾನಿಸಿದ್ದಾರೆ. ಸ್ನೇಹಾ ಮತ್ತಜ ಸಹನಾಳ ಮಾತು ಕೇಳಿ ಪುಟ್ಟಕ್ಕನಿಗೆ ಅವರ ತಾಯಿಯೇ ನೆನಪಾಗಿದ್ದಾರೆ. ಈ ಕ್ಷಣಕ್ಕೆ ನನಗೆ ನನ್ನ ಅವ್ವನಂತೆ ಕಾಣುತ್ತಿದ್ದೀರಾ ಇಬ್ಬರು ಎಂದಿದ್ದಾರೆ. ಇದನ್ನು ಕೇಳಿದ ಸಹನಾ ಮತ್ತು ಸ್ನೇಹಾ ಮತ್ತಷ್ಟು ಭಾವನೆಗೆ ಒಳಗಾಗಿದ್ದಾರೆ. ಇದಲ್ಲವೇ ತುಂಬು ಕುಟುಂಬದಲ್ಲಿ ಇರಬೇಕಾದ ಒಗ್ಗಟ್ಟು.


Click it and Unblock the Notifications











