Sathya: ರಾಕಿ ಅನ್ನು ನೋಡಲು ಬಂದ ಸತ್ಯಗೆ ಬಿಗ್‌ ಶಾಕ್

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌ ಒಂದು ಕಾದಿದೆ. ಸತ್ಯ ಮತ್ತು ಕಾರ್ತಿಕ್ ಸೇರಿ ಮಾಡಿದ ಪ್ರಾಜೆಕ್ಟ್‌ ಆಯ್ಕೆ ಆಗಿ ಬಹುಮಾನ ಕೂಡ ಬಂದಿದೆ. ಸತ್ಯ ವೇದಿಕೆ ಮೇಲೆ ನಿಂತು ಅದ್ಭುತವಾಗಿ ಮಾತನಾಡುತ್ತಾಳೆ. ಕಾರ್ತಿಕ್‌ ತನ್ನ ಪತ್ನಿಯನ್ನು ಎಲ್ಲರೂ ಹೊಗಳಿದ್ದು ನೋಡಿ ಖುಷಿ ಪಟ್ಟಿರುತ್ತಾನೆ. ಇನ್ನು ಈ ವಿಚಾರವನ್ನು ಮನೆಯಲ್ಲಿ ಹೇಳಬೇಕು ಖುಷಿಯಿಂದ ಬರುತ್ತಾರೆ.

ಮನೆಗೆ ಬರುತ್ತಿದ್ದಂತೆ ಸೀತಾ ಸತ್ಯಳನ್ನು ಬಾಗಿಲಿನಲ್ಲಿ ನಿಲ್ಲಿಸಿ ಬೈಯುತ್ತಾಳೆ. ಪ್ಯಾಂಟ್‌ ಧರಿಸಿ, ಬೈಕ್‌ನಲ್ಲಿ ಮಂಗಳೂರಿಗೆ ಹೋಗಿದ್ದಕ್ಕೆ ಕೋಪದಲ್ಲಿ ಬೈಯುತ್ತಾಳೆ. ಆದರೆ, ಸೀತಾ ಹಾಗೂ ಕೀರ್ತನಾ ಮಾತುಗಳನ್ನು ಕೇಳುತ್ತಾ ಸುಮ್ಮನಿರದ ಕಾರ್ತಿಕ್‌, ಸತ್ಯ ಪರ ನಿಲ್ಲುತ್ತಾನೆ. ನಾನು ಬಲವಂತ ಮಾಡಿದ್ದಕ್ಕೆ ಸತ್ಯ ಪ್ಯಾಂಟ್‌-ಶರ್ಟ್‌ ಧರಿಸಿದ್ದಾಳೆ. ಅವಳು ನನ್ನ ಹೆಂಡತಿ. ನನಗೆ ಇಷ್ಟ ಬಂದ ಹಾಗೆ ಇರುತ್ತಾಳೆ ಎಂದು ಕಾರ್ತಿಕ್‌ ಹೇಳುತ್ತಾನೆ. ಕೀರ್ತನಾ ವಿರುದ್ಧ ರೇಗಾಡುತ್ತಾನೆ.

sathya Serial 01st April episode written update

ಈ ಸಂದರ್ಭದಲ್ಲಿ ಲಕ್ಷ್ಮಣ್‌ ಹಾಗೂ ಕೀರ್ತನಾ ಕೂಡ ಸೀತಾ ಪರ ನಿಂತಿದ್ದಾರೆ. ಆದರೆ, ಕಾರ್ತಿಕ್‌ ತನ್ನ ಹೆಂಡತಿಯ ಪರವಾಗಿ ಮಾತನಾಡಿದ್ದಾನೆ. ಆದರೆ, ಕಾರ್ತಿಕ್‌ ತನ್ನ ಪರವಾಗಿ ಮಾತನಾಡಿದ್ದು, ಸತ್ಯಗೆ ಖುಷಿಯಾಗಿದ್ದರೂ, ಸೀತಮ್ಮನಿಗೆ ಕೋಪ ಬರುವಂತಾಯ್ತು ಎಂದು ಗಾಬರಿ ಆಗಿರುತ್ತಾಳೆ. ಕಾರ್ತಿಕ್‌ ತನ್ನ ವಿರುದ್ಧವೇ ಮಾತನಾಡಿದನು ಎಂದು ಸೀತಾಳಿಗೆ ನೋವಾಗುತ್ತದೆ. ಇದರಿಂದ ಸೀತಾ ಚಿಂತೆಗೀಡಾಗುತ್ತಾಳೆ. ಹಗಲು ರಾತ್ರಿ ಎನ್ನದೇ ಸೀತಾ ತನ್ನ ಮಗನ ಬಗ್ಗೆಯೇ ಯೋಚಿಸುತ್ತಿರುತ್ತಾಳೆ.

ಪದೇ ಪದೇ ಇಂತಹ ಸಂದರ್ಭವನ್ನೇ ಬಳಸಿಕೊಳ್ಳುವ ಕೀರ್ತನಾ, ಸೀತಾ ಬಳಿ ಬಂದು ಸತ್ಯ ಮೇಲೆ ಇನ್ನಷ್ಟು ಮತ್ತಷ್ಟು ಚಾಡಿ ಹೇಳಿದ್ದಾಳೆ. ಸೀತಾಳಿಗೆ ಸತ್ಯ ಬೇಡವೇ ಬೇಡ. ಆದಷ್ಟು ಬೇಗ ಮನೆಯಿಂದ ತೊಲಗಲಿ ಎಂಬಂತೆ ಮಾಡಿದ್ದಾಳೆ. ಸತ್ಯ ಮಾತು ಕೇಳಿಕೊಂಡು ಕಾರ್ತಿಕ್‌ ಹೀಗೆ ಬದಲಾಗುತ್ತಿದ್ದಾನೆ. ಸತ್ಯ ಈ ಮನೆಯಲ್ಲಿ ಇದ್ದಷ್ಟೂ ದಿನವೂ ನಮಗೆಲ್ಲಾ ಸಮಸ್ಯೆಗಳು ಹೆಚ್ಚಾಗುತ್ತೆ. ಆದಷ್ಟು ಬೇಗನೇ ಇಬ್ಬರಿಗೂ ಡಿವೋರ್ಸ್‌ ಕೊಡಿಸಿ ಮನೆಯಿಂದ ಆಚೆ ಹಾಕುವಂತೆ ಕಿವಿ ಊದುತ್ತಾಳೆ.

sathya Serial 01st April episode written update

ರಾಮಚಂದ್ರ ರಾಯರು, ಸೀತಾಳಿಗೆ ಬುದ್ಧಿ ಹೇಳುತ್ತಾನೆ. ಕಾರ್ತಿಕ್‌ ಮಾತನಾಡಿದ್ದರಲ್ಲಿ ತಪ್ಪಿಲ್ಲ ನೀನೇ ಅಪಾರ್ಥ ಮಾಡಿಕೊಳ್ಳುತ್ತಿದ್ದೀಯಾ ಎಂದು ಹೇಳುತ್ತಾನೆ. ಇನ್ನು ಸತ್ಯಳಿಗೂ ಬೇಸರವಾಗಿರುತ್ತದೆ. ಕಾರ್ತಿಕ್‌ ಗೆ ನೀನು ಹಾಗೆ ಮಾತನಾಡಬಾರದಿತ್ತು. ಸೀತಮ್ಮನಿಗೆ ಹರ್ಟ್‌ ಆಗಿದೆ ಎಂದು ಹೇಳುತ್ತಾಳೆ. ಕಾರ್ತಿಕ್‌ ನನಗೂ ಗೊತ್ತು. ಆದರೆ, ಆ ಸಂದರ್ಭದಲ್ಲಿ ನಿನ್ನನ್ನು ವಹಿಸಿಕೊಂಡು ಮಾತನಾಡುವುದು ಅನಿವಾರ್ಯವಾಗಿತ್ತು ಎಂದು ಹೇಳುತ್ತಾನೆ.

ಸತ್ಯಳಿಗೆ ಸೀತಮ್ಮನಿಗೆ ತನ್ನನ್ನು ಕಂಡರೆ ಮೊದಲೇ ಆಗುತ್ತಿರಲಿಲ್ಲ. ಇನ್ನು ಈಗ ಇನ್ನೂ ಕೋಪ ಹೆಚ್ಚಾಗಿರುತ್ತದೆ. ನನ್ನ ಜೊತೆಗೆ ಮಾತನಾಡುವುದೇ ಇಲ್ಲವೇನೋ ಎಂದು ಆತಂಕದಲ್ಲಿರುತ್ತಾಳೆ. ಇತ್ತ ರಾಕೇಶ್‌ ಪರೀಕ್ಷೆ ಬರೆಯಲು ಆಗದೇ, ಯೋಚಿಸುತ್ತಾ ಕುಳಿತಿರುತ್ತಾನೆ. ಸತ್ಯ ಫೋನ್‌ ಮಾಡಿ ಪರೀಕ್ಷೆ ಹೇಗೆ ಬರೆದೆ ಎಂದು ವಿಚಾರಿಸುತ್ತಾಳೆ. ಆದರೆ, ರಾಕಿ ತನಗೆ ಹುಷಾರಿಲ್ಲ. ಹಾಗಾಗಿ ಪರೀಕ್ಷೆ ಬರೆದಿಲ್ಲ ಎಂದು ಹೇಳಿ ಫೋನ್‌ ಕಟ್‌ ಮಾಡುತ್ತಾನೆ.

sathya Serial 01st April episode written update

ಗುಂಗುರುಗೆ ಫೋನ್‌ ಮಾಡಿ ಕೇಳಿದಾಗ, ರಾಕಿಗೆ ವಿಪರೀತ ಜ್ವರ ಇದೆ ಎಂದು ಸುಳ್ಳು ಹೇಳುತ್ತಾನೆ. ಅನುಮಾನಗೊಂಡ ಸತ್ಯ, ರಾಕಿ ರೂಮ್‌ಗೆ ಹೋಗುತ್ತಾಳೆ. ಅಲ್ಲಿ ನೋಡಿದರೆ, ರಾಕಿ ಕೈಗೆ ಪೆಟ್ಟಾಗಿರುವುದನ್ನು ನೋಡಿ ಗಾಬರಿಯಾಗುತ್ತಾಳೆ. ಸತ್ಯಳಿಗೆ ಏನಾಯ್ತು ಎಂಬ ನಿಜ ತಿಳಿದರೆ, ಕೀರ್ತನಾ ಬುರುಡೆಗೆ ಬಿಸಿ ನೀರು ಕಾಯಿಸುವುದು ಗ್ಯಾರೆಂಟಿ.

More from Filmibeat

English summary
Sathya Serial 01st April episode written update. Here is details About seethe woories for karthik supporting sathya. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X