Sathya: ರಾಕಿಗೆ ಅಮ್ಮ ಸಿಕ್ಕಾಯ್ತು: ಬಾಲ ಹೆಂಡತಿಗಾಗಿ ಅತ್ತೆ ಮನೆಗೆ ಬಂದಾಯ್ತು

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ರಿತು ಮನೆಗೆ ಬಂದಿದ್ದಾಳೆ. ಇದರಿಂದ ಮನೆಯವರೆಲ್ಲಾ ಖುಷಿಯಾಗಿದ್ದಾರೆ. ಆದರೆ ಕೀರ್ತನಾ ಬೇಕಂತಲೇ ಮತ್ತೆ ಸೀತಾ ಕಿವಿ ಊದಿದ್ದಾಳೆ. ಇದೆಲ್ಲಾ ಸತ್ಯ ಬೇಕಂತಲೇ ಮಾಡುತ್ತಿದ್ದಾಳೆ. ಮುಂದೆ ಸ್ವಲ್ಪ ದಿನ ಕಳೆದ ಬಳಿಕ ಸತ್ಯ, ರಿತು ಹಾಗೂ ರಾಕಿ ಇಬ್ಬರನ್ನು ಒಂದು ಮಾಡುತ್ತಾಳೆ. ಇಬ್ಬರಿಗೂ ನಿಮ್ಮೆಲ್ಲರ ಮುಂದೆ ಮದುವೆ ಮಾಡಿಸುತ್ತಾಳೆ ಅಂತೆಲ್ಲಾ ಹೇಳಿದ್ದಾಳೆ.

ನೀವೇ ನೋಡುತ್ತಿರಿ. ಇದೆಲ್ಲಾ ಸತ್ಯ ಬೇಕಂತಲೇ ಮಾಡಿರುವ ಪ್ಲಾನ್ ಎಂದು ಹೇಳುತ್ತಾಳೆ ಕೀರ್ತನಾ ಹೇಳಿದ್ದಾನೆ. ಈಗ ಸೀತಾ ಮನಸ್ಸು ಮತ್ತೆ ಕದಡಿದ್ದು, ಸತ್ಯ ಮೇಲೆ ಪುನಃ ಅಸಮಾಧಾನ ಶುರುವಾಗಿದೆ.

sathya Serial 02nd June episode written update

ಸತ್ಯ ಪೇಪರ್‌ನಲ್ಲಿ ಕಿರಣ್ ಬೇಡಿ ಅವರ ಸಾಧನೆಯ ಬಗ್ಗೆ ಓದಿದ್ದಾಳೆ. ಇದರಿಂದ ತನಗೂ ಪೊಲೀಸ್ ಆಗುವ ಆಸೆ ಬಂದಿದೆ. ಹಾಗಾಗಿ ತನ್ನ ಆಸೆಯನ್ನು ಕಾರ್ತಿಕ್ ಬಳಿ ಹೇಳಿಕೊಂಡಿದ್ದಾಳೆ. ಕಾರ್ತಿಕ್ ಕೂಡ ಸತ್ಯ ಓದುವುದಕ್ಕೆ ಸಹಾಯ ಮಾಡಿದ್ದಾನೆ. ಪುಸ್ತಕಗಳನ್ನು ತಂದು ಕೊಟ್ಟಿದ್ದಾನೆ. ಸತ್ಯ ಶ್ರದ್ಧೆಯಿಂದ ಓದಲು ಶುರು ಮಾಡಿದ್ದಾಳೆ. ಕಾರ್ತಿಕ್ ಹಾಗೂ ಊರ್ಮಿಳಾ ಇಬ್ಬರೂ ಕೂಡ ಸತ್ಯ ಓದುವುದಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ. ಇದರಿಂದ ಸತ್ಯಳಿಗೂ ಖುಷಿಯಾಗಿದೆ.

ಮನೆಗೆ ರಾಕಿಯನ್ನು ಕರೆದ ಊರ್ಮಿಳಾ

ಮನೆಯಲ್ಲಿ ಎಲ್ಲರೂ ಆಚೆ ಹೋಗಿದ್ದಾರೆ. ಊರ್ಮಿಳಾ, ಸತ್ಯ ಹಾಗೂ ರಿತು ಮಾತ್ರ ಮನೆಯಲ್ಲಿದ್ದಾರೆ. ಊರ್ಮಿಳಾ ಮನೆಯಲ್ಲಿ ತರಹೇವಾರಿ ಅಡುಗೆಗಳನ್ನು ಮಾಡಿದ್ದು, ರಿತು ಬಳಿ ರಾಕಿ ನಂಬರ್ ಕೇಳಿದ್ದಾಳೆ. ಇದರಿಂದ ರಿತು ಗಾಬರಿಯಾಗಿದ್ದಾಳೆ. ತನ್ನ ಫೋನ್‌ನಿಂದಲೇ ರಿತು, ರಾಕಿಗೆ ಫೋನ್ ಮಾಡಿ ಊರ್ಮಿಳಾಗೆ ಕೊಟ್ಟಿದ್ದಾಳೆ. ಊರ್ಮಿಳಾ ಪ್ರೀತಿಯಿಂದ ರಾಕಿಯನ್ನು ಮನೆಗೆ ಬಾ. ನಿನ್ನ ಜೊತೆಗೆ ನಾನು ಸ್ವಲ್ಪ ಮಾತನಾಡಬೇಕು ಎಂದು ಹೇಳುತ್ತಾಳೆ. ಇದರಿಂದ ರಾಕಿ ಗಾಬರಿಯಾಗಿದ್ದಾನೆ.

sathya Serial 02nd June episode written update

ರಾಕಿಗೆ ಅಮ್ಮ ಸಿಕ್ಕಾಯ್ತು

ಆದರೂ ಕೂಡ ಬೇರೆ ದಾರಿ ಇಲ್ಲದೇ, ಗಾಬರಿಯಲ್ಲೇ ರಾಕಿ ಮನೆಗೆ ಬರುತ್ತಾನೆ. ಈ ವಿಚಾರ ಸತ್ಯ ಹಾಗೂ ರಿತುಗೂ ಗಾಬರಿ ಪಡಿಸುತ್ತೆ. ಆದರೆ, ಊರ್ಮಿಳಾ ಪ್ರೀತಿಯಿಂದ ರಾಕಿಗೆ ಹಬ್ಬದ ಅಡುಗೆಯನ್ನು ಮಾಡಿ ಊಟಕ್ಕೆ ಬಡಿಸುತ್ತಾಳೆ. ನೀನು ನನ್ನ ಮಗಳನ್ನು ಮತ್ತೆ ಮನೆಗೆ ಕರೆದುಕೊಂಡು ಬಂದು ಒಳ್ಳೆಯದು ಮಾಡಿದೆ. ನಾನು ನಿನ್ನ ತಾಯಿ ಇದ್ದ ಹಾಗೆ ಎಂದು ಹೇಳುತ್ತಾಳೆ. ಮತ್ತೆ ಮನೆಗೆ ಬರಲು ಹೇಳಿ, ಹಣ ನೀಡುತ್ತಾಳೆ. ಆದರೆ ರಾಕಿ ಈ ಹಣ ನನಗೆ ಬೇಡ ಎಂದು ಹೇಳುತ್ತಾನೆ. ನನಗೆ ಅಮ್ಮ ಕೂಡ ಸಿಕ್ಕಿದರು ಎಂದು ಖುಷಿ ಪಡುತ್ತಾನೆ. ಸತ್ಯ ಹಾಗೂ ರಿತುಗೂ ಊರ್ಮಿಳಾ ಮಾಡಿದ ಕೆಲಸ ನೋಡಿ ಹೆಮ್ಮೆ ಎನಿಸುತ್ತದೆ.

ಹೆಂಡತಿಯನ್ನು ಹುಡುಕಿ ಬಂದ ಬಾಲ

ಇತ್ತ ದಿವ್ಯಾ ಬಾಲನ ಸಹವಾಸ ಬೇಡ ಎಂದು ತವರು ಮನೆ ಸೇರಿಕೊಂಡಿದ್ದಾಳೆ. ಹಳ್ಳಿಯಲ್ಲಿ ಗೊಗ್ಗಯ್ಯ ಗೋಳಿಟ್ಟುಕೊಂಡ ರೀತಿಯಿಂದ ದಿವ್ಯ ಮನೆಯಲ್ಲಿ ಕೆಲಸ ಮಾಡಲು ಕೂಡ ಶುರುವಾಗಿದ್ದಾಳೆ. ದಿವ್ಯಾಳಲ್ಲಿ ಆಗಿರುವ ಬದಲಾವಣೆಯನ್ನು ಕಂಡು ಗಿರಿಜಾ ಮತ್ತು ಜಾನಕಿ ಇಬ್ಬರೂ ಆಶ್ಚರ್ಯ ಪಟ್ಟುಕೊಂಡಿದ್ದಾರೆ. ದಿವ್ಯಾ ಬಾಲನನ್ನು ಮರೆತು ಮನೆಯಲ್ಲಿ ಆರಾಮವಾಗಿ ಕಾಲ ಕಳೆಯುತ್ತಿದ್ದಾಳೆ. ಇದರಿಂದ ಜಾನಕಿ ಏನು ಮಾಡುವುದು ಎಂದು ಯೋಚಿಸುತ್ತಿದ್ದಾಳೆ.

sathya Serial 02nd June episode written update

ಜಾನಕಿ ಮತ್ತು ಗಿರಿಜಾ ಇಬ್ಬರನ್ನು ಒಂದು ಮಾಡಬೇಕು ಎಂದು ಅಂದುಕೊಳ್ಳುವ ಹೊತ್ತಿಗೆ ಸರಿಯಾಗಿ ಈಗ ಮನೆಗೆ ಬಾಲ ಬಂದಿದ್ದಾನೆ. ಪತ್ನಿ ದಿವ್ಯಾಳನ್ನು ಬಿಟ್ಟಿರಲಾರದೇ, ಬಾಲ, ದಿವ್ಯಾ ಮನೆಗೆ ಬಂದಿದ್ದಾನೆ. ದಿವ್ಯಾ ಈಗ ಏನು ಮಾಡುತ್ತಾಳೋ ಕಾದು ನೋಡಬೇಕಿದೆ.

More from Filmibeat

English summary
Sathya Serial 02nd June episode written update. here is detials about Bala comes to Divya mother's home. Now what Happen. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X