ಸತ್ಯಳನ್ನು ಹೆಂಡತಿ ಎಂದು ಕಾರ್ತಿಕ್ ಒಪ್ಪಿಕೊಂಡಾಯ್ತಾ..?

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ಸತ್ಯ ಮತ್ತು ದಿವ್ಯಾ ಇಬ್ಬರೂ ಮದುವೆಯಾಗಿ ಸೆಟಲ್ ಆದರು ಎಂದು ಜಾನಕಿ ಖುಷಿ ಪಟ್ಟಿದ್ದಾಳೆ. ಇಬ್ಬರ ಮದುವೆಯ ಬಗ್ಗೆ ದೊಡ್ಡ ಯೋಚನೆಯಾಗಿತ್ತು. ಆದರೆ ಇಬ್ಬರೂ ಈಗ ಒಳ್ಳೆಯ ಜೀವನವನ್ನು ಕಂಡುಕೊಂಡಿದ್ದಾರೆ ಎಂದು ಖುಷಿಯಾಗಿದ್ದಾಳೆ.

ಕಾರ್ತಿಕ್ ನಡವಳಿಕೆಯಿಂದ ಸತ್ಯ ಬೇಸರ ಮಾಡಿಕೊಂಡಿದ್ದಾಳೆ. ರೊಮ್ಯಾನ್ಸ್ ಮಾಡುತ್ತಾ ನನ್ನ ಜೊತೆಗೆ ಚೆನ್ನಾಗಿದ್ದ ಕಾರ್ತಿಕ್ ಇದ್ದಕ್ಕಿದ್ದ ಹಾಗೆಯೇ ಬೇಸರ ಮಾಡಿಕೊಳ್ಳಲು ಕಾರಣವೇನು ಎಂದು ಯೋಚಿಸುತ್ತಿದ್ದಾಳೆ.

ಬಾಲ, ದಿವ್ಯಾಳನ್ನು ಮತ್ತೆ ತನ್ನ ಹಳ್ಳಿಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾನೆ. ಆದರೆ ಈ ವಿಚಾರವಾಗಿ ಹೇಗೆ ದಿವ್ಯಾ ಬಳಿ ಮಾತನಾಡುವುದು ಎಂಬುದನ್ನು ತಿಳಿಯದೇ ಸುಮ್ಮನಿದ್ದಾನೆ. ದಿವ್ಯಾ ಹಳ್ಳಿಗೆ ಹೋಗಲು ಒಪ್ಪುವುದೇ ಅನುಮಾನವಾಗಿದೆ.

ಮತ್ತೊಂದು ಹೊಸ ಪ್ಲ್ಯಾನ್ ಮಾಡಿದ ಬಾಲ

ಮತ್ತೊಂದು ಹೊಸ ಪ್ಲ್ಯಾನ್ ಮಾಡಿದ ಬಾಲ

ಬಾಲ, ದಿವ್ಯಾಳನ್ನು ಹಳ್ಳಿಗೆ ಹೊರಡೋಣ ನಡಿ ಎಂದು ಕೇಳಿದ್ದಾನೆ. ಇದಕ್ಕೆ ದಿವ್ಯಾ ಆ ಕೊಂಪೆಗೆ ನಾನು ಮತ್ತೆ ಬರೋಲ್ಲ. ನಾನೇನಿದ್ದರೂ ಅರಮನೆಗೆ ಬರುವುದು ಎಂದು ಹೇಳುತ್ತಾಳೆ. ಬಾಲ, ತಾತ ನಿನ್ನನ್ನು ಒಪ್ಪಿಕೊಂಡಿದ್ದಾರೆ. ಬಾ ಎಂದು ಬಾಲ ಕರೆದರೂ ದಿವ್ಯಾ ಖಡಾಖಂಡಿತವಾಗಿ ತಿರಸ್ಕರಿಸುತ್ತಾಳೆ. ಹೀಗಾಗಿ ಬಾಲ ಈಗ ಮತ್ತೊಂದು ಪ್ಲ್ಯಾನ್ ಮಾಡಲು ಮುಂದಾಗಿದ್ದಾನೆ. ಅವರ ತಂದೆ ರಾಜಹುಲಿ ಗಲ್ಲಿಗೆ ಬರುತ್ತಿದ್ದಾರೆ ಎಂಬ ಸುದ್ದಿ ಹಬ್ಬಿಸಿ, ದಿವ್ಯಾ ಇಲ್ಲಿಂದ ಕಾಲ್ಕೀಳುವಂತೆ ಮಾಡಲು ಮುಂದಾಗಿದ್ದಾನೆ. ಈ ಪ್ಲ್ಯಾನ್‌ನಿಂದ ದಿವ್ಯಾ ಆಲೋಚನೆಗೆ ಹೆಚ್ಚು ಸಹಾಯವಾಗುವಂತೆ ಕಾಣುತ್ತಿದೆ.

ಮಂಜು ಹೇಳಿದ ಮಾತನ್ನು ನಂಬಿದ ಕಾರ್ತಿಕ್

ಮಂಜು ಹೇಳಿದ ಮಾತನ್ನು ನಂಬಿದ ಕಾರ್ತಿಕ್

ಕಾರ್ತಿಕ್, ಮಂಜು ಹೇಳಿದ ಮಾತನ್ನು ಒಪ್ಪುವುದಿಲ್ಲ. ದಿವ್ಯಾ ಸುಳ್ಳು ಹೇಳಿಲ್ಲ ಎಂದು ಹೇಳುತ್ತಾನೆ. ಆಗ ಮಂಜು ನೀನು ಸತ್ಯ ಬಗ್ಗೆ ತುಂಬಾ ತಪ್ಪು ತಿಳಿದುಕೊಂಡಿದ್ದೀಯಾ. ದಿವ್ಯಾ ಓಡಿ ಹೋಗಬಾರದು ಎಂದು ಹುಡುಗರನ್ನು ಕಾವಲಿಗೆ ಇಟ್ಟಿದ್ದಳು. ಆದರೂ ಮದುವೆ ಮನೆಯಿಂದ ದಿವ್ಯಾ ಓಡಿ ಹೋಗಿ ಬಾಲನನ್ನು ಮದುವೆಯಾದಳು. ನಿನ್ನ ಮದುವೆಯಾಗುವ ಆಲೋಚನೆ ಇದ್ದಿದ್ದರೆ, ನಿನಗಾಗಿ ಕಾಯುತ್ತಿದ್ದಳು. ದಿವ್ಯಾ ಹೇಳಿರುವುದೆಲ್ಲಾ ಸುಳ್ಳು. ಸುಮ್ಮನೆ ಸತ್ಯ ಮೇಲೆ ಅನುಮಾನ ಪಡಬೇಡ ಎನ್ನುತ್ತಾನೆ. ಕಾರ್ತಿಕ್, ಮಂಜು ಹೇಳಿದ್ದನ್ನು ಅರ್ಥ ಮಾಡಿಕೊಂಡು ಸತ್ಯ ಬಳಿ ಕ್ಷಮೆ ಕೇಳಲು ಹೋಗುತ್ತಾನೆ. ಆದರೆ, ಸತ್ಯ ಕೋಪ ಮಾಡಿಕೊಂಡಿರುತ್ತಾಳೆ. ಸಿಟ್ಟಲ್ಲಿ ಸತ್ಯ ಮಾತನಾಡುವಾಗ ಕಾರ್ತಿಕ್, ಸತ್ಯಳನ್ನು ನೀನು ನನ್ನ ಹೆಂಡತಿ ಎಂದು ಒಪ್ಪಿಕೊಳ್ಳುತ್ತಾನೆ.

ಸುಳ್ಳಿನ ದೋಣಿಯಲ್ಲಿ ದಿವ್ಯಾ

ಸುಳ್ಳಿನ ದೋಣಿಯಲ್ಲಿ ದಿವ್ಯಾ

ಜಾನಕಿ, ದಿವ್ಯಾ ಹಾಗೂ ಸತ್ಯ ಬಾಳು ಸೆಟಲ್ ಆಗಿದೆ ಎಂದು ಖುಷಿಯಿಂದ ಹೇಳಿದಾಗ ಗಿರಿಜಮ್ಮ ಸತ್ಯನ ವಿಚಾರದಲ್ಲಿ ನಿಜ. ಆದರೆ, ದಿವ್ಯಾ ವಿಚಾರದಲ್ಲಿ ತಪ್ಪು. ಅವಳ ಬದುಕಲ್ಲಿ ಯಾರಿಗೂ ಗೊತ್ತಾಗದ ಸಮಸ್ಯೆ ಇದೆ. ಅದು ಅವಳಿಗೆ ಗೊತ್ತಿಲ್ಲ. ಸುಳ್ಳಿನ ತೂತುಗಳಿರುವ ದೋಣಿಯಲ್ಲಿ ದಿವ್ಯಾ ಇದ್ದಾಳೆ. ಅದೆಲ್ಲದರಿಂದ ದಿವ್ಯಾ ಯಾವಾಗ ಹೊರಗೆ ಬರುತ್ತಾಳೋ ಗೊತ್ತಿಲ್ಲ. ಅವಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದರೂ ಅರ್ಥವಾಗುತ್ತಿಲ್ಲ. ದಿವ್ಯಾಳನ್ನು ಆ ಸುಳ್ಳಿನ ದೋಣಿಯಿಂದ ಹೊರಗೆ ಕರೆದುಕೊಂಡು ಬರಬೇಕಿದೆ ಎಂದು ಹೇಳುತ್ತಾಳೆ.

ಸತ್ಯ ಬಗ್ಗೆ ಇನ್ನು ಸೀತಾಗೆ ಮೂಡದ ಒಲವು

ಸತ್ಯ ಬಗ್ಗೆ ಇನ್ನು ಸೀತಾಗೆ ಮೂಡದ ಒಲವು

ಕೀರ್ತನಾಗೆ ಈಗ ನಿತ್ಯ ಸತ್ಯ ಮೇಲೆ ದೂರು ಹೇಳುವುದೇ ಚಾಳಿ ಆಗಿದೆ. ಈಗ ಮತ್ತೆ ಸೀತಾ ಬಳಿ ಹೋಗಿ, ಸತ್ಯ ನನ್ನನ್ನು ಹಿಯ್ಯಾಳಿಸುತ್ತಿದ್ದಾಳೆ. ಇಲ್ಲಿರುವುದಕ್ಕೆ ಹಂಗಿಸಿದ್ದಾಳೆ. ನನಗೆ ಅವಮಾನ ಮಾಡುತ್ತಿದ್ದಾಳೆ ಎಂದು ಸುಳ್ಳು ಹೇಳಿದ್ದಾಳೆ. ಸೀತಾಗೆ ಈಗ ಕೀರ್ತನಾ ಹೇಳುವುದೆಲ್ಲಾ ಸತ್ಯ ಎಂಬಂತೆಯೇ ಗೋಚರಿಸುತ್ತಿದೆ. ಹೀಗಾಗಿ ಸತ್ಯ ಈ ಮನೆಗೆ ತಕ್ಕ ಸೊಸೆಯಾಗಿ ಬದಲಾಗುತ್ತಿದ್ದರೂ ಸೀತಾಗೆ ಸತ್ಯಾಳ ಮೇಲೆ ಯಾವುದೇ ಒಲವು ಮೂಡಿಲ್ಲ. ಸತ್ಯಳನ್ನು ಮನೆಯಿಂದ ಹೊರಗಿಡಲು ಯತ್ನಿಸುತ್ತಿರುವ ಸೀತಾ ಹಾಗೂ ಕೀರ್ತನಾ ಲೆಕ್ಕಾಚಾರ ತಪ್ಪಾಗುತ್ತಿದೆಯೇ..?

More from Filmibeat

English summary
sathya serial 02nd november Episode Written Update. keerthana again complaints on sathy to seethe. Karthik accepts sathya as his wife whole heartedly.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X