Sathya: ರಾಕಿ ಅನ್ನು ನೋಡಲು ಬಂದ ಸತ್ಯಗೆ ಬಿಗ್ ಶಾಕ್: ಸುಳ್ಳು ಹೇಳಿದ ರಿತು
'ಸತ್ಯ' ಧಾರಾವಾಹಿಯಲ್ಲಿ ರಿತು ಎಲ್ಲಿಗೆ ಹೋಗುತ್ತಿದ್ದಾಳೆ. ಯಾವಾಗ ಬರುತ್ತಾಳೆ. ಏನು ತಿನ್ನುತ್ತಾಳೆ, ಏನು ಮಾಡುತ್ತಿದ್ದಾಳೆ, ಎಂಬ ಯಾವ ವಿಚಾರವೂ ತಿಳಿಯುತ್ತಿರುವುದಿಲ್ಲ. ಈ ಬಗ್ಗೆ ಊರ್ಮಿಳಾ, ಲಕ್ಷ್ಮಣ್ ಬಳಿ ಮಾತನಾಡುತ್ತಾಳೆ. ಆಗ ಲಕ್ಷ್ಮಣನಿಗೆ ಸತ್ಯ ಮೇಲಿರುವ ಕೋಪವನ್ನು ಪರೋಕ್ಷವಾಗಿ ಹೊರ ಹಾಕುತ್ತಾನೆ. ಮನೆಯಲ್ಲೇ ಶತ್ರುಗಳಿದ್ದರೆ ಇವೆಲ್ಲವೂ ಸಾಮಾನ್ಯ. ನಮ್ಮ ಮನೆಯನ್ನೇ ಹಾಳು ಮಾಡುತ್ತಾರೆ ಎಂದು ಹೇಳುತ್ತಾನೆ.
ಆದರೆ ಈ ಮಾತು ಊರ್ಮಿಳಾಳಿಗೆ ಅರ್ಥವಾಗುವುದಿಲ್ಲ. ಯಾಕೆಂದರೆ, ಊರ್ಮಿಳಾಗೆ ಕೀರ್ತನಾ ಮಾಡಿರುವ ಕೆಲಸವೂ ಗೊತ್ತಿರುವುದಿಲ್ಲ. ರಿತು-ರಾಕಿ ಪ್ರೀತಿಯ ಬಗ್ಗೆಯೂ ಗೊತ್ತಿರುವುದಿಲ್ಲ. ಇನ್ನು ಲಕ್ಷ್ಮಣ್, ಸತ್ಯಳನ್ನೇ ಅನುಮಾನಿಸುತ್ತಿರುವ ವಿಚಾರ ಮೊದಲೇ ತಿಳಿದಿರುವುದಿಲ್ಲ. ರಿತು, ರಾಕಿಗೆ ತನ್ನಿಂದಲೇ ಅನ್ಯಾಯವಾಯ್ತು. ಅವನು ಪ್ರೀತಿಸುವುದು ಬೇಡ ಎಂದು ಎಷ್ಟು ಸಲ ಹೇಳಿದರೂ ನಾನು ಕೇಳಲಿಲ್ಲ. ಅವನ ಹಿಂದೆ ಬಿದ್ದು ಕಾಡಿಸಿ ಪ್ರೀತಿ ಮಾಡುವಂತೆ ಮಾಡಿದೆ. ಈಗ ನನ್ನಿಂದಾಗಿ ರಾಕಿ ಕನಸು ಕಟ್ಟಿಕೊಂಡಿದ್ದ ಪರೀಕ್ಷೆಯನ್ನೇ ಬರೆಯೋದಕ್ಕೆ ಆಗಲಿಲ್ಲ ಎಂದು ಕೊರಗಿದ್ದಾಳೆ.

ರಾಕಿ ಜೊತೆ ಮಾತನಾಡುವುದಕ್ಕಾಗಿಯೇ ರಿತು ಫೋನ್ ಮಾಡಿ ವಿಚಾರಿಸಿಕೊಂಡಿದ್ದಾಳೆ. ಆಗ ರಾಕಿ ನಿನ್ನದೇನು ತಪ್ಪಿಲ್ಲ ಬಿಡು ರಿತು. ಎಲ್ಲಾ ನನ್ನ ಹಣೆಯ ಬರಹ. ಮುಂದಿನ ವರ್ಷ ಪರೀಕ್ಷೆಯನ್ನು ಬರೆಯುತ್ತೇನೆ. ನೀನೇನೂ ಬೇಸರ ಮಾಡಿಕೊಳ್ಳಬೇಡ ಎಂದು ಸಮಾಧಾನ ಮಾಡುತ್ತಾನೆ. ಇನ್ನು ರಿತು ತನ್ನ ಸ್ನೇಹಿತೆ ಜೊತೆಗೆ ರಾಕಿಗೆ ಹೀಗಾಯ್ತಲ್ಲ ಎಂದು ಬೇಸರದಿಂದ ಮಾತನಾಡುತ್ತಿರುತ್ತಾಳೆ.
ಇದೇ ವೇಳೆಗೆ ಸತ್ಯ ಕೂಡ ಅಲ್ಲಿಗೆ ಬರುತ್ತಾಳೆ. ಸತ್ಯ, ರಿತು ಬಳಿ ರಾಕಿಗೆ ಏನಾಯ್ತು ಎಂದು ಕೇಳುತ್ತಾಳೆ. ಆಗ ರಿತು ತನಗೇನು ಗೊತ್ತಿಲ್ಲ ಎಂಬಂತೆ ನಾಟಕ ಮಾಡುತ್ತಾಳೆ. ಬಳಿಕ, ರಿತು ಸುಳ್ಳು ಹೇಳುತ್ತಾಳೆ. ರಾಕಿಗೆ ಹುಷಾರಿರಲಿಲ್ಲ ಎಂದು ಹೇಳುತ್ತಾಳೆ. ರಾಕಿಗೆ ಫುಡ್ ಪಾಯಿಸನ್ ಆಗಿತ್ತು. ಸುಸ್ತಾಗಿದ್ದರಿಂದ ಪರೀಕ್ಷೆ ಬರೆಯೋದಕ್ಕೆ ಆಗಲಿಲ್ಲ ಎಂದು ರಿತು ಹೇಳುತ್ತಾಳೆ. ಇದರಿಂದ ಸತ್ಯ ಇವರೆಲ್ಲಾ ಸೇರಿಕೊಂಡು ನನ್ನ ಬಳಿ ಏನನ್ನೋ ಮುಚ್ಚಿಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಏನು ಎಂಬುದು ಸತ್ಯಳಿಗೆ ಗೊತ್ತಾಗುವುದಿಲ್ಲ.

ಇನ್ನು ಸತ್ಯ ರಾಕಿ ರೂಮ್‌ಗೆ ಹೋಗಿ ಏನಾಯ್ತು ಎಂದು ಕೇಳುತ್ತಾಳೆ. ಆಗ ಹುಡುಗರು ಸತ್ಯವನ್ನು ಮುಚ್ಚಿಡಲಾಗದೇ, ನಡೆದ ಘಟನೆಯನ್ನು ಹೇಳುತ್ತಾರೆ. ಅಲ್ಲದೇ ಆ ವೀಡಿಯೋವನ್ನು ತೋರಿಸುತ್ತಾರೆ. ಸತ್ಯ ವೀಡಿಯೋವನ್ನು ನೋಡುತ್ತಾಳೆ. ಅವರನ್ನು ಸುಮ್ಮನೆ ಬಿಡಬಾರದು ಏನಾದರೂ ಮಾಡಲೇಬೇಕು. ಅವರು ಯಾಕೆ ನಿನಗೆ ಹೊಡೆದರು ಎಂದು ತಿಳಿದುಕೊಳ್ಳಬೇಕು. ಅವರನ್ನು ಸುಮ್ಮನೆ ಬಿಡಬಾರದು ಎಂದು ಸತ್ಯ ಹೇಳುತ್ತಾಳೆ.
ಸತ್ಯ ರೌಡಿಗಳನ್ನು ಹುಡುಕಿ ಇದಕ್ಕೆಲ್ಲಾ ಕೀರ್ತನಾಳೆ ಕಾರಣ ಎಂಬ ಸತ್ಯ ತಿಳಿದು, ಕೀರ್ತನಾ ಬಣ್ಣವನ್ನು ಕಳಚುವಂತೆ ಮಾಡುತ್ತಾಳಾ..? ಇಲ್ಲ ಲಕ್ಷ್ಮಣ ಮಾವ ಮಾಡಿದ್ದು ಎಂದು ತಪ್ಪು ತಿಳಿದು ಮನೆಯಲ್ಲಿ ರಂಪ-ರಾಮಾಯಣ ಆಗುತ್ತಾ ಎಂಬುದನ್ನು ನೋಡಬೇಕು. ಇತ್ತ ಸೀತಾ ನಿತ್ಯ ಮಗ ಕಾರ್ತಿಕ್ ಯೋಚನೆಯಲ್ಲಿ ಮುಳುಗಿ ಹೋಗಿರುತ್ತಾಳೆ. ಮಗನ ಬಗ್ಗೆ ಯೋಚಿಸುತ್ತಾ ಇರುತ್ತಾಳೆ. ಸೀತಾಳಿಗೆ ತಲೆ ನೋವು ಕೂಡ ಹೆಚ್ಚಾಗಿರುತ್ತದೆ.

ಪದೇ ಪದೇ ಸೀತಾ ಕಷಾಯವನ್ನು ತರಿಸಿ ಕುಡಿಯುತ್ತಿರುತ್ತಾಳೆ. ಇದರಿಂದ ಊರ್ಮಿಳಾ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳಿ ಎಂದು ಹೇಳುತ್ತಾಳೆ. ಇದರಿಂದ ಸೀತಾ ನಿನಗೆ ಗೊತ್ತಿಲ್ವಾ ನನಗ್ಯಾಕೆ ತಲೆ ನೋವು ಬರುತ್ತಿದೆ ಎಂದು. ಕಾರ್ತಿಕ್, ಸತ್ಯಳನ್ನು ವಹಿಸಿಕೊಂಡು ಮಾತನಾಡಿದವನು ಇನ್ನೂ ನನ್ನ ಬಳಿ ಬಂದು ಮಾತನಾಡಿಲ್ಲ ಎಂದು ಬೇಸರವನ್ನು ಹೊರ ಹಾಕುತ್ತಾಳೆ. ಆಗ ಊರ್ಮಿಳಾ, ಸೀತಾಳಿಗೆ ಸತ್ಯವನ್ನು ಅರ್ಥ ಮಾಡಿಸಲು ಯತ್ನಿಸುತ್ತಾಳೆ.


Click it and Unblock the Notifications











