Sathya: ದಿವ್ಯಾ ಹೇಳಿದ ಸುಳ್ಳಿನಿಂದ ಸಂಕಷ್ಟಕ್ಕೆ ಸಿಲುಕಿದ ಬಾಲ
'ಸತ್ಯ' ಧಾರಾವಾಹಿಯಲ್ಲಿ ಸೀತಾಗೆ ಸತ್ಯನ ಮೇಲೆ ಸ್ವಲ್ಪ ಸ್ವಲ್ಪವೇ ನಂಬಿಕೆ ಬರುತ್ತಿದೆ. ನಮ್ಮ ಮನೆಗೆ ಸತ್ಯ ಹೊಂದಿಕೊಳ್ಳುತ್ತಾಳೆ. ಈ ಮನೆಯ ಸೊಸೆಯಾಗಲು ಸತ್ಯ ಯೋಗ್ಯಳು ಎಂದು ಭಾವಿಸುತ್ತಿದ್ದಾಳೆ.
ಇತ್ತ ರಿತು, ರಾಕೇಶ್ ಮಾತಿಗೆ ಬೇಸರ ಮಾಡಿಕೊಂಡು ಓದುವುದನ್ನು ಬಿಟ್ಟಿದ್ದಾಳೆ. ಯಾರು ಏನೇ ಹೇಳಲಿ ನಾನು ಕೂಡ ಕೆಲಸ ಮಾಡಿ ಸಂಪಾದನೆ ಮಾಡುತ್ತೇನೆ ಎಂದು ಹೊರಟಿದ್ದಾಳೆ.
ಸೇಲ್ಸ್ ಗರ್ಲ್ ಆಗಿ ಮನೆ ಮನೆ ತಿರುಗುತ್ತಿರುವ ರಿತುಳನ್ನು ನೋಡಿ ರಾಕಿ ಕರಗಿದ್ದಾನೆ. ಆದರೆ ರಾಕಿ ಫೋನ್ ಮಾಡಿದರೂ ರಿತು ಬೇಕಂತಲೇ ಅವಾಯ್ಡ್ ಮಾಡುತ್ತಿದ್ದಾಳೆ. ಇದೆಲ್ಲಾ ನೋಡುತ್ತಿದ್ದರೆ, ಪ್ರೀತಿ ಇದ್ದರೂ ಸುಮ್ಮನಿರುವ ರಿತು ದಾರಿಗೆ ರಾಕಿ ಬರುವ ಚಾನ್ಸ್ ಇದೆ.

ಕೋಪದಿಂದಲೇ ಪ್ರೀತಿ ಮಾಡುತ್ತಿರುವ ಸತ್ಯ
ಕಾರ್ತಿಕ್ ಬಾಸ್ ಆಗಿರುವುದಕ್ಕಿಂತಲೂ ಕೆಲಸ ಕಲಿಯುವುದು ಮುಖ್ಯ ಎಂದು ತೀರ್ಮಾನಿಸಿದ್ದಾನೆ. ಹಾಗಾಗಿ ತನ್ನದೇ ಆಫೀಸಿಗೆ ಕೆಲಸದವನಾಗಿದ್ದಾನೆ. ಎಲ್ಲರೂ ಹೇಳುವ ಕೆಲಸವನ್ನು ಮಾಡುತ್ತಾ ಕೆಲಸ ಕಲಿಯುತ್ತಿದ್ದಾನೆ. ಆದರೆ ಕಾರ್ತಿಕ್‌ಗೆ ಈ ಕೀರ್ತನಾಳೆ ಬಾಸ್ ಆಗಿದ್ದಾಳೆ. ಬೇಕಂತಲೇ ಕಾರ್ತಿಕ್ ಮೇಲೆ ದ್ವೇಷ ಸಾಧಿಸುತ್ತಿದ್ದಾಳೆ. ಇತ್ತ ಸತ್ಯ ಮತ್ತು ಕಾರ್ತಿಕ್ ಪದೇ ಪದೇ ಕಿತ್ತಾಡುತ್ತಾ ಕೋಪದಲ್ಲೇ ಪ್ರೀತಿ ಮಾಡುತ್ತಿದ್ದಾರೆ. ಕಾರ್ತಿಕ್‌ಗೆ ಸತ್ಯ ಮೇಲಿರುವ ಪ್ರೀತಿ ಅರ್ಥವಾಗುತ್ತಿಲ್ಲ. ಆದರೆ, ಸತ್ಯಗೆ ಕಾರ್ತಿಕ್ ತನ್ನ ಮೇಲಿಟ್ಟಿರುವ ಪ್ರೀತಿ ಹಾಗೂ ಕಾಳಜಿಯನ್ನು ಅರ್ಥ ಮಾಡಿಕೊಂಡಿದ್ದಾಳೆ. ಆಗಾಗ ಕೋಪದ ನೆಪದಲ್ಲಿ ಸತ್ಯ, ಕಾರ್ತಿಕ್‌ನನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದಾಳೆ.

ಕೆಲಸದಿಂದ ತಪ್ಪಿಸಿಕೊಳ್ಳಲು ದಿವ್ಯಾ ಪ್ಲ್ಯಾನ್
ಇತ್ತ ದಿವ್ಯಾ ಕಥೆ ಆರಕ್ಕೆ ಏರದು, ಮೂರಕ್ಕೆ ಇಳಿಯದು ಎಂಬಂತಾಗಿದೆ. ಅರಮನೆಯಲ್ಲಿ ಬದುಕಬೇಕು ಎಂದುಕೊಂಡ ದಿವ್ಯಾ ಯಾವುದೋ ಹಳ್ಳಿಯಲ್ಲಿ ಸಗಣಿ ಬಾಚುತ್ತಾ ದಿನ ದೂಡುತ್ತಿದ್ದಾಳೆ. ಆದರೆ, ದಿವ್ಯಾಗೆ ಸದ್ಯದ ಪರೀಸ್ಥಿತಿಯಲ್ಲಿ ಏನೂ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಮನೆಗೆ ಬಾಲನ ತಾಯಿ ಹೆಸರು ಹೇಳಿಕೊಂಡು ಬಂದ ಗೀತಾ, ದಿವ್ಯಾ ಕಿವಿ ಊದಿದ್ದಾಳೆ. ಇಲ್ಲಿಂದ ಎಸ್ಕೇಪ್ ಆಗಲು ಏನೆಲ್ಲಾ ಮಾಡಬೇಕು ಎಂದು ಹೇಳಿಕೊಟ್ಟಿದ್ದಾಳೆ. ಈಗ ದಿವ್ಯಾ ಅದೇ ಆಲೋಚನೆಯಲ್ಲಿ ಹೊಸ ಪ್ಲ್ಯಾನ್ ಮಾಡಿಕೊಂಡಿದ್ದಾಳೆ.

ತಾತನ ಕೈಯಲ್ಲಿ ದಿವ್ಯಾಗೆ ಮಂಗಳಾರತಿ
ಬಾಲ ಪ್ರೀತಿ ಹೆಸರಲ್ಲಿ ದಿವ್ಯಾಗೆ ಮೋಸ ಮಾಡುತ್ತಲೇ ಇದ್ದಾನೆ. ನೀನಗೋಸ್ಕರ ಏನು ಬೇಕಿದ್ದರೂ ಮಾಡುತ್ತೇನೆ ಎಂದ ಬಾಲ, ದಿವ್ಯಾ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಮನೆ ಕೆಲಸವೆಲ್ಲವನ್ನೂ ಒಬ್ಬನೇ ಮಾಡುತ್ತಿದ್ದಾನೆ. ದಿವ್ಯಾ ಕೂಡ ಖುಷಿಯಾಗಿ ಎಲ್ಲಾ ಕೆಲಸವನ್ನು ಬಾಲನ ಕೈಯಲ್ಲಿ ಮಾಡಿಸುತ್ತಿದ್ದಾಳೆ. ಇದನ್ನು ನೋಡಿದ ತಾತ, ದಿವ್ಯಾಗೆ ಮಂಗಳಾರತಿಯನ್ನು ಎತ್ತಿದ್ದಾನೆ. ಡಿವೋರ್ಸ್ ಕೊಡಿಸುವುದಾಗಿ ಹೆದರಿಸಿದ್ದಾನೆ. ಈ ಮಾತನ್ನು ಕೇಳಿ ಹೆದರಿಂದ ದಿವ್ಯಾ ಬೇರೊಂದು ಪ್ಲ್ಯಾನ್ ಮಾಡಿದ್ದಾಳೆ.

ಸಂಕಷ್ಟಕ್ಕೆ ಸಿಲುಕಿದ ಬಾಲ
ವಾಂತಿ ಮಾಡಿದ ದಿವ್ಯಾ ತಾನು ಗರ್ಭಿಣಿ ಎಂದು ಸುಳ್ಳು ಹೇಳಿದ್ದಾಳೆ. ಆದರೆ ಈ ಮಾತನ್ನು ಕೇಳಿ ಬಾಲ ಗಾಬರಿಯಾಗಿದ್ದಾನೆ. ದಿವ್ಯಾ ಈ ಊರಿನಿಂದ ಹೀಗಾದರೂ ಹೊರಗೆ ಹೋಗಬೇಕು. ಅರಮನೆಯಲ್ಲಿ ಬದುಕಬೇಕು. ಅದಕ್ಕೆ ಬಾಲನ ತಂದೆ ತಾಯಿಯನ್ನು ಹೀಗಾದರೂ ಒಪ್ಪಿಸೋಣ ಎಂದು ಈ ಪ್ಲಾನ್ ಮಾಡಿದ್ದಾಳೆ. ಆದರೆ ಬಾಲ ಈಗ ದಿವ್ಯಾ ಹೇಗೆ ಗರ್ಭಿಣಿ ಆದಳು ಎಂಬ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಈಗಲಾದರೂ ದಿವ್ಯಾಗೆ ಬಾಲನ ಬಂಡವಾಳ ಗೊತ್ತಾಗುತ್ತದಾ ಎಂದು ಕಾದು ನೋಡಬೇಕಿದೆ.


Click it and Unblock the Notifications











