Sathya Serial: ಹಬ್ಬದ ದಿನ ರಾಯರ ಮನೆಗೆ ಬಂದ ಪದ್ಮಾ, ನಚಿಕೇತನ್

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಈಗ ಸತ್ಯಳಿಗೆ ಇನ್ನಷ್ಟು ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾನೆ. ತಮ್ಮದೇ ಸುಂದರವಾದ ಬದುಕನ್ನು ಕಟ್ಟಿಕೊಳ್ಳುವ ಆಸೆ ಕಾರ್ತಿಕ್ ನದ್ದು. ಆದರೆ ಸತ್ಯ ಮನೆಯವರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದು, ತನ್ನ ವೈಯಕ್ತಿಕ ಬದುಕನ್ನೇ ಮರೆತಿದ್ದಾಳೆ. ಇದರಿಂದ ಕಾರ್ತಿಕ್‌ಗೂ ಬೇಸರವಾಗುತ್ತಿದೆ.

ಇನ್ನು ಸತ್ಯಳಿಗೆ ಸದ್ಯ ಲಕ್ಷ್ಮಣನ ಎರಡನೇ ಸಂಬಂಧ ಪದ್ಮಾ ಮತ್ತು ಅವರ ಮಗು ನಚಿಕೇತನದ್ದೇ ಯೋಚನೆಯಾಗಿದೆ. ಈ ಸಂಬಂಧದಿಂದ ಮನೆಯಲ್ಲಿ ಸಮಸ್ಯೆ ಆಗಬಾರದು ಎಂಬುದೇ ಅವಳ ಕನ್ಸರ್ನ್.

Sathya Serial 06th November episode written update

ಬೋಂಡಾ ಅಂಗಡಿ ತೆರೆದ ಬಾಲ

ಇತ್ತ ಬಾಲ ತನ್ನದೇ ಸ್ವಂತ ಕೆಲಸ ಆರಂಬಿಸಿ, ಹೆಚ್ಚು ಲಾಭ ಪಡೆಯಬೇಕು. ಇದರಿಂದ ದಿವ್ಯಾಳನ್ನು ಸುಖವಾಗಿ ನೋಡಿಕೊಳ್ಳಬೇಕು ಎಂದು ಬೋಂಡಾ ಅಂಗಡಿ ತೆರೆಯಲು ಮುಂದಾಗಿದ್ದಾನೆ. ಮನೆಯವರೆಲ್ಲರೂ ಕೂಡ ಬಾಲನಿಗೆ ಸಪೋರ್ಟ್ ಮಾಡಿದರೆ, ದಿವ್ಯಾ ಮಾತ್ರ ವಿರೋಧಿಸಿದ್ದಾಳೆ. ಹಾಗಿದ್ದರೂ ಕೂಡ ಬಾಲ ದಿವ್ಯ ಬೋಂಡ ಅಂಗಡಿ ಎಂದು ತೆರೆದಿದ್ದಾನೆ. ಮನೆಯವರೆಲ್ಲರೂ ಬಾಲನಿಗೆ ಶುಭ ಕೋರಿದ್ದಾರೆ. ಸತ್ಯ ಹಣ ಕೊಟ್ಟು ಸಹಾಯ ಮಾಡಲು ಮುಂದಾಗುತ್ತಾಳೆ. ಆದರೆ ಬಾಲ ಸ್ವಾಭಿಮಾನಿದಿಂದ ಅದೆಲ್ಲಾ ಬೇಡ ಎಂದು ಹೇಳಿದ್ದಾನೆ. ಬಾಲನ ಗುಣ ನೋಡಿ ಸತ್ಯಳಿಗೆ ಖುಷಿಯಾಗುತ್ತದೆ.

ಸಂಪಾದನೆಗೆ ಖುಷಿಪಟ್ಟ ಮನೆಯವರು

ಅಂಗಡಿ ತೆರೆದ ಮೊದಲ ದಿನವೇ 800 ರೂಪಾಯಿ ಲಾಭ ಬಂದಿದ್ದು, ಇದನ್ನು ಮನೆಗೆ ತಂದು ಕೊಟ್ಟಾಗ ದಿವ್ಯಾ ಬಿಸಾಡಿದ್ದಾಳೆ. ಜುಜುಬಿ 800 ರೂಪಾಯಿ ಸಂಪಾದನೆ ಮಾಡಲು ಆ ಬೋಂಡಾ ಅಂಗಡಿಗೆ ನನ್ನ ಹೆಸರನ್ನು ಇಟ್ಟಿದ್ದೀಯಾ ಎಂದು ಬೈಯುತ್ತಾಳೆ. ಬಾಲನಿಗೆ ತನ್ನ ಸಂಪಾದನೆಯನ್ನು ನೋಡಿ ದಿವ್ಯಾ, ಖುಷಿ ಪಡಲಿಲ್ಲವಲ್ಲ ಎಂದು ಬೇಸರವಾಗುತ್ತದೆ. ಇನ್ನು ಎರಡನೇಯ ದಿನ 1100 ರೂಪಾಯಿ ಲಾಭ ಬಂದಿದ್ದು, ಬಾಳ ಖುಷಿಯಿಂದ ಈ ಹಣವನ್ನು ಗಿರಿಜಮ್ಮನಿಗೆ ಕೊಟ್ಟಿದ್ದಾನೆ. ಅಳಿಯನ ಏಳಿಗೆ ಕಂಡು ಜಾನಕಿ ಮತ್ತು ಗಿರಿಜಮ್ಮ ಸಂತಸಗೊಂಡಿದ್ದಾರೆ.

ಹುಷಾರು ತಪ್ಪಿದ ರಾಯರು

ಇನ್ನು ರಾಮಚಂದ್ರ ರಾಯರು ಇದ್ದಕ್ಕಿದ್ದ ಹಾಗೆಯೇ ಹುಷಾರು ತಪ್ಪುತ್ತಾರೆ. ಇದರಿಂದ ಮನೆಯವರೆಲ್ಲರೂ ಗಾಬರಿಯಾಗಿ ವೈದ್ಯರನ್ನು ಕರೆಸುತ್ತಾರೆ. ವೈದ್ಯರು ರಾಯರನ್ನು ಪರೀಕ್ಷೆ ಮಾಡಿ ಹೆದರುವ ಅಗತ್ಯವಿಲ್ಲ. ಆದರೂ ಆಸ್ಪತ್ರೆಗೆ ಸೇರಿಸಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೂ ಕೂಡ ಮನೆಯವರೆಲ್ಲರೂ ಗಾಬರಿಯಾಗುತ್ತಾರೆ. ಆಸ್ಪತ್ರೆಗೆ ಅಡ್ಮಿಟ್ ಮಾಡಬೇಕು ಎಂದು ಹೇಳಿದಾಗ ರಾಯರು ನಾನು ಆಸ್ಪತ್ರೆಗೆ ಬರೋದಿಲ್ಲ ಎಂದು ಹಠ ಮಾಡುತ್ತಾರೆ. ಆಗ ಮನೆಯವರು ಮನೆಯಲ್ಲಿ ನೋಡಿಕೊಳ್ಳಬಹುದಾ ಎಂದು ಕೇಳಿದ್ದಕ್ಕೆ, ವೈದ್ಯರು ಮನೆಯಲ್ಲಿ ಹೋಮ್ ನರ್ಸ್ ಅನ್ನು ಇಟ್ಟುಕೊಂಡು ರಾಯರ ಆರೋಗ್ಯವನ್ನು ನೋಡಿಕೊಳ್ಳುತ್ತಾರೆ. ಆದರೆ, ಆಕೆಗೆ ಒಂದು ಮಗುವೂ ಇದೆ ಎಂದಾಗ ಎಲ್ಲರೂ ಪರವಾಗಿಲ್ಲ. ನರ್ಸ್ ಅನ್ನು ಮನೆಗೆ ಕಳಿಸಿ ಎಂದು ಹೇಳುತ್ತಾರೆ.

Sathya Serial 06th November episode written update

ಪದ್ಮಾಳನ್ನು ಮನೆಗೆ ಕರೆಸಿಕೊಂಡ ರಾಯರು

ಸೀತಾಳಿಗೆ ತನ್ನ ಪತಿ ರಾಯರಿಗೆ ಆರೋಗ್ಯ ಸಮಸ್ಯೆ ಎದುರಾಗಿರುವುದಕ್ಕೆ ಬೇಸರ ಮಾಡಿಕೊಂಡಿದ್ದಾಳೆ. ಚಿಂತೆ ಮಾಡುತ್ತಾ ಕುಳಿತಿದ್ದ ಸೀತಾಳನ್ನು ಊರ್ಮಿಳಾ ಮತ್ತು ಸತ್ಯ ಸಮಾಧಾನ ಪಡಿಸುತ್ತಾರೆ. ಮನೆಯಲ್ಲಿ ದಸರಾ ಹಬ್ಬ ಆಚರಿಸಲು ಗೊಂಬೆಗಳನ್ನು ಜೋಡಿಸುವ ಸಮಯದಲ್ಲಿ ಪದ್ಮಾ ಬರುತ್ತಾಳೆ. ಪದ್ಮಾ ಮತ್ತು ನಚಿಕೇತನ್ ಅನ್ನು ನೋಡಿ ಊರ್ಮಿಳಾಳಿಗೆ ಆಶ್ಚರ್ಯವಾದರೆ, ಸತ್ಯಳಿಗೆ ಗಾಬರಿಯಾಗುತ್ತದೆ. ಆದರೆ, ರಾಯರು ಬೇಕಂತಲೇ ಆರೋಗ್ಯ ಸಮಸ್ಯೆ ಎದುರಾದಂತೆ ನಾಟಕ ಮಾಡಿ, ನರ್ಸ್ ಹೆಸರಲ್ಲಿ ಪದ್ಮಾಳನ್ನು ಮನೆಗೆ ಕರೆಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಈಗ ಪದ್ಮಾ ಮನೆಗೆ ಬಂದಿರುವುದನ್ನು ನೋಡಿ ಲಕ್ಷ್ಮಣ ಹೇಗೆ ರಿಯಾಕ್ಟ್ ಮಾಡುತ್ತಾನೋ ಕಾದು ನೋಡಬೇಕಿದೆ.

More from Filmibeat

English summary
Sathya Kannada Serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X