Sathya: ಕೋಟೆಮನೆಗೆ ಹೊಸ ಸಂಕಷ್ಟ: ಊರ್ಮಿಳಾ ಬಾಳಲ್ಲಿ ಬಿರುಗಾಳಿ
ಸತ್ಯ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್, ಅಕ್ಕ-ತಂಗಿ ಕಥೆಯಾಯ್ತು. ಅಣ್ಣ-ತಂಗಿಯ ಕಥೆಯೂ ನಡೆಯಿತು. ಈಗ ಅಣ್ಣ-ತಮ್ಮನ ಸ್ಟೋರಿ ಶುರುವಾಗಲಿದೆ. ಧಾರಾವಾಹಿಯಲ್ಲಿ ಮೊದಲು ದಿವ್ಯಾ ಹಾಗೂ ಸತ್ಯ ಕಥೆಯನ್ನು ಹೈ-ಲೈಟ್ ಮಾಡಲಾಗಿತ್ತು. ಅವರಿಬ್ಬರ ಪ್ರೀತಿ, ಮದುವೆ ತೋರಿಸಲಾಯ್ತು. ನಂತರ ಕೀರ್ತನಾ, ರಿತು ಹಾಗೂ ಕಾರ್ತಿಕ್ ಕಥೆಯೂ ಪ್ರಸಾರವಾಯ್ತು.
ಇದೀಗ ರಾಮಚಂದ್ರ ಹಾಗೂ ಲಕ್ಷ್ಮಣನ ಕಥೆ ಶುರುವಾಗಲಿದೆ. ಅದರಲ್ಲೂ ಪ್ರಮುಖವಾಗಿ ಲಕ್ಷ್ಮಣ ಮತ್ತು ಅವನ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಏಳಲಿದೆ. ದಿವ್ಯಾಳ ಬದುಕನ್ನು ಸತ್ಯ ಸರಿ ಮಾಡಲು ಎಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ನಂತರ ಕಾರ್ತಿಕ್‌ನನ್ನು ಮದುವೆಯಾದ ಸತ್ಯ ತನ್ನ ಬದುಕನ್ನು ಒಂದು ಹಂತಕ್ಕೆ ತಂದುಕೊಂಡಿದ್ದಾಳೆ. ರಿತು ಮತ್ತು ರಾಕಿ ಬದುಕಲ್ಲೂ ಯಾವ ಸಮಸ್ಯೆಯೂ ಬಾರದಂತೆ ಕಾಳಜಿ ವಹಿಸಿದ್ದಾಳೆ.

ಧಾರಾವಾಹಿಯಲ್ಲಿ ಈಗ ಕಹಿ ಸತ್ಯ ಬಯಲು
ಊರ್ಮಿಳಾ ಮತ್ತು ಲಕ್ಷ್ಮಣನ ಜೀವನ ಅಲ್ಲೋಲ ಕಲ್ಲೋಲವಾಗಲಿದ್ದು, ಇವರ ಬದುಕನ್ನು ಕೂಡ ಸತ್ಯಾನೇ ಸರಿ ಮಾಡಲಿದ್ದಾಳೆ. ಕೆಲ ದಿನಗಳ ಹಿಂದಷ್ಟೇ ಲಕ್ಷ್ಮಣ ಫೋನ್‌ನಲ್ಲಿ ಮಾನಾಡುವಾಗ ರನ್ನ-ಚಿನ್ನ ಎಂದು ಮಾತನಾಡುತ್ತಿದ್ದ. ಊರ್ಮಿಳಾ ಬಂದ ಕೂಡಲೇ ಮಾತು ಬದಲಾಯಿಸಿದ್ದ. ಆದರೆ, ಈಗ ಯಾರದು ಎಂಬ ಕಹಿ ಸತ್ಯವನ್ನು ತೋರಿಸಲಾಗಿದೆ.
ಊರ್ಮಿಳಾ ಬಾಳಲ್ಲಿ ಬಿರುಗಾಳಿ
ಲಕ್ಷ್ಮಣ, ಊರ್ಮಿಳಾ ಅಲ್ಲದೇ, ಮತ್ತೊಂದು ಮದುವೆಯನ್ನೂ ಆಗಿದ್ದಾನೆ. ಆದರೆ, ಅದು ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಅತ್ತೆ ಸೀತಾಳನ್ನು ಇಂಪ್ರೆಸ್ ಮಾಡುತ್ತಿರುವ ಸತ್ಯ, ಅವರ ಹಿಂದೆಯೇ ಸುತ್ತುತ್ತಿದ್ದಾಳೆ. ಊರ್ಮಿಳಾ ಹುಟ್ಟುಹಬ್ಬ ಹಿನ್ನೆಲೆ, ರಿತು, ಸೀತಾ, ಊರ್ಮಿಳಾ ಹಾಗೂ ಸತ್ಯ ದೇವಸ್ಥಾನಕ್ಕೆ ಬಂದಿದ್ದಾರೆ. ಆದರೆ, ಲಕ್ಷ್ಮಣ ಕೆಲಸದ ಮೇಲೆ ಔಟ್ ಆಫ್ ಸ್ಟೇಷನ್ ಹೋಗಿರುವುದಾಗಿ ಮನೆಯಲ್ಲಿ ಸುಳ್ಳು ಹೇಳಿ ತನ್ನ ಎರಡನೇ ಪತ್ನಿ ಹಾಗೂ ಮಗನ ಜೊತೆಗೆ ಅದೇ ದೇವಸ್ಥಾನಕ್ಕೆ ಬಂದಿದ್ದಾನೆ.
ಲಕ್ಷ್ಮಣನಿಗೆ ಎರಡು ಮದುವೆ
ಅದೂ ಕೂಡ ತನ್ನ ಮಗನ ತುಲಾಭಾರ ಮಾಡಿಸುತ್ತಿದ್ದು, ಊರ್ಮಿಳಾ ಹಾಗೂ ರಿತುಗೆ ಲಕ್ಷ್ಮಣ ಎರಡನೇ ಹೆಂಡತಿ ಮತ್ತು ಮಗ ಎದುರಾಗಿ ಮಾತನಾಡಿಸಿದ್ದಾರೆ. ಆದರೆ, ಸತ್ಯ ಮಾತ್ರ ಊರ್ಮಿಳಾಳಿಗೆ ಗೊತ್ತಿಲ್ಲ. ಸತ್ಯಳಿಗೆ ನಿಜ ತಿಳಿದಿದ್ದು, ಈಗ ಏನು ಮಾಡುವುದು ಎಂಬುದೇ ತೋಚುತ್ತಿಲ್ಲ. ಊರ್ಮಿಳಾ ಬೇರೆ ತನ್ನ ಪತಿಯ ಮೇಲೆ ಬಹಳ ಭರವಸೆಯನ್ನು ಇಟ್ಟುಕೊಂಡಿದ್ದಾಳೆ. ರಾಮಾಯಣದಲ್ಲಿ ಬರುವ ಲಕ್ಷ್ಮಣನೇ ತನ್ನ ಪತಿ ಎಂಬಂತೆ ನಂಬಿದ್ದಾಳೆ.

ಸತ್ಯಳಿಗೀಗ ಮತ್ತೊಂದು ಪರೀಕ್ಷೆ
ಆದರೆ, ನಿಜ ವಿಚಾರ ತಿಳಿದಾಗಿನಿಂದ ಈಗ ಸತ್ಯಳಿಗೆ ಸಂಕಷ್ಟ ಎದುರಾದಂತೆ ಭಾಸವಾಗುತ್ತಿದೆ. ಕೋಟೆ ಮನೆ ಮಾನ ಮರ್ಯಾದೆ ಹಾಳಾಗುತ್ತಿದೆ. ಲಕ್ಷ್ಮಣ ಮಾವ ಯಾಕೆ ಹೀಗೆ ಮಾಡಿದರು. ಮನೆಯಲ್ಲೆಲ್ಲಾ ಅವರು ಮೇಲೆ ಬಹಳ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಆದರೆ, ಎರಡನೇ ಮದುವೆ ಯಾಕಾಗಿದ್ದಾರೆ. ಈಗ ಮುಂಬರುವ ಈ ಸಮಸ್ಯೆ ಅನ್ನು ಹೇಗೆ ಎದುರಿಸುವುದು ಎಂದು ಯೋಚಿಸುತ್ತಿದ್ದಾಳೆ. ಈ ಸತ್ಯವನ್ನು ಯಾರ ಬಳಿಯೂ ಹೇಳಲಾಗದೇ, ಸಂಕಟದಲ್ಲಿ ಸಿಲುಕಿಕೊಂಡಿದ್ದಾಳೆ. ಈಗಷ್ಟೇ ಸತ್ಯಳನ್ನು ಸೀತಾ ನಂಬಲು ಶುರು ಮಾಡಿದ್ದಾಳೆ. ಈಗ ಊರ್ಮಿಳಾ ಹಾಗೂ ಲಕ್ಷ್ಮಣ ಸಂಬಂಧವಾಗಿ ಸತ್ಯ ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾಳೆ. ಅದರಿಂದ ಮನೆಗೆ ಹೇಗೆ ಒಳ್ಳೆಯದಾಗುತ್ತದೆ ಎಂಬುದು ಪ್ರೇಕ್ಷಕರ ಕುತೂಹಲವಾದರೆ, ಈ ವಿಚಾರ ಸೀತಾಳ ಮನಸ್ಥಿತಿಗೆ ಪಾಸಿಟಿವ್ ಆಗುತ್ತಾ ಅಥವಾ ನೆಗೆಟಿವ್ ಆಗಿ ಮತ್ತೆ ತನ್ನ ಸೊಸೆಯನ್ನು ತಿರಸ್ಕರಿಸುತ್ತಾಳಾ ಎಂಬ ಪ್ರಶ್ನೆಯೂ ಎದ್ದಿದೆ.


Click it and Unblock the Notifications











