Sathya serial: ಪದ್ಮಾ, ನಚಿಕೇತನ್ ಅನ್ನು ಒಪ್ಪಿದ ಮನೆಯವರು : ಕೀರ್ತನಾಳಿಗೆ ಸಿಕ್ತಾ ಹೊಸ ದಾರಿ?

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ಅಂತೂ ಇಂತೂ ರಾಮಚಂದ್ರ ರಾಯರು ನಿರ್ಧಾರ ಮಾಡಿದಂತೆಯೇ ಪದ್ಮಾ ಮತ್ತು ನಚಿಕೇತನ್ ಅನ್ನು ಮನೆಗೆ ಕರೆಸಿಕೊಂಡಿದ್ದಾರೆ.

ಮನೆಯಲ್ಲಿ ಲಕ್ಷ್ಮಣ ಬೇರೆ ಇಲ್ಲ. ಯಾವುದೋ ಆಫೀಸ್ ಕೆಲಸ ಎಂದು ಹೇಳಿ ಮುಂಬೈಗೆ ಹೋಗಿದ್ದಾನೆ. ಅವನು ಯಾವಾಗ ಬರುತ್ತಾನೆ ಎಂಬುದು ಕೂಡ ಗೊತ್ತಿಲ್ಲ.

ಇನ್ನು ಪದ್ಮಾ ತಾನು ರಾಯರ ಸಂಪರ್ಕದಲ್ಲಿದ್ದು, ಈಗ ನಿಮ್ಮ ಮನೆಗೆ ಹೋಗುತ್ತಿದ್ದೇನೆ ಎಂಬ ವಿಚಾರವನ್ನು ಕೂಡ ಹೇಳಿಲ್ಲ. ಗಂಡನಿಂದ ಸತ್ಯ ಮುಚ್ಚಿಟ್ಟಿದ್ದಾಳೆ.

Sathya-Kannada-serial

ಮನೆಗೆ ಬಂದ ಪದ್ಮಾ, ನಚಿಕೇತನ್

ದಸರಾ ಹಬ್ಬದ ದಿನವೇ ಪದ್ಮಾ ಮತ್ತು ನಚಿಕೇತನ್ ಮನೆಗೆ ಬಂದಿದ್ದಾರೆ. ಅದೂ ಕೂಡ ರಾಯರ ಪ್ಲ್ಯಾನ್‌ನಂತೆ. ರಾಯರ ಆರೋಗ್ಯ ನೋಡಿಕೊಳ್ಳಲು ಹೋಮ್ ನರ್ಸ್ ಆಗಿ ಪದ್ಮಾ ಬಂದಿದ್ದಾಳೆ. ಬಾಗಿಲಲ್ಲಿ ಪದ್ಮಾಳನ್ನು ನೋಡಿದ ಕೂಡಲೇ ಊರ್ಮಿಳಾಗೆ ಆಶ್ಚರ್ಯವಾಗುತ್ತದೆ. ಯಾಕೆಂದರೆ ಅವಳಿಗೆ ಈ ಹಿಂದೆಯೇ ಪರಿಚಯವಾಗಿರುತ್ತದೆ. ಇನ್ನು ಸತ್ಯಳಿಗೆ ಪದ್ಮಾ ಯಾರು ಎಂಬ ಸಂಪೂರ್ಣ ಮಾಹಿತಿ ಇದೆ. ಇದರಿಂದ ಸತ್ಯಳಿಗೂ ಶಾಕ್ ಆಗುತ್ತದೆ. ಪದ್ಮಾ ಈ ಮನೆಗೆ ಬಂದರೆ, ಹೇಗೆ, ಲಕ್ಷ್ಮಣನ ಹೆಂಡತಿ ಎಂಬುದು ತನಗೂ ಮತ್ತು ರಾಯರಿಗಷ್ಟೇ ತಿಳಿದಿದೆ. ಈಗ ಮನೆಗೆ ಬಂದ ನಂತರ ಎಲ್ಲರಿಗೂ ತಿಳಿದರೆ, ಊರ್ಮಿಳಾ ಅತ್ತೆ ಪರಿಸ್ಥಿತಿಯ ಬಗ್ಗೆ ಸತ್ಯಳಿಗೆ ಆತಂಕವಿದೆ.

ಸತ್ಯ ಅರಿಯದ ಮನೆಯವರು

ಇನ್ನು ಮನೆಯವರಿಗೆ ಈ ವಿಚಾರ ಗೊತ್ತೂ ಇಲ್ಲ. ಇದರ ಅರಿವೂ ಇಲ್ಲ. ರಿತುಳಿಗೆ ನಚಿಕೇತನ್ ಇಷ್ಟವಾಗಿದ್ದರಿಂದ ತನಗೆ ತಾನೇ ತಮ್ಮ ಎಂದು ಒಪ್ಪಿಕೊಂಡಿದ್ದಾಳೆ. ಹೀಗಾಗಿ ಊರ್ಮಿಳಾ ತಾನು ನಚಿಕೇತನ್‌ಗೆ ದೊಡ್ಡಮ್ಮ ಎಂದು ತಾನೇ ಹೇಳಿಕೊಂಡಿದ್ದಾಳೆ. ಸೀತಾಳಿಗೂ ನಚಿಕೇತನ್ ಮನೆಗೆ ಬಂದಿರುವುದು ಖುಷಿಯೇ. ಇನ್ನು ಪದ್ಮಾಳೇ ಹೋಮ್ ನರ್ಸ್ ಆಗಿ ಬಂದಿರುವುದಕ್ಕೆ, ಅವಳಿಗೆ ಎಲ್ಲರೂ ಒಳ್ಳೆಯ ಸ್ವಾಗತ ಕೋರಿದ್ದಾರೆ. ಯಾವುದೇ ಸಂಕೋಚವಿಲ್ಲದೇ, ತಮ್ಮದೇ ಮನೆಯೆಂದು ತಿಳಿದು ಇರುವಂತೆ ಹೇಳಿದ್ದಾರೆ. ಪದ್ಮಾಳಿಗೂ ಕೊನೆಗೂ ತಾನು ತನ್ನ ಮನೆಗೆ ಸೇರಿದೆ ಎಂಬ ಖುಷಿಯಲ್ಲಿದ್ದಾಳೆ.

Sathya-Kannada-serial

ಅಪ್ಪನ ಫೋಟೋ ನೋಡಿ ನಚ್ಚಿ ಹೇಳಿದ್ದೇನು..?

ಊರ್ಮಿಳಾ, ಪದ್ಮಾ ಹಾಗೂ ನಚಿಕೇತನ್‌ಗೆ ತೋರಿಸುವಾಗ ಊರ್ಮಿಳಾ ರೂಮಿನಲ್ಲಿ ಲಕ್ಷ್ಮಣನ ಫೋಟೋ ನೋಡುತ್ತಾರೆ. ನಚಿಕೇತನ್ ಅಪ್ಪನ ಫೋಟೋ ನೋಡಿ ಆಕ್ಷನ್ ಮಾಡಲು ಶುರು ಮಾಡುತ್ತಾನೆ. ಆದರೆ, ಪದ್ಮಾ ಅವನಿಗೆ ಫೋಟೋಗಳು ಎಂದರೆ ಇಷ್ಟ. ಯಾರದೇ ಫೋಟೋ ನೋಡಿದರೂ ಹೀಗೆ ಮಾಡುತ್ತಾನೆ ಎಂದು ಹೇಳಿ ಸಂಬಾಳಿಸುತ್ತಾಳೆ. ಬಳಿಕ ಪದ್ಮಾ ಹಾಗೂ ನಚಿಕೇತನ್ ತನ್ನ ರೂಮಿಗೆ ತೆರಳುತ್ತಾರೆ. ಮನೆಯಲ್ಲಿ ಎಲ್ಲರೂ ನಚಿಕೇತನ್ ಮತ್ತು ಪದ್ಮಾ ಬಂದಿರುವುದಕ್ಕೆ ಖುಷಿಯಾಗಿರುತ್ತಾರೆ. ಅವರನ್ನು ನಮ್ಮ ಮನೆಯವರಂತೆಯೇ ಕಾಣಬೇಕು. ಯಾವುದಕ್ಕೂ ಅಡ್ಡಿ ಮಾಡಬಾರದು ಎಂದು ಸೀತಾ ಎಲ್ಲರಿಗೂ ಹೇಳುತ್ತಾಳೆ.

ರಾಯರ ನಿರ್ಧಾರದಿಂದ ಸತ್ಯಳಿಗೆ ಗಾಬರಿ

ಸತ್ಯಳಿಗೆ ರಾಯರ ನಿರ್ಧಾರ ಗಾಬರಿ ಉಂಟು ಮಾಡಿದೆ. ಹೀಗಾಗಿ ರಾಯರ ಬಳಿ ಈ ವಿಚಾರವಾಗಿ ಮಾತನಾಡುತ್ತಾಳೆ. ರಾಯರು ಇದೇ ಸರಿ ಸತ್ಯ, ಒಂದಲ್ಲ ಒಂದು ದಿನ ಪದ್ಮಾ ಈ ಮನೆಗೆ ಸೇರಬೇಕಾದವಳು, ಅವಳಿಗೆ ನ್ಯಾಯ ಸಿಕ್ಕಿದರೆ ಸಾಕು ಎಂದು ಹೇಳುತ್ತಾರೆ. ಇನ್ನು ಪದ್ಮಾ ಮನೆಗೆ ಬಂದಾಗಿನಿಂದ ಸತ್ಯಳ ಹಾವ ಭಾವ ಕಂಡ ಕೀರ್ತನಾಳಿಗೆ ಇಲ್ಲೇನೋ ಸತ್ಯ ಅಡಗಿದೆ. ಅದಕ್ಕೆ ಸತ್ಯ ವಿಚಿತ್ರವಾಗಿದ್ದಾಳೆ. ಪದ್ಮಾ ಯಾರು? ಸತ್ಯ ಗಾಬರಿಯಾಗಿರುವುದಕ್ಕೆ ಕಾರಣವೇನು? ಎಂದು ಯೋಚಿಸುತ್ತಿದ್ದಾಳೆ. ಈಗ ಕೀರ್ತನಾಳಿಗೆ ಪದ್ಮಾ ಬಗ್ಗೆ ಸತ್ಯ ತಿಳಿದರೆ ಏನಾಗಬಹುದು ಎಂಬ ಕುತೂಹಲ ಮೂಡಿದೆ.

More from Filmibeat

English summary
Sathya Kannada Serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X