ಮತ್ತೆ ಸತ್ಯ ಮೇಲೆ ಚಾಡಿ ಹೇಳಿದ ಕೀರ್ತನಾ: ದೇವಸ್ಥಾನದಲ್ಲೂ ದಿವ್ಯಾ- ಸತ್ಯ ಜಟಾಪಟಿ
ಸತ್ಯ ಧಾರಾವಾಹಿಯಲ್ಲಿ ಅಕ್ಕ-ತಂಗಿ ಇಬ್ಬರೂ ಕೂಡ ಹನಿಮೂನ್‌ಗೆ ಎಂದು ಮಂಗಳೂರಿಗೆ ಬಂದಾಗಿದೆ. ಈ ಹಿಂದೆಯೇ ಊಹಿಸಿದಂತೆ ಸತ್ಯ ಹಾಗೂ ದಿವ್ಯಾ ಇಬ್ಬರೂ ಬೀಚ್‌ನಲ್ಲಿ ಭೇಟಿಯಾಗಿದ್ದು ಆಗಿದೆ.
ಇತ್ತ ರಿತು ಇನ್ನು ಮುಂದೆ ರಾಕೇಶ್‌ನನ್ನು ಗೋಳಾಡಿಸಬಾರದು. ಅವನಿಗೆ ಉಡುಗೊರೆ ಕೊಟ್ಟು ಪ್ರೀತಿ ವಿಚಾರವನ್ನು ಹೇಳಿ ಖುಷಿಪಡಬೇಕು ಎಂದು ಹೊರಟಿದ್ದಾಳೆ.
ಆದರೆ, ರಾಕಿ ಮನೆ ಬಾಗಿಲಿಗೆ ಬಂದ ರಿತುಳಿಗೆ ಅವಮಾನವನ್ನು ಮಾಡುತ್ತಾನೆ. ರಿತು ಮಾತುಗಳನ್ನೂ ಕೇಳಿಸಿಕೊಳ್ಳದೇ, ಬಾಗಿಲನ್ನು ಹಾಕಿ ಬಿಡುತ್ತಾನೆ.

ಸತ್ಯಳನ್ನು ನೋಡಿ ಆಡಿಕೊಂಡ ದಿವ್ಯಾ
ಮಂಗಳೂರಿನ ಬೀಚ್‌ನಲ್ಲಿ ಹಾಯಾಗಿ ಟೈಂ ಪಾಸ್ ಮಾಡುತ್ತಿರುವ ಸತ್ಯಗೆ ದಿವ್ಯಾ ಸಿಗುತ್ತಾಳೆ. ದಿವ್ಯಾ, ಸತ್ಯಳನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಾಳೆ. ಹೀಗಾಗಿ ಸತ್ಯಗೆ ಬೈಯಲು ಮುಂದಾಗುತ್ತಾಳೆ. ರೊಮ್ಯಾಂಟಿಕ್ ಎಂದರೆ ಏನು ಎಂಬುದನ್ನೇ ತಿಳಿಯದ ಕಾರ್ತಿಕ್‌ನನ್ನು ಮದುವೆಯಾಗಿ ಅದೇನು ಸುಖ ಪಡುತ್ತೀಯೋ. ನಿನ್ನ ಗಂಡನಿಗಿಂತ ನನ್ನ ಗಂಡನೇ ಎಷ್ಟೋ ಮೇಲು. ದುಡ್ಡಿಗೆ ದುಡ್ಡು ಇದೆ. ರೊಮ್ಯಾನ್ಸ್‌ಗೂ ಏನೂ ಕಡಿಮೆ ಇಲ್ಲ ಎಂದು ಜಂಭ ಕೊಚ್ಚಿಕೊಳ್ಳುತ್ತಾಳೆ. ಸತ್ಯಗೆ ದಿವ್ಯಾ ಹೇಳಿದ ಮಾತುಗಳಿಂದ ತುಂಬಾ ಹರ್ಟ್ ಆಗುತ್ತದೆ. ದಿವ್ಯಾ ಮಾತನಾಡಿದ್ದನ್ನು ಕಾರ್ತಿಕ್ ಕೂಡ ಕೇಳಿಸಿಕೊಂಡಿದ್ದಾನೆ. ಹೀಗಾಗಿ ಸತ್ಯ ಜೊತೆಗೆ ಖುಷಿಯಾಗಿರುವಂತೆ ನಟಿಸಲು ಮುಂದಾಗಿದ್ದಾರೆ.

ಸತ್ಯ ಬಗ್ಗೆ ಮತ್ತೆ ಚಾಡಿ ಹೇಳಿದ ಕೀರ್ತನಾ
ಇತ್ತ ಕೀರ್ತನಾ ಬೇಕಂತಲೇ ಸತ್ಯ ಮೇಲೆ ಚಾಡಿ ಮೇಲೆ ಚಾಡಿಯನ್ನು ಹೇಳುತ್ತಿದ್ದಾಳೆ. ಸೀತಾ ತಲೆಗೆ ಬೇಡದ ವಿಚಾರಗಳನ್ನೇ ತುಂಬುತ್ತಿದ್ದಾಳೆ. ಹೇಗಾದರೂ ಮಾಡಿ ಸತ್ಯಳನ್ನು ಮನೆಯಿಂದ ಹೊರಗಡೆ ಹಾಕಬೇಕು ಎಂದು ಕೀರ್ತನಾ ಪ್ಲ್ಯಾನ್ ಮೇಲೆ ಪ್ಲ್ಯಾನ್ ಮಾಡುತ್ತಿದ್ದಾಳೆ. ಸ್ವಲ್ಪ ಅವಕಾಶ ಸಿಕ್ಕರೂ ಸತ್ಯ ಮೇಲೆ ಚಾಡಿ ಹೇಳುತ್ತಿದ್ದಾಳೆ. ಇದರಿಂದ ಸೀತಾಗೂ ಸತ್ಯಳ ಮೇಲೆ ಅಸಮಾಧಾನ ಹೆಚ್ಚಾಗುತ್ತಲೇ ಇದೆ. ಟ್ರಿಪ್‌ನಿಂದ ಬಂದ ಮೇಲೆ ಸತ್ಯಗೆ ಗ್ರಹಚಾರ ಕಾದಿದ್ಯೋ ಏನೋ ಗೊತ್ತಿಲ್ಲ.

ಸತ್ಯಳನ್ನು ಎತ್ತಿಕೊಂಡು ಬಂದ ಕಾರ್ತಿಕ್
ಇನ್ನು ಅಲ್ಲೇ ಹತ್ತಿರದಲ್ಲಿರುವ ದೇವಸ್ಥಾನಕ್ಕೆ ಸತ್ಯ ಮತ್ತು ಕಾರ್ತಿಕ್ ಹೊರಡುತ್ತಾರೆ. ಇದೇ ವೇಳೆ ದಿವ್ಯಾ ಆ ದೇವಸ್ಥಾನದ ಮಹಿಮೆ ಬಗ್ಗೆ ಹೇಳಿ ಹೋಗುತ್ತಾಳೆ. ಕಾರ್ತಿಕ್ ಅದನ್ನು ಕೇಳಿಸಿಕೊಂಡು ಸತ್ಯಳನ್ನು ಎತ್ತಿಕೊಂಡು ಮೆಟ್ಟಿಲನ್ನು ಹತ್ತುತ್ತಾನೆ. ಕಾರ್ತಿಕ್, ಸತ್ಯಳನ್ನು ಎತ್ತಿಕೊಳ್ಳುವುದನ್ನು ನೋಡಿ, ದಿವ್ಯಾ ಹೊಟ್ಟೆ ಉರಿದುಕೊಳ್ಳುತ್ತಾಳೆ. ಬಾಲನಿಗೆ ಎತ್ತಿಕೊಳ್ಳುವಂತೆ ಬಲವಂತ ಮಾಡುತ್ತಾಳೆ. ಆದರೆ, ಬಾಲನ ಕೈಯಲ್ಲಿ ಅಗುವುದಿಲ್ಲ. ಇನ್ನು ಅವಳಿಗಿಂತ ಮೊದಲು ಹೋಗಬೇಕು ಎಂದು ಓಡಿ ಹೋಗಿ ದೇವಸ್ಥಾನ ತಲುಪುತ್ತಾಳೆ.

ಸತ್ಯ ವಿರುದ್ಧ ಕಿಡಿ ಕಾರುತ್ತಿರುವ ದಿವ್ಯಾ
ಮೆಟ್ಟಿಲು ಹತ್ತಿ ಸುಸ್ತಾದ ದಿವ್ಯಾ ಎದುಸಿರು ಬಿಡುತ್ತಾಳೆ. ತಾನೇ ಫಸ್ಟ್ ಎಂದು ವಾದ ಮಾಡುತ್ತಾಳೆ. ದಿವ್ಯಾಳ ಮಾತುಗಳಿಗೆ ಕಾರ್ತಿಕ್ ಕೌಂಟರ್ ಕೊಡುತ್ತಿರುತ್ತಾನೆ. ಇನ್ನು ಪೂಜೆ ಮಾಡಿಸಿದ ಬಳಿಕ ಪುರೋಹಿತರು ಸಂತಾನ ಪ್ರಾಪ್ತಿರಸ್ತು ಎಂದು ಸತ್ಯ ಹಾಗೂ ಕಾರ್ತಿಕ್‌ಗೆ ಆಶೀರ್ವಾದ ಮಾಡುತ್ತಾರೆ. ಈ ಮಾತನ್ನು ಕೇಳಿದ ದಿವ್ಯಾ, ಸತ್ಯಗೂ ಮೊದಲೇ ತಾನು ಗರ್ಭಿಣಿ ಆಗಬೇಕು ಎಂದು ಆಲೋಚಿಸುತ್ತಿದ್ದಾಳಾ..? ಸತ್ಯ ಮೇಲಿನ ಸಿಟ್ಟಿನಿಂದ ಗರ್ಭಿಣಿ ಆಗಿ ಬಾಲನ ಪ್ಲ್ಯಾನ್ ಅನ್ನು ಸಕ್ಸಸ್ ಮಾಡುತ್ತಾಳಾ..?


Click it and Unblock the Notifications











