Sathya: ಬಾಲನಿಗೆ ಸಿಕ್ತು ಸಪೋರ್ಟ್: ಅತ್ತೆ ಸೊಸೆಯನ್ನು ಒಪ್ಪುವ ಕಾಲ ಬಂತು

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಈಗ ಸತ್ಯ ಓದುವ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿದ್ದಾಳೆ. ತಾನೂ ಪೊಲೀಸ್ ಆಗಬೇಕು ಎಂದು ಹೇಳಿದ್ದಕ್ಕೆ ಕಾರ್ತಿಕ್ ಪುಸ್ತಕಗಳನ್ನು ತಂದು ಕೊಟ್ಟಿದ್ದಾನೆ. ಸತ್ಯ ಕೂಡ ಸಮಯ ಸಿಕ್ಕಾಗಲೆಲ್ಲಾ ವ್ಯರ್ಥ ಮಾಡದೇ, ಪರೀಕ್ಷೆಗಾಗಿ ಓದುತ್ತಿದ್ದಾಳೆ. ಅರ್ಥವಾಗದ್ದನ್ನು ಕಾರ್ತಿಕ್ ಬಳಿ ಕೇಳಿ ಹೇಳಿಸಿಕೊಳ್ಳುತ್ತಿದ್ದಾಳೆ. ಕಾರ್ತಿಕ್ ಕೂಡ ಸತ್ಯಳಿಗೆ ಈ ವಿಚಾರದಲ್ಲಿ ಸಪೋರ್ಟ್ ಮಾಡುತ್ತಿದ್ದಾನೆ.

ಇನ್ನು ಸತ್ಯ ಹಾಗೂ ಕಾರ್ತಿಕ್ ನಡುವೆಯೂ ಪ್ರೀತಿ ಚಿಗುರೊಡೆದಿದ್ದು, ಆಗಾಗ ರೊಮ್ಯಾಂಟಿಕ್ ಆಗಿ ಬಿಡುತ್ತಾರೆ. ಆದರೆ, ಇಬ್ಬರಲ್ಲೂ ಇನ್ನು ಮುಜುಗರ, ನಾಚಿಕೆ ಇದ್ದು, ಎಕ್ಸ್‌ಪೆಕ್ಟೇಷನ್ ಮಾಡುತ್ತಿದ್ದಾರೆ. ಇನ್ನು ಕೀರ್ತನಾ ಪದೇ ಪದೇ ಸೀತಮ್ಮ ಬಳಿ ಚಾಡಿ ಹೇಳುತ್ತಿದ್ದಳು. ಆದರೆ ಈಗ ಇದಕ್ಕೆ ಸೀತಮ್ಮ ಅವಕಾಶ ಮಾಡಿಕೊಡುತ್ತಿಲ್ಲ. ಹೀಗಿರುವಾಗ ಭೀಮನ ಅಮವಾಸೆಗೆ ಪೂಜೆ ಮಾಡಲು ಕೀರ್ತನಾಳಿಗೆ ಹೇಳುತ್ತಾರೆ. ಆದರೆ ಕೀರ್ತನಾ ಇದಕ್ಕೆ ಒಪ್ಪುವುದಿಲ್ಲ. ಬದಲಿಗೆ ಅಮ್ಮನಿಗೆ ಎದುರು ಮಾತನಾಡುತ್ತಿರುತ್ತಾಳೆ.

Sathya Serial 09th June episode written update

ಗರಂ ಆದ ಸತ್ಯ ಸೀದಾ ಬಂದು ಕೀರ್ತನಾಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಸಂಪ್ರದಾಯವನ್ನು ಫಾಲೋ ಮಾಡಬೇಕು. ಮಗಳಾದರೂ ಸರಿ, ಸೊಸೆಯಾದರೂ ಸರಿ ಎಂದು ಹೇಳುತ್ತಾಳೆ. ಸೀತಮ್ಮನ ಮಾತಿಗೆ ಬೆಲೆ ಕೊಡು, ಅವರಿಗೆ ಎದುರ ಮಾತನಾಡಬೇಡ. ಇಲ್ಲದೇ ಹೋದರೆ, ನಿನ್ನ ಗ್ರಹಚಾರ ಸರಿ ಇರುವುದಿಲ್ಲ ಎಂದು ಬೈಯುತ್ತಾಳೆ. ಬಳಿಕ ಸೀತಮ್ಮನ ಬಳಿ ನಾನು ಹೀಗೆ ಮಾತನಾಡಿದ್ದಕ್ಕೆ ಬೇಸರ ಮಾಡಿಕೊಳ್ಳಬೇಡಿ ಎಂದು ಕ್ಷಮೆ ಕೇಳುತ್ತಾಳೆ.

ಸೀತಾಳನ್ನು ಒಪ್ಪಿಕೊಂಡಿರುವ ಸೀತಮ್ಮ

ಸೀತಾ ಹಾಗೂ ಊರ್ಮಿಳಾ ಇಬ್ಬರಿಗೂ ಸತ್ಯ ನಡೆದುಕೊಳ್ಳುತ್ತಿರುವ ರೀತಿ ಖುಷಿ ಕೊಡುತ್ತದೆ. ಸತ್ಯಳಿಂದ ನಮ್ಮ ಮನೆ ಮರ್ಯಾದೆಗೆ ಧಕ್ಕೆ ಬರುವುದಿಲ್ಲ. ಸತ್ಯ ಕೋಟೆ ಮನೆಯ ಗೌರವವನ್ನು ಕಾಪಾಡುತ್ತಾಳೆ. ಅವಳಿಂದ ನಮ್ಮ ಮನೆಗೆ ಒಳ್ಳೆಯದಾಗುತ್ತದೆ. ಕೋಟೆ ಮನೆಗೆ ತಕ್ಕಂತೆ ಎಲ್ಲಾ ಸಂಪ್ರದಾಯಗಳನ್ನು ಕಲಿಯುತ್ತಿದ್ದಾಳೆ ಎಂದು ಮನಸ್ಸಿನಲ್ಲೇ ಮಾತನಾಡಿಕೊಳ್ಳುತ್ತಾಳೆ. ಮಾರನೆಯ ದಿನ ಖುಷಿಯಿಂದ ಇರುವ ಸೀತಮ್ಮ ಮನೆಯಲ್ಲಿ ಸಿಹಿ ಮಾಡಲು ಹೇಳುತ್ತಾಳೆ. ಜೊತೆಗೆ ಅಡುಗೆಗೆ ಊರ್ಮಿಳಾಗೆ ಸಹಾಯ ಮಾಡುವಂತೆ ಸತ್ಯಗೆ ಹೇಳುತ್ತಾಳೆ. ಇದು ಸತ್ಯಳಿಗೆ ಸಮಾಧಾನವನ್ನು ತಂದು ಕೊಡುತ್ತದೆ.

Sathya Serial 09th June episode written update

ಮನೆಯ ಹೊರಗೆ ಇರುವ ಬಾಲ

ಇತ್ತ ಬಾಲ, ದಿವ್ಯಾಳನ್ನು ಹುಡುಕಿಕೊಂಡು ಮನೆಗೆ ಬಂದಿದ್ದಾನೆ. ಆದರೆ, ದಿವ್ಯಾ ಬಾಲನನ್ನು ಮನೆಯಿಂದ ಹೊರಗೆ ಹಾಕಿದ್ದಾಳೆ. ಜಾನಕಿ ಹಾಗೂ ಗಿರಿಜಮ್ಮ ಬೈದರೂ ಕೂಡ ಯಾರ ಮಾತನ್ನೂ ದಿವ್ಯಾ ಕೇಳುತ್ತಿಲ್ಲ. ಅದರಲ್ಲೂ ಬಾಲನನ್ನು ಮನೆಗೆ ಸೇರಿಸಿಕೊಂಡರೆ, ಸತ್ಯ ಮೇಲೆ ಆಣೆ ಎಂದು ಹೇಳಿದ್ದಾಳೆ. ಇದರಿಂದ ಜಾನಕಿ ಹಾಗೂ ಗಿರಿಜಮ್ಮ ಇಬ್ಬರೂ ಬೇಸರ ಮಾಡಿಕೊಂಡಿದ್ದಾರೆ.

ಬಾಲನ ಮನೆಯೊಳಗೆ ಬಿಟ್ಟುಕೊಂಡ ದಿವ್ಯಾ

ಬಾಲ ಕೂಡ ಮನೆಯ ಹೊರಗೆ ಕಾದು ನಿಂತಿದ್ದಾನೆ. ದಿವ್ಯಾ ಮನಸ್ಸು ಕರಗುತ್ತಲೇ ಇಲ್ಲ. ಬಾಲ ರಾತ್ರಿ ಪೂರ್ತಿ ಮನೆಯ ಹೊರಗಡೆ ಮಲಗಿದ್ದಾನೆ. ಬೆಳಗೆದ್ದು, ಜಾನಕಿ ನೋಡಿದಾಗ ಬಾಲ ಬಾಗಿಲಲ್ಲಿ ಮಲಗಿರುತ್ತಾನೆ. ಇದರಿಂದ ಗಿರಿಜಾ ಹಾಗೂ ಜಾನಕಿ ಬೇಸರದಿಂದ ಬಾಲನನ್ನು ಮನೆಯ ಒಳಗೆ ಕರೆಯುತ್ತಾರೆ. ಬಾಲ, ದಿವ್ಯಾ ಬಳಿ ಎಷ್ಟೇ ಕ್ಷಮೆ ಕೇಳಿದರೂ ಒಪ್ಪುತ್ತಿಲ್ಲ.

ನೋಡುವಷ್ಟು ನೋಡಿದ ಜಾನಕಿ ಮಗಳ ಬಳಿ ನಿನಗೆ ಈ ಮನೆಯಲ್ಲಿ ಜಾಗ ಬೇಕು ಎಂದರೆ, ಬಾಲನೂ ಇರಬೇಕು ಎಂದು ತಾಕೀತು ಮಾಡಿದ್ದಾಳೆ. ಅಲ್ಲದೇ, ಗಿರಿಜಾ ಹಾಗೂ ಜಾನಕಿ ಇಬ್ಬರೂ ಬಾಲನಿಗೆ ಸಂಪೂರ್ಣವಾಗಿ ಸಪೋರ್ಟ್ ಮಾಡಿದ್ದಾರೆ. ಈಗ ದಿವ್ಯಾ ಬೇರೆ ದಾರಿ ಇಲ್ಲದೇ, ಬಾಲ ಮನೆಯಲ್ಲೇ ಇರಲಿ ಎಂದು ಒಪ್ಪಿಕೊಂಡಿದ್ದಾಳೆ.

More from Filmibeat

English summary
Sathya Serial 09th June episode written update. here is detials about Bala gets entry for Divya mother's home. Now Divya has no choice. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X