Sathya: ರಾಕಿಗೆ ಹೊಡೆದಿದ್ದು ಯಾರು ಅಂತ ಗೊತ್ತಾಯ್ತು: ಸತ್ಯ ಮುಂದೇನು ಮಾಡುತ್ತಾಳೆ?

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ರಾಕೇಶ್ ಪರೀಕ್ಷೆ ಬರೆಯಲಾಗದೇ, ಪಟ್ಟ ಶ್ರಮವೆಲ್ಲಾ ವ್ಯರ್ಥವಾಯ್ತು ಎಂದು ಯೋಚಿಸುತ್ತಾ ಕುಳಿತಿರುತ್ತಾನೆ. ಸತ್ಯಳಿಗೆ ರಾಕಿಯನ್ನು ಇಂತಹ ಪರಿಸ್ಥಿತಿಯಲ್ಲಿ ನೋಡುವುದಕ್ಕೆ ಆಗುತ್ತಿಲ್ಲ. ಹಾಗಾಗಿ ಹುಡುಗರಿಗೆ ರಾಕಿಯನ್ನು ಹೊಡೆದವರನ್ನು ಹುಡುಕಲು ಹೇಳುತ್ತಾಳೆ. ಹುಡುಗರು ಎಲ್ಲಾ ಕಡೆಗಳಲ್ಲೂ ತಡಕಾಡಿ ಕೊನೆಗೆ ಆತನನ್ನು ಎಳೆದುಕೊಂಡು ಬರುತ್ತಾರೆ.

ಸುಮ್ಮನೆ ಕರೆದುಕೊಂಡು ಬರುವುದನ್ನು ಬಿಟ್ಟು ಹುಡುಗರು ಆತನಿಗೆ ನಾಲ್ಕು ತದುಕಿ ಕರೆದುಕೊಂಡು ಬರುತ್ತಾರೆ. ಸೀತಮ್ಮ ಹಾಗೂ ಸತ್ಯ ಮಾತನಾಡುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಬರುತ್ತಾರೆ. ಇತ್ತ ಸತ್ಯಳಿಗೆ ಸೀತಮ್ಮ ಕ್ಲಾಸ್ ತೆಗೆದುಕೊಳ್ಳುತ್ತಿರುತ್ತಾಳೆ. ನನ್ನ ಮಗ ನನಗೆ ಇಷ್ಟು ವರ್ಷದಲ್ಲಿ ಒಂದು ದಿನವೂ ಎದುರು ಮಾತನಾಡಿರಲಿಲ್ಲ. ಆದರೆ, ನೀನು ಬಂದಾಗಿನಿಂದ ನನ್ನ ಮಗ ಸಂಪೂರ್ಣವಾಗಿ ಎಲ್ಲವನ್ನೂ ಮರೆತಿದ್ದಾನೆ. ನನ್ನ ಮಾತಿಗೇ ಎದುರಾಡುತ್ತಾನೆ. ಇದೆಲ್ಲವೂ ನಿನ್ನಿಂದಲೇ. ನೀನೇ ಅವನಿಗೆ ಇದನ್ನೆಲ್ಲಾ ಹೇಳಿಕೊಟ್ಟಿದ್ದು ಎಂದು ಹೇಳುತ್ತಾಳೆ.

Sathya Serial 10th April episode written update

ಆದರೆ, ಸತ್ಯ ಇಲ್ಲ ಸೀತಮ್ಮ. ಕಾರ್ತಿಕ್ ಆವತ್ತು ಮಾತನಾಡಿದ್ದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಇದರಲ್ಲಿ ನನ್ನ ತಪ್ಪಿಲ್ಲ ಎಂದು ಹೇಳುತ್ತಿರುತ್ತಾಳೆ. ಇದೇ ವೇಳೆಗೆ ಆ ರೌಡಿ ಅನ್ನು ಹುಡುಗರು ಕರೆದು ತರುತ್ತಾಳೆ. ಸತ್ಯ ಆತನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ರಾಕೇಶ್ ಭವಿಷ್ಯವನ್ನೇ ಹಾಳು ಮಾಡಿದೆ ಎಂದು ಹೇಳಿ ಬೈಯುತ್ತಾಳೆ. ತನ್ನ ಪಾಡಿಗೆ ತಾನು ಓದಿಕೊಂಡಿದ್ದ ಹುಡುಗನ ಕೈ ಮುರಿದಿದ್ದೀಯಾ ಎಂದು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಆಗ ಆತ ಯಾರೋ ದುಡ್ಡು ಕೊಟ್ಟು ಹೊಡೆಯಲು ಹೇಳಿದರು. ನಾನು ಮಾಡಿದೆ ಎಂದು ತಪ್ಪೊಪ್ಪಿಕೊಳ್ಳುತ್ತಾನೆ.

ಆಗ ಸತ್ಯ ಯಾರದು ಹೇಳು ಎಂದು ಕೇಳಿದಾಗ ಆತ ಅವರ ಹೆಸರು ಗೊತ್ತಿಲ್ಲ. ಆದರೆ, ಅವರ ಮನೆಯನ್ನು ತೋರಿಸುತ್ತೀನಿ ಎಂದು ಹೇಳುತ್ತಾನೆ. ಆಗ ಸತ್ಯ ಆತನ ಕಾಲರ್ ಅನ್ನು ಹಿಡಿದು ತೋರಿಸು ನಡಿ ಎಂದು ಕರೆದುಕೊಂಡು ಹೋಗುತ್ತಾಳೆ. ಇದನ್ನೆಲ್ಲಾ ನೋಡಿದ ಸೀತಾಗೆ, ಒಬ್ಬ ಹುಡುಗನ ಭವಿಷ್ಯಕ್ಕೆ ಇಷ್ಟೆಲ್ಲಾ ಮಾಡುತ್ತಿರುವ ಸತ್ಯ, ಇನ್ನು ತನ್ನ ಮನೆಯವರ ವಿಚಾರ ಬಂದರೆ, ಹೇಗೆಲ್ಲಾ ಇರಬಹುದು ಎಂದು ಖುಷಿ ಪಡುತ್ತಾಳೆ.

ದಾರಿಯಲ್ಲಿ ಹೋಗುತ್ತಾ ಕೆಲವರು ಇಂತಹ ಹೆಣ್ಣುಮಕ್ಕಳು ಬೇಕಾ ಎಂದು ಹೀಯಾಳಿಸಿದಾಗ ಸೀತಾಗೆ ಬೇಸರವಾಗುತ್ತದೆ. ಮತ್ತೆ ಕೆಲ ಹುಡುಗಿಯರು ಸತ್ಯಳನ್ನು ಹೊಗಳಿದಾಗ ಸೀತಾಗೆ ಖುಷಿಯಾಗುತ್ತದೆ. ಸೀತಾ ಮನಸ್ಸು ಗೊಂದಲದಲ್ಲಿ ಸಿಲುಕಿರುತ್ತದೆ. ಆ ರೌಡಿ ಸೀದಾ ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ. ಸತ್ಯ ಸುಳ್ಳು ಹೇಳಬೇಡ, ಯಾರದೋ ಮನೆಯನ್ನು ತೋರಿಸಿ ಎಸ್ಕೇಪ್ ಆಗಬೇಡ ಎಂದು ಜೋರು ಮಾಡುತ್ತಾಳೆ.

Sathya Serial 10th April episode written update

ಆಗ ಆತ ಟೆರೆಸ್ ಮೇಲೆ ನಿಂತಿದ್ದ ಲಕ್ಷ್ಮಣ್‌ನನ್ನು ತೋರಿಸುತ್ತಾನೆ. ಸತ್ಯ ಈಗಲೇ ವಿಚಾರಿಸುತ್ತೇನೆ ಎಂದು ಸೀದಾ ಮನೆಯ ಒಳಗಡೆಗೆ ಹೋಗುತ್ತಾಳೆ. ಲಕ್ಷ್ಮಣ್‌ನನ್ನು ಏಕವಚನದಲ್ಲಿ ಕರೆಯುತ್ತಾಳೆ. ಇದರಿಂದ ಊರ್ಕಮಿಳಾ ಸತ್ಯ ಮೇಲೆ ಕೂಗಾಡುತ್ತಾಳೆ. ಇದೇನಾ ನಿನ್ನ ಸಂಸ್ಕಾರ ಎಂದು ಪ್ರಶ್ನೆ ಮಾಡುತ್ತಾಳೆ. ಆದರೆ, ಸತ್ಯ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಲಕ್ಷ್ಮಣ್ ನನ್ನು ಪ್ರಶ್ನೆ ಮಾಡುತ್ತಾಳೆ.

ಯಾಕೆ ರಾಕೇಶ್ ಗೆ ಹೊಡೆಸಿದ್ದು, ಅವನು ಮಾಡಿದ ತಪ್ಪೇನು ಎಂದು ಕೇಳುತ್ತಾಳೆ. ಸತ್ಯ ಮಾತಿಗೆ ಕೀರ್ತನಾ ವ್ಯಂಗ್ಯವಾಗಿ ಟೀಕಿಸಲು ಶುರು ಮಾಡುತ್ತಾಳೆ. ಮೊದಲೇ ಸಿಟ್ಟಿನಲ್ಲಿದ್ದ ಸತ್ಯ, ಕೀರ್ತನಾಳಿಗೆ ಸುಮ್ಮನೆ ಇರದಿದ್ದರೆ, ಪರಿಣಾಮ ನೀನು ಎದುರಿಸಬೇಕಾಗುತ್ತೆ ಎಂದು ಮತ್ತೆ ಲಕ್ಷ್ಮಣ್ ಅವರನ್ನೇ ಪ್ರಶ್ನೆ ಮಾಡುತ್ತಾಳೆ. ಈಗ ಮುಂದೆ ಏನಾಗುತ್ತೆ ಎಂಬ ಕುತೂಹಲ ಮೂಡಿದೆ.

More from Filmibeat

English summary
Sathya Serial 10th April episode written update. Here is Detils About Sathya gets to know about rowdy. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X