Sathya: ಚಿಕ್ಕ ಮಾವನಿಗೆ ಬೇಲಿ ಹಾಕಿದ ಸತ್ಯ: ಮತ್ತೊಂದು ಮನೆ ಎಂದು ಹೇಳಿದ್ದು ಯಾಕೆ..?

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಸತ್ಯಳಿಗೆ ಈಗ ಚಿಕ್ಕ ಮಾವನ ಬಣ್ಣ ಬಯಲಾಗಿದೆ. ಮನೆಯಲ್ಲಿ ಒಳ್ಳೆಯವರಂತೆ ನಟಿಸುವ ಲಕ್ಷ್ಮಣ, ಮನೆಯ ಹೊರಗೆ ಮತ್ತೊಂದು ಮದುವೆಯಾಗಿದ್ದಾರೆ.

ಈ ಸತ್ಯವನ್ನು ಅರಿತಿರುವ ಸತ್ಯಗೆ ಈಗ ತನ್ನ ಚಿಕ್ಕತ್ತೆಯನ್ನು ನೋಡಿ ಸಂಕಟವಾಗುತ್ತಿದೆ. ತನ್ನ ಚಿಕ್ಕತ್ತೆ ಬಹಳ ಮುಗ್ಧೆ. ಆದರೆ, ಆಕೆಗೆ ಲಕ್ಷ್ಮಣ ಮಾವ ಹೀಗೆ ಮೋಸ ಮಾಡಿದ್ದಾರೆ ಎಂದು ಬೇಸರ ಮಾಡಿಕೊಂಡಿದ್ದಾಳೆ.

Sathya-Serial

ಚಿಕ್ಕತ್ತೆಯ ಸಮಸ್ಯೆ ಅನ್ನು ಹೇಗೆ ಬಗೆ ಹರಿಸುವುದು ಎಂಬುದು ತಿಳಿಯದೇ ಒದ್ದಾಡುತ್ತಿದ್ದಾಳೆ. ಪದೇ ಪದೇ ಆಫೀಸ್ ನಪ ಹೇಳಿ ಮನೆಯಿಂದ ಹೊರಗೆ ಹೋಗುವ ಚಿಕ್ಕ ಮಾವ ತಮ್ಮ ಇನ್ನೊಂದು ಕುಟುಂಬವನ್ನು ಭೇಟಿ ಮಾಡುತ್ತಾರೆ ಎಂದು ಸತ್ಯ ಊಹಿಸಿದ್ದಾಳೆ.

ಲಕ್ಷ್ಮಣನನ್ನು ಹಿಂಬಾಲಿಸಿದ ಸತ್ಯ

ಒಂದುಸಲ ಲಕ್ಷ್ಮಣನನ್ನು ಸತ್ಯ ಫಾಲೋ ಮಾಡುತ್ತಾಳೆ. ಲಕ್ಷ್ಮಣ ತನ್ನ ಎರಡನೇ ಪತ್ನಿ ಹಾಗೂ ಮಗನ ಜೊತೆಗೆ ಕಾಲ ಕಳೆಯುವುದನ್ನು ನೋಡಿ ಆಘಾತವಾಗುತ್ತದೆ. ಸೀದಾ ತನ್ನ ಹುಡುಗರ ಬಳಿ ಹೋಗಿ ಇರುವ ಸತ್ಯವನ್ನೆಲ್ಲಾ ಹೇಳುತ್ತಾಳೆ. ಈಗ ಚಿಕ್ಕ ಮಾವ ಮಾಡುತ್ತಿರುವ ತಪ್ಪಿನಿಂದ ಮುಂದೆ ಚಿಕ್ಕತ್ತೆ ಹಾಗೂ ರಿತು ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾಳೆ. ಹುಡುಗರು ಕೂಡ ಸತ್ಯ ಮಾತುಗಳನ್ನು ಕೇಳಿ ಒಮ್ಮೆ ಶಾಕ್ ಆಗುತ್ತಾರೆ. ಬಳಿಕ ಬೇರೆ ದಾರಿ ಇಲ್ಲದೇ, ಸಮಸ್ಯೆಗೆ ಪರಿಹಾರವನ್ನು ಹುಡುಕೋಣ ಎಂದು ಸತ್ಯ ಪರ ನಿಲ್ಲುತ್ತಾರೆ.

Sathya-Serial

ಕಾರ್ತಿಕ್ ಒದ್ದಾಟ

ಇತ್ತ ಕಾರ್ತಿಕ್‌ಗೆ ಸತ್ಯ ತನ್ನ ಕಡೆ ಗಮನ ಹರಿಸುತ್ತಿಲ್ಲ ಎಂಬುದೇ ದೊಡ್ಡ ಚಿಂತೆಯಾಗಿದೆ. ಸತ್ಯ ಸದಾ ಮನೆಯವರ ಬಗ್ಗೆಯೇ ಯೋಚಿಸುತ್ತಾಳೆ. ನನ್ನ ಮೇಲೆ ಅವಳಿಗೆ ಸ್ವಲ್ಪವೂ ಕಾಳಜಿ ಇಲ್ಲ. ಅತ್ತೆ ಹಿಂದೆ ಹೋಗುತ್ತಾಳೆ. ನನ್ನನ್ನು ಮರೆತು ಬಿಟ್ಟಿದ್ದಾಳೆ. ನನ್ನ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ ಎಂದು ಒದ್ದಾಡುತ್ತಿದ್ದಾನೆ. ಇನ್ನು ಬಾಲನಿಗೆ ದಾರಿಯಲ್ಲಿ ಹಣ ಸಿಕ್ಕಿರುತ್ತದೆ. ಯಾರದೋ ವಾಪಸ್ ಮಾಡಬೇಕು ಎಂದು ಮನೆಗೆ ತಂದಿದ್ದಾನೆ. ಆದರೆ, ಆ ಹಣವನ್ನು ನೋಡಿ ದಿವ್ಯಾ ಕಣ್ಣು ಕುಕ್ಕುತ್ತಿದೆ. ಬಾಲ ಮಾತ್ರ ಇನ್ನೊಬ್ಬರ ಹಣ ನಮಗೆ ಬೇಡ ಎನ್ನುತ್ತಿದ್ದಾನೆ. ಆದರೆ, ಅದು ಅವನು ಕೆಲಸ ಮಾಡುವ ಅಂಗಡಿಯ ಮಾಲೀಕನದ್ದಾಗಿರುತ್ತದೆ. ದಿವ್ಯಾ ಆ ಹಣವನ್ನು ಕದ್ದು ಬಳಸಿಕೊಳ್ಳುತ್ತಾಳಾ ಎಂಬ ಕುತೂಹಲ ಮೂಡಿದೆ.

ಮತ್ತೊಂದು ಮನೆಯ ಬಗ್ಗೆ ಹೇಳಿದ ಸತ್ಯ

ಇನ್ನು ಲಕ್ಷ್ಮಣನ ಕಳ್ಳಾಟವನ್ನು ತಿಳಿದಿರುವ ಸತ್ಯಳಿಗೆ ಈಗ ಹಗಲು ರಾತ್ರಿ ಊರ್ಮಿಳಾಳದ್ದೇ ಯೋಚನೆಯಾಗಿದೆ. ಹೇಗಾದರೂ ಮಾಡಿ ಇವರ ಸಂಸಾರ ಸರಿ ಮಾಡಬೇಕು ಎಂದು ಯೋಚಿಸುತ್ತಿದ್ದಾಳೆ. ಇದೇ ವೇಳೆಗೆ ಆಫೀಸ್ ಇಲ್ಲದಿದ್ದರೂ ಲಕ್ಷ್ಮಣ ಸುಳ್ಳು ಹೇಳಿ ಹೊರಟಿದ್ದಾನೆ. ಈ ಬಗ್ಗೆ ತಿಳಿದ ಸತ್ಯ, ಚಿಕ್ಕ ಮಾವನನ್ನು ತಡೆಯುತ್ತಾಳೆ. ಚಿಕ್ಕತ್ತೆ ಜೊತೆಗೆ ಹೊರಗೆ ಸುತ್ತಾಡಿಕೊಂಡು ಬನ್ನಿ, ಮತ್ತೊಂದು ಮನೆಯ ಬಗ್ಗೆ ಚಿಂತೆ ಬೇಡ ಎಂದು ಹೇಳುತ್ತಾಳೆ. ಆಗ ಲಕ್ಷ್ಮಣನಿಗೆ ಶಾಕ್ ಆಗುತ್ತದೆ. ಸತ್ಯ ಮತ್ತೊಂದು ಮನೆ ಎಂದರೆ ಅದು ನಿಮ್ಮ ಆಫೀಸ್ ಎಂದು ಹೇಳಿ ಮ್ಯಾನೇಜ್ ಮಾಡುತ್ತಾಳೆ.

ಚಿಕ್ಕ ಮಾವನನ್ನು ಕಟ್ಟಿ ಹಾಕಿದ ಸತ್ಯ

ಚಿಕ್ಕ ಮಾವನನ್ನು ಇವತ್ತು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬಿಡಬಾರದು ಎಂದು ತೀರ್ಮಾನಿಸಿದ್ದಾಳೆ. ಹಾಗಾಗಿ ಎಲ್ಲೂ ಹೋಗಬೇಡಿ. ಫೋನ್ ಆಫ್ ಮಾಡಿ ಚಿಕ್ಕತ್ತೆ ಜೊತೆಗೆ ಇರಿ ಎಂದು ಹೇಳಿ ಕಳಿಸುತ್ತಾಳೆ. ಸತ್ಯಳ ಮಾತು ಹಾಗೂ ನಡವಳಿಕೆ ಲಕ್ಷ್ಮಣನಿಗೆ ಆತಂಕದ ಜೊತೆಗೆ ಕೋಪ ತರಿಸುತ್ತದೆ. ಆದರೆ, ಸತ್ಯ ಈ ಸಮಸ್ಯೆ ಅನ್ನು ಹೇಗೆ ಬಗೆ ಹರಿಸುತ್ತಾಳೋ ಕಾದು ನೋಡಬೇಕಿದೆ.

More from Filmibeat

English summary
sathya Kannada serial today Episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X