Sathya: ಒಪ್ಪಂದವನ್ನು ನೆನಪು ಮಾಡಿದ ಸೀತಾ: ಸತ್ಯ ಸೋತಳಾ..?
ಸತ್ಯ ಧಾರಾವಾಹಿಯಲ್ಲಿ ರಿತುಗೆ ನಿಶ್ಚಿತಾರ್ಥ ಮಾಡಲು ಲಕ್ಷ್ಮಣ ಮುಂದಾಗಿದ್ದಾನೆ. ಇದಕ್ಕಾಗಿ ಎಲ್ಲಾ ತಯಾರಿಗಳನ್ನೂ ಮಾಡಿಕೊಂಡಿದ್ದಾನೆ. ಆದರೆ ಇದು ಮನೆಯಲ್ಲಿ ಯಾರಿಗೂ ಇಷ್ಟವಿಲ್ಲ. ಗುರುಗಳು ಬೇರೆ ನಿಶ್ಚಿತಾರ್ಥ ಮಾಡಿದರೆ ಸಮಸ್ಯೆ ಆಗುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ರಾಮಚಂದ್ರ ರಾಯರು ನಿಶ್ಚಿತಾರ್ಥ ಬೇಡ ಎಂದು ಹೇಳಿದ್ದಾರೆ. ಆದರೆ ಯಾರೂ ಇವರ ಮಾತನ್ನು ಕೇಳಲು ತಯಾರಿಲ್ಲ.
ದಿವ್ಯಾ ಸುತಾರಾಂ ಬಾಲನ ಜೊತೆಗೆ ಮಾತನಾಡಲು ಒಪ್ಪುತ್ತಿಲ್ಲ. ಬಾಲ ಸಮಾಧಾನವಾಗಿ ದಿವ್ಯಾಳನ್ನು ಮಾತನಾಡಿಸಿದರೂ ಕೆಟ್ಟದಾಗಿ ಬೈದು ಕಳಿಸುತ್ತಿದ್ದಾಳೆ. ನನ್ನನ್ನು ಮರೆತು ಬಿಡು ನಾನು ಮತ್ತೆ ನಿನ್ನನ್ನು ನೋಡಲು ಬಯಸುವುದಿಲ್ಲ ಎಂದು ಹೇಳುತ್ತಾಳೆ.

ಬಾಲ ಬೇಡ ಎನ್ನುತ್ತಿರುವ ದಿವ್ಯಾ
ಬಾಲ, ದಿವ್ಯಾ ಸರಿ ಹೋಗುತ್ತಾಳೆ. ಸ್ವಲ್ಪ ಸಮಯ ಕೊಡೋಣ ಎಂದು ಹೋಗುತ್ತಾನೆ. ಇತ್ತ ಗಿರಿಜಮ್ಮ ಮತ್ತು ಜಾನಕಿ, ದಿವ್ಯಾ ಯಾಕೆ ಹೀಗೆ ಹಠ ಮಾಡುತ್ತಿದ್ದಾಳೆ. ಹೊಂದಿಕೊಂಡು ಬಾಳ್ವೆ ಮಾಡಬಾರದ ಎಂದು ಮಾತನಾಡುತ್ತಿರುತ್ತಾರೆ. ಆಗ ದಿವ್ಯಾ ಬಂದು ಸಾಧ್ಯವಿಲ್ಲ ಯಾವುದೇ ಕಾರಣಕ್ಕೂ ನಾನು ಬಾಲನ ಜೊತೆಗೆ ಬಾಳುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾಳೆ. ಈ ಮಾತುಗಳನ್ನು ಕೇಳಿದ ಗಿರಿಜಮ್ಮ ಹಾಗೂ ಜಾನಕಿ ಶಾಕ್ ಆಗುತ್ತಾರೆ.
ಅಣ್ಣನ ಮೇಲೆ ಕೂಗಾಡಿದ ರಿತು
ಕಾರ್ತಿಕ್, ರಿತುಗೆ ಸಮಾಧಾನ ಮಾಡಲೂ ಹೋಗುತ್ತಾನೆ. ಆದರೆ ರಿತು ಕಾರ್ತಿಕ್ ಮೇಲೆ ಕೂಗಾಡುತ್ತಾಳೆ. ನಿಮಗ್ಯಾರಿಗೂ ನನ್ನ ಮೇಲೆ ಪ್ರೀತಿ ಇಲ್ಲ. ನನಗೆ ಏನು ಬೇಕು, ಬೇಡ ಎಂಬುದೂ ಗೊತ್ತಿಲ್ಲ ಎಂದು ಹೇಳುತ್ತಾಳೆ. ನಿಮಗೆಲ್ಲಾ ನನ್ನ ಪ್ರೀತಿ ಬಗ್ಗೆ ಕಾಳಜಿ ಇಲ್ಲ. ನೀನು ಕೂಡ ಪ್ರೀತಿಸಿಯೇ ಮದುವೆಯಾಗಿದ್ದು, ಮರೆತೋಯ್ತಾ ಅಣ್ಣಾ. ನನ್ನ ನಿಶ್ಚಿತಾರ್ಥವನ್ನ ಕ್ಯಾನ್ಸಲ್ ಮಾಡಿಸುತ್ತೀನಿ ಅಂತ ಪ್ರಾಮಿಸ್ ಮಾಡಿದ್ದೆ. ಆದರೆ ಈಗ ನಾಳೆಯೇ ನಿಶ್ಚಿತಾರ್ಥ ಅಂತ ಅಪ್ಪ ಹೇಳುತ್ತಿದ್ದಾರೆ. ನಾನೀಗ ಏನು ಮಾಡಲಿ ಎಂದು ಪ್ರಶ್ನಿಸುತ್ತಾಳೆ. ರಿತುಳ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೇ ಕಾರ್ತಿಕ್ ತನ್ನ ಪರೀಸ್ಥಿತಿಯನ್ನು ಆಲೋಚಿಸುತ್ತಾನೆ.
ಸತ್ಯಳಿಗೆ ಸೀತಾ ತರಾಟೆ
ಇತ್ತ ಸೀತಮ್ಮ ಮಾತು ಮಾತಿಗೂ ಸತ್ಯಳನ್ನು ಬೈಯುತ್ತಿರುತ್ತಾರೆ. ನಿನ್ನಿಂದಲೇ ನಮ್ಮ ಮನೆಯ ನೆಮ್ಮದಿ, ಖುಷಿ ಎಲ್ಲವೂ ಹಾಳಾಗಿದೆ. ಅದು ಯಾವ ಘಳಿಗೆಯಲ್ಲಿ ಮನೆಗೆ ಬಂದೆಯೋ. ನಮ್ಮ ಮನೆ ನರಕವಾಗಿದೆ. ನಿನ್ನಿಂದ ಯಾರಿಗೂ ಸುಖವಿಲ್ಲ ಎಂದು ಬೈಯುತ್ತಲೇ ಇರುತ್ತಾಳೆ. ಈಗ ಮನೆಯಲ್ಲಿ ರಿತು, ರಾಕಿಯನ್ನು ಪ್ರೀತಿಸಿದ ಕಾರಣ ಅವಳ ನಿಶ್ಚಿತಾರ್ಥವನ್ನು ಬೇರೆಯವರ ಜೊತೆಗೆ ಮಾಡಲು ಮುಂದಾಗಿದ್ದಾರೆ. ಆದರೆ ಇದಕ್ಕೆ ರಾಯರು ಒಪ್ಪದ ಕಾರಣ ಆ ಕೋಪವನ್ನು ಕೂಡ ಸೀತಾ ಸತ್ಯ ಮೇಲೆ ತೋರಿಸಿದ್ದಾಳೆ.

ಇನ್ನು ಸತ್ಯ ರಾಯರ ರೂಮಿಗೆ ಹೋಗಿ ಸಮಾಧಾನ ಮಾಡಿ ಬರುತ್ತಾಳೆ. ಇದನ್ನು ನೋಡಿದ ಸೀತಾ ಅಲ್ಲೂ ಹೋಗಿ ಬೆಂಕಿ ಇಟ್ಟು ಬಂದೆಯಾ ಎಂದು ಪ್ರಶ್ನಿಸುತ್ತಾರೆ. ಸೀತಾ ಮಾತಿನಿಂದ ಸತ್ಯ ಬೇಸರ ಮಾಡಿಕೊಂಡು ನಾನೇನು ಮಾಡಿಲ್ಲ ಎಂದು ಹೇಳುತ್ತಾಳೆ. ಆದರೆ ಸೀತಾ ಇಲ್ಲ ಎಲ್ಲವೂ ನಿನ್ನಿಂದಲೇ ಎಂದು ಹೇಳುತ್ತಾಳೆ.
ಸತ್ಯಗೆ ವಾರ್ನಿಂಗ್ ಕೊಟ್ಟ ಸೀತಾ
ನಾನು ನಿನಗೆ ಕೊಟ್ಟ ಗಡುವು ಮುಗಿದಿದೆ. ನಮ್ಮಿಬ್ಬರ ಒಪ್ಪಂದದ ಪ್ರಕಾರ ಆರು ತಿಂಗಳಿನಲ್ಲಿ ನೀನು ಮನೆಯವರನ್ನು ಮೆಚ್ಚಿಸಬೇಕಿತ್ತು. ಆಧೃಏ ಈಗ ನೀನು ಸೋತಿದ್ದೀಯಾ. ಊರ್ಮಿಳಾ, ಲಕ್ಷ್ಮಣ್ ಕೂಡ ನಿನ್ನ ಮೇಲೆ ಉರಿದು ಬೀಳುತ್ತಿದ್ದಾರೆ. ನಮ್ಮ ಯಾರ ಮನಸನ್ನೂ ನೀನು ಗೆದ್ದಿಲ್ಲ. ಈಗ ನೀನು ಮನೆಯಿಂದ ಹೊರಗೆ ಹೋಗಬೇಕು ಅದಕ್ಕೆ ತಯಾರಾಗು ಎಂದು ಹೇಳುತ್ತಾಳೆ. ಇದರಿಂದ ಸತ್ಯಳಿಗೆ ದಿಕ್ಕೇ ತೋಚುವುದಿಲ್ಲ.


Click it and Unblock the Notifications











