For Quick Alerts
  ALLOW NOTIFICATIONS  
  For Daily Alerts

  ಎಲ್ಲರ ಬಳಿ ಕ್ಷಮೆಯಾಚಿಸಿದ ಸತ್ಯ: ಪಶ್ಚಾತ್ತಾಪ ಪಡದ ಕೀರ್ತನಾ..?

  By ಪ್ರಿಯಾ ದೊರೆ
  |

  'ಸತ್ಯ' ಧಾರಾವಾಹಿಯಲ್ಲಿ ಒಂದು ಕಡೆ ಬಾಲನ ಬಣ್ಣ ಬಯಲಾಗುವ ಸಮಯ ಸಮೀಪಿಸುತ್ತಿದೆ. ದಿವ್ಯಾ ಮನೆಯವರ ಎದುರಿಗೆ ಬಾಲ ಪುರಾಣ ಬಯಲಾಗುವ ಎಲ್ಲಾ ಸಾಧ್ಯತೆಗೂ ಇದ್ದು, ಹಾಗೇನಾದರೂ ಆದರೆ ದಿವ್ಯಾ ಪರಿಸ್ಥಿತಿ ಹೇಗೆ ಎಂಬುದೇ ಅರ್ಥವಾಗುತ್ತಿಲ್ಲ.

  ಇತ್ತ ಕೀರ್ತನಾ ಹೇಗಾದರೂ ಮಾಡಿ ಸತ್ಯಳನ್ನು ಮನೆಯಿಂದ ಹೊರಗಟ್ಟಬೇಕು ಎಂದು ಪ್ಲ್ಯಾನ್ ಮೇಲೆ ಪ್ಲ್ಯಾನ್ ಮಾಡುತ್ತಿದ್ದಾಳೆ. ಆದರೆ, ಕೀರ್ತನಾಗೆ ಎಲ್ಲವೂ ಉಲ್ಟಾ ಹೊಡೆಯುತ್ತಿದೆ. ಸುಹಾಸ್ ಮಾಡಿದ ಒಂದು ತಪ್ಪಿನಿಂದ ದೊಡ್ಡ ಸಮಸ್ಯೆ ಎದುರಾಗಿದೆ.

  ಅರ್ಧಾಂಗಿ: ಆಫೀಸ್‌ನಲ್ಲಿ ಅದಿತಿ.. ಮನೆಯಲ್ಲಿ ಪ್ರಣತಿ.. ಎರಡು ಕಡೆ ನಡೆಯಲ್ಲ ಸೌಭಾಗ್ಯ ಪ್ಲ್ಯಾನ್..!ಅರ್ಧಾಂಗಿ: ಆಫೀಸ್‌ನಲ್ಲಿ ಅದಿತಿ.. ಮನೆಯಲ್ಲಿ ಪ್ರಣತಿ.. ಎರಡು ಕಡೆ ನಡೆಯಲ್ಲ ಸೌಭಾಗ್ಯ ಪ್ಲ್ಯಾನ್..!

  ಕಂಪನಿಯ ನೌಕರರಿಗೆ ಕೊಡಬೇಕಿದ್ದ ಬೋನಸ್ ಹಣವನ್ನು ಸುಹಾಸ್ ಬಾಲನಿಗೆ ಕೊಟ್ಟಿದ್ದಾನೆ. ಇದು ಈಗ ಮನೆಯಲ್ಲಿ ಗೊತ್ತಾಗಿದ್ದು, ಸುಹಾಸ್ ಮನೆಯಿಂದ ಹೊರ ಹೋಗುವ ಪರಿಸ್ಥಿತಿಗೆ ಬಂದು ನಿಂತಿದ್ದಾನೆ. ಇದರಿಂದ ಕೀರ್ತನಾ ಅವಮಾನಕ್ಕೊಳಗಾಗಿದ್ದಾಳೆ.

  ಪರಿಸ್ಥಿತಿಯನ್ನು ತಿಳಿಗೊಳಿಸಿದ ಸತ್ಯ

  ಪರಿಸ್ಥಿತಿಯನ್ನು ತಿಳಿಗೊಳಿಸಿದ ಸತ್ಯ

  ರಾಮಚಂದ್ರ ರಾಯರು, ಸುಹಾಸ್‌ಗೆ ನೌಕರರ ಎದುರಿಗೆ ಕ್ಷಮೆ ಕೇಳುವಂತೆ ಹೇಳುತ್ತಾರೆ. ಹಾಗಾಗಿ ಸುಹಾಸ್ ಮತ್ತು ರಾಯರು ಮನೆಯಿಂದ ಹೊರಗೆ ಬರುತ್ತಾರೆ. ಇದೇ ವೇಳೆಗೆ ಬರುವ ಸತ್ಯ, ತನ್ನಿಂದ ತಪ್ಪಾಗಿದೆ. ಇನ್ನು ಮುಂದೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ನೌಕರರಿಗೆ ಹೇಳುತ್ತಾಳೆ. ತಪ್ಪಾಗಿದ್ದಕ್ಕೆ ಕ್ಷಮೆ ಇರಲಿ ಎಂದು ಕೂಡ ಕೇಳುತ್ತಾಳೆ. ಆದರೆ, ನೌಕರರು ಸತ್ಯ ಮಾತುಗಳನ್ನು ನಂಬುವುದಿಲ್ಲ. ಆಗ ಸತ್ಯ ನಿಧಾನವಾಗಿ ಕೆಲ ವಿಚಾರಗಳ ಬಗ್ಗೆ ಮಾತನಾಡುತ್ತಾಳೆ. ಆಗ ನೌಕರರು ಸತ್ಯ ಮಾತನ್ನು ಕೇಳಿ, ಸತ್ಯಳನ್ನು ಹೊಗಳಿ ಅಲ್ಲಿಂದ ಹೊರಡುತ್ತಾರೆ.

  ಸೀತಾಗೆ ಬುದ್ಧಿ ಹೇಳಿದ ರಾಯರು

  ಸೀತಾಗೆ ಬುದ್ಧಿ ಹೇಳಿದ ರಾಯರು

  ಇನ್ನು ಪರಿಸ್ಥಿತಿ ತಿಳಿಯಾದ ಮೇಲೆ ರಾಮಚಂದ್ರ ರಾಯರು, ಸೀತಾ ಬಳಿ ಸತ್ಯ ವಿಚಾರವಾಗಿ ಮಾತನಾಡಲು ಮುಂದಾಗುತ್ತಾರೆ. ಆದರೆ ಸೀತಾ, ಸತ್ಯ ಮೇಲೆ ಯಾವುದೇ ಭರವಸೆ ಇಲ್ಲದವಳಂತೆ ನಿಷ್ಠರವಾಗಿ ಮಾತನಾಡುತ್ತಾಳೆ. ಇದರಿಂದ ರಾಮಚಂದ್ರ ರಾಯರು ಬೇಸರ ಮಾಡಿಕೊಳ್ಳುತ್ತಾರೆ. ಸೀತಾಗೆ ರಾಯರು ಬುದ್ಧಿ ಹೇಳುತ್ತಾರೆ. ಇವತ್ತು ಸತ್ಯ ಇದ್ದಿದ್ದಕ್ಕೆ ನಮ್ಮ ಮನೆಯ ಮರ್ಯಾದೆ ಉಳಿದಿದೆ. ಅವಳ ಬಗ್ಗೆ ಮತ್ತೆ ಕೆಟ್ಟದಾಗಿ ನನ್ನ ಎದುರು ಮಾತನಾಡಬೇಡ ಎಂದು ಹೇಳುತ್ತಾರೆ. ಅದಕ್ಕೆ ಸೀತಾ ನಿಮಗೆ ನಿಮ್ಮ ಸೊಸೆಯೇ ಹೆಚ್ಚು. ನನ್ನ ಮಾತು ಅರ್ಥವಾಗುವುದಿಲ್ಲ ಎಂದು ಹೇಳುತ್ತಾಳೆ.

  ಸುಹಾಸ್ ಕಪಾಳಕ್ಕೆ ಹೊಡೆದ ಕೀರ್ತನಾ

  ಸುಹಾಸ್ ಕಪಾಳಕ್ಕೆ ಹೊಡೆದ ಕೀರ್ತನಾ

  ಕೀರ್ತನಾಗೆ ಈಗ ನಡೆದ ಘಟನೆಯ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ಆದರೆ, ಸತ್ಯ ಎದುರು ತಲೆ ತಗ್ಗಿಸುವಂತಾಯ್ತಲ್ಲ ಎಂಬುದೇ ಯೋಚನೆ. ಈ ವೇಳೆ ಕೀರ್ತನಾಳನ್ನು ಸಮಾಧಾನ ಮಾಡಲು ಬಂದ ಸುಹಾಸ್ ಗೆ ಕಪಾಳಮೋಕ್ಷ ಸಿಗುತ್ತದೆ. ಕೀರ್ತನಾ ಸುಹಾಸ್‌ಗೆ ಬೈಯುತ್ತಾಳೆ. ನಿನ್ನಿಂದಾಗಿ ಆ ಸತ್ಯ ಮುಂದೆ ಅವಮಾನ ಆಯ್ತು. ಯಾವುದೇ ಕೆಲಸ ಮಾಡುವ ಮೊದಲು ನನಗೆ ಹೇಳಿ ಮಾಡು ಅಂತ ಎಷ್ಟು ಸಲ ಹೇಳಿದ್ದೀನಿ. ನಿನ್ನಿಂದಾಗಿ ನಾನು ಇವತ್ತು ಸತ್ಯ ಎದುರು ತಲೆ ತಗ್ಗಿಸುವಂತಾಯ್ತು ಎಂದು ಬೈಯುತ್ತಾಳೆ. ಸುಹಾಸ್‌ಗೆ ಪರಿಸ್ಥಿತಿಯ ಗಂಭೀರತೆ ಸ್ವಲ್ಪವೂ ಇರುವುದಿಲ್ಲ. ಮುಂದೆ ಕೀರ್ತನಾ, ಸತ್ಯ ಮೇಲೆ ಮತ್ಯಾವ ಬಾಣ ಹೂಡುತ್ತಾಳೋ ಗೊತ್ತಿಲ್ಲ.

  ಸತ್ಯಳನ್ನು ಮೆಚ್ಚಿಕೊಂಡ ಕಾರ್ತಿಕ್

  ಸತ್ಯಳನ್ನು ಮೆಚ್ಚಿಕೊಂಡ ಕಾರ್ತಿಕ್

  ಇನ್ನು ಸತ್ಯ ಮಾಡಿದ ಕೆಲಸದಿಂದ ಕಾರ್ತಿಕ್ ತುಂಬಾ ಖುಷಿಯಾಗಿದ್ದಾನೆ. ಸತ್ಯಳಿಗೆ ಏನನ್ನಾದರೂ ಹೇಳಬೇಕೆಂದು ಅವಳ ಕೈ ಹಿಡಿದುಕೊಂಡಿದ್ದಾನೆ. ಇದೇ ವೇಳೆ ಕೆಲ ಸಮಯ ರೊಮ್ಯಾಂಟಿಕ್ ಆಗಿದ್ದು, ಸತ್ಯ ಕೂಡ ಕಾರ್ತಿಕ್ ನಡವಳಿಕೆಗೆ ಫಿದಾ ಆಗಿದ್ದಾಳೆ. ಇನ್ನು ಕಾರ್ತಿಕ್ ಸತ್ಯಗೆ ಏನೋ ಹೇಳಲು ಮುಂದಾಗಿದ್ದಾನೆ. ಇದೇ ವೇಳೆಗೆ ಸತ್ಯಳನ್ನು ರಾಯರು ಕರೆದ ಕಾರಣ ಕಾರ್ತಿಕ್ ಹೇಳುವುದನ್ನು ಕೇಳಲು ಆಗಿಲ್ಲ. ಅದರಿಂದ ಸತ್ಯ ಬೇಸರ ಮಾಡಿಕೊಂಡಿದ್ದಾಳೆ. ಮುಂದೆ ಸತ್ಯ ಮೇಲೆ ಆಫೀಸ್ ಜವಾಬ್ದಾರಿ ಬೀಳಬಹುದಾ..?

  English summary
  sathya serial 11th november Episode Written Updatekeerthana is least bothered about the problems. But she worried about sathya success.
  Friday, November 11, 2022, 19:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X