Sathya: ರಾಕಿಗೆ ಹೊಡೆಸಿದ್ದು ಕೀರ್ತನಾ ಎಂದು ತಿಳಿದ ಸತ್ಯ
'ಸತ್ಯ' ಧಾರಾವಾಹಿಯಲ್ಲಿ ಗಿರಿಜಮ್ಮ ಹಾಗೂ ಜಾನಕಿ ಕಾಣಿಸಿಕೊಂಡು ಬಹಳ ದಿನಗಳಾಯ್ತು. ಇಬ್ಬರು ಮಕ್ಕಳ ಜೀವನ ಸೆಟಲ್ ಆಯ್ತು ಎಂದು ಮಾಯವಾಗಿರಬೇಕು ಎಂದುಕೊಳ್ಳುವಷ್ಟರಲ್ಲೇ ಪ್ರತ್ಯಕ್ಷವಾಗಿದ್ದಾರೆ. ಇಬ್ಬರೂ ಕೂಡ ಪಾರ್ಕ್ ನಲ್ಲಿ ಕುಳಿತು ಕಡಲೆಕಾಯಿ ತಿನ್ನುತ್ತಾ ಟೈಂ ಪಾಸ್ ಮಾಡಿದ್ದಾರೆ. ಈ ವೇಳೆ ಇಬ್ಬರೂ ಸತ್ಯ ಹಾಗೂ ಹುಡುಗರ ಬಗ್ಗೆ ಮಾತನಾಡಿದ್ದಾರೆ.
ಸತ್ಯ ಜೀವನ ಅಂತೂ ಇಂತೂ ಸೆಟಲ್ ಆಯ್ತು. ಅವಳನ್ನು ಸೀತಮ್ಮ ಒಪ್ಪಿಕೊಂಡರೆ ಇನ್ನೇನು ಸಮಸ್ಯೆ ಇಲ್ಲ. ಇನ್ನು ಸತ್ಯ ನನ್ನನ್ನು ಮುತ್ತಜ್ಜಿ ಮಾಡಿದರೆ, ಇನ್ನೂ ಖುಷಿ ಅಂತ ಗಿರಿಜಮ್ಮ ಹೇಳಿದ್ದಾಳೆ.

ಇತ್ತ ಸತ್ಯ ರಾಕಿಗೆ ಹೊಡೆಸಿರುವುದಕ್ಕೆ ಗರಂ ಆಗಿದ್ದಾಳೆ. ಲಕ್ಷ್ಮಣ್‌ನನ್ನು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದಾಳೆ. ಲಕ್ಷ್ಮಣ್ ತನ್ನ ಮಗಳ ಬಗ್ಗೆ ಕಾಳಜಿ ಇದ್ದಿದ್ದರಿಂದ ಹೀಗೆ ಮಾಡಬೇಕಾಯ್ತು ಎಂದು ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾನೆ. ಇದೇ ವೇಳೆಯಲ್ಲಿ ರಿತು, ಕಾರ್ತಿಕ್‌ಗೆ ಫೋನ್ ಮಾಡಿ ಮನೆಗೆ ಕರೆಸಿದ್ದಾಳೆ. ಕಾರ್ತಿಕ್, ಸತ್ಯಳಿಗೆ ಸಮಾಧಾನ ಹೇಳಲು ಹೊರಟಾಗ ಸತ್ಯ ಇದು ನನ್ನ ಲಕ್ಷ್ಮಣ್ ಅವರ ನಡುವಿನ ಮಾತು ನೀವ್ಯಾರು ಬರಬೇಡಿ ಎಂದು ಹೇಳುತ್ತಾಳೆ. ಸೀತಾಳಿಗೂ ವಾರ್ನಿಂಗ್ ಕೊಡುತ್ತಾಳೆ.
ಈ ವೇಳೆಗೆ ರಾಕೇಶ್ ಬರುತ್ತಾನೆ. ಆಗ ಸತ್ಯ ನೋಡಿ, ನಾನು ಸುಳ್ಳು ಹೇಳಿದ್ನಾ..? ರಾಕಿ ಭವಿಷ್ಯನೇ ಹಾಳಾಗಿದೆ ಎಂದು ಹೇಳುತ್ತಾಳೆ. ಲಕ್ಷ್ಮಣ್‌ಗೆ ರಾಕೇಶ್‌ನನ್ನು ನೋಡಿ ಶಾಕ್ ಆಗುತ್ತದೆ. ಲಕ್ಷ್ಮಣ್ ತಾನು ಬೇಕಂತ ಹೊಡೆಸಿಲ್ಲ. ಹುಡುಗರಿಗೆ ಗದರಿಸೋದಕ್ಕೆ ಹೇಳಿದ ಅಷ್ಟೇ. ಆದರೆ, ಹೀಗೆಲ್ಲಾ ನಾನು ಮಾಡುವುದಕ್ಕೆ ಹೇಳಿಲ್ಲ ಎಂದು ಹೇಳುತ್ತಾರೆ. ಸತ್ಯ ತನ್ನ ವಾದವನ್ನು ಮುಂದುವರೆಸಿದಾಗ ಕೀರ್ತನಾ ಥರ್ಡ್ ಕ್ಲಾಸ್ ಜನಗಳ ಬುದ್ಧಿನೇ ಇಷ್ಟು ಎಂದು ಹೀಯಾಳಿಸಲು ಮುಂದಾಗುತ್ತಾಳೆ.
ಆಗ ಸತ್ಯ ರಾಕಿಗೆ ಹೊಡೆದ ಹುಡುಗನನ್ನು ಕರೆಸಿ ಯಾರು ಹೊಡೆಸಿದ್ದು ಹೇಳು ಎಂದು ಕೇಳುತ್ತಾಳೆ. ಆಗ ಕೀರ್ತನಾಗೆ ಗಾಬರಿಯಾಗುತ್ತದೆ. ಆತ ಲಕ್ಷ್ಮಣ್ ಅವರು ಗದರಿಸಲು ಹೇಳಿದರು. ಆದರೆ, ಈ ಮೇಡಂ ಹೆಚ್ಚಿಗೆ ಹಣ ಕೊಟ್ಟು ಹೊಡೆಯಲು ಹೇಳಿದರು ಎಂದು ಹೇಳುತ್ತಾನೆ. ಆಗ ಲಕ್ಷ್ಮಣ್, ಸೀತಾ ಎಲ್ಲರಿಗೂ ಶಾಕ್ ಆಗುತ್ತದೆ. ಕೀರ್ತನಾ ಹೀಗೆ ತಗಲಾಕಿಕೊಳ್ಳುತ್ತೇನೆ ಎಂದು ಅಂದುಕೊಂಡಿರುವುದಿಲ್ಲ.

ಈ ನಡುವೆ ಬಾಲ ಊರಿನಲ್ಲಿ ಎಲ್ಲರಿಗೂ ಬಾಡೂಟದ ವ್ಯವಸ್ಥೆಯನ್ನು ಮಾಡಿರುತ್ತಾನೆ. ಅಷ್ಟೇ ಅಲ್ಲದೇ, ಹೆಂಗಸರಿಗೆ ಸೀರೆ ಹಾಗೂ 500 ರೂಪಾಯಿ ಕೊಟ್ಟಿರುತ್ತಾನೆ. ಇದರ ಫ್ಲೆಕ್ಸ್ ಅನ್ನು ನೋಡಿದ ದಿವ್ಯಾ, ಬಾಲನಿಗೆ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ನಿನಗೆ ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಬಾಲ ಎಸ್ಕೇಪ್ ಆಗಲು ಅಪ್ಪನೇ ಮಾಡಿಸುತ್ತಿರುವುದು ನನಗೆ ಗೊತ್ತಿಲ್ಲ ಎಂದು ಹೇಳುತ್ತಾನೆ. ಇದನ್ನು ದಿವ್ಯಾ ನಂಬುತ್ತಾಳೆ.
ಲಕ್ಷ್ಮಣ್ ರಾಕಿಗೆ ಹೀಗೆ ಆಗಿದ್ದಕ್ಕೆ ಸತ್ಯ ಬಳಿ ಕ್ಷೆಮೆ ಕೇಳುತ್ತಾನೆ. ಆದರೆ, ಕೀರ್ತನಾ ಸತ್ಯ ಹತ್ತಿರ ನೀವ್ಯಾಕೆ ಕ್ಷಮೆ ಕೇಳುತ್ತೀರಾ ಚಿಕ್ಕಪ್ಪ ಎನ್ನುತ್ತಾಳೆ. ಲಕ್ಷ್ಮಣ್ ನಿನ್ನಿಂದಲೇ ಇದೆಲ್ಲಾ ಆಗಿದ್ದು, ಇನ್ಯಾವತ್ತು ನನ್ನ ಹಾಗೂ ನನ್ನ ಮಗಳ ವಿಚಾರಕ್ಕೆ ಬರಬೇಡ ಎಂದು ವಾರ್ನಿಂಗ್ ಕೊಡುತ್ತಾನೆ.
ಸತ್ಯ ಕೂಡ ನಿನಗೆ ನನ್ನ ಮೇಲೆ ದ್ವೇಷ ಇದ್ದರೆ, ನೇರವಾಗಿ ಫೈಟ್ ಮಾಡು. ಅದು ಬಿಟ್ಟು ಹೀಗೆ ಚೀಪ್ ಅಗಿ ನಡೆದುಕೊಳ್ಳಬೇಡ. ಇದು ಮುಂದುವರೆದರೆ, ನಿನ್ನ ಗ್ರಹಚಾರ ಸರಿ ಇರುವುದಿಲ್ಲ ಎಂದು ಹೇಳುತ್ತಾಳೆ. ಇಷ್ಟೆಲ್ಲಾ ಆದರೂ ಕೂಡ ರಿತು ತುಟಿ ಬಿಚ್ಚದೆ, ತನಗೇನು ಸಂಬಂಧವಿಲ್ಲ ಎಂಬಂತೆ ಎಲ್ಲವನ್ನೂ ನೋಡುತ್ತಿರುತ್ತಾಳೆ.


Click it and Unblock the Notifications











