Sathya: ಸೀತಾ ಮನೆಗೆ ಬರುತ್ತಿರುವ ಸ್ಪೆಷಲ್ ಗೆಸ್ಟ್ ಯಾರು..?
ಸತ್ಯ ಧಾರಾವಾಹಿಯಲ್ಲಿ ಸತ್ಯಳಿಗೆ ಜ್ವರ ಬಂದ ಕಾರಣ ಸೀತಾ ಅವಳನ್ನು ಹುಷಾರಾಗಿ ನೋಡಿಕೊಳ್ಳುತ್ತಿರುತ್ತಾಳೆ. ಸತ್ಯಳಿಗೆ ತೊಂದರೆಯಾಗದಂತೆ ಹಗಲು ರಾತ್ರಿ ಸೇವೆ ಮಾಡುತ್ತಾಳೆ. ಮನೆಯವರು ಸೀತಾ ಸತ್ಯಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ ಎಂಬುದನ್ನು ಸ್ಪಷ್ಟ ಪಡಿಸಿಕೊಳ್ಳುತ್ತಾರೆ. ಹೊತ್ತು ಹೊತ್ತಿಗೆ ಸತ್ಯಳಿಗೆ ಮಾತ್ರೆ ಕೊಡುತ್ತಾ ಅವಳನ್ನು ಅರೆ ಘಳಿಗೆಯೂ ಬಿಟ್ಟಿರುವುದಿಲ್ಲ.
ಇನ್ನು ಸತ್ಯ ಬಗ್ಗೆ ಸೀತಾ, ಊರ್ಮಿಳಾ ಬಳಿ ಮಾತನಾಡುತ್ತಿರುತ್ತಾಳೆ. ಸತ್ಯ ನೋಡುವುದಕ್ಕೆ ಒರಟು ಆದರೆ, ಅವಳೇ ಒಳ್ಳೆಯವಳು. ದಿವ್ಯಾಳಂತೆ ಹಣಕ್ಕಾಗಿ ಆಸೆ ಪಡುವವಳಲ್ಲ ಎನ್ನುತ್ತಾಳೆ.

ಸತ್ಯ ಬಗ್ಗೆ ಕೆಲ ಬೇಸರಗಳಿವೆ. ಅದು ಸತ್ಯ ಬಾಯ್ ಕಟ್ ಹಾಗೂ ಅವಳ ಒರಟುತನ ಎಂದು ಊರ್ಮಿಳಾ ಹೇಳುತ್ತಾಳೆ. ಆಗ ಸತ್ಯ ಅಲ್ಲಿಗೆ ಬರುತ್ತಾಳೆ. ಸತ್ಯ ನಾನು ಬದಲಾಗುತ್ತೀನಿ. ಜುಟ್ಟು ಬಿಡಬೇಕು ಎಂದರೆ ಹೇಳಿ ಅಂತ ಕೇಳುತ್ತಾಳೆ. ಆಗ ಸೀತಾ ನಿನ್ನಲ್ಲಿ ಬದಲಾಗುವುದು ಏನೂ ಬೇಡ. ನೀನು ಕರೆಕ್ಟ್ ಆಗಿಯೇ ಇದ್ದೀಯಾ. ಯಾರಿಗಾಗಿಯೂ ನೀನು ಬದಲಾಗಬಾರದು. ನೀನು ಹೇಗಿದ್ದಿಯೋ ಅದೇ ಸರಿ ಎಂದು ಸೀತಾ ಹೇಳುತ್ತಾಳೆ.
ಮೌನವಾಗಿಯೇ ಒಪ್ಪಿಕೊಂಡ ಸೀತಾ
ಸೀತಾಳ ಮಾತನ್ನು ಕೇಳುತ್ತಿದ್ದಂತೆಯೇ ಊರ್ಮಿಳಾ ಹಾಗೂ ಸತ್ಯ ಇಬ್ಬರಿಗೂ ಖುಷಿಯಾಗುತ್ತದೆ. ಆಗ ಸತ್ಯ ಮತ್ತು ಊರ್ಮಿಳಾ ಹಾಗಿದ್ದರೆ, ಸತ್ಯಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದೀರಾ ಎಂದು ಸೀತಾಳಿಗೆ ಕೇಳುತ್ತಾರೆ. ಆಗ ಸೀತಾ ಮೌನವಾಗಿ ಏನನ್ನೂ ಉತ್ತರ ನೀಡದೇ ಹೋಗುತ್ತಾಳೆ. ಆಗ ಊರ್ಮಿಳಾ, ಸತ್ಯ ನಿನ್ನ ಅಕ್ಕ ಒಪ್ಪಿಕೊಂಡಾಯ್ತು ಎಂದು ಕುಣಿಯುತ್ತಾಳೆ.

ಲಕ್ಷ್ಮಣನ ಸೀಕ್ರೆಟ್ ಮಗನ ಭೇಟಿ
ಇತ್ತ ರಾಮಚಂದ್ರ ರಾಯರು ಮನೆಗೆ ಹೋಗುವಾಗ ಮಧ್ಯದಲ್ಲಿ ಕಾರು ಕೆಟ್ಟು ನಿಲ್ಲುತ್ತದೆ. ಆಗ ರಾಯರು ಪಕ್ಕದಲ್ಲಿದ್ದ ಪಾರ್ಕ್‌ಗೆ ಹೋಗುತ್ತಾರೆ. ಪಾರ್ಕ್‌ನಲ್ಲಿ ಒಬ್ಬರೇ ಇದ್ದಾಗ ಉಸಿರಾಟದ ತೊಂದರೆ ಆಗುತ್ತದೆ. ಆಗ ತಕ್ಷಣಕ್ಕೆ ಬರುವ ಹುಡುಗ ಏನಾಯ್ತು ಎಂದು ಮೂಕ ಭಾಷೆಯಲ್ಲಿ ಮಾತನಾಡಿಸುತ್ತಾನೆ. ಆಗ ರಾಯರು ಕಾರ್ ಬಳಿ ಹೋಗಿ ಡ್ರೈವರ್ ಅನ್ನು ಕರೆದುಕೊಂಡು ಬರಲು ತಿಳಿಸುತ್ತಾನೆ. ಹುಡುಗ ಹೋಗಿ ಡ್ರೈವರ್ ಜೊತೆಗೆ ಬಂದ ಮೇಲೆ ಔಷಧಿ ನೀಡಿ ಸರಿ ಮಾಡುತ್ತಾರೆ. ಆ ಹುಡುಗ ಬೇರೆ ಯಾರೂ ಅಲ್ಲ ಲಕ್ಷ್ಮಣ ಯಾರಿಗೂ ತಿಳಿಯದಂತೆ ಎರಡನೇ ಮದುವೆಯಾಗಿದ್ದು, ಅವರ ಮಗನೇ ಈ ಹುಡುಗನಾಗಿರುತ್ತಾನೆ.
ಸತ್ಯ ಮನೆಗೆ ಹೊರಟ ಜಾನಕಿ, ಗಿರಿಜಮ್ಮ
ಇನ್ನು ಜಾನಕಿ ಮತ್ತು ಗಿರಿಜಮ್ಮ ಇಬ್ಬರೂ ಕೂಡ ಸತ್ಯಳನ್ನು ನೋಡಲು ಅವರ ಮನೆಗೆ ಹೋಗಬೇಕು ಎಂದು ಅಂದುಕೊಳ್ಳುತ್ತಾರೆ. ಈ ಬಗ್ಗೆ ಕೇಳಲು ಜಾನಕಿ, ಸೀತಾಳಿಗೆ ಫೋನ್ ಕೂಡ ಮಾಡುತ್ತಾರೆ. ಸೀತಾ, ಸತ್ಯ ಆರಾಮಾಗಿದ್ದಾಳೆ. ನೀವು ಬನ್ನಿ. ಬಂದು ಇಲ್ಲೇ ಇದ್ದು ಹೋಗಿ ಎಂದು ಕೂಡ ಹೇಳುತ್ತಾರೆ. ಅಲ್ಲದೇ, ಸತ್ಯಗೆ ಹೇಳದೆಯೇ ಬನ್ನಿ ಎಂದು ಕರೆಯುತ್ತಾಳೆ.
ಖುಷಿಯಾಗಿರುವ ಸೀತಾ
ಸೀತಾ, ಸತ್ಯ ತಾಯಿ ಹಾಗೂ ಅವರ ಅಜ್ಜಿ ಬರುತ್ತಿರುವುದಕ್ಕೆ ಬಹಳ ಖುಷಿಯಾಗಿರುತ್ತಾರೆ. ಮನೆಯನ್ನೆಲ್ಲಾ ಕ್ಲೀನ್ ಮಾಡಿಸಿ, ಗೆಸ್ಟ್ ರೂಮ್ ಅನ್ನು ಸ್ವಚ್ಛವಾಗಿಡಲು ಹೇಳುತ್ತಾರೆ. ಅಲ್ಲದೇ, ಊರ್ಮಿಳಾಗೆ ಹಬ್ಬದ ಅಡುಗೆ ಮಾಡಿ. ನನಗೆ ಬಹಳ ಬೇಕಾದವರು ಮನೆಗೆ ಬರುತ್ತಿದ್ದಾರೆ ಎಂದು ಸಡಗರ ಸಂಭ್ರಮದಿಂದ ಓಡಾಡುತ್ತಿರುತ್ತಾಳೆ. ಊರ್ಮಿಳಾಗೆ ಯಾರು ಅಕ್ಕನಿಗೆ ಬೇಕಾಗಿರುವ ಅಂತಹ ಸ್ಪೆಷಲ್ ಗೆಸ್ಟ್ ಎಂಬುದು ತಿಳಿಯದೇ ಸ್ವಲ್ಪ ಹೊತ್ತು ಯೋಚಿಸುತ್ತಾಳೆ. ಆದರೂ ಅದು ಯಾರು ಎಂಬುದು ತಿಳಿಯುವುದಿಲ್ಲ.


Click it and Unblock the Notifications











