Sathya Serial: ಮನೆಯ ಸಮಸ್ಯೆಯನ್ನು ಬಗೆ ಹರಿಸಲು ಮುಂದಾದ ಮಾವ- ಸೊಸೆ
ಸತ್ಯ ಧಾರಾವಾಹಿಯಲ್ಲಿ ಕ್ಲೈಂಟ್ ಅನ್ನು ಕಾಣಬೇಕಿದೆ ಎಂದು ಸುಳ್ಳು ಹೇಳಿದ ಲಕ್ಷ್ಮಣ ಹೇಳಿ ಪಾರ್ಕ್‌ನಲ್ಲಿ ಪದ್ಮಳ ಜೊತೆಗೆ ಮಾತನಾಡುತ್ತಿರುತ್ತಾನೆ. ಇದನ್ನು ಅಕಸ್ಮಾತ್ ಆಗಿ ರಾಯರು ನೋಡುತ್ತಾರೆ. ಪದ್ಮ ಹಣ ಪಡೆಯುವುದನ್ನು ಕೂಡ ಗಮನಿಸುತ್ತಾರೆ. ಈ ವಿಚಾರ ಸತ್ಯ ಬಳಿ ಕೇಳಬೇಕು ಎಂದು ರಾಯರು ಮಾತನಾಡಿಸುತ್ತಾರೆ.
ಸತ್ಯಳಿಗೆ ಲಕ್ಷ್ಮಣನ ವಿಚಾರ ಸಂಪೂರ್ಣವಾಗಿ ಗೊತ್ತಿರುತ್ತದೆ. ಹೀಗಾಗಿ ರಾಯರು ಕೇಳಿದಾಗ ಸತ್ಯ ಸುಳ್ಳು ಹೇಳಲಾಗದೇ ಸತ್ಯವನ್ನು ಹೇಳುತ್ತಾಳೆ. ಅವರಿಬ್ಬರು ಭೇಟಿಯಾಗಿದ್ದು, ದೇವಸ್ಥಾನದಲ್ಲಿ ಮಗನ ತುಲಾಭಾರ ಮಾಡಿಸಿದ್ದು, ಪದ್ಮಳಿಗೆ ಲಕ್ಷ್ಮಣ ಆಗಾಗ ಹಣ ಕೊಡುವುದು. ಮನೆಯಲ್ಲಿ ಸುಳ್ಳು ಹೇಳಿ, ಆಫೀಸ್ ನೆಪ ಹೇಳಿ ಹೋಗುವುದು. ಎಲ್ಲವನ್ನು ಸತ್ಯ ಹೇಳುತ್ತಾಳೆ.

ರಾಯರು ಕೋಟೆ ಮನೆ ಮರಿಯಾದಿ ಏನಾಗುತ್ತದೋ ನನ್ನ ತಮ್ಮ ಹೀಗೆಲ್ಲಾ ಮಾಡುತ್ತಾನೆ ಎಂದು ನಾನು ಎಂದಿಗೂ ತಿಳಿದಿರಲಿಲ್ಲ. ಊರ್ಮಿಳಾ ಬಹಳ ಒಳ್ಳೆಯ ಹುಡುಗಿ. ಆಕೆಗೆ ಮೋಸ ಮಾಡಲು ಲಕ್ಷ್ಮಣನಿಗೆ ಹೇಗಾದರೂ ಮನಸಾಯಿತೋ ಎಂದು ತಮ್ಮ ಧುಃಖವನ್ನು ಹೇಳಿಕೊಳ್ಳುತ್ತಾರೆ.
ಮಾವನಿಗೆ ಸತ್ಯ ಹೇಳಿದ ಸೊಸೆ
ರಾಯರು ಬೇಸರ ಮಾಡಿಕೊಂಡಿದ್ದನ್ನು ನೋಡಿದ ಸತ್ಯಾಳಿಗೂ ನೋವಾಗುತ್ತದೆ. ಈ ವಿಚಾರ ಮನೆಯಲ್ಲಿ ಎಲ್ಲರಿಗೂ ಗೊತ್ತಾದಾಗ ಪರಿಸ್ಥಿತಿ ಹೇಗಿರುತ್ತದೋ? ಎಂದು ಹೆದರಿಕೊಳ್ಳುತ್ತಾಳೆ. ಇಬ್ಬರೂ ಈ ಸಮಸ್ಯೆಯನ್ನು ಹೇಗಾದರೂ ಸರಿ ಮಾಡಬೇಕು ಎಂದು ತೀರ್ಮಾನ ಮಾಡುತ್ತಾರೆ.
ಬಿಸಿನೆಸ್ ಮಾಡಲು ಬಾಲ ಆಲೋಚನೆ
ಇತ್ತ ಬಾಲ ಎಷ್ಟು ದಿನ ಎಂದು ಮೂಟೆ ಹೊತ್ತು ಜೀವನ ನಡೆಸುವುದು ಎಂದು ಆಲೋಚಿಸಿ ಸ್ವಂತ ಉದ್ಯಮ ಶುರು ಮಾಡಲು ಯೋಜನೆ ರೂಪಿಸಿದ್ದಾನೆ. ಇದಕ್ಕಾಗಿ ಎಷ್ಟು ಖರ್ಚಾಗಬಹುದು ಎಂದು ಪುಸ್ತಕದಲ್ಲಿ ಲೆಕ್ಕ ಬರೆಯುತ್ತಿರುತ್ತಾನೆ. ಇದೇನು ಎಂದು ಅರ್ಥ ಮಾಡಿಕೊಳ್ಳದ ದಿವ್ಯಾ ಬೇಕಂತಲೇ ಬಂದು ಏನಿದು? ಯಾಕೆ ಈ ಲೆಕ್ಕ ಎಲ್ಲಾ? ಎಂದು ಪ್ರಶ್ನಿಸುತ್ತಾಳೆ. ಬಾಲ ಬಿಸಿನೆಸ್ ಮಾಡುವುದರ ಬಗ್ಗೆ ಹೇಳಿದ್ದಕ್ಕೆ, ಮತ್ತೆ ಮತ್ತೆ ಬಾಲನಿಗೆ ನಿನ್ನ ಯೋಗ್ಯತೆ ಇಷ್ಟೇ ಎಂದು ಹೇಳಿ ಕೋಪದಲ್ಲಿ ಮಾತನಾಡುತ್ತಾಳೆ. ದಿವ್ಯಾಳ ಪ್ರತಿ ಮಾತೂ ಅವಮಾನಿಸುವಂತಿರುತ್ತದೆ. ಇದು ಪದೇ ಪದೇ ಬಾಲನಿಗೆ ಬೇಸರ ಮಾಡುತ್ತಿರುತ್ತದೆ.

ಪದ್ಮ ಮನೆಗೆ ಹೊರಟ ರಾಯರು
ರಾಯರು ಹಾಗೂ ಸತ್ಯ ಇಬ್ಬರೂ ಪದ್ಮಳಿಗೆ ಹಣದ ಆಸೆ ಇರಬೇಕು. ಅದಕ್ಕೆ ಲಕ್ಷ್ಮಣನ ಹಿಂದೆ ಬಿದ್ದಿದ್ದಾಳೆ ಎಂದು ಭಾವಿಸುತ್ತಾರೆ. ಹಾಗಾಗಿ ರಾಯರು ಹಣವನ್ನು ನೀಡಿ, ಲಕ್ಷ್ಮಣನ ಸಹವಾಸವನ್ನು ಮರೆತುಬಿಡು ಎಂದು ಹೇಳಬೇಕು ಎಂದು ಇಬ್ಬರೂ ತೀರ್ಮಾನಿಸುತ್ತಾರೆ. ರಾಯರು ಹಣವನ್ನು ತೆಗೆದುಕೊಂಡು ಹೊರಟಿರುತ್ತಾರೆ. ಒಬ್ಬರೇ ಹೋಗುವುದು ಸರಿಯಲ್ಲ ಎಂದು ಭಾವಿಸುವ ರಾಯರು, ಸತ್ಯಳನ್ನು ಕೂಡ ಜೊತೆಗೆ ಕರೆದುಕೊಂಡು ಹೋಗಲು ಮುಂದಾಗುತ್ತಾರೆ.
ಹಣ ಕೊಟ್ಟರೆ ಸಮಸ್ಯೆ ಬಗೆ ಹರಿಯುತ್ತಾ..?
ಲಕ್ಷ್ಮಣ ತಾನು ಮಾಡಿದ ತಪ್ಪಿನ ಅರಿವಾಗಿದ್ದು, ಮನೆಯಲ್ಲಿ ಈ ಸತ್ಯ ಗೊತ್ತಾದರೆ ಹೇಗೆ ಎಂದು ಭಯಗೊಂಡಿರುತ್ತಾನೆ. ಮನೆಯಲ್ಲಿ ಸತ್ಯ ತಿಳಿಸುವುದು ಹೇಗೆ ಎಂದು ಯೋಚಿಸುತ್ತಿರುತ್ತಾನೆ. ಆದರೆ, ಲಕ್ಷ್ಮಣ ತಿಳಿಸುವ ಮುನ್ನವೇ ಸತ್ಯ ಗೊತ್ತಾಗಿದ್ದು, ಈಗ ರಾಯರು ನೀಡುವ ಹಣವನ್ನು ತೆಗೆದುಕೊಂಡು ಪದ್ಮ ದೂರ ಹೋಗುತ್ತಾಳಾ? ಇಲ್ಲ ಕೋಟೆ ಮನೆಗೆ ದೊಡ್ಡ ಸಮಸ್ಯೆ ಆಗಿ ಕಾಣುತ್ತಾಳೋ? ಎಂಬ ಆತಂಕ ವೀಕ್ಷಕರನ್ನು ಕಾಡುತ್ತಿದೆ. ಇದ್ಯಾವುದೂ ಆಗದೇ, ಈಗಾಗಲೇ ಸತ್ಯಳಿಗೆ ವಿಲನ್ ಆಗಿರುವ ಕೀರ್ತನಾ ಹಾಗೂ ದಿವ್ಯಾ ಜೊತೆಗೆ ಪದ್ಮಾ ಕೂಡ ಸೇರಿಕೊಳ್ಳುತ್ತಾಳಾ? ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











