Sathya: ಟಿಟ್ ಫಾರ್ ಟ್ಯಾಟ್: ಸತ್ಯ ಮನೆಗೆ ಬಂದ ದಿವ್ಯಾ.. ಕೀರ್ತನಾಗೆ ಹೆಚ್ಚಿದ ಆತಂಕ

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ರಾಕಿ ಹಾಗೂ ರಿತು ಪ್ರೀತಿಯಿಂದ ಉಂಟಾದ ಗಲಾಟೆ ಈಗ ಸುಖಾಂತ್ಯ ಕಂಡಿದೆ. ಆದರೆ ಪ್ರೀತಿಸಿ, ಹಣಕ್ಕೆ ಆಸೆ ಪಟ್ಟು ಬಂದ ದಿವ್ಯಾಳ ಬದುಕು ಚೆಲ್ಲಾಪಿಲ್ಲಿಯಾಗಿದೆ. ಬಾಲ ಆಗರ್ಭ ಶ್ರೀಮಂತ. ಅವನ ಬಳಿ ಕೋಟಿಗಟ್ಟಲೆ ಹಣವಿದೆ. ಕಾರ್ತಿಕ್‌ಗಿಂತ ಬಾಲ ಬೆಸ್ಟ್ ಎಂದು ದಿವ್ಯಾ ಮದುವೆ ಆಗಿದ್ದಳು. ಆದರೆ ಎಲ್ಲಾ ಉಲ್ಟಾ ಆಗಿದೆ.

ಕಾರ್ತಿಕ್ ಕೂಡ ಶ್ರೀಮಂತನಾಗಿದ್ದರೂ ಅವರ ಮನೆಯಲ್ಲಿ ಸಂಪ್ರದಾಯಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ತಿಳಿದ ದಿವ್ಯಾ, ಕಾರ್ತಿಕ್‌ನನ್ನು ಬೇಡ ಎಂದು ನಿರ್ಧರಿಸಿದ್ದಳು. ಬಾಲನನ್ನು ಮದುವೆಯಾಗಿ ಹಳ್ಳಿಯಲ್ಲಿ ಜೀವನ ನಡೆಸುತ್ತಿದ್ದಳು. ಆತ ಹೇಳಿರುವುದೆಲ್ಲಾ ಸತ್ಯ ಎಂದು ತಿಳಿದಿದ್ದ ದಿವ್ಯಾಳಿಗೆ ಈಗ ಸತ್ಯದ ಅರಿವಾಗಿದೆ. ಹೀಗಾಗಿ ಬಾಲನಿಂದ ದೂರಾಗಿದ್ದಾಳೆ.

Sathya Serial 13th June episode written update

ಬಾಲನನ್ನು ಬಿಟ್ಟು ದಿವ್ಯಾ ತವರು ಮನೆಯನ್ನು ಸೇರಿಕೊಂಡಿದ್ದಾಳೆ. ದಿವ್ಯಾಳ ಪ್ರೀತಿಯನ್ನು ಬಿಟ್ಟಿರಲಾರದೇ, ಬಾಲ ಅತ್ತೆಯ ಮನೆಗೆ ಬಂದಿದ್ದಾನೆ. ಅಳಿಯನಿಗೆ ಜಾನಕಿ ಹಾಗೂ ಗಿರಿಜಮ್ಮ ಸಪೋರ್ಟ್ ಮಾಡುತ್ತಿದ್ದಾರೆ. ದಿವ್ಯಾಗೆ ಈಗ ಸತ್ಯ ತನಗಿಂತ ಚೆನ್ನಾಗಿದ್ದಾಳೆ ಎಂಬ ಹೊಟ್ಟೆ ಉರಿಯುತ್ತಿದೆ. ಇದರೊಂದಿಗೆ ಅಮ್ಮನ ಮನೆಯಲ್ಲಿ ಆರಾಮವಾಗಿ ಇದ್ದಾಳೆ. ಬಾಲ ಮನೆಗೆ ಬಂದಿರುವುದಕ್ಕೆ ಇರಿಟೇಟ್ ಕೂಡ ಮಾಡಿಕೊಂಡಿದ್ದಾಳೆ. ಎಲ್ಲಿ ಹೋದರು ಬಾಲ ನನ್ನನ್ನು ಬಿಡುತ್ತಿಲ್ಲ ಎಂಬ ಬೇಸರವಿದೆ.

ರೆಡಿಯಾಗಿ ಆಚೆ ಹೊರಟ ದಿವ್ಯಾ

ಬಾಲನನ್ನು ನಂಬಿ ಮೋಸ ಹೋಗಿದ್ದಕ್ಕೆ ಕೋಪವೂ ಇದೆ. ಮಾತು ಮಾತಲ್ಲಿ ದಿವ್ಯಾ, ಬಾಲನನ್ನು ಚುಚ್ಚಿ ಮಾತನಾಡಿಸುತ್ತಿದ್ದಾಳೆ. ಇನ್ನು ಮನೆಯಲ್ಲಿ ಭೀಮನ ಅಮವಾಸೆಗೆ ಬಾಲನೂ ಇಲ್ಲೇ ಇರುವುದರಿಂದ ದಿವ್ಯಾಳಿಗೆ ಪಾದ ಪೂಜೆ ಮಾಡಲು ಹೇಳಿದ್ದಾರೆ. ದಿವ್ಯಾ ಮಾಡುವುದಿಲ್ಲ ಎಂದು ಹಠ ಮಾಡಿದ್ದಕ್ಕೆ ಜಾನಕಿ ಗದರಿಸಿದ್ದಾಳೆ. ಬಾಲ ಕೆಲಸಕ್ಕೆ ಹೋಗುವ ಬದಲು ಮನೆಯಲ್ಲೇ ಇದ್ದಾನೆ. ಇನ್ನು ಜಾನಕಿ ಹಾಗೂ ಗಿರಿಜಮ್ಮ ಇಬ್ಬರೂ ದಿವ್ಯಾಳಿಗೆ ಬುದ್ಧಿ ಹೇಳುವಾಗೆಲ್ಲಾ ಸತ್ಯಳನ್ನೇ ಉದಾಹರಣೆಯಾಗಿ ಹೇಳುತ್ತಿದ್ದಾರೆ. ಇದರಿಂದ ದಿವ್ಯಾ ಸಿಕ್ಕಾಪಟ್ಟೆ ಇರಿಟೇಟ್ ಮಾಡಿಕೊಂಡಿದ್ದಾಳೆ.

Sathya Serial 13th June episode written update

ಬೆಳಗ್ಗೆ ಬೆಳಗ್ಗೆ ಎದ್ದು ರೆಡಿಯಾಗಿದ್ದಾಳೆ. ಬಾಲ ನಾನೂ ಜೊತೆಗೆ ಬರುತ್ತೇನೆ ಎಂದು ಕೇಳುತ್ತಾನೆ. ಆದರೆ, ದಿವ್ಯಾ ಅದಕ್ಕೂ ಬೈಯುತ್ತಾಳೆ. ನಾನೇನೋ ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದೇನೆ. ಅಡ್ಡ ಬಾಯಿ ಹಾಕಬೇಡ. ಮನೆಯಲ್ಲೇ ಬಿದ್ದಿರು ಎಂದು ಹೇಳಿ ಹೊರಡುತ್ತಾಳೆ.

ಶಾಂತವಾಗಿರುವ ಸತ್ಯ ಮನೆ

ಇತ್ತ ಸತ್ಯ ಮನೆಯಲ್ಲಿ ಈಗ ಎಲ್ಲವೂ ಆರಾಮಾಗಿದೆ. ಸೀತಾಳಲ್ಲಿ ಕೋಪ ಇಲ್ಲದಿದ್ದರೂ ಸೊಸೆ ಸತ್ಯ ಬಳಿ ಬೆರೆಯಲು ಆಗದೇ ಒದ್ದಾಡುತ್ತಿದ್ದಾಳೆ. ಕೀರ್ತನಾ, ಸತ್ಯಳಿಗಾಗಿ ಏನಾದರೂ ಪ್ಲಾನ್ ಮಾಡುವುದರಲ್ಲಿ ಸಮಯ ಕಳೆಯುತ್ತಿದ್ದಾಳೆ. ಇನ್ನುಳಿದವರೆಲ್ಲಾ ಖುಷಿಯಾಗಿ ಇದ್ದಾರೆ. ಮತ್ತೆ ಮೊದಲಿನಂತೆ ಎಲ್ಲರೂ ಮನೆಯಲ್ಲಿ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದಾರೆ. ಸತ್ಯ ಕೂಡ ಖುಷಿಯಿಂದ ಊಟವನ್ನು ಬಡಿಸಿದ್ದಾಳೆ. ಇದೇ ವೇಳೆಗೆ ಸತ್ಯ ಮನೆಗೆ ದಿವ್ಯಾ ಎಂಟ್ರಿ ಕೊಟ್ಟಿದ್ದಾಳೆ.

ತಂಗಿಯ ನೆಮ್ಮದಿ ಹಾಳು ಮಾಡುತ್ತಾಳಾ..?

ತಾನು ಸುಖವಾಗಿದ್ದ ಮನೆಯಲ್ಲಿ ಸತ್ಯ ಇದ್ದಾಳೆ. ನಾನು ಮಾಡಿಕೊಂಡ ಸಣ್ಣ ಎಡವಟ್ಟಿನಿಂದ ಈಗ ಸತ್ಯ ಈ ಅರಮನೆಯಲ್ಲಿ ಮೆರೆಯುತ್ತಿದ್ದಾಳೆ ಎಂಬ ಹೊಟ್ಟೆ ಉರಿಯಿಂದ ದಿವ್ಯಾ, ಈಗ ಸತ್ಯ ಮನೆಗೆ ಬಂದಿದ್ದಾಳೆ. ಆದರೆ ದಿವ್ಯಾಳ ಪ್ಲಾನ್ ಏನು ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ. ದಿವ್ಯಾ ಬಂದಿದ್ದನ್ನು ನೋಡಿ ಕಾರ್ತಿಕ್ ಇರಿಟೇಟ್ ಮಾಡಿಕೊಂಡಿದ್ದಾನೆ. ಸೀತಾ ಕೋಪದಿಂದ ಸ್ನೇಹಿತರ ಮನೆಗೆ ಹೊರಟಿದ್ದಾಳೆ.

ಕೀರ್ತನಾಳಿಗೆ ಆತಂಕ

ಸತ್ಯ ಮಾತ್ರ ಅಕ್ಕನನ್ನು ನೋಡಿ ಖುಷಿಯಾಗಿದ್ದು, ರಾಮಚಂದ್ರ ರಾಯರು ದಿವ್ಯಾಳಿಗೆ ಊಟ ಬಡಿಸಲು ಹೇಳುತ್ತಾರೆ. ದಿವ್ಯಾ ಅಂತೂ ಸತ್ಯ ಮನೆಗೆ ಬರಲು ದೊಡ್ಡ ಕಾರಣವಿದ್ದು, ಅದೇನು ಎಂಬುದು ಇನ್ನು ಗೊತ್ತಾಗಿಲ್ಲ. ಕೀರ್ತನಾ ಮಾತ್ರ ದಿವ್ಯಾ ಓಡಿ ಹೋಗಲು ಸಹಾಯ ಮಾಡಿದ್ದ ಸತ್ಯವನ್ನು ಹೇಳುತ್ತಾಳಾ ಎಂದು ಆತಂಕ ಪಟ್ಟಿದ್ದಾಳೆ.

More from Filmibeat

English summary
Sathya Serial 13th June episode written update. here is detials about Divya is worried about her failure in life. And she planned to disturb sathya's life. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X