Sathya: ದಿವ್ಯಾಳ ಗ್ರಹಚಾರ ಬಿಡಿಸಿ ವಾರ್ನಿಂಗ್ ಕೊಟ್ಟ ಬಾಲ
ಸತ್ಯ ಧಾರಾವಾಹಿಯಲ್ಲಿ ಲಕ್ಷ್ಮಣ್ ಮತ್ತು ಊರ್ಮಿಳಾ ದಾಂಪತ್ಯ ಜೀವನ ಈಗ ಸತ್ಯಳಿಗೆ ತಲೆನೋವನ್ನು ತಂದಿದೆ. ಲಕ್ಷ್ಮಣನ ಮತ್ತೊಂದು ಸಂಬಂಧ ಮನೆಗೆ ಸಮಸ್ಯೆ ತರಬಾರದು ಎಂಬುದು ಸತ್ಯ ಆಲೋಚನೆ.
ಲಕ್ಷ್ಮಣಗೆ ಮತ್ತೊಂದು ಸಂಬಂಧ ಇದೆ ಎಂಬುದು ಸತ್ಯಳಿಗೆ ತಿಳಿದಾಗಿನಿಂದಲೂ ಸತ್ಯ ಮಾತಿನ ವರಸೆ ಹಾಗೂ ಅವಳ ಆಲೋಚನೆಗಳು ಎಲ್ಲವೂ ಬದಲಾಗಿದೆ.
ಊರ್ಮಿಳ ಅತ್ತೆಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಸತ್ಯ, ಲಕ್ಷ್ಮಣ ಚಿಕ್ಕಮಾವನನ್ನು ಸರಿ ದಾರಿಗೆ ತರಲು ಏನು ಮಾಡುವುದು ಎಂದು ಹಗಲು-ರಾತ್ರಿ ಯೋಚಿಸುತ್ತಿದ್ದಾಳೆ.

ಸತ್ಯ ಬಗ್ಗೆ ಮನೆಯವರಲ್ಲಿ ಆತಂಕ
ಲಕ್ಷ್ಮಣ ಭಾವ ಮನೆಯಿಂದ ಎಲ್ಲಿಗೂ ಹೋಗದಂತೆ ಸತ್ಯ ಎಚ್ಚರವಹಿಸುತ್ತಿದ್ದಾಳೆ. ಲಕ್ಷ್ಮಣ ಎಲ್ಲಾದರೂ ಹೊರಟ್ಟಿದ್ದಾರೆ ಎಂದು ತಿಳಿದರೆ, ಎರಡನೇ ಹೆಂಡತಿ ಮಗುವನ್ನು ಭೇಟಿಯಾಗಬಹುದು ಎಂದು ಭಾವಿಸುವ ಸತ್ಯ, ಪ್ರತಿ ಬಾರಿ ಲಕ್ಷ್ಮಣ್ ದಾರಿಗೆ ಅಡ್ಡ ಬರುತ್ತಿದ್ದಾಳೆ. ಅದರ ಜೊತೆಗೆ ಮನೆಯಲ್ಲಿ ಮಾತನಾಡುವಾಗೆಲ್ಲಾ ಯಾರನ್ನೋ ಉದ್ದೇಶಿಸಿ ಮಾತನಾಡುವಂತೆ ವ್ಯಂಗ್ಯ ಮಾಡುತ್ತಿದ್ದಾಳೆ. ಇದೆಲ್ಲಾ, ಊರ್ಮಿಳಾಗೆ ಅನುಮಾನ ತರಿಸಿದೆ. ಸತ್ಯ ಯಾಕೆ ಹೀಗೆ ನಡೆದುಕೊಳ್ಳುತ್ತಿದ್ದಾಳೆ ಎಂಬುದು ಗೊತ್ತಿಲ್ಲ. ಇನ್ನು ಲಕ್ಷ್ಮಣ್‌ಗೆ ತನ್ನ ವಿಚಾರ ಗೊತ್ತಾಗಿದೆಯಾ? ಎಂಬ ಅನುಮಾನ ಬಂದರೂ ಸುಮ್ಮನಿದ್ದಾನೆ. ಆದರೆ, ಸೀತಾ ಹಾಗೂ ರಾಮಚಂದ್ರ ಅವರಿಗೆ ಸತ್ಯ ಮೇಲಿನ ಗಮನ ಹೆಚ್ಚಾಗಿದೆ. ಯಾಕೆ ಸತ್ಯ ಹೀಗೆಲ್ಲಾ ನಡೆದುಕೊಳ್ಳುತ್ತಿದ್ದಾಳೆ ಎಂದು ಯೋಚಿಸುತ್ತಿದ್ದಾರೆ. ಆದರೆ, ಸತ್ಯ ಏನೂ ಆಗಿಲ್ಲ ಎಂದು ಸತ್ಯ ಮರೆಮಾಚಲು ಯತ್ನಿಸುತ್ತಿದ್ದಾಳೆ.
ಬಾಲ ಹಣ ವಾಪಸ್ ಮಾಡುತ್ತಾನಾ?
ಇತ್ತ ಬಾಲ ಕಂಪ್ಲೀಟ್ ಆಗಿ ಒಳ್ಳೆಯವನಾಗಿದ್ದಾನೆ. ಆದರೆ, ದಿವ್ಯಾಳಿಗೆ ತಾನು ಒಳ್ಳೆಯವಳು ಆಗಬೇಕು ಎಂಬುವುದಕ್ಕಿಂತಲೂ ತನಗೆ ಜೀವನ ಎಂಜಾಯ್ ಮಾಡಲು ಹಣ ಬೇಕು. ಎಲ್ಲರ ಎದುರು ತನಗೇನು ಕಮ್ಮಿ ಇಲ್ಲ ಎಂಬಂತೆ ಮೆರೆಯಬೇಕು ಎಂದು ದಿನ ದಿನಕ್ಕೂ ಅತಿಯಾಸೆಗೆ ಒಳಗಾಗುತ್ತಿದ್ದಾಳೆ. ಅದಾಗಲೇ ಹಣದ ಮೇಲಿನ ಆಸೆಗೆ ದಿವ್ಯಾ ಅಕ್ಕ-ಪಕ್ಕದವರ ಬಳಿ ಹಣ ಪಡೆದು ಮೋಸ ಮಾಡಿದ್ದಾಳೆ. ಇದರಿಂದ ಮನೆಯವರೆಲ್ಲಾ ಅವಮಾನ ಅನುಭವಿಸುವಂತಾಗಿದೆ. ಆದರೆ, ಈಗ ಬಾಲನಿಗೆ ದಾರಿಯಲ್ಲಿ ಸಿಕ್ಕ ಹಣ ವಾಪಸ್ ಮಾಡಬೇಕು ಎಂದು ತಂದು ಮನೆಯಲ್ಲಿಟ್ಟಿದ್ದಾನೆ. ಆ ಹಣದ ಮೇಲೂ ದಿವ್ಯಾ ಕಣ್ಣು ಬಿದ್ದಿದೆ.

ಸಂಕಷ್ಟಕ್ಕೆ ಸಿಲುಕಿದ ಬಾಲ
ಬಾಲ ಕೂಲಿ ಕೆಲಸ ಮಾಡುತ್ತಿದ್ದು, ಅವರ ಮ್ಯಾನೇಜರ್ ಹಣ ಕಳೆದುಕೊಂಡಿದ್ದಾರೆ. ಅದೇ ಹಣ ಬಾಲನ ಕೈಗೆ ಸಿಕ್ಕಿದೆ. ಈ ಬಗ್ಗೆ ಬಾಲ ಮ್ಯಾನೇಜರ್ ಬಳಿ ಹೇಳಿ ಮನೆಗೆ ಬನ್ನಿ ನಿಮಗೆ ಹಣ ಕೊಡುತ್ತೇನೆ ಎಂದು ಕರೆದುಕೊಂಡು ಬಂದಿದ್ದಾನೆ. ಆದರೆ, ಮನೆಯಲ್ಲಿ ಐದು ಲಕ್ಷ ಇರಬೇಕಾದ ಜಾಗದಲ್ಲಿ ಕೇವಲ ಎರಡೂವರೆ ಲಕ್ಷ ಹಣವಿದೆ. ಇದರಿಂದ ಬಾಲ ಗಾಬರಿಯಾಗಿದ್ದಾನೆ. ಮ್ಯಾನೇಜರ್ ಬಳಿ ಸಮಸ್ಯೆ ಹೇಳಲಾಗದೇ ಒದ್ದಾಡುತ್ತಿದ್ದಾನೆ. ಇದೇ ಸಂದರ್ಭದಲ್ಲಿ ದಿವ್ಯಾ ಮನೆಗೆ ಬರುತ್ತಾಳೆ. ಅದೂ ಕೂಡ ಶಾಪಿಂಗ್ ಮಾಡಿಕೊಂಡು ಖುಷಿ ಖುಷಿಯಾಗಿರುತ್ತಾಳೆ.
ದಿವ್ಯಾಳಿಗೆ ಬಾಲನ ವಾರ್ನಿಂಗ್
ಮನೆಗೆ ಬಂದವಳೇ ಎಲ್ಲರನ್ನೂ ಮಾತನಾಡಿಸುತ್ತಾಳೆ. ಶಾಪಿಂಗ್ ಮಾಡದೇ ಬಹಳ ದಿನವಾಗಿತ್ತು ಎಂದು ಹೇಳುತ್ತಾಳೆ. ಆಗ ಬಾಲನಿಗೆ ಉಳಿದ ಹಣವನ್ನು ದಿವ್ಯಾನೇ ಖರ್ಚು ಮಾಡಿದ್ದಾಳೆ. ಎಂಬುದು ಗೊತ್ತಾಗಿದೆ. ಇದರಿಂದ ಬಾಳನಿಗೆ ಕೋಪ ಬರುತ್ತದೆ. ದಿವ್ಯಾ ಕಪಾಳಕ್ಕೆ ಹೊಡೆದು ಬೈಯುತ್ತಾನೆ. ಮ್ಯಾನೇಜರ್‌ಗೆ ಎರಡೂವರೆ ಲಕ್ಷ ಕೊಟ್ಟು, ಉಳಿದ ಹಣವನ್ನು ನಾಳೆ ಸಂಜೆ ಕೊಡುವುದಾಗಿ ಹೇಳಿ ಕಳಿಸುತ್ತಾನೆ. ದಿವ್ಯಾಳಿಗೆ ಬೈದು ಬುದ್ಧಿ ಹೇಳುತ್ತಾನೆ. ಅದು ಏನು ಮಾಡುತ್ತೀಯೋ ಗೊತ್ತಿಲ್ಲ ನಾಳೆ ಸಂಜೆಯೊಳಗೆ ಎರಡೂವರೆ ಲಕ್ಷ ಹಣವನ್ನು ತಂದು ಕೊಡಬೇಕು ಎಂದು ವಾರ್ನಿಂಗ್ ಮಾಡುತ್ತಾನೆ.


Click it and Unblock the Notifications











