Sathya: ರಾಕಿ ಪ್ರೀತಿ ಒಪ್ಪಿಕೊಂಡ ಖುಷಿಯಲ್ಲಿ ರಿತು
'ಸತ್ಯ' ಧಾರಾವಾಹಿಯಲ್ಲಿ ಕಳೆದ ಹತ್ತು ದಿನಗಳಿಂದ ದಿವ್ಯಾ ಹಾಗೂ ಸತ್ಯಳ ಹನಿಮೂನ್ ಕಥೆಯನ್ನೇ ರಬ್ಬರ್ ಎಳೆದಂತೆ ಎಳೆಯಲಾಗುತ್ತಿದೆ. ಧಾರಾವಾಹಿ ಕಥೆಯೇ ಇಲ್ಲದೇ, ಮುಂದುವರಿದಂತಿದೆ.
ಬಾಲ, ಸುಳ್ಳುಗಳನ್ನು ಮುಂದುವರೆಸಿದ್ದು, ದಿವ್ಯಾ ಅನುಮಾನ ಬಂದರೂ ಪದೇ ಪದೇ ನಂಬುತ್ತಿದ್ದಾಳೆ. ಕಾರ್ತಿಕ್‌ಗೆ ಸತ್ಯ ಮೇಲೆ ಪ್ರೀತಿ ಇದ್ದರೂ ಕೂಡ ಇಲ್ಲ ಎಂಬಂತೆ ನಟಿಸುತ್ತಲೇ ಇದ್ದಾನೆ.
ಸೀತಾಳಿಗೆ ಸತ್ಯ ಕೆಟ್ಟವಳಲ್ಲ ಎಂಬುದು ಅರ್ಥವಾಗುತ್ತಿದ್ದರೂ ಮಗಳ ಮಾತನ್ನು ಕೇಳಿಸಿಕೊಂಡು ಸುಮ್ಮನೆ ಸೊಸೆ ಮೇಲೆ ದ್ವೇಷ ಕಾರುತ್ತಲೇ ಇದ್ದಾಳೆ. ತೋರಿಸಿದ ಕಥೆಯನ್ನೇ ತೋರಿಸುತ್ತಿದ್ದು, 'ಸತ್ಯ' ಧಾರಾವಾಹಿಗೆ ಆದಷ್ಟು ಬೇಗ ಟ್ವಿಸ್ಟ್ ಸಿಗಬೇಕಿದೆ.

ಪ್ರೀತಿ ಹೇಳಿಕೊಂಡ ರಾಕೇಶ್
ಇತ್ತ ರಿತು, ರಾಕೇಶ್ ಪ್ರೀತಿಯನ್ನು ಪಡೆಯುವ ಸಲುವಾಗಿ ಹರಸಾಹಸ ಪಡುತ್ತಿದ್ದಾಳೆ. ಕಷ್ಟಪಟ್ಟು ಬೀದಿ ಬೀದಿ ಅಲೆದು ಬುಕ್ ಸೇಲ್ ಮಾಡಿದ್ದಾಳೆ. ಅದರಿಂದ ಬಂದ ಮೊದಲ ಸಂಬಳದಿಂದ ರಾಕಿಗೆ ಉಡುಗೊರೆಯನ್ನು ತೆಗೆದುಕೊಂಡಿದ್ದಾಳೆ. ಅದನ್ನು ಕೊಡಬೇಕು ಎಂದು ಹೋದಾಗ ರಾಕಿ ಬೈದಿದ್ದಾನೆ. ರಾಕಿ ಮಾತನಾಡಿಸುವವರೆಗೆ ಇಲ್ಲಿಂದ ಹೋಗಲ್ಲ ಎಂದು ಹಠ ಮಾಡಿದ ರಿತು. ರಾಕಿ ಮನೆಯ ಬಾಗಿಲಲ್ಲೇ ಕಾದು ಮಳೆಯಲ್ಲಿ ನೆಂದಿದ್ದಾಳೆ. ರಿತು ಹಠವನ್ನು ನೋಡಿ ರಾಕೇಶ್ ಸೋತಿದ್ದಾನೆ. ರಿತುಳನ್ನು ಒಪ್ಪಿಕೊಂಡ ರಾಕಿ, ತನ್ನ ಮನದಲ್ಲಿದ್ದ ಪ್ರೀತಿಯನ್ನು ಸಹ ಹೇಳಿಕೊಂಡಿದ್ದಾನೆ. ಇದರಿಂದ ರಿತುಗೆ ಫುಲ್ ಖುಷಿಯಾಗಿದೆ.

ಮಗಳನ್ನು ಬೈದ ಊರ್ಮಿಳಾ
ರಿತು ಕೆಲಸ ಮಾಡುವುದನ್ನು ನೋಡಿದವರು ಸೀತಾಗೆ ಫೋನ್ ಮಾಡಿ ಹೇಳಿದ್ದಾರೆ. ಸೀತಾ ಇದರಿಂದ ಕೋಪ ಮಾಡಿಕೊಂಡಿದ್ದಾಳೆ. ಒಂದು ಇಡೀ ದಿನ ರಿತು ಮನೆಗೆ ಬರದ ಕಾರಣ ಊರ್ಮಿಳಾ ಕೂಡ ಗಾಬರಿಯಾಗಿದ್ದಾಳೆ. ರಿತು ಮನೆಗೆ ಬರುತ್ತಿದ್ದಂತೆ ಪ್ರಶ್ನೆ ಮಾಡಿದ್ದಾಳೆ. ಊರ್ಮಿಳಾ, ಸೀತಾ ಬೈದರೂ ಕೂಡ ರಿತು ಖುಷಿ ಖುಷಿಯಾಗಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಇದೇ ವೇಳೆಯಲ್ಲಿ ಊರ್ಮಿಳಾ, ರಿತು ಕೆಲಸಕ್ಕೆ ಹೋಗುತ್ತಿರುವುದು ತಿಳಿದು ಬೈಯುತ್ತಾಳೆ. ಆದರೆ, ರಿತು ತನ್ನ ಕಾಲ ಮೇಲೆ ತಾನು ನಿಲ್ಲುವ ಸಲುವಾಗಿ ಈ ಕೆಲಸ ಮಾಡಿದ್ದಾಗಿ ಹೇಳುತ್ತಾಳೆ.

ಎಂಜಾಯ್ ಮಾಡುತ್ತಿರುವ ಜೋಡಿಗಳು
ಇತ್ತ ದಿವ್ಯಾ ಹಾಗೂ ಬಾಲ, ಕಾರ್ತಿಕ್ ಮತ್ತು ಸತ್ಯ ಬೀಚ್ ದಡದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ದಿವ್ಯಾ ಆಗಾಗ ಸತ್ಯಳ ಹೊಟ್ಟೆ ಉರಿಸಲು ಬೇಕಂತಲೇ ಬಾಲನ ಜೊತೆಗೆ ರೊಮ್ಯಾಂಟಿಕ್ ಆಗಿ ನಡೆದುಕೊಳ್ಳುತ್ತಿದ್ದಾಳೆ. , ದಿವ್ಯಾ ಹೊಟ್ಟೆ ಉರಿಸಲು ಸತ್ಯ ಬಳಿ ನಾಟಕ ಮಾಡುತ್ತಿದ್ದಾನೆ. ಮಂಜನಿಗೆ ಫೋನ್ ಮಾಡಿದ ಕಾರ್ತಿಕ್‌ಗೆ ಬುದ್ಧಿ ಹೇಳುತ್ತಾನೆ. ಸತ್ಯ ಜೊತೆಗೆ ಪ್ರೀತಿಯಿಂದ ಜೊತೆಗಿರು. ನಿಮ್ಮಿಬ್ಬರಿಗೆ ಸಮಯ ಕೊಡು ಎಂದು ಮಂಜ ಬುದ್ಧಿ ಹೇಳುತ್ತಾನೆ.

ಸೀತಾ ಕೋಪಕ್ಕೆ ತುಪ್ಪ ಸುರಿದ ಕೀರ್ತನಾ
ಅಷ್ಟೇ ಅಲ್ಲದೇ, ರಿತು ತಾನು ಕೆಲಸಕ್ಕೆ ಹೋಗುತ್ತಿರುವ ವಿಚಾರವನ್ನು ಸತ್ಯ ಬಳಿ ಹೇಳಿರುವುದಾಗಿ ಸುಳ್ಳು ಹೇಳುತ್ತಾಳೆ. ಈ ಬಗ್ಗೆ ಸೀತಾ ಆಲೋಚಿಸುತ್ತಾಳೆ. ಸತ್ಯಗೆ ಎಲ್ಲಾ ಗೊತ್ತಿದ್ದರೂ ಸುಮ್ಮನಿದ್ದಾಳಾ ಎಂದು ಅಂದುಕೊಳ್ಳುತ್ತಾಳೆ. ಅಷ್ಟರಲ್ಲಿ ಕೀರ್ತನಾ, ರಿತು ಮಾತುಗಳನ್ನು ಕೇಳಿಸಿಕೊಂಡು ಸೀತಾ ಕೋಪಕ್ಕೆ ತುಪ್ಪ ಸುರಿಯಲು ಮುಂದಾಗುತ್ತಾಳೆ. ಸತ್ಯ ಹನಿಮೂನ್‌ನಿಂದ ಬಂದ ಕೂಡಲೇ ಸೀತಾ ಕ್ಲಾಸ್ ತೆಗೆದುಕೊಳ್ಳುವುದು ಪಕ್ಕಾ ಆಗಿದೆ.


Click it and Unblock the Notifications











