ಬಹುದಿನಗಳ ಬಳಿಕ ಸತ್ಯ ದಿವ್ಯಾಳನ್ನು ನೋಡಿ ಮಾಡಿದ್ದೇನು ಗೊತ್ತಾ?

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ದಿವ್ಯಾ ಮನೆಯಿಂದ ಎಸ್ಕೇಪ್ ಆಗುತ್ತಿದ್ದಾಳೆ. ಇದೇ ವೇಳೆಗೆ ಸತ್ಯ ಮತ್ತು ಕಾರ್ತಿಕ್ ಇಬ್ಬರೂ ಮನೆಗೆ ಬಂದಿದ್ದಾರೆ. ಗಿರಿಜಮ್ಮ ಇಬ್ಬರನ್ನೂ ಬಾಗಿಲಲ್ಲೇ ನಿಲ್ಲಿಸಿ ಮಾತನಾಡಿಸುತ್ತಿರುತ್ತಾಳೆ. ಇವರನ್ನು ನೋಡಿ ದಿವ್ಯಾ ಶಾಕ್ ಆಗುತ್ತಾಳೆ.

ಅವರಿಂದ ಬಚ್ಚಿಟ್ಟು ಕೊಳ್ಳಲು ದಿವ್ಯಾ ರೂಮಿನ ಬಾಗಿಲ ಹಿಂದೆ ಹೋಗುತ್ತಾಳೆ. ನಿಮ್ಮ ಮನೆಯಲ್ಲಿ ಹಬ್ಬವೆಲ್ಲಾ ಮುಗೀತಾ ಎಂದು ಗಿರಿಜಮ್ಮ ಕೇಳುತ್ತಾಳೆ. ಅದಕ್ಕೆ ಕಾರ್ತಿಕ್ ಮುಗೀತು. ಇನ್ನೇನಿದ್ರೂ ನವರಾತ್ರಿ ಮುಗಿಸಿಕೊಂಡೇ ನಾವಿಲ್ಲಿಂದ ಹೊರಡುವುದು ಎಂದು ಹೇಳುತ್ತಾನೆ.

ಆಗ ಗಿರಿಜಮ್ಮ ಅಯ್ಯೋ ನಾನು ನೋಡಿ ಇಬ್ಬರನ್ನೂ ಅಷ್ಟೋತ್ತಿಂದ ಬಾಗಿಲಲ್ಲೇ ನಿಲ್ಲಿಸಿ ಮಾತನಾಡಿಸುತ್ತಿದ್ದೇನೆ. ಇಬ್ಬರೂ ಒಳಗೆ ಬನ್ನಿ ಎಂದು ಕರೆಯುತ್ತಾಳೆ. ಅಷ್ಟರಲ್ಲಿ ಸತ್ಯ ಹಾಗೂ ಕಾರ್ತಿಕ್ ಇಬ್ಬರೂ ದಿವ್ಯಾ ಕದ್ದು ನೋಡುತ್ತಿರುವುದನ್ನು ನೋಡುತ್ತಾರೆ.

ದಿವ್ಯಾಳನ್ನು ತಬ್ಬಿಕೊಂಡ ಸತ್ಯ

ದಿವ್ಯಾಳನ್ನು ತಬ್ಬಿಕೊಂಡ ಸತ್ಯ

ದಿವ್ಯಾಳನ್ನು ನೋಡಿದ ಕಾರ್ತಿಕ್ ಶಾಕ್ ಆಗುತ್ತಾನೆ. ಇತ್ತ ದಿವ್ಯಾ ಸತ್ಯ ಬಂದು ತನ್ನ ಕೆನ್ನೆಗೆ ಹೊಡೆದಂತೆ ಕನಸು ಕಾಣುತ್ತಾಳೆ. ಆದರೆ ಸತ್ಯ ಬಂದು ದಿವ್ಯಾಳನ್ನು ತಬ್ಬಿಕೊಳ್ಳುತ್ತಾಳೆ. ಇಷ್ಟು ದಿನ ಎಲ್ಲಿಗೆ ಹೋಗಿದ್ದೆ ಅಕ್ಕ ಎಂದು ಕೇಳುತ್ತಾಳೆ. ಅಷ್ಟೊತ್ತಿಗೆ ಜಾನಕಿ ಬಂದು ಹೊಡೆಯುವುದು ಬಿಟ್ಟು ನೀನೇನು ಸತ್ಯ ಅವಳನ್ನ ತಬ್ಬಿಕೊಳ್ಳುತ್ತಿದ್ದೀಯಾ ಎಂದು ಬೈಯುತ್ತಾಳೆ. ಆಗ ಸತ್ಯ ಸುಮ್ಮನಿರಮ್ಮ ಎಷ್ಟು ದಿನ ಆದ ಮೇಳೆ ಅಕ್ಕ ಬಂದಿದ್ದಾಳೆ ಎಂದು ಸಂತೋಷದಿಂದ ಮಾತನಾಡುತ್ತಾಳೆ. ಕಾರ್ತಿಕ್ ಶಾಕ್ ಆಗಿರುತ್ತಾನೆ. ಆಗ ಜಾನಕಿ ಕ್ಷಮಿಸಿ ಅಳಿಯಂದಿರೆ ಅವಳು ಮನೆಗೆ ಬರುವುದು ನಮಗೆ ಗೊತ್ತಿರಲಿಲ್ಲ ಎಂದು ಕ್ಷಮೆ ಕೇಳುತ್ತಾಳೆ. ಆಗ ಕಾರ್ತಿಕ್ ಯಾರು ಬಂದರೆ ನನಗೇನು ಎಂಬಂತೆ ಮಾತನಾಡುತ್ತಾನೆ. ಆ ಮಾತುಗಳನ್ನು ಕೇಳಿದ ದಿವ್ಯಾ ತಲೆನೋವು ಎಂದು ಹೇಳಿ ರೂಮಿಗೆ ಹೋಗುತ್ತಾಳೆ.

ದಿವ್ಯಾ ವಿಚಾರವಾಗಿ ಪ್ಲಾನ್ ಮಾಡಿದ ಹುಡುಗರು

ದಿವ್ಯಾ ವಿಚಾರವಾಗಿ ಪ್ಲಾನ್ ಮಾಡಿದ ಹುಡುಗರು

ಗ್ಯಾರೇಜ್ ನಲ್ಲಿ ಹುಡುಗರು ಬೇಸರದಲ್ಲಿ ಯೋಚಿಸುತ್ತಾ ಕುಳಿತಿರುತ್ತಾರೆ. ಆದರೆ ರಾಕೇಶ್ ಇನ್ನು ಸತ್ಯ ಹಾಗೂ ಕಾರ್ತಿಕ್ ಬಗ್ಗೆ ಯೋಚಿಸುವಂತಿಲ್ಲ. ಇಬ್ಬರೂ ಕೈ ಹಿಡಿದುಕೊಂಡು ಹೋಗಿದ್ದನ್ನು ನೋಡಿದರೆ, ಇಬ್ಬರೂ ಇನ್ಮುಂದೆ ಚೆನ್ನಾಗಿರುತ್ತಾರೆ ಎನಿಸುತ್ತೆ. ಇನ್ನು ಇವರಿಬ್ಬರ ಬಗ್ಗೆ ಯೋಚಿಸುವ ಹಾಗಿಲ್ಲ ಎಂದು ಹೇಳುತ್ತಿದ್ದರೆ, ಹುಡುಗರೆಲ್ಲಾ ಡಲ್ ಆಗಿರುತ್ತಾರೆ. ಯಾಕೆ ಎಂದು ರಾಕೇಶ್ ಕೇಳಿದ್ದಕ್ಕೆ, ದಿವ್ಯಾ ಬಂದಿದ್ದಾಳೆ, ಸತ್ಯ ಲೈಫ್ ನಲ್ಲಿ ಏನಾದರೂ ಎಡವಟ್ಟು ಮಾಡುತ್ತಾಳೆ ಎಂದು ಮಾತನಾಡಿಕೊಳ್ಳುತ್ತಾರೆ. ನಂತರ ಪ್ಲಾನ್ ಒಂದನ್ನು ಮಾಡುತ್ತಾರೆ.

ಕಾರ್ತಿಕ್ ಆಡಿದ ಮಾತಿನಿಂದ ಬೇಸರಿಸಿಕೊಂಡ ದಿವ್ಯಾ

ಕಾರ್ತಿಕ್ ಆಡಿದ ಮಾತಿನಿಂದ ಬೇಸರಿಸಿಕೊಂಡ ದಿವ್ಯಾ

ಇತ್ತ ದಿವ್ಯಾ ಹೊಟ್ಟೆ ಉರಿದುಕೊಳ್ಳುತ್ತಿರುತ್ತಾಳೆ. ನಾನು ಬಂದಿದ್ದೆ ಯಾಕೋ, ಆದರೆ ಇಲ್ಲಿ ನಡೆದಿದ್ದೇ ಏನೋ ಎಂದು ಒಬ್ಬಳೇ ಮಾತನಾಡಿಕೊಳ್ಳುತ್ತಿರುತ್ತಾಳೆ ಹಾಗೂ ಕದ್ದು ಸತ್ಯ ರೂಮಿಗೆ ಕಿವಿ ಕೊಡುತ್ತಾಳೆ. ಇಬ್ಬರೂ ದಿವ್ಯಾ ವಿಚಾರವಾಗಿಯೇ ಮಾತನಾಡುತ್ತಿರುತ್ತಾರೆ. ಕಾರ್ತಿಕ್ ಮೂಡ್ ಅಪ್ಸೆಟ್ ಆಗಿರುತ್ತಾನೆ. ಹಾಗಾಗಿ ಸತ್ಯ ನಾವು ಹೋಗೋಣ ಬಾ. ನಿನಗೆ ಬೇಜಾರಾದರೆ ಇಲ್ಲಿರುವುದು ಬೇಡ. ದಿವ್ಯಾ ಬಂದಿರುವುದು ನನಗೆ ಗೊತ್ತಿರಲಿಲ್ಲ ಎಂದು ಹೇಳುತ್ತಾಳೆ. ಆಗ ಕಾರ್ತಿಕ್ ಯಾವಾಗಲು ಹೋಗಿ ಬರುವ ಅಭ್ಯಾಸವಿರುವುದು ನಮಗಲ್ಲ. ಅವಳಿಗೆ ನಾವ್ಯಾಕೆ ಹೋಗಬೇಕು ಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ದಿವ್ಯ ಬೇಸರ ಮಾಡಿಕೊಳ್ಳುತ್ತಾಳೆ.

ಬಾಲನ ಬಗ್ಗೆ ತಿಳಿದರೆ ಸತ್ಯಾ ಏನು ಮಾಡಬಹುದು..?

ಬಾಲನ ಬಗ್ಗೆ ತಿಳಿದರೆ ಸತ್ಯಾ ಏನು ಮಾಡಬಹುದು..?

ದಿವ್ಯಾ ಈಗ ಜಾನಕಿ ಮನೆಗೆ ಬಂದಿದ್ದಾಳೆ. ಇದೇ ಸಮಯದಲ್ಲಿ ಸತ್ಯ ಹಾಗೂ ಕಾರ್ತಿಕ್ ಕೂಡ ತವರು ಮನೆಗೆ ಹಬ್ಬಕ್ಕೆಂದು ಬಂದಿದ್ದಾರೆ. ಸತ್ಯಗೆ ದಿವ್ಯಾಳನ್ನು ನೋಡಿ ಖುಷಿಯಾಗಿದೆ. ಆದರೆ ದಿವ್ಯಾ ಸತ್ಯಾಳನ್ನು ಕಂಡು ಹೊಟ್ಟೆ ಉರಿಕೊಳ್ಳುತ್ತಿದ್ದಾಳೆ. ಆದರೆ ಸತ್ಯ ದಿವ್ಯಾಳ ಗಂಡ ಬಾಲ ಎಂದು ತಿಳಿದರೆ ಏನು ಮಾಡುತ್ತಾಳೆ ಅನ್ನೋ ಪ್ರಶ್ನೆ ಈಗ ಎದ್ದಿದೆ. ಸೋಮವಾರದ ಸಂಚಿಕೆಯಲ್ಲಿ ಬಾಲನ ಬಗ್ಗೆ ತಿಳಿಯುವ ಸತ್ಯ ಏನು ಮಾಡುತ್ತಾಳೆ ಎಂದು ಕಾದು ನೋಡಬೇಕಿದೆ.

More from Filmibeat

English summary
Sathya and Divya face each other after a long time and Sathya felt happy and Divya felt sad
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X