Sathya: ಅತ್ತೆ ಸೊಸೆ ಲವ್ ಸ್ಟೋರಿ: ಮತ್ತೆ ಮೋಸ ಹೋಗುತ್ತಾಳಾ ದಿವ್ಯಾ?
ಸತ್ಯ ಧಾರಾವಾಹಿಯಲ್ಲಿ ಬಾಲ ಕೂಲಿ ಮಾಡಿಕೊಂಡು ಹೊಸ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆದರೆ ದಿವ್ಯಾ, ಬಾಲನಿಗೆ ಸಪೋರ್ಟ್ ಮಾಡಲು ತಯಾರಿಲ್ಲ. ದಿವ್ಯಾ, ಸತ್ಯ ಮನೆಗೆ ಹೋಗಲ್ಲ, ಅವಳ ನೆಮ್ಮದಿಯನ್ನು ಹಾಳು ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದಾಳೆ. ಕೀರ್ತನಾ ಕೂಡ ದಿವ್ಯಾಳ ಮಾತಿಗೆ ಒಪ್ಪಿಗೆ ನೀಡಿದ್ದಾಳೆ.
ದಿವ್ಯಾಗೆ ಕೀರ್ತನಾ ಕೆಲವು ಕಂಡೀಷನ್‌ಗಳನ್ನು ಹಾಕಿದ್ದಾಳೆ. ಅದರಂತೆ ದಿವ್ಯಾ ಹಣ ಕೇಳಬಾರದು, ಕೀರ್ತನಾ ಮಾತನ್ನು ಮೀರಿ ಯಾವ ಐಡಿಯಾ ಕೂಡ ಬಳಸಬಾರದು. ಇದಕ್ಕೆ ದಿವ್ಯಾ ಕೂಡ ಓಕೆ ಎಂದಿದ್ದಾಳೆ. ಬಾಲ ಕೂಲಿ ಮಾಡಿ ನಿತ್ಯ 700 ರೂಪಾಯಿಯನ್ನು ಸಂಪಾದನೆ ಮಾಡುತ್ತಿದ್ದಾನೆ. ಬಾಲ ಬದಲಾಗಿರುವುದಕ್ಕೆ ಜಾನಕಿ ಹಾಗೂ ಗಿರಿಜಮ್ಮನಿಗೆ ಬಹಳ ಖುಷಿಯಾಗಿದೆ. ಆದರೆ, ದಿವ್ಯಾ ನಡೆದುಕೊಳ್ಳುತ್ತಿರುವ ರೀತಿ ಬೇಸರವನ್ನು ತಂದಿದೆ.

ಬಾಲ ಮಾತ್ರ ತಾನಾಯ್ತು ತನ್ನ ಕೆಲಸವಾಯ್ತು ಎಂದು ಇದ್ದಾನೆ. ದಿವ್ಯಾ ದೊಡ್ಡಪ್ಪನಿಗೆ ಹಿಂದೆ ಬಾಲ ನಾಮ ಹಾಕಿದ್ದ. ಎರಡು ಕೋಟಿ ರೂಪಾಯಿ ಚೆಕ್ ಕೊಟ್ಟು ಎರಡು ಲಕ್ಷ ಮೋಸ ಮಾಡಿದ್ದ. ಆದರೆ, ಈಗ ಕೂಲಿ ಕೆಲಸ ಮಾಡುವಾಗಲೇ ಮಾವನ ಕೈಗೆ ಸಿಕ್ಕಿ ಬಿದ್ದಿದ್ದಾನೆ. ದಿವ್ಯಾಳ ದೊಡ್ಡಪ್ಪ, ಬಾಲನನ್ನು ನೋಡಿದ ಕೂಡಲೇ ತನ್ನೆಲ್ಲಾ ಕೋಪವನ್ನು ಹೊರ ಹಾಕುತ್ತಾನೆ. ಬಾಲನಿಗೆ ಬಾಯಿಗೆ ಬಂದಂತೆ ಬೈದು ಕಳಿಸುತ್ತಾನೆ.
ಅತ್ತೆ ಸೊಸೆ ಲವ್ ಸ್ಟೋರಿ
ಇತ್ತ ಸತ್ಯ ಕಾರ್ತಿಕ್ ಮನಸ್ಸನ್ನು ಗೆದ್ದಾಯ್ತು. ಈಗ ಅವಳು ಅತ್ತೆಯನ್ನು ಗೆಲ್ಲಬೇಕದೆ. ಸೀತಾಳಿಗೆ ಮಗ ಸತ್ಯಳನ್ನು ಒಪ್ಪಿಕೊಂಡಿದ್ದಾನೆ. ಇನ್ನು ತನಗೆ ಯಾವುದೇ ಬೆಲೆ ಇರುವುದಿಲ್ಲ ಎಂದು ಆತಂಕಗೊಂಡಿದ್ದಾಳೆ. ಹಾಗಾಗಿ ಹೊಟ್ಟೆ ನೋವು ಎಂದು ಸುಳ್ಳು ಹೇಳ ಮಗನನ್ನು ತನ್ನ ಬಳಯೇ ಇರಿಸಿಕೊಂಡಿದ್ದಾಳೆ. ಅಲ್ಲದೇ, ಸತ್ಯಳನ್ನು ಹತ್ತಿರವೂ ಸೇರಿಸದಂತೆ ಇಟ್ಟಿದ್ದಾಳೆ. ಈ ವಿಚಾರ ಅರ್ಥ ಮಾಡಿಕೊಂಡ ಸತ್ಯ ಇಷ್ಟು ದಿನ ಸೀತಮ್ಮ ಎಂದು ಕರೆಯುತ್ತಿದ್ದವಳು, ಈಗ ಅತ್ತೆ ಎನ್ನಲು ಶುರು ಮಾಡಿದ್ದಾಳೆ. ಅತ್ತೆಯ ಪ್ರತಿಯೊಂದು ಕೆಲಸವನ್ನೂ ತಾನೇ ಮಾಡುತ್ತಿದ್ದಾಳೆ. ಸೀತಾಳಿಗೆ ಸತ್ಯಳನ್ನು ದೂರ ಇಡುವುದು ಹೇಗೆ ಎಂಬುದೇ ಅರ್ಥವಾಗುತ್ತಿಲ್ಲ. ಅತ್ತೆಯ ಒದ್ದಾಟವನ್ನು ನೋಡಿದ ಸತ್ಯ ಇನ್ಮುಂದೆ ಈ ಮನೆಯಲ್ಲಿ ಅತ್ತೆ ಸೊಸೆಯ ಲವ್ ಸ್ಟೋರಿ ಶುರುವಾಗುತ್ತೆ ಎಂದು ಹೇಳಿದ್ದಾಳೆ.

ದಿವ್ಯಾಳಿಗೆ ಹಣದ ಹುಚ್ಚು
ಸತ್ಯ ಮನೆಗೆ ಹೋಗಿ ಅಲ್ಲಿ ಮೆರೆದಾಡಲು ತಯಾರಾಗಿದ್ದಾಳೆ. ಆದರೂ ಕೂಡ ಅವಳಿಗೆ ಹಣದ ಮೇಲಿನ ಆಸೆ ಕೊಂಚವೂ ಕಡಿಮೆಯಾಗಿಲ್ಲ. ಸತ್ಯಗಿಂತ ಹೆಚ್ಚು ಹಣ ತನ್ನ ಬಳಿ ಇರಬೇಕು ಎಂದು ಯೋಚಿಸುತ್ತಾಳೆ. ಇದಕ್ಕಾಗಿ ಬಾಲ ತನಗೆ ಕೊಟ್ಟ ಎಲ್ಲಾ ಒಡವೆಗಳನ್ನು ತೆಗೆಯುತ್ತಾಳೆ. ಇದನ್ನೆಲ್ಲಾ ಮಾರಿದರೆ, 20ಲಕ್ಷ ಬರಬಹುದು. ಆದರೆ, ಅದೂ ಸಾಲದು ಏನು ಮಾಡುವುದು ಎಂದು ಯೋಚಿಸುತ್ತಿರುತ್ತಾಳೆ.
ಒಡವೆ ಮೇಲೆ ದೊಡ್ಡಪ್ಪನ ಕಣ್ಣು
ದಿವ್ಯಾ ಒಡವೆಗಳನ್ನು ನೋಡುತ್ತಾ ಹಣಕ್ಕಾಗಿ ಏನು ಮಾಡುವುದು ಎಂದು ಒಬ್ಬಳೇ ಮಾತನಾಡಿಕೊಳ್ಳುತ್ತಿರುತ್ತಾಳೆ. ಇದನ್ನು ಗಮನಿಸಿದ ಅವರ ದೊಡ್ಡಪ್ಪ, ಬಾಲ ತನ್ನಿಂದ ಪಡೆದ ಹಣದ ಜೊತೆಗೆ ಇನ್ನಷ್ಟು ಹಣ ಗಳಿಸಬಹುದು ಎಂದು ಯೋಚಿಸಿ, ಯಾರ ಬಳಿಯೋ ಮಾತನಾಡಿದಂತೆ ಫೋನ್‌ನಲ್ಲಿ ನಾಟಕ ಮಾಡುತ್ತಾರೆ. ಐದು ದಿನದಲ್ಲಿ ಹಣ ಡಬಲ್ ಆಗುತ್ತದೆ. ಆದರೆ, ನನ್ನ ಬಳಿ ಹಣ ಇಲ್ಲವಲ್ಲ ಎಂದು ಮಾತನಾಡುತ್ತಾರೆ.
ದಿವ್ಯಾ ಮತ್ತೆ ಮೋಸ ಹೋಗ್ತಾಳಾ?
ಮೊದಲೇ ಹಣಕ್ಕಾಗಿ ಹವಣಿಸುತ್ತಿರುವ ದಿವ್ಯಾ ದೊಡ್ಡಪ್ಪನ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾಳೆ. ದಿವ್ಯಾ ತಲೆಯಲ್ಲಿ ದುರಾಸೆ ತಾಂಡವ ಆಡುತ್ತಿರುವಾಗ ದೊಡ್ಡಪ್ಪನ ಮೋಸದ ಜಾಲಕ್ಕೆ ಬೀಳುವ ಸುಳಿವು ಸಿಗುತ್ತಿದೆ. ಇನ್ನು ಚಿನ್ನಾಭರಣ ಕದ್ದ ಮೇಲೆ ಆ ಆರೋಪದ ಸಹಜವಾಗಿಯೇ ಬಾಲನ ಮೇಲೆ ಬರಲಿದೆ. ಒಟ್ನಲ್ಲಿ ದಿವ್ಯಾ ಮತ್ತೆ ಮೋಸ ಹೋಗುತ್ತಾಳಾ ಕಾದು ನೋಡಬೇಕಿದೆ.


Click it and Unblock the Notifications











