Sathya: ಸತ್ಯ ವಿರುದ್ಧ ದೊಡ್ಡ ಪ್ಲ್ಯಾನ್ ಮಾಡಿರುವ ಕೀರ್ತನಾ
'ಸತ್ಯ' ಧಾರಾವಾಹಿಯಲ್ಲಿ ರಿತು-ರಾಕಿ ಇಬ್ಬರೂ ಕೂಡ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ. ರಿತುಗೆ ರಾಕಿ ತನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದು, ಬಹಳ ಖುಷಿ ತಂದಿದೆ.
ಆದರೆ, ಸೀತಾಗೆ ರಿತು ಮೇಲೆ ಬಹಳ ಬೇಸರವಾಗಿದೆ. ಊರ್ಮಿಳಾ ಬಳಿ ಸತ್ಯವನ್ನೂ ಹೇಳಲಾಗದೆ ಒದ್ದಾಡುತ್ತಿದ್ದಾಳೆ. ಈಗ ಇದ್ದಕ್ಕಿದ್ದ ಹಾಗೆ ರಿತು ಒಂದು ರಾತ್ರಿ ಮನೆಗೆ ಬಾರದಿರುವುದು ದೊಡ್ಡ ಸಮಸ್ಯೆಗೆ ಕಾರಣವಾಗಿದೆ.
ಮಿನಿ ಹನಿಮೂನ್‌ನಲ್ಲಿ ಸತ್ಯ ಹಾಗೂ ಕಾರ್ತಿಕ್ ಎಂಜಾಯ್ ಮಾಡುತ್ತಿದ್ದಾರೆ. ಆದರೆ, ದಿವ್ಯಾ ಪದೇ ಪದೇ ಸತ್ಯಳನ್ನು ಹೀಯಾಳಿಸುತ್ತಿದ್ದು, ಇದು ಸತ್ಯಳ ಮನಸ್ಸಿಗೆ ಬೇಸರವನ್ನು ತಂದಿದೆ.

ಸುಹಾಸ್ ಮಾಡಿರುವ ಪ್ಲ್ಯಾನ್ ಏನು..?
ಕಾರ್ತಿಕ್ ಬೀಚ್‌ಗೆ ಹೋಗೋಣ ಎಂದರೆ, ಸತ್ಯ ಬೇಡ ಎಂದಿದ್ದಾಳೆ. ದಿವ್ಯಾ ಪದೇ ಪದೇ ರೇಗಿಸುತ್ತಾಳೆ. ಬೇರೆ ಎಲ್ಲಾದರೂ ಹೋಗೋಣ ಎಂದು ಕೇಳಿದ್ದಾಳೆ. ಇದರಿಂದ ಕಾರ್ತಿಕ್ ಕೂಡ ವಿಚಾರಿಸಿ, ಹತ್ತಿರದಲ್ಲೇ ಯಕ್ಷಗಾನ ನಡೆಯುತ್ತಿದೆ. ಅಲ್ಲಿಗೆ ಹೋಗೋಣ ಎಂದು ಕರೆದುಕೊಂಡು ಹೋಗುತ್ತಾನೆ. ಆದರೆ, ಸುಹಾಸ್ ಇದೇ ಅವಕಾಶವನ್ನು ಬಳಸಿಕೊಂಡು ಸತ್ಯ ಹಾಗೂ ಕಾರ್ತಿಕ್‌ಗೆ ತೊಂದರೆ ಮಾಡಲು ಮುಂದಾಗಿದ್ದಾನೆ. ಈ ವಿಚಾರವನ್ನು ಕೀರ್ತನಾಗೂ ಹೇಳಿದ್ದು, ಪ್ಲ್ಯಾನ್ ಏನು ಎಂಬುದನ್ನು ಮಾತ್ರ ರಹಸ್ಯವಾಗಿಯೇ ಇಟ್ಟಿದ್ದಾನೆ. ಸತ್ಯ ಹಾಗೂ ಕಾರ್ತಿಕ್ ಮೇಲೆ ಅಟ್ಯಾಕ್ ಆಗುತ್ತಾ ಎಂಬ ಅನುಮಾನ ಕಾಡುತ್ತಿದೆ.

ರಿತು ಬಗ್ಗೆ ಕೋಪಗೊಂಡಿರುವ ಸೀತಾ
ಸೀತಾಳಿಗೆ ರಿತು, ರಾಕೇಶ್‌ನನ್ನು ತಬ್ಬಿಕೊಂಡಿದ್ದು, ನೋಡಿದಾಗಿನಿಂದಲೂ ಬೇಸರವಿದೆ. ರಾಕೇಶ್‌ನನ್ನು ಪರಿಚಯಿಸಿದ್ದು, ಸತ್ಯ ಎಂದು ಸೀತಾ ಅವಳ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ಇನ್ನು ರಿತು, ಬುಕ್ ಸೇಲ್ ಮಾಡುವ ಕೆಲಸಕ್ಕೆ ಸೇರಿರುವುದಕ್ಕೆ ಅವಳ ಮೇಲಿನ, ಅನುಮಾನ ಬೇಸರ ದುಪ್ಪಟ್ಟಾಗಿವೆ. ಈ ಬಗ್ಗೆ ಸೀತಾ ಊರ್ಮಿಳಾ ಬಳಿ ಸತ್ಯ ಹೇಳದೇ, ಒದ್ದಾಡುತ್ತಿದ್ದಾಳೆ. ಇನ್ನು ಸತ್ಯಗೆ ರಿತು ಕೆಲಸಕ್ಕೆ ಹೋಗಿರುವುದು ಗೊತ್ತಿದ್ದರೂ ಹೇಳಿಲ್ಲ. ಬೇಕಂತಲೇ ಮನೆಯನ್ನು ಹಾಳು ಮಾಡಲು ಹೀಗೆ ಮಾಡುತ್ತಿದ್ದಾಳೆ ಎಂದು ಊರ್ಮಿಳಾ ಬಳಿ ಹೇಳಿದ್ದಾಳೆ. ಊರ್ಮಿಳಾಗೆ ಸೀತಾ ಮಾತುಗಳು ಆತಂಕವನ್ನು ಹೆಚ್ಚು ಮಾಡುತ್ತಿದೆ. ಇದೇ ವೇಳೆ, ಸತ್ಯ ಮೇಲಿನ ನಂಬಿಕೆ ಕೊಂಚವೂ ಕಡಿಮೆ ಆಗಿಲ್ಲ.

ಲಕ್ಷ್ಮಣನಿಗೆ ರಿತು ಬಗ್ಗೆ ಹೇಳಿದ ಕೀರ್ತನಾ
ಇನ್ನು ಕೀರ್ತನಾ ಇದೇ ಸಂದರ್ಭವನ್ನು ಬಳಸಿಕೊಂಡು ಸತ್ಯಗೆ ಗೇಟ್ ಪಾಸ್ ಕೊಡಲು ಬಹಳ ದೊಡ್ಡ ಪ್ಲ್ಯಾನ್ ಮಾಡಿಕೊಂಡಿದ್ದಾಳೆ. ಲಕ್ಷ್ಮಣನ ಬಳಿ ಹೋಗಿ ರಿತು ಪ್ರೀತಿಸುತ್ತಿರುವ ವಿಚಾರವನ್ನು ಹೇಳುತ್ತಾಳೆ. ಆದರೆ, ಲಕ್ಷ್ಮಣ ಮೊದಲು ನಂಬುವುದಿಲ್ಲ. ಆದರೆ, ಕೀರ್ತನಾ ಫೋಟೋವನ್ನು ತೋರಿಸುತ್ತಾಳೆ. ರಿತು, ರಾಕಿ ಅನ್ನು ತಬ್ಬಿಕೊಂಡಿರುತ್ತಾಳೆ. ಇದನ್ನು ನೋಡಿ ಲಕ್ಷ್ಮಣ ರಿತು ಮೇಲೆ ಕೋಪ ಮಾಡಿಕೊಳ್ಳುತ್ತಾಳೆ. ಆದರೆ, ಕೀರ್ತನಾ ಬೇಕಂತಲೇ ರಾಕೇಶ್‌ದೇ ತಪ್ಪು ಅವನೇ ರಿತು ತಲೆಕೆಡಿಸಿರೋದು ಎಂದು ಹೇಳುತ್ತಾಳೆ. ಈ ಮೂಲಕ ಸತ್ಯ ಮೇಲೆ ಗೂಬೆ ಕೂರಿಸುತ್ತಿದ್ದಾಳೆ.

ಸತ್ಯ-ಕಾರ್ತಕ್‌ಗೆ ಅಪಾಯ
ಇನ್ನು ಸತ್ಯ ಹಾಗೂ ಕಾರ್ತಿಕ್ ವಿರುದ್ಧ ಅಲ್ಲಿ ಸುಹಾಸ್ ಸಂಚು ರೂಪಿಸಿದ್ದಾನೆ. ಇತ್ತ ಕೀರ್ತನಾ ಸತ್ಯ ಮೇಲೆ ದೊಡ್ಡ ಕಥೆ ಕಟ್ಟಿದ್ದಾಳೆ. ಊರ್ಮಿಳಾ, ಸೀತಾ, ಲಕ್ಷ್ಮಣ ಎಲ್ಲರಿಗೂ ಸತ್ಯ ಮೇಲೆ ಬೇಸರವಾಗುವಂತೆ ಮಾಡಿದ್ದಾಳೆ. ಇದರಿಂದ ಸತ್ಯಗೆ ದೊಡ್ಡ ಸಂಕಷ್ಟ ಎದುರಾಗಿದೆ.


Click it and Unblock the Notifications











