Sathya Serial: ಸೊಸೆಯನ್ನು ಮೆಚ್ಚಿಕೊಂಡ ಸೀತಾ: ದಿವ್ಯಾಗೆ ಬಾಲ ವಾರ್ನಿಂಗ್

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ದಿವ್ಯಾ ಗ್ರಹಾಚಾರ ದಿನದಿಂದ ದಿನಕ್ಕೆ ಕೆಡುತ್ತಿದೆ. ದಿವ್ಯಾ ಇತ್ತೀಚೆಗೆ ಅಂದುಕೊಂಡಿದ್ದು, ಮಾಡುತ್ತಿರುವ ಪ್ಲ್ಯಾನ್ ಎಲ್ಲವೂ ಫ್ಲಾಪ್‌ ಆಗುತ್ತಿದೆ.

ಇತ್ತ ಕೀರ್ತನಾ ಕಥೆಯೂ ಇದೆ ಆಗಿದೆ. ಸುಮ್ಮನೇ ಬಾಯಿ ಮಾಡುವ ಕೀರ್ತನಾ ಮಾತುಗಳಿಗೆ ಸದ್ಯ ಯಾರೂ ಬೆಲೆ ಕೊಡುತ್ತಿಲ್ಲ. ದಿವ್ಯಾ ಹಾಗೂ ಕೀರ್ತನಾ ಸೇರಿಕೊಂಡು ಸತ್ಯ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ.

Sathya Serial 15th September episode written update

ದಿವ್ಯಾ ಹೇಗಾದರೂ ಮಾಡಿ ಸೀತಾ ಮನೆಗೆ ಬಂದು ಸೇರಿಕೊಳ್ಳಬೇಕು ಎಂದು ಏನೇನೋ ಪ್ಲ್ಯಾನ್ ಮಾಡಿದರೂ ಸಾಧ್ಯವಾಗಿಲ್ಲ. ಆದರೆ, ಸೀತಾ ಕೂಡ ದಿವ್ಯಾಳನ್ನು ತನ್ನ ಮನೆಗೆ ಬಿಟ್ಟುಕೊಳ್ಳುವುದಕ್ಕೆ ತಯಾರಿಲ್ಲ.

ಬೀಗರಿಗೆ ಸತ್ಕಾರ ಮಾಡಿದ ಸೀತಾ

ಸತ್ಯಳಿಗೆ ತಿಳಿಯದಂತೆ ಸೀತಾ ಬೀಗರನ್ನು ಮನೆಗೆ ಕರೆದು ಸತ್ಕರಿಸಿದ್ದಾಳೆ. ಇದರಿಂದ ಸತ್ಯಗೆ ಬಹಳ ಖುಷಿಯಾಗಿದೆ. ತನ್ನನ್ನು ಸೊಸೆ ಎಂದು ಒಪ್ಪಿಕೊಳ್ಳದ ಸೀತಾ ಈಗ ತನ್ನ ಮನೆಯವರನ್ನು ಮನೆಗೆ ಕರೆಸಿರುವುದು ಖುಷಿ ಕೊಟ್ಟಿದೆ. ಸತ್ಯ ತುಂಬಾ ಒಳ್ಳೆಯ ಹುಡುಗಿ. ಅವಳು ನನ್ನ ಮನೆಯ ಸೊಸೆಯಾಗಿ ಬಂದಿದ್ದು ನಮ್ಮ ಪುಣ್ಯ ಎಂದು ಗಿರಿಜಮ್ಮ ಹಾಗೂ ಜಾನಕಿ ಎದುರು ಸೀತಾ ಹೊಗಳಿದ್ದು ಕೇಳಿ ಸತ್ಯ ಇನ್ನಷ್ಟು ಹಿಗ್ಗಿದ್ದಾಳೆ.

Sathya Serial 15th September episode written update

ಕಾರ್ತಿಕ್ ವ್ಯಾಯಾಮ

ಸೀತಮ್ಮ ತನ್ನನ್ನು ಒಪ್ಪಿಕೊಂಡಿದ್ದು ಬಹಳ ಖುಷಿಯಾಗಿದೆ. ಇದೇ ಯೋಚಿಸುತ್ತಾ ಕುಳಿತಿದ್ದ ಸತ್ಯಳನ್ನು ಹೊರಗೆ ವಾಕಿಂಗ್‌ ಮಾಡಿ ಬರೋಣ ಬಾ ಎಂದು ಕಾರ್ತಿಕ್‌ ಕರೆಯುತ್ತಾನೆ. ಆದರೆ ಸತ್ಯ, ನಾನು ಬರೋದಿಲ್ಲ. ದಪ್ಪ ಆಗಿದೀಯಾ. ನೀನು ವಾಕಿಂಗ್‌ಗೆ ಹೋಗಬೇಕು ಎಂದು ಹೇಳುತ್ತಾಳೆ. ಈ ಮಾತು ಕೇಳಿ ಮುಜುಗರಗೊಂಡ ಕಾರ್ತಿಕ್ ವ್ಯಾಯಾಮ ಮಾಡಲು ಶುರು ಮಾಡುತ್ತಾನೆ.

ದನಿ ಎತ್ತರಿಸಿದ ಬಾಲ

ಇನ್ನು ಜಾನಕಿ ಮತ್ತು ಗಿರಿಜಮ್ಮ ಇಬ್ಬರೂ ಕೂಡ ಕೋಟೆ ಮನೆಯಿಂದ ಕುಂಕುಮಕ್ಕೆಂದು ನೀಡಿದ ಸೀರೆಯನ್ನು ನೋಡುತ್ತಿರುತ್ತಾರೆ. ರೇಷ್ಮೆ ಸೀರೆ ಕೊಟ್ಟಿದ್ದಾರೆ ಎಂದು ಸಂತಸ ಪಡುತ್ತಿರುತ್ತಾರೆ. ಆದರೆ, ದಿವ್ಯಾಳಿಗೆ ಇದು ಇಷ್ಟವಾಗುವುದಿಲ್ಲ. ತನಗೆ ಕಾಫಿ ಬೇಕು ಎಂದು ಒಂದೇ ಸಮನೆ ಕೇಳುತ್ತಿರುತ್ತಾಳೆ. ಬಾಲ ಈಗ ಮೊದಲಿನಂತೆ ಇರದೇ ಬಹಳ ಬದಲಾಗಿದ್ದಾನೆ. ದಿವ್ಯಾಳಿಗೆ ನೀನು ಕೇಳಿದಾಗ ಕಾಫಿ ಕೊಡಲು ಇದು ಹೋಟೆಲ್‌ ಅಲ್ಲ ಎಂದು ದನಿ ಎತ್ತರಿಸಿ ಮಾತನಾಡುತ್ತಾನೆ.

ದಿವ್ಯಾ ಕಥೆ ಮುಗೀತಾ..?

ದಿವ್ಯಾಳಿಗೆ ಬಾಲ ಮಾತನಾಡಿದ್ದು ಬೇಸರವಾಗುತ್ತದೆ. ಇನ್ನು ಜಾನಕಿ ಹಾಗೂ ಗಿರಿಜಮ್ಮನಿಗೆ ಸೀರೆ ಯಾವುತ್ತೂ ನೋಡೇ ಇಲ್ವಾ ಎಂದೆಲ್ಲಾ ಬೈಯುತ್ತಿರುತ್ತಾಳೆ. ದುಡ್ಡೇ ನೋಡಿಲ್ವಾ ಎಂದು ಕೇಳುತ್ತಿರುತ್ತಾಳೆ. ಅದಕ್ಕೆ ಅವರಿಬ್ಬರೂ ಯಾವಾಗಲೂ ದುಡ್ಡಿನ ಬಗ್ಗೆ ಯೋಚಿಸೋದಲ್ಲ. ಪ್ರೀತಿ ವಿಶ್ವಾಸದ ಬಗ್ಗೆಯೂ ತಿಳಿದಿರಬೇಕು ಎಂದು ಬುದ್ದಿ ಹೇಳುತ್ತಾರೆ. ಆಗ ದಿವ್ಯಾ ಜೋರು ಮಾಡುತ್ತಾಳೆ. ಬಾಲ, ದಿವ್ಯಳಿಗೆ ಬೈಯುತ್ತಾನೆ. ಇನ್ಮುಂದೆ ಇದೆಲ್ಲಾ ಇಟ್ಕೋಬೇಡ. ಮನೆಯಲ್ಲಿ ಹೇಗಿರಬೇಕು ಅನ್ನೋದನ್ನ ರೂಢಿ ಮಾಡಿಕೋ ಎಂದು ಹೇಳಿ ದಿವ್ಯಾ ಬಾಯಿ ಮುಚ್ಚಿಸುತ್ತಾನೆ. ಅಲ್ಲಿಗೆ ದಿವ್ಯಾ ಕಥೆ ಮುಗಿದಂತೆಯೇ ಅರ್ಥ.

ಅಕ್ಕನ ಬಗ್ಗೆ ಸತ್ಯ ಚಿಂತೆ

ಇನ್ನು ಸತ್ಯಳಿಗೆ ಸೀತಾ ತನ್ನನ್ನು ಒಪ್ಪಿಕೊಂಡಿರುವುದಕ್ಕೆ ಖುಷಿ ಇರುತ್ತದೆ. ಆದರೆ, ಅದರೊಂದಿಗೆ ನಿಮ್ಮ ಮನೆಯವರು ಯಾರು ಬೇಕಿದ್ದರೂ ಬರಲಿ, ಆದರೆ, ದಿವ್ಯಾ ಈ ಮನೆಗೆ ಬರಬಾರದು ಎಂದು ವಾರ್ನ್‌ ಮಾಡಿರುತ್ತಾಳೆ. ಅದನ್ನು ನೆನೆದು ಸತ್ಯ, ದಿವ್ಯಾ ನನಗೆ ಯಾವಾಗಲೂ ತಿಂದರೆ ಕೊಟ್ಟಿದ್ದಾಳೆ. ಆಗೆಲ್ಲಾ ಅಕ್ಕ ಎಂದು ಸುಮ್ಮನಿದ್ದೆ. ಆದರೆ, ಈ ಮನೆ ವಿಚಾರಕ್ಕೆ ಬಂದರೆ, ಸುಮ್ಮನೆ ಬಿಡಬಾರದು ಎಂದು ಆಲೋಚಿಸುತ್ತಿರುತ್ತಾಳೆ.

More from Filmibeat

English summary
Sathya Serial 15th September episode written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X