Sathya: ಕಾರ್ತಿಕ್‌ಗೆ ಬೈದ ಸೀತಾ: ದಿವ್ಯಾಳಲ್ಲಿ ಏಕಾಏಕಿ ಬದಲಾವಣೆ
'ಸತ್ಯ' ಧಾರಾವಾಹಿಯಲ್ಲಿ ಸೀತಾ, ಸೊಸೆಯನ್ನು ಒಪ್ಪಿಕೊಳ್ಳಲೂ ಆಗದೇ ಬೀಡಲೂ ಆಗದೇ ಒದ್ದಾಡುತ್ತಿದ್ದಾಳೆ. ಸತ್ಯ ಓದುವ ಹಂಬಲದಿಂದ ಈಗ ಹೆಚ್ಚಾಗಿ ವ್ಯಾಸಂಗಕ್ಕೆ ತನ್ನ ದಿನದ ಸಮಯವನ್ನು ಮೀಸಲಿಟ್ಟಿದ್ದಾಳೆ. ಊರ್ಮಿಳಾ, ಲಕ್ಷ್ಮಣ ಇಬ್ಬರಿಗೂ ಈಗ ಸತ್ಯ ಎಂದರೆ ಹೆಚ್ಚು ಗೌರವ, ಪ್ರೀತಿ ಶುರುವಾಗಿದೆ. ಆದರೆ, ಸೀತಾ ಪದೇ ಪದೇ ಮಗಳು ಕೀರ್ತನಾ ಮಾತನ್ನು ಕೇಳಿಕೊಂಡು ಕೆಂಡಕಾರುತ್ತಾಳೆ.
ಸತ್ಯಳಿಂದಾಗುವ ಸಣ್ಣ ಸಣ್ಣ ತಪ್ಪುಗಳು ಕೂಡ ದೊಡ್ಡದಾಗಿ ಕಾಣುತ್ತಿವೆ. ಹಾಗಾಗಿ ಪ್ರತಿಯೊಂದಕ್ಕೂ ಸತ್ಯಳ ಮೇಲೆ ಸೀತಾ ಉರಿದು ಬೀಳುತ್ತಾಳೆ. ಸತ್ಯಳಿಗೆ ಈಗ ಸೀತಮ್ಮನ ಮನಸ್ಸು ಗೆಲ್ಲುವುದೇ ದೊಡ್ಡ ಟಾಸ್ಕ್ ಆಗಿದೆ. ಇನ್ನು ಸತ್ಯ ಭೀಮನ ಅಮಾವಾಸ್ಯೆ ಮಾಡಲು ಎಲ್ಲಾ ರೀತಿಯ ತಯಾರಿಯನ್ನೂ ಮಾಡಿಕೊಂಡಿದ್ದಾಳೆ. ಕೀರ್ತನಾ ಅಡ್ಡಗಾಲು ಹಾಕಬಾರದು ಎಂದು ಅವಳನ್ನು ಬಂದು ಪೂಜೆ ಮಾಡುವಂತೆ ವಾರ್ನಿಂಗ್ ಕೊಟ್ಟಿದ್ದಾಳೆ. ಸತ್ಯ ಕೋಟೆ ಮನೆಯ ಸಂಪ್ರದಾಯವನ್ನು ಪಾಲಿಸುತ್ತಿದ್ದರು ಕೂಡ ಸೀತಾಗೆ ಸೊಸೆ ಎಂದರೆ ಸ್ವಲ್ಪ ನಿರ್ಲಕ್ಷ್ಯವೇ.

ಸತ್ಯಳಿಗೆ ಸೀತಾ ಮನೆಯ ಎಲ್ಲರ ಪರವಾಗಿ ಪೂಜೆ ಮಾಡುವಂತೆ ಹೇಳುತ್ತಾಳೆ. ಇದರಿಂದ ಕೀರ್ತನಾಗೆ ಹೊಟ್ಟೆ ಉರಿ ತಡೆದುಕೊಳ್ಳಲು ಆಗುವುದಿಲ್ಲ. ವಿಧಿಯಿಲ್ಲದೇ ಸುಮ್ಮನೆ ಪೂಜೆಯಲ್ಲಿ ಪಾಲ್ಗೊಂಡಿರುತ್ತಾಳೆ. ಇನ್ನು ಸತ್ಯ ಎಲ್ಲರ ಪರವಾಗಿ ಸೀತಾ ಮೇಲಿನ ಭಯದಿಂದಲೇ ಪೂಜೆ ಮಾಡುತ್ತಾಳೆ. ಸೀತಾ ಅಷ್ಟೋತ್ತರವನ್ನು ಹೇಳುತ್ತಿದ್ದರೆ, ಸತ್ಯ ದೇವರಿಗೆ ನೀರನ್ನು ಹಾಕುತ್ತಿರುತ್ತಾಳೆ.

ಪತಿಯ ಬಗ್ಗೆ ದಿವ್ಯಾಳಿಗೆ ಒಲವು
ಇನ್ನು ದಿವ್ಯಾ, ಸತ್ಯ ಮನೆಯಿಂದ ವಾಪಸ್ ಬಂದ ಮೇಲೆ ಬಾಲನ ಬಗ್ಗೆ ಕಾಳಜಿಯನ್ನು ತೋರಿಸುತ್ತಿರುತ್ತಾಳೆ. ಬಾಲನಿಗೆ ಆಚೆ ಮಲಗಬೇಡ ರೂಮ್‌ನಲ್ಲಿ ನನ್ನ ಪಕ್ಕವೇ ಮಲಗು ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಬಾಲನಿಗೆ ಒಳಗೊಳಗೆ ಖುಷಿಯಾಗುತ್ತದೆ. ದಿವ್ಯಾ ಎಲ್ಲವನ್ನು ಮರೆತು ಆತನನ್ನು ಒಪ್ಪಿಕೊಳ್ಳುತ್ತಿದ್ದಾಳೆ ಎಂದು ತಿಳಿಯುತ್ತಾನೆ. ಆದರೆ, ದಿವ್ಯಾ ಬಾಲನ ಬಳಿ ನಿನಗೆ ಆಗಾಗ ಲಕ್ಷಾಂತರ ರೂಪಾಯಿ ಹಣ ಸಿಗುತ್ತಿತ್ತಲ್ಲ, ಅದು ಹೇಗೆ ಎಂದು ಕೇಳುತ್ತಾಳೆ. ಅದಕ್ಕೆ ಬಾಲ ಉತ್ತರ ನೀಡುವುದಿಲ್ಲ. ಕೀರ್ತನಾ ಬಗ್ಗೆ ಏನನ್ನೂ ಹೇಳದೇ, ನಿನಗೆ ಈಗಲೂ ಹಣ ಬೇಕು ಎಂದರೆ, ನಾನು ತಂದುಕೊಡುತ್ತೇನೆ ಎಂದು ಹೇಳುತ್ತಾನೆ ಅಷ್ಟೆ.
ಬಾಲನ ಪಾದ ಪೂಜೆಗೆ ಸಿದ್ಧತೆ
ಈ ವಿಚಾರವನ್ನು ಅಲ್ಲಿಗೇ ಬಿಡದ ದಿವ್ಯಾ ಈಗ ಭೀಮನ ಅಮಾವಾಸ್ಯೆ ಮಾಡಲು ಮುಂದಾಗಿದ್ದಾಳೆ. ಬಾಲನನ್ನು ನೋಡುವುದಕ್ಕೂ ಬಯಸದ ದಿವ್ಯಾ ಈಗ ಕೆಲ ಸತ್ಯಗಳನ್ನು ತಿಳಿದುಕೊಳ್ಳಲು ಮನಸ್ಸು ಮಾಡಿದ್ದಾಳೆ. ಗಂಡನ ಪಾದ ಪೂಜೆಗೆ ದಿವ್ಯಾ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದನ್ನು ನೋಡಿದ ಬಾಲ, ಜಾನಕಿ ಹಾಗೂ ಗಿರಿಜಮ್ಮ ಶಾಕ್ ಆಗಿದ್ದಾರೆ. ಬಾಲನಿಗೆ ಏನೋ ಗ್ರಹಚಾರ ಕಾದಿದೆ ಎಂದು ಮನದಲ್ಲೇ ಲೆಕ್ಕಾಚಾರ ಮಾಡಿದ್ದಾರೆ.
ಕಾರ್ತಿಕ್ ನಡವಳಿಕೆಯಿಂದ ಸೀತಾಗೆ ಬೇಸರ
ಸತ್ಯ ದೇವರಿಗೆ ಪೂಜೆ ಮಾಡುವಾಗ ಕಾರ್ತಿಕ್ ಕಿತಾಪತಿ ಮಾಡುತ್ತಿರುತ್ತಾನೆ. ಸತ್ಯಳ ಸೆರಗನ್ನು ಎಳೆಯುವುದು, ಅವಳಿಗೆ ಭಕ್ತಿಯಿಂದ ಪೂಜೆ ಮಾಡಲು ಬಿಡದೇ ಕಾಡಿಸುತ್ತಿರುತ್ತಾನೆ. ಇದನ್ನು ಸೀತಾ ನೋಡಿ ಬೈಯುತ್ತಾಳೆ. ಪೂಜೆ ಮಾಡಲು ಮನಸ್ಸಿರುವವರು ಇಲ್ಲಿರಬಹುದು. ಇಲ್ಲದವರು ಇಲ್ಲಿಂದ ಹೊರಡಬಹುದು ಎಂದು ಹೇಳುತ್ತಾಳೆ.
ಸೀತಾ ಮಾತು ಕೇಳಿ ಸತ್ಯ ಹಾಗೂ ಕಾರ್ತಿಕ್ ಇಬ್ಬರಿಗೂ ಮುಜುಗರವಾಗುತ್ತದೆ. ಕಾರ್ತಿಕ್ ಅಮ್ಮನ ಮಾತಿಗೆ ಸೈಲೆಂಟ್ ಆಗುತ್ತಾನೆ. ಕಾರ್ತಿಕ್‌ಗೆ ಸೀತಾ ಹೇಳಿದ್ದು ಎಂಬುದು ಕೀರ್ತನಾಳಿಗೆ ತಿಳಿಯುತ್ತದೆ. ಇದರಿಂದ ಕೀರ್ತನಾ ಖುಷಿ ಪಡುತ್ತಾಳೆ. ಕಾರ್ತಿಕ್ ಮುಖವನ್ನು ನೋಡುತ್ತಾ ಆನಂದಿಸುತ್ತಾಳೆ.


Click it and Unblock the Notifications











