Sathya: ಲಕ್ಷ್ಮಣ ಕೂಡ ಕೀರ್ತನಾ ಹೇಳಿದ್ದನ್ನು ನಂಬಿ ಬಿಟ್ಟನಾ..?
ಸತ್ಯ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್ ಶುರುವಾಗಿದೆ. ಕಾರ್ತಿಕ್ ಹಾಗೂ ಸತ್ಯಗೆ ತೊಂದರೆ ಮಾಡಲು ಬಾಲ ಹಾಗೂ ದಿವ್ಯಾಳನ್ನು ಕೀರ್ತನಾ ಚೂ ಬಿಟ್ಟಿದ್ದಾಳೆ.
ಇತ್ತ ಸೀತಾ ತಲೆಗೂ ರಿತು ವಿಚಾರದಲ್ಲಿ ದೊಡ್ಡ ಹುಳವನ್ನು ಬಿಟ್ಟಿದ್ದಾಳೆ. ಇದರಿಂದ ಈಗ ಸೀತಾ, ಊರ್ಮಿಳಾ ತಲೆಯನ್ನೂ ಕೆಡಿಸಿದ್ದು, ಸತ್ಯ ಮೇಲೆ ಕೆಂಡಾಮಂಡಲವಾಗಿದ್ದಾಳೆ.
ಇನ್ನು ಕೀರ್ತನಾ ಇಷ್ಟಕ್ಕೆ ಸುಮ್ಮನಾಗದೇ ಲಕ್ಷ್ಮಣನ ಬಳಿಯೂ ಚಾಡಿ ಹೇಳಿದ್ದಾಳೆ. ಈ ನಡುವೆ ಸುಹಾಸ್ ಯಕ್ಷಗಾನ ಕಾರ್ಯಕ್ರಮದಲ್ಲಿ ಸತ್ಯ ಹಾಗೂ ಕಾರ್ತಿಕ್‌ಗೆ ತೊಂದರೆ ಮಾಡಲು ಮುಂದಾಗಿದ್ದಾನೆ.

ಬಾಲನಿಗೆ ಪ್ಲಾನ್ ಹೇಳಿದ ಸುಹಾಸ್
ದಿವ್ಯಾ ಹಾಗೂ ಬಾಲ ಇಬ್ಬರೂ ಯಕ್ಷಗಾನ ಪ್ರೋಗ್ರಾಮ್‌ಗೆ ಬಂದಿರುತ್ತಾರೆ. ಆದರೆ ಇದು ದಿವ್ಯಾಗೆ ಇಷ್ಟವಿರುವುದಿಲ್ಲ. ಬಾಲನಿಗೆ ತನ್ನ ಕೆಲಸ ಮಾಡಲು ಸತ್ಯ ಹಾಗೂ ಕಾರ್ತಿಕ್‌ನನ್ನು ಫಾಲೋ ಮಾಡಬೇಕಿತ್ತು. ಹೀಗಾಗಿ ಸುಹಾಸ್, ಬಾಲನಿಗೆ ನಾಳೆ ನಡೆಯುವ ಪ್ರೊಗ್ರಾಮ್‌ಗೆ ಕಾರ್ತಿಕ್ ಮತ್ತು ಸತ್ಯ ಹೋಗದಂತೆ ಇಬ್ಬರನ್ನು ಗಾಯಬ್ ಮಾಡು ಎಂದು ಹೇಳಿದ್ದಾನೆ. ಇದಕ್ಕೆ ಬಾಲ ಕೂಡ ತಯಾರಾಗಿದ್ದಾನೆ. ಇಬ್ಬರನ್ನು ಕಿಡ್ನ್ಯಾಪ್ ಮಾಡುತ್ತಾರಾ ಇಲ್ಲವೇ ಏನಾದರೂ ಸಮಸ್ಯೆಯನ್ನು ತಂದೊಡ್ಡುತ್ತಾರಾ ಎಂಬುದು ಗೊತ್ತಿಲ್ಲ.

ಫೈಟಿಂಗ್ ಮಾಡಲು ಮುಂದಾದ ಸತ್ಯ
ಯಕ್ಷಗಾನಕ್ಕೆ ಬಂದ ಸತ್ಯಗೆ ವೇಷ ಧರಿಸುವ ಆಸೆ ಇದೆ ಆದರೆ, ಸಾಧ್ಯವಾಗುತ್ತಿಲ್ಲ. ಇದೇ ವೇಳೆ, ಜನರೇಟರ್ ಕೆಟ್ಟು ನಿಂತಿದೆ. ಇದರಿಂದ ಯಕ್ಷಗಾನ ನಡೆಯುವುದಿಲ್ಲ ಎಂದು ಗಾಬರಿಯಾದ ಸತ್ಯ ಮತ್ತು ಕಾರ್ತಿಕ್ ಇಬ್ಬರೂ ಜನರೇಟರ್ ಅನ್ನು ಸರಿ ಮಾಡಲು ಹೋಗುತ್ತಾರೆ. ಸತ್ಯಗೆ ಮೆಕಾನಿಕ್ ಕೆಲಸ ಗೊತ್ತಿರುವುದರಿಂದ ಜನರೇಟರ್ ಅನ್ನು ಸರಿ ಮಾಡಲು ಮುಂದಾಗುತ್ತಾಳೆ. ಜನರೇಟರ್ ಸರಿ ಹೋದ ಮೇಲೆ ಸ್ತ್ರೀ ವೇಷ ಧರಿಸುವವರು ಇರುವುದಿಲ್ಲ. ಆತನನ್ನು ಗೂಂಡಾಗಳು ಹೊಡೆಯುತ್ತಿರುತ್ತಾರೆ. ಈ ವೇಳೆ ಸತ್ಯ ಅಲ್ಲಿಗೆ ಹೋಗಿ ತನ್ನ ಹಿಸ್ಟರಿ ಹೇಳುತ್ತಾಳೆ. ಆತನನ್ನು ಬಿಡುವಂತೆ ಕೇಳುತ್ತಾಳೆ. ಆದರೆ ರೌಡಿಗಳು ಅದಕ್ಕೆ ಒಪ್ಪುವುದಿಲ್ಲ. ಆಗ ಸತ್ಯ ಗೂಂಡಾಗಳ ಜೊತೆಗೆ ಫೈಟಿಂಗ್ ಮಾಡಲು ಪ್ರಾರಂಭಿಸುತ್ತಾಳೆ. ಇದರಿಂದ ಸಮಸ್ಯೆ ಏನಾದರೂ ಆಗುತ್ತದೆಯೋ ಏನೋ ಗೊತ್ತಿಲ್ಲ.

ಲಕ್ಷ್ಮಣ ಫೋನ್ ಮಾಡಿದ್ದು ಯಾರಿಗೆ..?
ಇನ್ನು ಲಕ್ಷ್ಮಣನ ಬಳಿ ರಿತು ಹಾಗೂ ರಾಕೇಶ್‌ನ ಲವ್ ಸ್ಟೋರಿ ಹೇಳುವ ಕೀರ್ತನಾ ಇದಕ್ಕೆಲ್ಲಾ ಸತ್ಯನೇ ಕಾರಣ ಎಂದು ಹೇಳುತ್ತಾಳೆ. ಸತ್ಯ ಬೇಕಂತಲೇ ಮೆತ್ತಗೆ ಈ ಕೆಲಸವನ್ನು ಮಾಡುತ್ತಿದ್ದಾಳೆ. ಎಲ್ಲರ ಎದುರಿಗೆ ಒಳ್ಳೆಯವಳಂತೆ ಇದ್ದು ರಿತು ತಲೆ ಕೆಡಿಸಿದ್ದಾಳೆ. ಅದಕ್ಕೆ ಸತ್ಯ ಬಂದಾಗಿನಿಂದ ರಿತು ಬದಲಾಗಿದ್ದಾಲೆ. ಬೇಕಿದ್ದರೆ ಯೋಚಿಸಿ ಎಂದು ಹೇಳುತ್ತಾಳೆ. ಕೀರ್ತನಾ ಹೇಳಿದ್ದು ಸರಿ ಎಂದು ನಂಬುವ ಲಕ್ಷ್ಮಣ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾನೆ. ಕೀರ್ತನಾ ಹೋದ ಮೇಲೆ ಯಾರಿಗೋ ಫೋನ್ ಮಾಡಿ ರಾಕಿಯನ್ನು ಹೆದರಿಸುವಂತೆ ಹೇಳುತ್ತಾನೆ. ಆದರೆ, ಅದು ಯಾರೆಂದು ತಿಳಿಯುವುದಿಲ್ಲ. ಇದನ್ನು ಕೀರ್ತನಾ ಕೇಳಿಸಿಕೊಳ್ಳುತ್ತಾಳೆ.

ಗಲಾಟೆ ಮಾಡಿದ ದಿವ್ಯಾ
ಇನ್ನು ಬಾಲ, ಸುಹಾಸ್ ಜೊತೆ ಮಾತನಾಡಲು ಸೈಡ್‌ಗೆ ಹೋಗಿದ್ದಕ್ಕೆ ದಿವ್ಯಾ ರಂಪ ಮಾಡುತ್ತಾಳೆ. ಏನದು ಸೀಕ್ರೆಟ್ ಹೇಳು ಎಂದು ಕಿರುಚುತ್ತಾಳೆ. ಅಕ್ಕ-ಪಕ್ಕದವರು ಇವರನ್ನೇ ನೋಡಿದಾಗ ಗಾಬರಿಗೆ ಬಾಲ ಸತ್ಯ ಮತ್ತು ಕಾರ್ತಿಕ್ ಗೆ ತೊಂದರೆ ಮಾಡಲು ಬಂದಿರುವುದು ಎನ್ನುತ್ತಾನೆ. ಬಳಿಕ ಅದನ್ನು ಸುಳ್ಳು ಹೇಳಿ ಮ್ಯಾನೇಜ್ ಮಾಡುತ್ತಾನೆ.


Click it and Unblock the Notifications











