Sathya serial: ಪದ್ಮಾ ಹಣ ತೆಗೆದುಕೊಂಡು ಲಕ್ಷ್ಮಣನನ್ನು ಬಿಟ್ಟು ಬಿಡುತ್ತಾಳಾ..?

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಈ ಹಿಂದೆ ಮೋಸ, ವಂಚನೆ ಮಾಡುತ್ತಿದ್ದ ಬಾಲ. ದಿವ್ಯಾಳನ್ನು ಒಲಿಸಿಕೊಳ್ಳಲು ಸಾಕಷ್ಟು ಸುಳ್ಳು ಹೇಳಿದ್ದ. ಆದರೆ, ಈಗ ಅದೆಲ್ಲವನ್ನೂ ಬಿಟ್ಟಿದ್ದಾನೆ. ಬಾಲ ಒಳ್ಳೆಯವನಾಗಿ ತನ್ನ ಬದುಕನ್ನು ಶುರು ಮಾಡಿದ್ದಾನೆ. ಮೋಸ ಮಾಡಿಕೊಂಡು ಬದುಕುವುದು ಒಳ್ಳೆಯದಲ್ಲ ಎಂಬುದನ್ನು ಬಾಲ ಅರ್ಥ ಮಾಡಿಕೊಂಡಿದ್ದಾನೆ.

ಇಷ್ಟುದಿನ ಮಾರ್ಕೆಟ್ ನಲ್ಲಿ ಮೂಟೆ ಹೊರುತ್ತಿದ್ದ ಬಾಲ ಈಗ ತನ್ನದೇ ಸ್ವಂತ ಉದ್ಯಮವನ್ನು ಶುರು ಮಾಡಲು ಮುಂದಾಗಿದ್ದಾನೆ. ಬಿಸಿನೆಸ್ ಮಾಡಲು ಹಣ ಎಷ್ಟು ಬೇಕು ಎಂದು ಲೆಕ್ಕ ಹಾಕುತ್ತಿದ್ದಾನೆ.

Sathya Serial 16th October episode written update

ದಿವ್ಯಾ ಯಾವ ಬಿಸಿನೆಸ್ ಮಾಡುತ್ತಿದ್ದೀಯಾ ಎಂದು ಬಲವಂತವಾಗಿ ಕೇಳುತ್ತಾಳೆ. ಇದಕ್ಕೆ ಬಾಲ ಬೊಂಡಾ-ಬಜ್ಜಿ ಅಂಗಡಿ ಇಡುತ್ತೇನೆ. ಇದರಿಂದ ಬರುವ ಲಾಭದಲ್ಲಿ ಒಳ್ಳೆಯ ಜೀವನ ನಡೆಸಬಹುದು ಎಂದು ಹೇಳುತ್ತಾನೆ. ಆದರೆ, ಇದಕ್ಕೆ ದಿವ್ಯಾ ಸುತಾರಾಂ ಒಪ್ಪುವುದಿಲ್ಲ. ದೊಡ್ಡ ಬಿಸಿನೆಸ್ ಮಾಡಬೇಕು. ಕೋಟಿ ಕೋಟಿ ಲಾಭ ಬರುವಂತೆ ಇರಬೇಕು ಎಂದು ಹೇಳುತ್ತಾಳೆ.

ಗಂಡನಿಗೆ ಸ್ಕ್ಯಾಮ್ ಮಾಡಲು ಹೇಳಿದ ದಿವ್ಯಾ

ದಿವ್ಯಾ ಮಾತು ಕೇಳಿ ಬಾಲ ಅಷ್ಟೊಂದು ಲಾಭ ಬೇಕು ಸ್ಕ್ಯಾಮ್ ಮಾಡಬೇಕು ಅಷ್ಟೇ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ದಿವ್ಯಾ ಸ್ಕ್ಯಾಮ್ ತಾನೇ ಮಾಡು ಎಂದು ಹೇಳುತ್ತಾಳೆ. ಈ ಮಾತು ಕೇಳಿ ಜಾನಕಿ ಕೂಡ ಬೈಯುತ್ತಾಳೆ. ಬಾಲನಿಗೆ ಬೊಂಡಾ- ಬಜ್ಜಿ ಅಂಗಡಿ ನಡೆಸು ಬಾಲ ಎಲ್ಲಾ ಒಳ್ಳೆಯದೇ ಆಗುತ್ತೆ. ಅವಳ ಮಾತನ್ನು ಯಾವುದೇ ಕಾರಣಕ್ಕೂ ಕೇಳಬೇಡ. ನಿನಗೇನಾದರೂ ಬೇಕಿದ್ದರೆ, ನಾವೂ ಸಹಾಯ ಮಾಡುತ್ತೇವೆ ಎಂದು ಹೇಳುತ್ತಾಳೆ.

ಕೊನೆಗೂ ಪದ್ಮ ಮನೆಗೆ ಬಂದ ರಾಯರು

ಇತ್ತ ರಾಯರು ಮತ್ತು ಸತ್ಯ ಇಬ್ಬರೂ ಮಾತನಾಡಿಕೊಂಡು ಪದ್ಮ ಮನೆಗೆ ಬಂದಿದ್ದಾರೆ. ಪದ್ಮ ಬಾಗಿಲು ತೆಗೆದು ಒಳಗೆ ಕರೆಯುತ್ತಾಳೆ. ರಾಯರ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಾಳೆ. ನಾವು ಯಾರು ಎಂದು ನಿಮಗೆ ಗೊತ್ತಾ ಎಂದು ಕೇಳುತ್ತಾರೆ. ಆಗ ಪದ್ಮ ನಾನು ಬಹಳ ವರ್ಷಗಳ ಹಿಂದೆ ನಿಮ್ಮ ಆಫೀಸಿನಲ್ಲೇ ಕೆಲಸ ಮಾಡುತ್ತಿದ್ದೆ. ಹಾಗಾಗಿ ನನಗೆ ನೀವ್ಯಾರು ಎಂದು ಗೊತ್ತು. ಆದರೆ, ನಿಮಗೆ ನನ್ನ ನೆನಪಿಲ್ಲ ಎಂದು ಹೇಳುತ್ತಾಳೆ. ಇನ್ನು ರಾಯರು ಹಣ ಕೊಟ್ಟು ನನ್ನ ತಮ್ಮನನ್ನು ಮರೆತು ಬಿಡು. ಬೇಕಿದ್ದರೆ ಮತ್ತಷ್ಟು ಹಣ ಕೊಡುತ್ತೇನೆ ಎಂದು ಹೇಳುತ್ತಾರೆ. ಆದರೆ, ಪದ್ಮ ಹಣವನ್ನು ಖಡಾಖಂಡಿತವಾಗಿ ನಿರಾಕರಿಸುತ್ತಾಳೆ.

Sathya Serial 16th October episode written update

ಹಣ ನಿರಾಕರಿಸಿದ ಪದ್ಮ ಹೇಳಿದ್ದೇನು..?

ಹಣಕ್ಕೋಸ್ಕರ ನಾನು ನಿಮ್ಮ ತಮ್ಮನನ್ನು ಮದುವೆಯಾಗಿಲ್ಲ. ಹಾಗೇನಾದರೂ ಇದ್ದಿದ್ದರೆ, ಇಷ್ಟು ವರ್ಷಗಳ ಕಾಲ ಒಬ್ಬಂಟಿಯಾಗಿ ಬದುಕುವ ಅಗತ್ಯವಿರಲಿಲ್ಲ. ಯಾವಾಗಲೋ ನಿಮ್ಮ ಮುಂದೆ ಬಂದು ಹಣ ಕೇಳುತ್ತಿದ್ದೆ. ನನಗೆ ಹಣ ಬೇಡ, ನಿಮ್ಮ ತಮ್ಮನ ಹೆಂಡತಿ ಅನ್ನೋ ಐಡೆಂಟಿಟಿ ಬೇಕು. ಈ ಸಮಾಜದಲ್ಲಿ ತಲೆ ಎತ್ತಿ ಓಡಾಡುವಂತಾಗಬೇಕು. ನನಗೂ ಗೌರವ ಬೇಕು ಎಂದು ಹೇಳಿ. ತನಗೂ ಲಕ್ಷ್ಮಣನಿಗೂ ಪ್ರೀತಿ ಹೇಗೆ ಶುರುವಾಯ್ತು. ನಚಿಕೇತ್ ಹುಟ್ಟಿದ್ದೇಗೆ? ಲಕ್ಷ್ಮಣ ಈಗಾಗಲೇ ಮದುವೆಯಾಗಿದ್ದರೂ ಇವರಿಬ್ಬರು ಮದುವೆಯಾಗಿದ್ದೇಕೆ? ಎಂಬ ಸತ್ಯವನ್ನು ಪದ್ಮ ಹೇಳುತ್ತಾಳೆ. ಬಳಿಕ ನಚಿಕೇತನ್ ಅನ್ನು ನೋಡಿದ ರಾಯರು ಶಾಕ್ ಆಗುತ್ತಾರೆ. ನಂತರ ಇಬ್ಬರೂ ಬಂದ ದಾರಿಗೆ ಸುಂಕವಿಲ್ಲ ಎಂದು ಎದ್ದು ಬರುತ್ತಾರೆ.

ಸತ್ಯಳನ್ನೇ ನಂಬಿರುವ ರಾಯರು

ರಾಯರು, ಸತ್ಯ ಬಳಿ ತಮ್ಮ ಸಂಕಟವನ್ನು ಹೇಳಿಕೊಳ್ಳುತ್ತಾನೆ. ನಮ್ಮ ಮನೆಯಲ್ಲಿ ಬಂದ ಸಮಸ್ಯೆಗಳನ್ನೆಲ್ಲಾ ನೀನೇ ನಿಭಾಯಿಸಿದ್ದೀಯಾ. ಈಗ ಈ ಸಮಸ್ಯೆಯನ್ನೂ ನೀನೇ ಸರಿ ಮಾಡಬೇಕು. ನಮ್ಮ ಮನೆಯ ಮಾನ ಮರ್ಯಾದೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಹೇಳುತ್ತಾನೆ. ಸತ್ಯ ಮಾವನಿಗೆ ನೀವು ಹೆದರಬೇಡಿ. ಹೇಗಾದರೂ ಮಾಡಿ ಎಲ್ಲವನ್ನೂ ಸರಿ ಮಾಡೋಣ. ಕೋಟೆ ಮನೆಗೆ ತೊಂದರೆಯಾಗದಂತೆ ನಾನು ಕಾಪಾಡುತ್ತೇನೆ ಎಂದು ಹೇಳುತ್ತಾಳೆ.

More from Filmibeat

English summary
Sathya kannada Serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X