Sathya: ಸತ್ಯ ಮಾತಿಗೆ ಗಾಬರಿಯಾದ ಲಕ್ಷ್ಮಣ: ಕೀರ್ತನಾಳಿಗೆ ಹೆಚ್ಚಿದ ಆತಂಕ
ಸತ್ಯ ಧಾರಾವಾಹಿಯಲ್ಲಿ ಬಾಲ ಹೇಳಿದಂತೆ ಎರಡೂವರೆ ಲಕ್ಷ ಹಣವನ್ನು ಅರೇಂಜ್ ಮಾಡಲು ದಿವ್ಯಾ, ಕೀರ್ತನಾಳನ್ನು ಭೇಟಿ ಮಾಡಿದ್ದಾಳೆ. ತಕ್ಷಣವೇ ಹಣ ಕೊಡು ಎಂದು ಪೀಡಿಸಿದ್ದಾಳೆ.
ಕೀರ್ತನಾ ಕೂಡ ಬೇರೆ ದಾರಿ ಇಲ್ಲದೇ ಈಗ ದಿವ್ಯಾ ಮಾತನ್ನು ಕೇಳುವಂತಾಗಿದೆ. ದಿವ್ಯಾಳಿಗೆ ಹಣ ಬಂದ ಕೂಡಲೇ ಬಾಲನಿಗೆ ಚೆಕ್ ಬರೆದುಕೊಟ್ಟು ಮತ್ತೆ ದುರಹಂಕಾರದ ಮಾತುಗಳನ್ನು ಆಡಿದ್ದಾಳೆ.

ಬಾಲ ಹಾಗೂ ಮನೆಯವರಿಗೆ ದಿವ್ಯಾಳಿಗೆ ಹಣ ಎಲ್ಲಿಂದ ಬಂತು. ಮತ್ಯಾವ ಎಡವಟ್ಟಿನ ಕೆಲಸ ಮಾಡಿದ್ದಾಳೆ ಎಂದು ಗಾಬರಿಯಾಗಿದೆ. ಆದರೆ ಕೀರ್ತನಾಳೀಗೆ ಈಗ ಬಾಲನ ಹೆದರಿಕೆ ಕಡಿಮೆಯಾಗಿದ್ದು, ದಿವ್ಯಾಳಿಗೆ ಭಯಪಡುವಂತಾಗಿದೆ.
ಸುಖಾ ಸುಮ್ಮನೆ ಕೂಗಾಡಿದ ಸತ್ಯ
ಸತ್ಯಳಿಗೆ ಲಕ್ಷ್ಮಣ ಹಾಗೂ ಊರ್ಮಿಳಾಳದ್ದೇ ಚಿಂತೆಯಾಗಿದೆ. ಲಕ್ಷ್ಮಣನ ಮತ್ತೊಂದು ಸಂಬಂಧದ ಬಗ್ಗೆ ಹಗಲು-ರಾತ್ರಿ ಯೋಚಿಸುತ್ತಿದ್ದಾಳೆ. ಎಲ್ಲರೂ ತಿಂಡಿ ತಿನ್ನುವಾಗ ರಾಯರು ಯಾರದೋ ಎರಡನೇ ಮದುವೆಗೆ ಹೋಗಬೇಕು ಎಂದು ಹೇಳುತ್ತಾರೆ. ಸತ್ಯ ಇದಕ್ಕೆ ಕೂಗಾಡುತ್ತಾಳೆ. ಅರ್ಥವಿಲ್ಲದೇ ಮಾತನಾಡುತ್ತಾಳೆ. ಮೊದಲ ಹೆಂಡತಿಗೆ ಮೋಸ ಮಾಡಿ ಎರಡನೇ ಮದುವೆಯಾಗುವವರಿಗೆ ಸಪೋರ್ಟ್ ಮಾಡಬಾರದು. ನನಗೇನಾದರೂ ಅಂತಹವರನ್ನು ಕಂಡರೆ ಕೋಪ ಬರುತ್ತದೆ. ನಾನಂತೂ ಇಂತಹ ಮದುವೆಯನ್ನು ಒಪ್ಪುವುದಿಲ್ಲ ಎಂದು ಸುಖಾ ಸುಮ್ಮನೆ ಕೂಗಾಡುತ್ತಾಳೆ. ಸತ್ಯಳ ನಡವಳಿಕೆ ಹಾಗೂ ಮಾತುಗಳು ಎಲ್ಲರನ್ನೂ ಗಾಬರಿಗೊಳಿಸುತ್ತದೆ. ಯಾಕೀಗೆ ಏನೇನೋ ಮಾತನಾಡುತ್ತಿದ್ದೀಯಾ ಎಂದು ಕೀರ್ತನಾ ಸತ್ಯಳನ್ನು ಪ್ರಶ್ನೆ ಮಾಡುತ್ತಾಳೆ.

ಸತ್ಯಳಿಗೆ ಬುದ್ಧಿ ಹೇಳಿದ ಕಾರ್ತಿಕ್
ಕಾರ್ತಿಕ್, ಸತ್ಯಳನ್ನು ರೂಮಿಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಸತ್ಯಳನ್ನು ನಿನಗೆ ಏನಾಗಿದೆ? ಯಾಕೆ ಇತ್ತೀಚೆಗೆ ವಿಚಿತ್ರವಾಗಿ ಆಡುತ್ತೀಯಾ? ಏನಾದರೂ ಇದ್ದರೆ ನನ್ನ ಬಳಿ ಹೇಳಿಕೋ. ನಾನು ನಿನ್ನ ಗಂಡ. ನಿನ್ನ ಸಮಸ್ಯೆ ಏನು ಹೇಳು. ಅದಕ್ಕೆ ಪರಿಹಾರ ಹುಡುಕೋಣ. ಅದು ಬಿಟ್ಟು ಹೀಗೆಲ್ಲಾ ಮಾಡಬೇಡ ಎಂದು ಬುದ್ಧಿ ಹೇಳುತ್ತಾನೆ. ಆದರೆ, ಸತ್ಯ ನಿಜವಾದ ಸಂಗತಿ ಕಾರ್ತಿಕ್ ಬಳಿ ಹೇಳಿಕೊಳ್ಳುವುದಿಲ್ಲ. ಮತ್ತೆ ಒಗಟು ಒಗಟಾಗಿ ಮಾತನಾಡಿ ಕೋಪ ಬರಿಸುತ್ತಾಳೆ. ಕಾರ್ತಿಕ್ ಕೂಡ ಸತ್ಯಳ ಮಾತಿನಿಂದ ಬೇಸರಗೊಂಡು ಹೊರಟು ಬಿಡುತ್ತಾನೆ.
ಸತ್ಯ ಮಾತಿಗೆ ಗಾಬರಿಗೊಂಡ ಲಕ್ಷ್ಮಣ
ಇನ್ನು ಲಕ್ಷ್ಮಣನಿಗೆ ಸತ್ಯ ಆಡಿದ ಮಾತುಗಳು ಗಾಬರಿ ಉಂಟು ಮಾಡಿರುತ್ತದೆ. ಜಸ್ಟ್ ಯಾರದೋ 2ನೇ ಮದುವೆಯ ವಿಷಯ ಕೇಳಿನೇ ಸತ್ಯ ಇಷ್ಟು ಕೋಪ ಮಾಡಿಕೊಂಡಳು. ಇನ್ನು ಅವಳಿಗೆ ನನ್ನ ಸಂಬಂಧದ ಬಗ್ಗೆ ಗೊತ್ತಾದರೆ ಪರಿಸ್ಥಿತಿ ಏನು.? ಈಗ ನನ್ನ ಸಂಬಂಧದ ಬಗ್ಗೆ ಏನು ಮಾಡುವುದು. ಇದೆಲ್ಲಾ ಗೊತ್ತಾದರೆ, ಸತ್ಯ ನನ್ನನ್ನು ಸುಮ್ಮನೆ ಬಿಡುತ್ತಾಳಾ..? ಈಗೇನು ಮಾಡುವುದು ಎಂದು ಯೋಚಿಸುತ್ತಿರುತ್ತಾನೆ. ಊರ್ಮಿಳಾಗೂ ಲಕ್ಷ್ಮಣ ಏನೋ ಯೋಚಿಸುತ್ತಿದ್ದಾರೆ. ಆದರೆ, ಅದು ಏನು ಎಂಬುದು ಗೊತ್ತಾಗುವುದಿಲ್ಲ. ಆಫಿಸ್ ಟೆನ್ಷನ್ ಇರಬೇಕು ಎಂದು ಮಾತನಾಡಿಸುತ್ತಾಳೆ. ಲಕ್ಷ್ಮಣ ಕೂಡ ಊರ್ಮಿಳಾ ಬಳಿ ಸತ್ಯ ಹೇಳದೇ ಸುಮ್ಮನಾಗುತ್ತಾನೆ.
ಕೀರ್ತನಾಳಿಗೆ ಎದುರಾಯ್ತಾ ಸಂಕಷ್ಟ..?
ಸತ್ಯ ನಡೆದುಕೊಂಡ ರೀತಿ ಮನೆಯಲ್ಲಿ ಎಲ್ಲರನ್ನೂ ಯೋಚನೆಗೆ ದೂಡಿರುತ್ತದೆ. ರಾಯರು ಹಾಗೂ ಸೀತಾ ಕೂಡ ಸತ್ಯ ಯಾಕೆ ಹೀಗೆ ಮಾತನಾಡಿದಳು. ಅವಳ ಮನಸ್ಸಿಗೆ ಏನಾಗಿದೆ ಎಂದು ಮಾತನಾಡಿಕೊಳ್ಳುತ್ತಿರುತ್ತಾರೆ. ಇದನ್ನೆಲ್ಲಾ ಕೀರ್ತನಾ ಕೇಳಿಸಿಕೊಳ್ಳುತ್ತಾಳೆ. ಯಾವುದೇ ಕಾರಣಕ್ಕೂ ಈ ಮನೆಯಲ್ಲಿ ಕಾರ್ತಿಕ್ ಮತ್ತು ಸೀತಮ್ಮ ಇಬ್ಬರೂ ಸತ್ಯಳನ್ನು ಒಪ್ಪಿಕೊಳ್ಳುವುದಿಲ್ಲ ಎಂದುಕೊಂಡಿದ್ದೆ. ಆದರೆ, ಈಗ ಇಬ್ಬರೂ ಸತ್ಯಳತ್ತ ವಾಲುತ್ತಿದ್ದಾರೆ. ಇದರಿಂದ ನನಗೆ ಸಮಸ್ಯೆ ಆಗುವುದು ಪಕ್ಕಾ. ಆದಷ್ಟು ಬೇಗ ಈ ಸಮಸ್ಯೆ ಅನ್ನು ಪರಿಹರಿಸಿಕೊಳ್ಳಬೇಕು. ಸತ್ಯಳೀಗೆ ಒಂಉ ಗತಿ ಕಾಣಿಸಲೇ ಬೇಕು ಎಂದು ಆಲೋಚಿಸುತ್ತಾಳೆ.


Click it and Unblock the Notifications











