Sathya: ಸತ್ಯ ಉಳಿದಿರುವ ಸಮಯದಲ್ಲಿ ಪ್ರಾಜೆಕ್ಟ್ ಅನ್ನು ಸಬ್ಮಿಟ್ ಮಾಡುತ್ತಾಳಾ..?

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ದಿವ್ಯಾ ಗರ್ಭಿಣಿ ಅಲ್ಲ. ಹಾಗಿದ್ದರೂ ಹೇಗಾದರೂ ಮಾಡಿ ಈ ಹಳ್ಳಿಯಿಂದ ಬಾಲನ ಅರಮನೆಗೆ ಹೋಗಬೇಕು ಎಂದು ಗರ್ಭಿಣಿ ಆಗಿರುವಂತೆ ನಾಟಕ ಮಾಡುತ್ತಿದ್ದಾಳೆ.

ಬಾಲನಿಗೆ ದಿವ್ಯಾ ಗರ್ಭಿಣಿ ಆಗಿರುವುದು ಸಮಸ್ಯೆಗೆ ಕಾರಣವಾಗಿದೆ. ಪದೇ ಪದೇ ದಿವ್ಯಾಳನ್ನು ಅನುಮಾನಿಸಿ ಪ್ರಶ್ನೆ ಮಾಡುತ್ತಿದ್ದಾನೆ. ಆದರೆ ದಿವ್ಯಾ, ಬಾಲನನ್ನು ಯಾಮಾರಿಸುತ್ತಿದ್ದಾಳೆ.

ದಿವ್ಯಾ ಗರ್ಭಿಣಿ ಹೌದೋ ಅಲ್ಲವೋ ಎಂದು ತಿಳಿಯಲು ನಾಟಿ ವೈದ್ಯರನ್ನು ಮನೆಗೆ ಕರೆದುತರುತ್ತಾನೆ. ಆದರೆ ದಿವ್ಯಾ ವೈದ್ಯರ ಜೊತೆಗೆ ಪ್ರತ್ಯೇಕವಾಗಿ ಮಾತನಾಡಬೇಕು ಎಂದು ಹೇಳುತ್ತಾಳೆ.

ಸತ್ಯ ತಿಳಿದ ಬಾಲ

ಸತ್ಯ ತಿಳಿದ ಬಾಲ

ವೈದ್ಯರ ಬಳಿ ದಿವ್ಯಾ ತಾನು ಗರ್ಭಿಣಿ ಅಲ್ಲ. ಆದರೆ ಮನೆಯವರ ಮುಂದೆ ಸುಳ್ಳು ಹೇಳಿ. ಇಲ್ಲ ಅಂದರೆ, ನನ್ನ ಗಂಡನಿಗೆ ಬೇರೆ ಮದುವೆ ಮಾಡಿಸುತ್ತಾರೆ ಎಂದು ಕೇಳಿಕೊಳ್ಳುತ್ತಾರೆ. ಆದರೆ, ನಾಟಿ ವೈದ್ಯರು ನನ್ನ ನಾಲಿಗೆಯಲ್ಲಿ ಯಾವತ್ತೂ ಸುಳ್ಳು ಬರುವುದಿಲ್ಲ. ನಾನು ಸುಳ್ಳು ಹೇಳುವುದಿಲ್ಲ ಎಂದು ಹೇಳುತ್ತಾನೆ. ದಿವ್ಯಾ ಎಷ್ಟೇ ಕೇಳಿಕೊಂಡರೂ ಒಪ್ಪುವುದಿಲ್ಲ. ಎಲ್ಲರ ಮುಂದೆ ವೈದ್ಯರು ಈಕೆ ಗರ್ಭಿಣಿ ಅಲ್ಲ. ದಿವ್ಯಾ ಗರ್ಭಕೋಶದಲ್ಲಿ ಸಮಸ್ಯೆ ಇದೆ. ಆದಷ್ಟು ಬೇಗ ಮಗು ಆಗದಿದ್ದರೆ, ಸಮಸ್ಯೆ ಆಗುತ್ತದೆ ಎಂದು ಹೇಳಿ ಹೋಗುತ್ತಾರೆ. ಇದನ್ನು ಕೇಳಿದ ಬಾಲನಿಗೆ ಫುಲ್ ಖುಷಿಯಾಗುತ್ತದೆ. ಆದರೆ ದಿವ್ಯಾ ಬೇಸರ ಮಾಡಿಕೊಂಡಿರುತ್ತಾಳೆ. ದಿವ್ಯಾಳನ್ನು ಜಲಜಾ ಸಮಾಧಾನ ಮಾಡುವಾಗ, ತಾನು ಗರ್ಭಿಣಿ ಅಲ್ಲ ಎಂಬುದು ಮೊದಲೇ ಗೊತ್ತಿತ್ತು. ಈ ನಾಟಕ ಮಾಡಿದ್ದೇ ನಾನು ಎಂದು ಹೇಳುವುದನ್ನು ಬಾಲ ಕೇಳಿಸಿಕೊಳ್ಳುತ್ತಾನೆ.

ರಿತುಗೆ ಬೈದ ರಾಕೇಶ್

ರಿತುಗೆ ಬೈದ ರಾಕೇಶ್

ಇನ್ನು ರಿತುಗೆ ರಾಕಿ ಫೋನ್ ಮಾಡಿ ಬೈಯುತ್ತಾನೆ. ನಮ್ಮ ಏರಿಯಾದಲ್ಲಿ ಬುಕ್ ಸೇಲ್ ಮಾಡಬೇಡ. ಇಲ್ಲಿ ಯಾರೂ ಸರಿ ಇಲ್ಲ. ಕೆಟ್ಟ ಜನರಿದ್ದಾರೆ ಎಂದ ಬುದ್ಧಿ ಹೇಳುತ್ತಾನೆ. ಆದರೆ ರಿತು, ರಾಕಿ ಮಾತನ್ನು ಕೇಳಿಸಿಕೊಳ್ಳುವುದಿಲ್ಲ. ನಾನು ನನ್ನ ಛಲವನ್ನು ಬಿಡುವುದಿಲ್ಲ ಎಂದು ಹೇಳುತ್ತಾಳೆ. ಕೊನೆಗೆ ರಾಕಿ, ರಿತುಗೆ ಬೈಯುತ್ತಾನೆ. ಆದರೂ ರಿತು ಹೇಳಿದ ಮಾತನ್ನು ಸ್ವಲ್ಪವೂ ಕೇಳುವುದಿಲ್ಲ.

 ಮನೆಯಲ್ಲಿ ಕೀರ್ತನಾ ಕೂಗಾಟ

ಮನೆಯಲ್ಲಿ ಕೀರ್ತನಾ ಕೂಗಾಟ

ಇತ್ತ ಕಾರ್ತಿಕ್ ಊಟ ಮಾಡಲೂ ಟೈಂ ಇಲ್ಲ. ಕೀರ್ತನಾ ತನಗೆ ಪದೇ ಪದೇ ಅವಮಾನ ಮಾಡುತ್ತಿರುತ್ತಾಳೆ ಎಂದು ಸತ್ಯ ಬಳಿ ಹೇಳಿಕೊಳ್ಳುತ್ತಾನೆ. ಸತ್ಯ, ಕೀರ್ತನಾ ಕ್ಯಾಬಿನ್‌ಗೆ ಹೋಗಿ ಗಲಾಟೆ ಮಾಡುತ್ತಾಳೆ. ತನ್ನ ಗಂಡನಿಗೆ ಸುಮ್ಮನೆ ತೊಂದರೆ ಕೊಟ್ಟರೆ, ಸರಿ ಇರುವುದಿಲ್ಲ ಎಂದು ಕೀರ್ತನಾಗೆ ವಾರ್ನಿಂಗ್ ಕೊಡುತ್ತಾಳೆ. ಈ ಕೋಪವನ್ನು ಕೀರ್ತನಾ ಮನೆಯಲ್ಲಿ ಸೀತಾ ಮೇಲೆ ತೋರಿಸುತ್ತಾಳೆ. ಮನೆಗೆ ಹೋದ ಕೀರ್ತನಾ ಸೀತಾ ಮೇಲೆ ಕೂಗಾಡುತ್ತಾಳೆ. ಸುಮ್ಮನೆ ಯಾಕೆ ಸತ್ಯಳನ್ನು ಆಫೀಸ್‌ಗೆ ಕಳಿಸಿದ್ರಿ ಎಂದು ಕೇಳುತ್ತಾಳೆ. ಈ ಮಾತಿಗೆ ಊರ್ಮಿಳಾ, ಸತ್ಯಳನ್ನು ವಹಿಸಿಕೊಂಡು ಬರುತ್ತಾಳೆ.

ಪ್ರಾಜೆಕ್ಟ್ ಸಬ್ಮಿಟ್ ಮಾಡಿದ ಸತ್ಯ

ಪ್ರಾಜೆಕ್ಟ್ ಸಬ್ಮಿಟ್ ಮಾಡಿದ ಸತ್ಯ

ಕಾರ್ತಿಕ್ ಪ್ರಾಜೆಕ್ಟ್ ಸಬ್ಮಿಟ್ ಮಾಡೋದಕ್ಕೆ ಆಗಲ್ಲ. ನನಗೆ ಬೇರೆ ಕೆಲಸ ಇದೆ ಎಂದು ಹೋಗುತ್ತಾನೆ. ಸತ್ಯ, ರಾಕಿಗೆ ಫೋನ್ ಮಾಡಿ ಪ್ರಾಜೆಕ್ಟ್ ಅನ್ನು ಸಬ್ಮಿಟ್ ಮಾಡುವುದು ಹೇಗೆ ಎಂದು ಕೇಳುತ್ತಾನೆ. ರಾಕಿ, ಸತ್ಯಗೆ ಹೇಳಿಕೊಡುತ್ತಾನೆ. ಕಡಿಮೆ ಸಮಯದಲ್ಲಿ ರಾಕಿ ಪ್ರಾಜೆಕ್ಟ್ ಅನ್ನು ಸಬ್ಮಿಟ್ ಮಾಡುತ್ತಾನೆ. ಇದರಿಂದ ಸತ್ಯ ಫುಲ್ ಖುಷಿಯಾಗುತ್ತಾಳೆ.

More from Filmibeat

English summary
Sathya Serial 17th February Episode Written Update. sathya submits the project with the help off rakesh. She feels happy. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X