Sathya: ನಿಶ್ಚಿತಾರ್ಥವಾದರೂ ಮದುವೆಯ ನಡೆಯೋದಿಲ್ವಾ..? ಸತ್ಯ ಮಾತಿನ ಅರ್ಥವೇನು..?

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ದಿವ್ಯಾಳಿಗೆ ಬಾಲನ ಸುಳ್ಳುಗಳು ತಿಳಿದ ಮೇಲೆ ಸಂಪೂರ್ಣವಾಗಿ ಮೌನಕ್ಕೆ ಜಾರಿದ್ದಾಳೆ. ಜಾನಕಿ ಮಗಳಿಗೆ ಎಷ್ಟು ಬುದ್ಧಿ ಹೇಳಿದರೂ ಕೇಳದೇ, ಕೂತಲ್ಲೇ ಕುಳಿತಿದ್ದಾಳೆ. ಬಾಲನಿಗೆ ತನ್ನ ತಪ್ಪಿನ ಅರಿವಾಗಿದ್ದರೂ ಈಗ ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ. ದಿವ್ಯಾಳಿಗೆ ತನ್ನ ಕನಸುಗಳು ನುಚ್ಚು ನೂರಾದವಲ್ಲ ಎಂಬ ಹತಾಶೆ. ಆದರೆ ಇದ್ಯಾವುದೂ ಗೊಗ್ಗಯ್ಯನಿಗೆ ಗೆ ಗೊತ್ತಿಲ್ಲ.

ಬೆಳಗೆದ್ದು ಯಾವ ಕೆಲಸವನ್ನೂ ಮಾಡಿಲ್ಲ ಎಂದು ಗೊಗ್ಗಯ್ಯ ಒಂದೇ ಸಮನೇ ಬೈಯುತ್ತಿದ್ದಾನೆ. ಇದರಿಂದ ದಿವ್ಯಾ ಕೋಪ ನೆತ್ತಿಗೆ ಏರಿದ್ದು, ತನ್ನ ಕೋಪ, ಹತಾಶೆ ಎಲ್ಲವನ್ನೂ ಕೂಡ ಗೊಗ್ಗಯ್ಯನ ಮೇಲೆ ತೋರಿಸಿದ್ದಾಳೆ.

Sathya Serial 17th May episode written update

ಇತ್ತ ರಿತುಗೆ ಶತಾಯಗತಾಯ ಮದುವೆ ಮಾಡಬೇಕು ಎಂದು ಸೀತಾ ಹಾಗೂ ಲಕ್ಷ್ಮಣ ನಿಶ್ಚಿತಾರ್ಥವನ್ನು ಮಾಡಲು ಮುಂದಾಗಿದ್ದಾರೆ. ರಾಯರು ಬೇಡ ಎಂದರೂ ಕೇಳದೇ, ಎಲ್ಲಾ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿದ್ದಾರೆ. ರಾಯರಿಗೆ ತಮ್ಮ ಲಕ್ಷ್ಮಣ ತನ್ನ ಮಾತಿಗೆ ಬೆಲೆ ಕೊಡದೇ, ರಿತುಗೆ ಇಷ್ಟವಿಲ್ಲದ ಹುಡುಗನ ಜೊತೆಗೆ ಎಂಗೇಜ್‌ಮೆಂಟ್ ಮಾಡುತ್ತಿರುವುದು ಬೇಸರ ತಂದಿದೆ. ಅಷ್ಟೇ ಅಲ್ಲದೇ, ಗುರುಗಳು ಬೇಡ ಎಂದರೂ ಕೂಡ ತಮ್ಮ ಕೇಳುತ್ತಿಲ್ಲ.

ತಮ್ಮನ ಜೊತೆಗೆ ತನ್ನ ಪತ್ನಿ ಸೀತಾ ಕೂಡ ಸೇರಿಕೊಂಡಿದ್ದಾಳೆ ಎಂಬ ನೋವಿದೆ. ಆದರೆ ಯಾರ ಬಳಿಯೂ ಹೇಳಿಕೊಳ್ಳಲು ಆಗುತ್ತಿಲ್ಲ. ಲಕ್ಷ್ಮಣ ಹಾಗೂ ಸೀತಾ ಇಬ್ಬರೂ ಹೇಗಾದರೂ ಮಾಡಿ ಈ ಎಂಗೇಜ್ ಮೆಂಟ್ ಮಾಡಿ ಮನೆಯ ಮರಿಯಾದೆ ಅನ್ನು ಉಳಿಸಿಕೊಳ್ಳಬೇಕು. ರಿತು ಕೈ ತಪ್ಪಿ ಹೋಗದಂತೆ ನೋಡಿಕೊಳ್ಳಬೇಕು ಎಂದು ಅತ್ತಿಗೆ ಹಾಗೂ ಮೈದುನ ಸೇರಿ ಇಬ್ಬರೇ ತಮ್ಮಿಷ್ಟದಂತೆ ನಿಶ್ಚಿತಾರ್ಥವನ್ನು ಮಾಡುತ್ತಿದ್ದಾರೆ.

Sathya Serial 17th May episode written update

ರಾಕಿಗೆ ಫೋನ್ ಮಾಡಿ ಬರ ಹೇಳಿರುವ ರಿತು

ಊರ್ಮಿಳಾಗೆ ತನ್ನ ಮಗಳ ಭವಿಷ್ಯ ಹಾಳಾಗುತ್ತಿದೆಯಾ ಅಥವಾ ಅವಳಿಗೆ ಒಳ್ಳೆಯದಾಗುತ್ತಾ ಎಂಬ ಗೊಂದಲದಲ್ಲಿದ್ದು, ಯಾವುದಕ್ಕೂ ಮನಸ್ಸಿಲ್ಲದವಳಂತೆ ಕಂಗಾಲಾಗಿದ್ದಾಳೆ. ಇನ್ನು ರಿತು ಯಾರನ್ನು ನಂಬಿದರೂ ಆಗುವುದಿಲ್ಲ. ತನ್ನ ಭವಿಷ್ಯದ ಬಗ್ಗೆ ತಾನೇ ಯೋಚಿಸಬೇಕು ಎಂದು ಹೇಳಿ ಅಮ್ಮನ ಫೋನ್ ಕದ್ದು ರಾಕಿಗೆ ನಿಶ್ಚಿತಾರ್ಥದ ವಿಚಾರವನ್ನು ಹೇಳಿದ್ದಾಳೆ. ಬಂದು ತನ್ನನ್ನು ಕರೆದುಕೊಂಡು ಹೋಗುವಂತೆ ಬೇಡಿಕೊಂಡಿದ್ದಾಳೆ.

ರಾಕಿ ರಿತುಳ ಜೊತೆಗೆ ಹೋಗಲು ತಯಾರಿ ನಡೆಸಿದ್ದಾನೆ. ಆದರೆ, ತನ್ನ ಸ್ನೇಹಿತರಿಗೂ ಈ ವಿಚಾರವನ್ನು ತಿಳಿಸಿಲ್ಲ. ಹೇಗಾದರೂ ಮಾಡಿ ರಿತುಳನ್ನು ಕರೆದುಕೊಂಡು ಹೋಗಲೇಬೇಕು ಎಂದು ಬ್ಯಾಗ್ ಪ್ಯಾಕ್ ಮಾಡಿಕೊಂಡಿದ್ದಾನೆ. ಆದರೆ, ರಾಕಿ ನಡೆ ಎಷ್ಟು ಸರಿಯೋ, ಅವನು ಅಂದುಕೊಂಡಂತೆ ಎಲ್ಲವೂ ಆಗುತ್ತದೋ ಗೊತ್ತಿಲ್ಲ.

Sathya Serial 17th May episode written update

ಚಿಂತೆಯಲ್ಲಿ ಮುಳುಗಿರುವ ಕಾರ್ತಿಕ್

ಇತ್ತ ರಿತು ನಿಮಗ್ಯಾರಿಗೂ ನನ್ನ ಬಗ್ಗೆ ಕಾಳಜಿ ಇಲ್ಲ. ನಿನಗಿಷ್ಟ ಇಲ್ಲ ಅಂದರೂ ನಿಶ್ಚಿತಾರ್ಥ ಮಾಡುತ್ತಿದ್ದೀರಾ ಎಂದು ತನ್ನ ಆತಂಕವನ್ನು ಕಾರ್ತಿಕ್ ಬಳಿ ಹೇಳಿಕೊಂಡ ಕಾರಣ ಕಾರ್ತಿಗೆ ಇದೇ ದೊಡ್ಡ ಚಿಂತೆಯಾಗಿದೆ. ನಿಶ್ಚಿತಾರ್ಥದ ಕೆಲಸಗಳನ್ನು ಮಾಡುವ ಬದಲು ರಿತು ಭವಿಷ್ಯವನ್ನು ಹಾಗೂ ಅವಳ ಪ್ರೀತಿಯನ್ನು ಹಾಳು ಮಾಡುತ್ತಿದ್ದೇವೆ. ಇದನ್ನು ತಪ್ಪಿಸುವುದು ಹೇಗೆ ಎಂದು ಯೋಚಿಸುತ್ತಿದ್ದಾನೆ. ಮನೆಯಲ್ಲಿ ಅಪ್ಪನ ಮಾತಿಗೆ ಬೆಲೆ ಇಲ್ಲದಂತಾಗಿದೆ. ಹೀಗಿರುವಾಗ ನಾನು ಏನು ಮಾಡುವುದು, ರಿತುಗೆ ಸಹಾಯ ಮಾಡುವುದು ಹೇಗೆ ಎಂದು ಯೋಚಿಸುತ್ತಾ ನಿಂತಿದ್ದಾನೆ.

More from Filmibeat

English summary
Sathya Serial 17th May episode written update. here is detials about Lakshman is not ready to stop engagement. This is making everyone to feel worried. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X