Sathya: ಇಬ್ಬಂದಿಯಲ್ಲಿ ಲಕ್ಷ್ಮಣ, ಈಗಲೇ ಎರಡು ಲಕ್ಷ ಹಣ ಬೇಕು ಎಂದ ಪದ್ಮ!

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಕೀರ್ತನಾ ತಲೆಯಲ್ಲಿ ಸತ್ಯಳ ಹುಳ ಓಡಾಡುತ್ತಿದೆ. ಆರಾಮಾಗಿ ಅಮ್ಮ ಮತ್ತು ಕಾರ್ತಿಕ್‌ನನ್ನು ತನ್ನ ಪರ ಮಾಡಿಕೊಳ್ಳಲು ಏನೇನೋ ಪ್ಲಾನ್ ಮಾಡುತ್ತಿದ್ದ ಸತ್ಯ, ಈಗ್ಯಾಕೆ ಮಂಕಾಗಿದ್ದಾಳೆ ಎಂದು ಯೋಚಿಸುತ್ತಿದ್ದಾಳೆ. ಜೊತೆಗೆ ಸೀತಮ್ಮ ಕೂಡ ಈ ಬಗ್ಗೆ ಯೋಚನೆ ಮಾಡುತ್ತಿದ್ದಾಳೆ.

ಅದರಲ್ಲೂ ಮನೆಯಲ್ಲಿ ಎರಡನೇ ಮದುವೆ ವಿಚಾರ ಬಂದಿದ್ದಕ್ಕೆ ಸತ್ಯ ಯಾಕೆ ಅಷ್ಟು ರೋಷಾವೇಷದಿಂದ ಮಾತನಾಡಿದಳು. ನಮ್ಮ ಮನೆಯಲ್ಲಿ ಯಾರನ್ನ ಉದ್ದೇಶಿಸಿ ಹಾಗೆಲ್ಲಾ ಮಾತನಾಡಿದಳು ಎಂದು ಚಿಂತಿಸುತ್ತಿದ್ದಾಳೆ. ಸತ್ಯ ಮನಸ್ಸಲ್ಲಿ ಏನು ಓಡುತ್ತಿದೆ. ಯಾರ ಬಗ್ಗೆ ಯೋಚಿಸುತ್ತಿದ್ದಾಳೆ. ಎಂದೆಲ್ಲಾ ಕೀರ್ತನಾ ಯೋಚಿಸುತ್ತಿದ್ದಾಳೆ. ಆದರೆ, ಸತ್ಯ ತಲೆಯಲ್ಲಿ ಏನಿದೆ ಎಂಬುದು ಗೊತ್ತಾಗುವುದಿಲ್ಲ.

Sathya Serial 18 August episode written update

ಲಕ್ಷ್ಮಣನ ಹಿಂದೆ ಬಿದ್ದ ಸತ್ಯ ಗ್ಯಾಂಗ್

ಸತ್ಯ ಹುಡುಗರು ಕೂಡ ಲಕ್ಷ್ಮಣನನ್ನು ಫಾಲೋ ಮಾಡುತ್ತಿದ್ದಾರೆ. ಲಕ್ಷ್ಮಣ ತನ್ನ ಎರಡನೇ ಹೆಂಡತಿಯ ಜೊತೆಗೆ ಎಲ್ಲೆಲ್ಲಿ ಓಡಾಡುತ್ತಾರೆ. ಏನು ಮಾತನಾಡುತ್ತಾರೆ ಎಂಬುದನ್ನು ಕೇಳಿಸಿಕೊಳ್ಳಲು ಪ್ರಯಯತ್ನಿಸಿದ್ದಾರೆ. ಆದರೆ, ಇಬ್ಬರು ಯಾವುದೋ ಆಸ್ಪತ್ರೆಗೆ ಹೋಗಿದ್ದು, ಕೊನೆಗೆ ಜಗಳ ಮಾಡಿದ್ದನ್ನು ನೋಡಿ ಸತ್ಯಳಿಗೆ ಹೇಳಿದ್ದಾರೆ. ಆದರೆ, ಯಾರ ವಿಚಾರಕ್ಕೆ ಜಗಳ ಆಡಿದರು ಎಂಬುದು ಗೊತ್ತಾಗಿಲ್ಲ. ಸತ್ಯಳಿಗೆ ಈ ಲಕ್ಷ್ಮಣನ ಪ್ರತಿಯೊಂದು ನಡೆಯನ್ನು ತಿಳಿದು, ಹೇಗಾದರೂ ಮಾಡಿ ಊರ್ಮಿಳಾ ಅತ್ತೆಯ ಬದುಕನ್ನು ಸರಿ ಮಾಡುವ ಪಣ ತೊಟ್ಟಿದ್ದಾಳೆ. ಹಾಗಾಗಿ ಕಾರ್ತಿಕ್ ಕೂಡ ಎಷ್ಟೇ ಕೇಳಿದರೂ, ಏನಾಗಿದೆ, ಯಾರ ಬಗ್ಗೆ ಯೋಚಿಸುತ್ತಿದ್ದಾಳೆ ಎಂಬುದನ್ನು ಹೇಳುವುದಿಲ್ಲ.

ದಿವ್ಯಾ ಜಂಬ ಕೊಂಚವೂ ಇಳಿದಿಲ್ಲ!

ಇತ್ತ ಬಾಲ ಮತ್ತು ಮನೆಯವರಿಗೆ ದಿವ್ಯಾ ಎಲ್ಲಿಂದ ಹಣ ತಂದಳು ಎಂಬುದೇ ಆತಂಕವಾಗಿದೆ. ಹಣವನ್ನು ಮ್ಯಾನೇಜರ್‌ಗೆ ಕೊಟ್ಟು ಬಂದ ಮೇಲೆ ಜಾನಕಿ, ಗಿರಿಜಮ್ಮ ಹಾಗೂ ಬಾಲ ಮೂವರು ದಿವ್ಯಾಳನ್ನು ಹಣ ಹೇಗೆ ಹೊಂದಿಸಿದಳು ಎಂದು ಕೇಳಬೇಕು ಎಂದುಕೊಳ್ಳುತ್ತಾರೆ. ಟಿವಿ ನೋಡುತ್ತಾ ಜಾಲಿಯಾಗಿದ್ದ ದಿವ್ಯಾಳೀಗೆ ಇವರ ಪಿಸು ಪಿಸು ಮಾತುಗಳು ಇರಿಟೇಟ್ ಮಾಡುತ್ತಿರುತ್ತದೆ.

ತಲೆ ಕೆಟ್ಟ ದಿವ್ಯಾ, ಅದೇನದು ಹಾಗೆ ಗಲಾಟೆ ಮಾಡುತ್ತಿದ್ದೀರಾ ಎಂದು ಕೇಳಿದಾಗ ಬಾಲ ದುಡ್ಡು ಎಲ್ಲಿಂದ ತಂದೆ ಎಂದು ಕೇಳುತ್ತಾನೆ. ಅದೆಲ್ಲಾ ನಿನಗ್ಯಾಕೆ ಎಲ್ಲಿಂದಲೋ ತಂದೆ ಎಂದು ಜಂಬದಿಂದ ಮಾತನಾಡುತ್ತಾಳೆ. ಆಗ ಜಾನಕಿ ಬೈಯುತ್ತಾಳೆ. ಅದಕ್ಕೆ ದಿವ್ಯಾ ನಾನು ಎಲ್ಲೋ ಇರಬೇಕಿತ್ತು. ಇವನನ್ನು ನಂಬಿ ಮದುವೆಯಾಗಿದ್ದಕ್ಕೆ ಈ ಮನೆಗೆ ಬರಬೇಕಾಯ್ತು ನನ್ನ ಕರ್ಮ. ನೋಡುತ್ತಾ ಇರಿ ನಾನು ಅರಮನೆಯಲ್ಲಿ ವಾಸ ಮಾಡುತ್ತೇನೆ ಎಂದು ಹೇಳುತ್ತಾಳೆ. ಇವಳ ಮಾತು ಮೂವರಿಗೂ ಶಾಕ್ ನೀಡಿದೆ.

Sathya Serial 18 August episode written update

ಲಕ್ಷ್ಮಣನನ್ನು ಕಟ್ಟಾಕಿದ ಮನೆಯವರು

ಲಕ್ಷ್ಮಣ ಆಫೀಸ್ ಎಂದು ಸುಳ್ಳು ಹೇಳಿ ಹೊರಗಡೆ ಹೊರಟಿರುತ್ತಾನೆ. ಆದರೆ, ಊರ್ಮಿಳಾ, ಸೀತಾ, ಕಾರ್ತಿಕ್, ರಾಯರು ಮತ್ತು ಸತ್ಯ ಬೇಡ ಎಂದು ಬಲವಂತವಾಗಿ ಮನೆಯಲ್ಲೇ ಉಳಿಸಿಕೊಳ್ಳುತ್ತಾರೆ. ಊರ್ಮಿಳಾ ಪ್ರೀತಿಯಿಂದ ಲಕ್ಷ್ಮಣನಿಗೆ ಹಣ್ಣು, ಜ್ಯೂಸ್ ತಂದು ಕೊಡುತ್ತಿರುತ್ತಾಳೆ. ಇದೇ ಸಂದರ್ಭದಲ್ಲಿ ಲಕ್ಷ್ಮಣನ ಎರಡನೇ ಹೆಂಡತಿ ಪದ್ಮ ಪದೇ ಪದೇ ಕಾಲ್ ಮಾಡುತ್ತಿರುತ್ತಾಳೆ. ಏನೋ ನೆಪ ಹೇಳಿ ಲಕ್ಷ್ಮಣ ಅವಳ ಜೊತೆ ಮಾತನಾಡಲು ಟೆರೆಸ್ ಮೇಲೆ ಹೋಗುತ್ತಾನೆ.

ಲಕ್ಷ್ಮಣನ ಮಾತು ಕದ್ದಾಲಿಸಿದ ಸತ್ಯ

ಲಕ್ಷ್ಮಣನ ಹಿಂದೆ ಬಿದ್ದಿರುವ ಸತ್ಯ ಕೂಡ ಅವರ ಮಾತನ್ನು ಕದ್ದು ಕೇಳಿಸಿಕೊಳ್ಳುತ್ತಾಳೆ. ಪದ್ಮ ತುಂಬಾ ಅರ್ಜೆಂಟ್ ಇದೆ. ಈಗಲೇ ಎರಡು ಲಕ್ಷ ಕ್ಯಾಶ್ ತೆಗೆದುಕೊಂಡು ನಿಮ್ಮ ಮನೆಯ ಬಳಿ ಇರುವ ಪಾರ್ಕ್ ಗೆ ಬನ್ನಿ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಸತ್ಯಳಿಗೆ ಶಾಕ್ ಆಗುತ್ತದೆ. ಲಕ್ಷ್ಮಣ ಕೂಡ ತನ್ನ ಬಳಿ ಅಷ್ಟೋಂದು ಹಣ ಇಲ್ಲ ಎನ್ನುತ್ತಾನೆ. ಆದರೆ, ಪದ್ಮ ಇಲ್ಲ ಈಗಲೇ ಹಣ ಬೇಕೇಬೇಕು ಎನ್ನುತ್ತಾಲೆ. ಈ ಮಾತನ್ನು ಕೇಳಿದ ಸತ್ಯ ಆಕೆ ಲಕ್ಷ್ಮಣನ ಹಿಂದೆ ಬಿದ್ದಿರುವುದು ಹಣಕ್ಕಾಗಿ ಇರಬೇಕು ಎಂದು ಭಾವಿಸುತ್ತಾಳೆ.

More from Filmibeat

English summary
Sathya Serial: Lakshmana is forced to stay at home. Padma is asking money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X