Sathya: ರಾಕಿ ಜೊತೆಗೆ ಓಡಿ ಹೋದ ರಿತು: ನಿಶ್ಚಿತಾರ್ಥ ಅರ್ಧಕ್ಕೆ ನಿಂತು ಹೋಯ್ತಾ..?

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ರಿತುಳನ್ನು ಊರ್ಮಿಳಾ ಹಾಗೂ ಸತ್ಯ ರೆಡಿ ಮಾಡುತ್ತಾರೆ. ರಿತುಳನ್ನು ನೋಡಿದ ಲಕ್ಷ್ಮಣ ಖುಷಿ ಪಡುತ್ತಾನೆ. ಅಲ್ಲದೇ, ನಿಶ್ಚಿತಾರ್ಥವಾದ ಕೆಲವೇ ದಿನಗಳಲ್ಲಿ ಮದುವೆಯೂ ನಡೆಯುತ್ತೆ ಎಂದು ಹೇಳುತ್ತಾನೆ. ಆದರೆ, ರಿತುಗೆ ಇದೆಲ್ಲವೂ ಇಷ್ಟವಿಲ್ಲ. ಹಾಗಾಗಿ ರಾಯರಿಗೆ ಏನಾದರೂ ಹೇಳಿ ಎಂದು ಕೇಳುತ್ತಾಳೆ. ರಾಯರು ನನ್ನೆದೇನು ಇಲ್ಲ ಹೇಳುವುದಕ್ಕೆ ಎಂದು ಹೇಳಿ ಸುಮ್ಮನಾಗುತ್ತಾನೆ.

ಕಾರ್ತಿಕ್, ರಿತು ಮದುವೆ ಅವಳಿಷ್ಟದಂತೆ ಆಗುವುದೇ ಸರಿ. ಇದು ಅವಳ ಬದುಕು. ಆದರೆ, ಹೀಗೆ ಬಲವಂತ ಮಾಡಿ ಮದುವೆ ಮಾಡುವುದು ಕಷ್ಟ ಎಂದು ಹೇಳುತ್ತಾನೆ. ಕಾರ್ತಿಕ್ ಮಾತಿಗೆ ಯಾರೂ ಏನೂ ಹೇಳುವುದಿಲ್ಲ.

Sathya Serial 19th May episode written update

ಮನೆಗೆ ಗಂಡಿನ ಕಡೆಯವರು ಬರುತ್ತಾರೆ. ಆಗ ರಾಯರು ಸುಮ್ಮನೆ ಕುಳಿತರೆ, ತಪ್ಪಾಗುತ್ತದೆ ಎಂದು ಎದ್ದುಹೋಗಿ ಎಲ್ಲರಿಗೂ ಸ್ವಾಗತ ಕೋರುತ್ತಾರೆ. ಬಂದವರಿಗೆಲ್ಲಾ ಸತ್ಯ ತಿಂಡಿ ಅನ್ನು ಕೊಡುತ್ತಾಳೆ. ಸತ್ಯಳನ್ನು ನೋಡಿದ ಹುಡುಗನ ತಾಯಿ ಹೊಗಳುತ್ತಾರೆ. ತಲೆಯಲ್ಲಿ ಕೂದಲು ಇಲ್ಲದಿರುವುದನ್ನು ನೋಡಿ ಏನಪ್ಪ ಎಂದುಕೊಂಡೆ. ಆದರೆ, ಸೀತಾ ಅವರೆ ನಿಮ್ಮ ಸೊಸೆ ತುಂಬಾ ಸಂಸ್ಕೃತವಂತಳು. ವಿನಯವಂತೆ ಎಂದು ಹೊಗಳುತ್ತಾಳೆ. ಆಗ ಸೀತಾಳಿಗೆ ಏನು ಹೇಳಬೇಕು ಎಂಬುದೇ ತಿಳಿಯುವುದಿಲ್ಲ. ಆದರೆ, ರಾಯರು ಸತ್ಯಳನ್ನು ಹೊಗಳಿ ಮಾತನಾಡುತ್ತಾರೆ. ಇದರಿಂದ ಸೀತಾಳಿಗೆ ಇನ್ನಷ್ಟು ಇರಿಟೇಟ್ ಆಗುತ್ತದೆ.

ಲಗ್ನಪತ್ರಿಕೆ ಬರೆಸಾಯ್ತು

ಬಳಿಕ ರಿತುಳನ್ನು ಕರೆಸಿ ಲಗ್ನಪತ್ರಿಕೆಯನ್ನು ಬರೆಸುತ್ತಾರೆ. ಆದರೆ, ರಿತುಗೆ ಈ ಮದುವೆ ಇಷ್ಟವಿರುವುದಿಲ್ಲ. ಲಗ್ನಪತ್ರಿಕೆಯನ್ನು ಓದುವ ಸಂದರ್ಭದಲ್ಲಿ ಸತ್ಯಳಿಗೆ ಫೋನ್ ಬರುತ್ತದೆ. ಇದರಿಂದ ಮನೆಯವರಿಗೆಲ್ಲಾ ಕಿರಿಕಿರಿ ಆಗುತ್ತದೆ. ಸತ್ಯ ಎಷ್ಟು ಸಲ ಫೋನ್ ಬಂದರೂ ಕಟ್ ಮಾಡುತ್ತಾಳೆ. ಆದರೆ ಆ ಫೋನ್ ದಿವ್ಯಾಳದ್ದಾಗಿರುತ್ತದೆ. ಫೋನ್ ರಿಂಗ್ ಆಗಿದ್ದಕ್ಕೆ ಸತ್ಯಳಿಗೂ ಮುಜುಗರವಾಗುತ್ತದೆ.

ಲಗ್ನಪತ್ರಿಕೆ ಬರೆದ ಮೇಲೆ ಸತ್ಯ ಎಲ್ಲರಿಗೂ ಕೊಬ್ಬರಿ ಸಕ್ಕರೆ ಅನ್ನು ನೀಡುತ್ತಾಳೆ. ಈ ವೇಳೆ ಸತ್ಯ ಬೇಕಂತಲೇ ಕಾರ್ತಿಕ್ ನಿಂದ ಕೊಬ್ಬರಿ ಸಕ್ಕರೆ ಅನ್ನು ತಿನ್ನಿಸಿಕೊಳ್ಳುತ್ತಾಳೆ. ಇದನ್ನು ನೋಡಿದ ಕೀರ್ತನಾ ಈ ರೊಮ್ಯಾನ್ಸ್ ಎಲ್ಲಾ ಇಲ್ಲಿ ಬೇಕಾ ಎಂದು ಕೇಳುತ್ತಾಳೆ. ಅದಕ್ಕೆ ಸತ್ಯ ನಾನು ಮದುವೆಯಾಗಿದ್ದೀನಿ. ನಿನಗೆ ಬೇಕಂದರೆ ನೀನು ಸುಹಾಸ್‌ನಿಂದ ತಿನ್ನಿಸಿಕೋ ಎಂದು ರೇಗಿಸುತ್ತಾಳೆ.

Sathya Serial 19th May episode written update

ಬಾಲನ ಜೊತೆಗೆ ಬದುಕು ಬೇಡ

ಇತ್ತ ದಿವ್ಯಾ ಅಂತೂ ಪಟ್ಟು ಹಿಡಿದು ಕೂತಿದ್ದಾಳೆ. ಬಾಲನ ಜೊತೆಗೆ ಬಾಳಲ್ಲ ಎಂದು ಹೇಳುತ್ತಿದ್ದಾಳೆ. ಯಾರು ಎಷ್ಟೇ ಬುದ್ಧಿವಾದ ಹೇಳಿದರೂ ಕೇಳುತ್ತಿಲ್ಲ. ಬಾಲ ತಾನೂ ಕೆಲಸಕ್ಕೆ ಹೋಗಿ ನಿನ್ನನ್ನು ಸುಖವಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದರೂ ದಿವ್ಯಾ ಕೇಳುತ್ತಿಲ್ಲ. ಜಾನಕಿ ಮತ್ತು ಗಿರಿಜಾ ಕೂಡ ದುಡ್ಡಿನ ಹಿಂದೆ ಹೋಗಬೇಡ ಎಂದು ತಮಗೆ ತೋಚಿದಂತೆಲ್ಲಾ ಬುದ್ಧಿ ಹೇಳುತ್ತಿದ್ದಾರೆ. ಆದರೆ, ದಿವ್ಯಾ ಕೇಳುವುದಕ್ಕೆ ಸಿದ್ಧವಿಲ್ಲ.

ಮನೆಯಿಂದ ಓಡಿ ಹೋದ ರಿತು

ಉಂಗುರ ಬದಲಾಯಿಸುವ ಶಾಸ್ತ್ರಕ್ಕಾಗಿ ಬಟ್ಟೆಯನ್ನು ಬದಲಾಯಿಸಿ ಬರಲು ಹೇಳುತ್ತಾರೆ. ಸತ್ಯ, ರಿತುಳನ್ನು ಕರೆದುಕೊಂಡು ಹೋಗುತ್ತಾಳೆ. ಆಗ, ಲಕ್ಷ್ಮಣ ಸತ್ಯ ಮೇಲೆ ನಂಬಿಕೆ ಇಲ್ಲದ ಕಾರಣ ಕಾರ್ತಿಕ್‌ನನ್ನೂ ಜೊತೆಗೆ ಹೋಗುವಂತೆ ಹೇಳುತ್ತಾರೆ. ಆದರೆ, ಸತ್ಯ ಮತ್ತು ಕಾರ್ತಿಕ್ ಯಾರೋ ಕರೆದರು ಎಂದು ಆಚೆ ಬರುತ್ತಾರೆ. ಇದೇ ಸಂದರ್ಭವನ್ನು ಬಳಸಿಕೊಡ ರಿತು ಹಿಂದಿನ ಬಾಗಿಲಿನಿಂದ ರಾಕಿ ಜೊತೆಗೆ ಹೊರಟು ಹೋಗುತ್ತಾಳೆ. ಆದರೆ, ಈಗ ರಿತು ಮನೆಯಲ್ಲಿ ಇಲ್ಲದೇ ಇರುವುದಕ್ಕೆ ಸತ್ಯಳನ್ನೇ ಆರೋಪಿಸುತ್ತಾರಾ ಕಾದು ನೋಡಬೇಕಿದೆ.

More from Filmibeat

English summary
sathya Serial 19th May episode written update. here is detials about Ritu runs away with Rakhi in the middle of the engagement. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X