Sathya: ದಿವ್ಯಾಳಿಗೆ ಗೊಗ್ಗಯ್ಯನೇ ಸರಿ: ಕೀರ್ತನಾಗೆ ಸತ್ಯನೇ ಕರೆಕ್ಟ್!

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ಕೀರ್ತನಾ ಬೇಕಂತಲೇ ಕಾರ್ತಿಕ್‌ಗೆ ಹೆಚ್ಚು ಹೆಚ್ಚು ಕೆಲಸವನ್ನು ಕೊಡುತ್ತಿರುತ್ತಾಳೆ. ಇದರ ಬಗ್ಗೆ ತಿಳಿದ ಸತ್ಯ ಆಫೀಸಿಗೆ ಹೋಗಿ ಕೀರ್ತನಾಳಿಗೆ ಕ್ಲಾಸ್ ತೆಗೆದುಕೊಂಡಿರುತ್ತಾಳೆ.

ಮತ್ತೆ ಕಾರ್ತಿಕ್‌ಗೆ ಬೇಕಂತ ಕೆಲಸ ಜಾಸ್ತಿ ಕೊಡುವುದು, ಎಲ್ಲರ ಮುಂದೆ ಅವಮಾನ ಮಾಡುವುದು ಗೊತ್ತಾದರೆ, ಸುಮ್ಮನಿರೊಲ್ಲ ಎಂದು ಹೇಳಿ ವಾರ್ನಿಂಗ್ ಕೊಟ್ಟು ಬಂದಿರುತ್ತಾಳೆ.

ಆದರೆ, ಇದ್ಯಾವುದೂ ಕಾರ್ತಿಕ್‌ಗೆ ಗೊತ್ತಿರುವುದಿಲ್ಲ. ಮನೆಗೆ ಬಂದು ಕೀರ್ತನಾ, ಸೀತಾ ಮುಂದೆ ಇದೇ ವಿಚಾರವಾಗಿ ಪುಂಗಿ ಊದಿರುತ್ತಾಳೆ. ಆದರೆ, ಊರ್ಮಿಳಾ, ಸತ್ಯಳನ್ನು ಸಮರ್ಥಿಸಿಕೊಂಡಿರುತ್ತಾಳೆ.

ಬಾಲನಿಗೆ ತಿರುಗೇಟು ಕೊಟ್ಟ ದಿವ್ಯಾ

ಬಾಲನಿಗೆ ತಿರುಗೇಟು ಕೊಟ್ಟ ದಿವ್ಯಾ

ಇನ್ನು ದಿವ್ಯಾ ತಾನು ಗರ್ಭಿಣಿ ಅಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತಾಗಿದೆ. ಆದರೆ, ದಿವ್ಯಾ ಬೇಕಂತಲೇ ಸುಳ್ಳು ಹೇಳಿದ್ದು ಎಂಬುದು ಬಾಲನಿಗೆ ತಡವಾಗಿ ಗೊತ್ತಾಗಿದೆ. ಬಾಲ ಈ ಬಗ್ಗೆ ದಿವ್ಯಾಳನ್ನು ಪ್ರಶ್ನೆ ಮಾಡುತ್ತಾನೆ. ನೀನು ಯಾಕಿಷ್ಟು ದೊಡ್ಡ ಸುಳ್ಳು ಹೇಳಿದೆ. ನೀನು ಮಾಡಿದ್ದು ತಪ್ಪ ದಿವ್ಯಾ ಎಂದು ಹೇಳುತ್ತಾನೆ. ಬಾಲನ ಮಾತು ಕೇಳಿಸಿಕೊಂಡು ಸುಮ್ಮನಿರದ ದಿವ್ಯಾ, ಹಾಗಾದರರೆ, ನೀನೇನು ತಪ್ಪೇ ಮಾಡಿಲ್ವಾ..? ಯಾವ ಸುಳ್ಳನ್ನೂ ಹೇಳೇ ಇಲ್ವಾ ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಒಂದು ಕ್ಷಣ ಗಾಬರಿಯಾದ ಬಾಲ, ಜೀವನದಲ್ಲಿ ಸಣ್ಣ-ಪುಟ್ಟ ಸುಳ್ಳು ಹೇಳುವುದು ತಪ್ಪಲ್ಲ. ಆದರೆ, ಹೀಗೆ ದೊಡ್ಡ ಸುಳ್ಳು ಹೇಬಾರದು ಎಂದು ಹೇಳುತ್ತಾನೆ. ಅದಕ್ಕೆ ದಿವ್ಯಾ, ತನಗೆ ಹಳ್ಳಿಯಲ್ಲಿರುವುದು ಇಷ್ಟವಿಲ್ಲ. ಹೊರಗೆ ಹೋಗಬೇಕು ಎಂದು ಹೇಳುತ್ತಾಳೆ.

ಸತ್ಯ-ಕಾರ್ತಿಕ್ ಮತ್ತೆ ಕಿತ್ತಾಟ

ಸತ್ಯ-ಕಾರ್ತಿಕ್ ಮತ್ತೆ ಕಿತ್ತಾಟ

ಇನ್ನು ಕಾರ್ತಿಕ್ ಆಫೀಸಿನಿಂದ ಲೇಟ್ ಆಗಿ ಬರುತ್ತಾನೆ. ಕಾದು ಕಾದು ಸುಸ್ತಾದ ಸತ್ಯ, ಕಾರ್ತಿಕ್ ಮೇಲೆ ಜೋರು ಮಾಡುತ್ತಾಳೆ. ಯಾಕೆ ಲೇಟ್, ಒಂದು ಫೋನ್ ಮಾಡುವುದಕ್ಕೆ ಆಗೋದಿಲ್ವಾ ಎಂದು ಪ್ರಶ್ನೆ ಮಾಡುತ್ತಾಳೆ. ಕಾರ್ತಿಕ್, ಸತ್ಯಳನ್ನು ಬೈಯುತ್ತಾನೆ. ನೀನು ಕೀರ್ತನಾ ಬಳಿ ನನ್ನ ವಿಚಾರವಾಗಿ ಯಾಕೆ ಜಗಳ ಮಾಡುತ್ತೀಯಾ. ಕೀರ್ತನಾ ಹತ್ರ ಏನೂ ಹೇಳಬೇಡ. ಅವಳು ನನ್ನ ಅಮ್ಮವ್ರ ಗಂಡ ಅಂತ ಎಲ್ಲರ ಮುಂದೆ ರೇಗಿಸುತ್ತಾಳೆ. ಇನ್ನು ಹೆಚ್ಚು ಟಾರ್ಚರ್ ಕೊಡುತ್ತಾಳೆ ಎಂದು ಹೇಳುತ್ತಾನೆ. ಅದಕ್ಕೆ ಇಬ್ಬರ ನಡುವೆ ಸಣ್ಣ ಜಗಳವೂ ಅಗುತ್ತದೆ.

ದಿವ್ಯಾಗೆ ಗೊಗ್ಗಯ್ಯನೇ ಸರಿ

ದಿವ್ಯಾಗೆ ಗೊಗ್ಗಯ್ಯನೇ ಸರಿ

ಇನ್ನು ದಿವ್ಯಾ ಸೋಮಾರಿತನದಿಂದ ಮಲಗಿರುತ್ತಾಳೆ. ಬಾಲ ಎಷ್ಟು ಹೇಳಿದರೂ ದಿವ್ಯಾ ಎದ್ದೇಳುವುದಿಲ್ಲ. ನಾನು ಮಲಗಬೇಕು ಎಂದು ಹಠ ಮಾಡಿ ಮತ್ತೆ ಮಲಗುತ್ತಾಳೆ. ಗೊಗ್ಗಯ್ಯ ಬಂದು ದಿವ್ಯಾಗೆ ನೀರು ಹಾಕಿ ಎಬ್ಬಿಸುತ್ತಾರೆ. ಯಾಕೆ ಎಂದು ಕೇಳಿದ್ದಕ್ಕೆ ಎದ್ದು ಹೋಗಿ ಕೆಲಸ ಮಾಡು ಎಂದು ಗೊಗ್ಗಯ್ಯ ಬೈಯುತ್ತಾನೆ. ಆಗ ದಿವ್ಯಾ ಏನೂ ಮಾತನಾಡದೇ ಎದ್ದು ಹೋಗುತ್ತಾಳೆ. ದಿವ್ಯಾಗೆ ಗೊಗ್ಗಯ್ಯನೇ ಸರಿ.

ಕೀರ್ತನಾ ವಿಚಾರ ಹೇಳಿದ ಊರ್ಮಿಳಾ

ಕೀರ್ತನಾ ವಿಚಾರ ಹೇಳಿದ ಊರ್ಮಿಳಾ

ಊರ್ಮಿಳಾ, ಸತ್ಯಳನ್ನು ವಿಚಾರಿಸುತ್ತಾಳೆ. ನೀನು ಆಫೀಸಿನಲ್ಲಿ ಕೀರ್ತನಾ ಜೊತೆಗೆ ಕಿರಿಕಿರಿ ಮಾಡಿಕೊಂಡ್ಯಾ ಎಂದು ಕೇಳುತ್ತಾಳೆ. ಅದಕ್ಕೆ ಸತ್ಯ, ಸುಮ್ಮನೆ ಕಾರ್ತಿಕ್‌ ನನ್ನು ಪೀಡಿಸುತ್ತಾಳೆ. ಅದಕ್ಕೆ ಬುದ್ದಿ ಹೇಳಿದೆ ಅಷ್ಟೇ ಎಂದು ಹೇಳುತ್ತಾಳೆ. ಊರ್ಮಿಳಾ, ಬೈಯುತ್ತಾಳೆ. ಏನೇ ಇದ್ದರೂ ನೀನು ಭಾವನಿಗೆ ಹೇಳು, ಅವಳ ಸಹವಾಸ ಬೇಡ. ಇಲ್ಲಿ ಬಂದು ಸೀತಾ ಹತ್ರ ಕಥೆ ಕಟ್ಟಿದ್ದಾಳೆ ಎಂದಾಗ ಸತ್ಯಗೆ ಶಾಕ್ ಆಗುತ್ತೆ. ಸೀತಮ್ಮನಿಗೆ ತನ್ನ ಮೇಲೆ ಕೋಪ ಬಂದಿದ್ಯಾ ಎಂಬ ಪ್ರಶ್ನೆ ಕಾಡುತ್ತೆ.

More from Filmibeat

English summary
sathya serial 20th February Episode Written Update. bala feels bad for divya tellinglie. But divya donot feel guilty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X