Sathya: ಕಾರ್ತಿಕ್ ಫಸ್ಟ್ ಲವ್ ಬಗ್ಗೆ ಹೇಳಿದ ಹುಡುಗರು
ಸತ್ಯ ಧಾರಾವಾಹಿಯಲ್ಲಿ ಸೀತಾ ಪೂಜೆ ಆದ ಮೇಲೆ ಸಾವಿತ್ರಿ ಕಥೆಯನ್ನು ಓದುತ್ತಾಳೆ. ಸಾವಿತ್ರಿ ಹೇಗೆ ತನ್ನ ಪತಿಯನ್ನು ಉಳಿಸಿಕೊಂಡಳು ಎಂಬುದನ್ನು ಕೇಳಿ ಸತ್ಯ ಆಶ್ಚರ್ಯ ಪಡುತ್ತಾಳೆ. ನಂತರ ಮಂಗಳಾರತಿ ಮಾಡಿ ಎಲ್ಲರಿಗೂ ಆರತಿ ಕೊಡುತ್ತಾಳೆ. ಆಗಲೂ ಕಾರ್ತಿಕ್ ಕಿತಾಪತಿ ಮಾಡುತ್ತಾನೆ. ನಂತರ ಊಟ ಮಾಡಲು ಮುಂದಾಗುತ್ತಾರೆ. ಸತ್ಯ ಇವತ್ತು ನಾನೇ ಬಡಿಸುತ್ತೇನೆ ಎನ್ನುತ್ತಾಳೆ.
ಸತ್ಯ ಮಾತಿಗೆ ಸೀತಾ ಎದುರಾಡದೇ ಊಟಕ್ಕೆ ಕುಳಿತುಕೊಳ್ಳುತ್ತಾಳೆ. ಎಲ್ಲರೂ ಒಟ್ಟಾಗಿ ಊಟ ಮಾಡುತ್ತಾರೆ. ಸೀತಾ, ಊರ್ಮಿಳಾ ಹಾಗೂ ಸತ್ಯ ಮೂವರು ಊಟ ಬಡಿಸುತ್ತಿರುತ್ತಾರೆ. ರಾಯರು ಸೀತಾಳಿಗೆ ಊಟಕ್ಕೆ ಕುಳಿತುಕೊಳ್ಳಲು ಬಲವಂತ ಮಾಡುತ್ತಾನೆ. ಸೀತಾ ಕೇಳುವುದಿಲ್ಲ. ಆಗ ಸತ್ಯ ಸೀತಮ್ಮನನ್ನು ಊಟಕ್ಕೆ ಕುಳಿತುಕೊಳ್ಳಿ ಎಲ್ಲರಿಗೂ ನಾನು ಬಡಿಸುತ್ತೇನೆ ಎನ್ನುತ್ತಾಳೆ. ಆಗ ಸೀತಮ್ಮ ಊಟಕ್ಕೆ ಕುಳಿತುಕೊಳ್ಳುತ್ತಾಳೆ.

ರಾಯರು ಸೀತಮ್ಮನಿಗೆ ಊಟ ಮಾಡಿಸುತ್ತಾರೆ. ಹಾಗೆ ಕೆಲ ವಿಚಾರಗಳನ್ನು ತಮಾಷೆಯಾಗಿ ಮಾತನಾಡುತ್ತಾ ಎಲ್ಲರೂ ಖುಷಿಯಿಂದ ಇರುತ್ತಾರೆ.
ಬಾಲನ ಪಾದಕ್ಕೆ ದಿವ್ಯಾ ಪೂಜೆ
ಇತ್ತ ದಿವ್ಯಾ ತನ್ನ ಗಂಡ ಬಾಲನ ಪಾದಕ್ಕೆ ಪೂಜೆ ಮಾಡುತ್ತಾಳೆ. ದಿವ್ಯಾ ಪೂಜೆಯನ್ನು ಮಾಡುತ್ತಿರುವುದನ್ನು ನೋಡಿದ ಜಾನಕಿ ಹಾಗೂ ಗಿರಿಜನಮ್ಮ ಶಾಕ್ ಆಗುತ್ತಾರೆ. ದಿವ್ಯಾ ಇಷ್ಟೆಲ್ಲಾ ಬದಲಾಗಿದ್ದಾಳಾ ಎಂದು ಅನಿಸುತ್ತದೆ. ದಿವ್ಯಾ ಹೀಗೆಲ್ಲಾ ಮಾಡುತ್ತಿದ್ದಾಳೆ ಎಂದರೆ, ಇದರ ಹಿಂದೆ ಯಾವುದೋ ದುರುದ್ದೇಶ ಇರಬೇಕು ಎಂದು ಮಾತನಾಡಿಕೊಳ್ಳುತ್ತಾರೆ. ಪೂಜೆ ಮುಗಿದ ಬಳಿಕ ದಿವ್ಯಾ ಜಾನಕಿ ಹಾಗೂ ಗಿರಿಜಮ್ಮನಿಗೆ ನೀವು ಅರಾಮಾಗಿರಿ. ಇವತ್ತು ನಾನೇ ತಿಂಡಿ ಮಾಡುತ್ತೇನೆ ಎನ್ನುತ್ತಾಳೆ. ದಿವ್ಯಾಳ ಮಾತು ಇನ್ನಷ್ಟು ಆಶ್ಚರ್ಯಕ್ಕೆ ಕಾರಣವಾಗುತ್ತದೆ.
ಹುಡುಗರ ಜೊತೆಯಲ್ಲಿ ಕಾರ್ತಿಕ್
ಇನ್ನು ಕಾರ್ತಿಕ್ ಈಗ ಸತ್ಯಳಿಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಬೇಕು. ಆದರೆ, ಹೇಗೆ ಎಂಬುದು ತಿಳಿದಿರುವುದಿಲ್ಲ. ಹೀಗಾಗಿ ಹುಡುಗರ ಬಳಿ ಹೋದ ಕಾರ್ತಿಕ್, ಸತ್ಯಳಿಗೆ ಏನು ಇಷ್ಟ. ಅವಳಿಗೆ ಹೇಗೆ ಹೇಳಿದರೆ, ತನ್ನ ಪ್ರೀತಿ ಅರ್ಥವಾಗುತ್ತದೆ ಎಂದು ತಿಳಿದುಕೊಳ್ಳಲು ಯತ್ನಿಸುತ್ತಾನೆ. ಹುಡುಗರೆಲ್ಲಾ ಕಾರ್ತಿಕ್ ಬಾಯಿಯಲ್ಲಿ ಸತ್ಯ ಬಗ್ಗೆ ಕೇಳಿ ಖುಷಿ ಪಡುತ್ತಾರೆ. ಬೇಬಿ ಭಾವನಿಗೆ ಸತ್ಯ ಮೇಲೆ ಈಗ ಲವ್ವಾಗಿದ್ದಲ್ಲ ಎಂಬ ಸತ್ಯವನ್ನು ಹೇಳುತ್ತಾರೆ. ಕಾರ್ತಿಕ್ ನೆಪಕ್ಕೆ ಮಾತ್ರವೇ ದಿವ್ಯಾಳನ್ನು ಇಷ್ಟ ಪಟ್ಟಿದ್ದು, ಆದರೆ, ಮೊದಲಿನಿಂದಲೂ ಪ್ರೀತಿಸಿದ್ದು, ಸತ್ಯಳನ್ನು ಎಂದು ಹೇಳುತ್ತಾರೆ.

ಸತ್ಯ ತಿಳಿದುಕೊಂಡ ಕಾರ್ತಿಕ್
ಅವತ್ತು ಮಂಗಳಮುಖಿಗೆ ಕೆಲಸ ಕೊಡಿಸಿದ್ದು ಸತ್ಯ. ಆದರೆ, ಕಾರ್ತಿಕ್ ನೋಡಿದ್ದು ದಿವ್ಯಾಳನ್ನು. ಕಾರ್ತಿಕ್ ಹುಟ್ಟುಹಬ್ಬಕ್ಕೆ ಐಸ್‌ನಿಂದ ಡಿಸೈನ್ ಮಾಡಿಕೊಟ್ಟಿದ್ದು ಸತ್ಯ. ದಿವ್ಯಾ ಅದನ್ನು ತಂದಿದ್ದು ಅಷ್ಟೇ ಎಂಬುದನ್ನು ಹೇಳುತ್ತಾರೆ. ಕಾರ್ತಿಕ್ ಬರೆದ ಕವನಕ್ಕೆ ಮತ್ತೊಂದು ಕವನ ಬರೆದುಕೊಟ್ಟಿದ್ದು ಸತ್ಯ. ಹಾಗೆ ನೋಡಿದರೆ, ದಿವ್ಯಾ ಅಲ್ಲ ನಿಮ್ಮ ಫಸ್ಟ್ ಲವ್. ನೀವು ಮದುವೆಯಾಗಿರುವ ಸತ್ಯನೇ ನಿಮ್ಮ ಮೊದಲ ಪ್ರೀತಿ ಎಂಬುದನ್ನು ಅರ್ಥ ಮಾಡಿಸುತ್ತಾರೆ.
ಈ ಮಾತನ್ನು ಕೇಳಿದ ಕಾರ್ತಿಕ್‌ಗೆ ಸಖತ್ ಖುಷಿಯಾಗುತ್ತದೆ. ಸತ್ಯಾಳಿಗೆ ಪ್ರಪೋಸ್ ಮಾಡಬೇಕು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ರಿತು ಖುಷಿಯಾಗುತ್ತಾಳೆ. ಮದುವೆಯಾಗಿ ಆನಿವರ್ಸರಿ ಬರುವ ವೇಳೆಗಾದರೂ ಕಾರ್ತಿಕ್ ಅಣ್ಣ ಅತ್ತಿಗೆಗೆ ಪ್ರಪೋಸ್ ಮಾಡಬೇಕು ಎಂದು ಕೊಂಡಿದ್ದಾರಲ್ಲ ಎಂದು ಸಂತಸಪಡುತ್ತಾಳೆ.


Click it and Unblock the Notifications











