Sathya: ದಿವ್ಯಾ ತನ್ನ ಅನುಮಾನ ಬಗೆ ಹರಿಸಿಕೊಳ್ಳುತ್ತಾಳಾ?

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ಅವಾರ್ಡ್ ವಿನ್ನಿಂಗ್ ಪ್ರೊಗ್ರಾಮ್‌ಗೆ ಸತ್ಯ ಪ್ರಾಜೆಕ್ಟ್ ಅನ್ನು ಸೆಂಡ್ ಮಾಡಿದ್ದಾಳೆ. ಆದರೆ, ಈ ವಿಷಯವನ್ನು ಸತ್ಯ, ಕಾರ್ತಿಕ್ ಬಳಿ ಇನ್ನೂ ಹೇಳಿಕೊಂಡಿಲ್ಲ.

ಕಾರ್ತಿಕ್ ಪ್ರಾಜೆಕ್ಟ್ ಅನ್ನು ಸಬ್ಮಿಟ್ ಮಾಡಿಲ್ಲ ಎಂದೇ ತಿಳಿದುಕೊಂಡಿದ್ದಾನೆ. ಆದರೆ ಸತ್ಯ ಪ್ರಾಜೆಕ್ಟ್ ಅನ್ನು ಕಳಿಸಿದ್ದು, ಈಗ ರಿಸಲ್ಟ್‌ಗೆ ಕಾಯುತ್ತಿದ್ದಾಳೆ.

ಪದೇ ಪದೇ ಕಾರ್ತಿಕ್ ಬಳಿ ಪ್ರಾಜೆಕ್ಟ್ ದು ರಿಸಲ್ಟ್ ಬಂತಾ ಎಂದು ಕೇಳುತ್ತಲೇ ಇದ್ದಾಳೆ. ನಾವು ಪ್ರಾಜೆಕ್ಟ್ ಕಳಿಸಿಲ್ಲ ಎಂದರೂ ಸತ್ಯ ಪದೇ ಪದೇ ಕೇಳುತ್ತಿರುವುದಕ್ಕೆ ಕಾರ್ತಿಕ್ ಕೋಪ ಮಾಡಿಕೊಳ್ಳುತ್ತಾನೆ.

ಇಬ್ಬರ ನಡುವೆ ಸೀತಾ ಎಂಟ್ರಿ

ಇಬ್ಬರ ನಡುವೆ ಸೀತಾ ಎಂಟ್ರಿ

ಇನ್ನು ಊರ್ಮಿಳಾ, ಸತ್ಯಗೆ ಬುದ್ಧಿ ಹೇಳುತ್ತಿರುತ್ತಾಳೆ. ಕೀರ್ತನಾ ಜೊತೆಗೆ ನೀನು ಕಿರಿಕ್ ಮಾಡಿಕೊಳ್ಳಬಾರದಿತ್ತು. ನೀನೀಗ ನಿಮ್ಮ ಅತ್ತೆ ಸೀತಾ ಮನಸ್ಸನ್ನ ಗೆಲ್ಲಬೇಕು. ಅದು ಬಿಟ್ಟು ನೀನು ಕೀರ್ತನಾ ಜೊತೆ ಕಿರಿಕ್ ಮಾಡಿಕೊಂಡರೆ ಸಮಸ್ಯೆ ಆಗುತ್ತೆ ಎಂದು ಊರ್ಮಿಳಾ ಹೇಳುತ್ತಾಳೆ. ಆಗ ಸತ್ಯ, ಸೀತಮ್ಮ ಕೀರ್ತನಾ ಹೇಳಿದ್ದನ್ನೆಲ್ಲಾ ನಂಬಿದ್ರಾ..? ನನ್ನ ಮೇಲೆ ಕೋಪ ಮಾಡಿಕೊಂಡಿದ್ದಾರಾ ಎಂದು ಕೇಳುತ್ತಾಳೆ. ಅಷ್ಟರಲ್ಲಿ ಸೀತಾ, ಊರ್ಮಿಳಾ ಮತ್ತು ಸತ್ಯ ಮಾತನಾಡುತ್ತಿರುವ ಜಾಗಕ್ಕೆ ಬರುತ್ತಾಳೆ.

ಸತ್ಯಗೆ ಬೈದ ಸೀತಾ

ಸತ್ಯಗೆ ಬೈದ ಸೀತಾ

ಸತ್ಯಗೆ ಸೀತಾ ಬೈಯುತ್ತಾಳೆ. ನಿನ್ನ ಕೆಲಸ ಎಷ್ಟಿದಿಯೋ ಅಷ್ಟು ನೋಡಿಕೋ. ಇನ್ನೊಬ್ಬರ ತಂಟೆಗೆ ಬರಬೇಡ ಎಂದು ಹೇಳುತ್ತಾಳೆ. ಅದಕ್ಕೆ ಊರ್ಮಿಳಾ ಮಧ್ಯ ಬಾಯಿ ಹಾಕುತ್ತಾಳೆ. ಸೀತಾ, ಊರ್ಮಿಳಾಗೆ ಬೈದು ಹೊರಗೆ ಕಳಿಸುತ್ತಾಳೆ. ಸೀತಾ, ಸತ್ಯಗೆ ವಾರ್ನಿಂಗ್ ಕೊಡುತ್ತಾಳೆ. ನಾನು ನಾಳೆ ನನ್ನ ಮಗನನ್ನು ಬೈದರೆ ಹೀಗೆ ಗಲಾಟೆ ಮಾಡುತ್ತೀಯಾ. ಕೀರ್ತನಾ, ಕಾರ್ತಿಕ್ ಅಕ್ಕ, ತಾಯಿ ಸ್ಥಾನದಲ್ಲಿ ನಿಂತು ಬೈಯುವ ಹಕ್ಕು ಅವಳಿಗಿದೆ. ನೀನು ಈ ಮನೆಯಿಂದ ಹೊರಗೆ ಹೋಗುವ ಸಮಯ ಹತ್ತಿರವಾಗುತ್ತಿದೆ. ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಹೋಗುವುದನ್ನು ಕಲಿ ಎಂದು ಬೈಯುತ್ತಾಳೆ.

ದಿವ್ಯಾಗೆ ಬಾಲನ ಮೇಲೆ ಅನುಮಾನ

ದಿವ್ಯಾಗೆ ಬಾಲನ ಮೇಲೆ ಅನುಮಾನ

ಇತ್ತ ದಿವ್ಯಾ ಮನೆ ಕೆಲಸವನ್ನು ಮಾಡುತ್ತಿರುತ್ತಾಳೆ. ಆದರೆ, ತನ್ನ ಪ್ಲ್ಯಾನ್ ಎಲ್ಲಾ ಉಲ್ಟಾ ಆಯ್ತಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಬಾಲ ಏನಾದರೂ ತನ್ನ ಬಳಿ ಸುಳ್ಳು ಹೇಳಿದ್ದಾನಾ..? ನಾನು ಬಾಲ ಹೇಳಿದ್ದನ್ನು ನಂಬಿಕೊಂಡು ಬಂದಿದ್ದೀನಾ..? ಸತ್ಯ ಹೇಳಿದ್ದೆಲ್ಲಾ ನಿಜಾನಾ..? ಬಾಲ ನಿಜವಾಗಲೂ ಮೋಸಗಾರನಾ? ನಾನು ಮದುವೆಯಾದಾಗಿನಿಂದ ಬಾಲ ಒಂದು ದಿನವೂ ತನ್ನ ಮನೆಗೆ ಕರೆದುಕೊಂಡು ಹೋಗಿಲ್ಲ. ದುಡ್ಡು ಕೂಡ ಇಲ್ಲ ಎನ್ನುತ್ತಾನೆ. ಈ ಹಳ್ಳಿ ಲೈಫ್‌ಗೆ ಚೆನ್ನಾಗಿ ಒಗ್ಗಿಕೊಂಡು ಬಿಟ್ಟಿದ್ದಾನೆ. ನಿಜವಾದ ಸತ್ಯವನ್ನು ತಿಳಿದುಕೊಳ್ಳುವುದು ಹೇಗೆ ಎಂದು ಯೋಚಿಸುತ್ತಾಳೆ. ಸತ್ಯಗೆ ಫೋನ್ ಮಾಡಿದರೆ, ಗೊತ್ತಾಗುತ್ತೆ ಎಂದು ಸತ್ಯಳಿಗೆ ಫೋನ್ ಮಾಡುತ್ತಾಳೆ. ಆದರೆ, ಏನನ್ನೂ ಮಾತನಾಡದೇ ಹಾಗೆ ಕಟ್ ಮಾಡಿ ಬಿಡುತ್ತಾಳೆ.

ಬಾಲನ ಕಥೆ ಇಲ್ಲಿಗೆ ಮುಗಿಯುತ್ತಾ..?

ಬಾಲನ ಕಥೆ ಇಲ್ಲಿಗೆ ಮುಗಿಯುತ್ತಾ..?

ಬಾಲ ಮತ್ತು ಛೋಟಾ ಯಾವಾಗಲೂ ಮಾತನಾಡುತ್ತಿರುತ್ತಾರೆ. ಛೋಟಾ ಬಾಯಿ ಬಿಡಿಸಿದರೆ ಎಲ್ಲಾ ಸತ್ಯ ಗೊತ್ತಾಗುತ್ತೆ ಎಂದು ದಿವ್ಯಾ ಛೋಟನ ಬಳಿ ಹೋಗುತ್ತಾಳೆ. ನೀನು ಬಾಲ ಆಗಲೇ ಏನು ಮಾತನಾಡುತ್ತಿದ್ದಿರಿ ಎಂದು ಕೇಳುತ್ತಾಳೆ. ಛೋಟಾ ಮೊದಲು ಏನೂ ಹೇಳುವುದಿಲ್ಲ. ಬಳಿಕ ದಿವ್ಯಕ್ಕೆ ಸತ್ಯ ತಿಳಿಯುವುದಕ್ಕೆ ಹೀಗೆ ಕೇಳುತ್ತಿರಬಹುದು ಎಂದು ಏನೋ ಒಂದು ಹೇಳಿ ಮ್ಯಾನೇಜ್ ಮಾಡುತ್ತಾನೆ. ದಿವ್ಯಾ ಸೀದಾ ಜಲಜಾ ಬಳಿ ಹೋಗುತ್ತಾಳೆ. ಬಾಲ ನಿನಗ್ಯಾಕೆ ದುಡ್ಡು ಕೊಟ್ಟಿದ್ದು ಎಂದು ಕೇಳುತ್ತಾಳೆ. ಜಲಜಾ ಸತ್ಯ ಹೇಳಲಾಗದೆ, ಸಾಲ ತೆಗೆದುಕೊಂಡೆ ಎಂದು ಹೇಳುತ್ತಾಳೆ. ಇದನ್ನೆಲ್ಲಾ ನಂಬದ ದಿವ್ಯಾ ಸೀದಾ ಬಾಲನ ಬಳಿ ಬರುತ್ತಾಳೆ. ಬಾಲನ ಗ್ರಹಚಾರ ಬಿಡಿಸುತ್ತಾಳಾ ಕಾದು ನೋಡಬೇಕಿದೆ.

More from Filmibeat

English summary
Sathya serial 21st February Episode Written Update. Divya doubts on bala. So now she is planning to know the truth about bala. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X