Sathya: ಸತ್ಯ ಹಾಗೂ ಕಾರ್ತಿಕ್ ಕಳೆದು ಹೋಗಿದ್ದು ಎಲ್ಲಿ..? ಕಾರ್ಯಕ್ರಮದ ಕಥೆಯೇನು?
'ಸತ್ಯ' ಧಾರಾವಾಹಿಯಲ್ಲಿ ಒಂದು ಕಡೆ ಕೀರ್ತನಾ ಹೇಳಿರುವ ಮಾತುಗಳನ್ನು ಲಕ್ಷ್ಮಣ ನಂಬಿದ್ದಾನೆ. ಸತ್ಯಳನ್ನು ವಿಚಾರಿಸಿಕೊಳ್ಳುವ ಮೊದಲು ರಾಕಿಗೆ ವಾರ್ನಿಂಗ್ ಕೊಡಲು ಯಾರಿಗೋ ಹೇಳಿದ್ದಾನೆ.
ಆದರೆ, ಕೀರ್ತನಾ ರಾಕಿ ಸಂಪೂರ್ಣವಾಗಿ ಸತ್ಯ ಪಾಲಿಗೆ ಇರದಂತೆ ಪ್ಲ್ಯಾನ್ ಮಾಡಿದ್ದಾಳೆ. ಇದರಿಂದ ರಾಕಿ ಸಾವು ಸಂಭವಿಸುತ್ತೋ ಇಲ್ಲ ಕೀರ್ತನಾ ಬಣ್ಣ ಬಯಲಾಗುತ್ತೋ ಗೊತ್ತಿಲ್ಲ.
ಇಷ್ಟೇ ಅಲ್ಲದೇ, ಇತ್ತ ಸತ್ಯ ಹಾಗೂ ಕಾರ್ತಿಕ್ ದಾರಿ ತಪ್ಪಿಸಲು ಕೂಡ ಕೀರ್ತನಾ ಪ್ಲ್ಯಾನ್ ಮಾಡಿದ್ದಾಳೆ. ಒಂದೇ ಸಮಯದಲ್ಲಿ ಎರಡೆರಡು ಕೆಲಸಕ್ಕೆ ಕೀರ್ತನಾ ಕೈ ಹಾಕಿದ್ದಾಳೆ.

ನದಿಯ ನಡುವಲ್ಲಿ ಸಿಲುಕಿದ ಜೋಡಿ
ಕಾರ್ತಿಕ್ ಬೈಕ್ ಅನ್ನು ಪಂಚರ್ ಮಾಡಿಸಿ, ನಡೆದುಕೊಂಡು ಹೋಗಲು ಶಾರ್ಟ್ ಕಟ್ ಇದೆ ಎಂದು ತಪ್ಪು ದಾರಿಯನ್ನು ಹೇಳಲಾಗಿದೆ. ಇದರಿಂದ ಸತ್ಯ ಹಾಗೂ ಕಾರ್ತಿಕ್ ದಾರಿಯನ್ನು ತಪ್ಪಿದ್ದಾರೆ. ಯಾವುದೋ ದೊಡ್ಡ ನದಿಯ ಮಧ್ಯದಲ್ಲಿ ಸಿಲುಕಿದ್ದಾರೆ. ರೆಸಾರ್ಟ್ ತಲುಪಲಾಗದೇ, ಅವಾರ್ಡ್ ಫಂಕ್ಷನ್‌ಗೂ ಹೋಗಲಾಗದೇ ಇಬ್ಬರು ಗಾಬರಿಯಾಗಿದ್ದಾರೆ. ಬೆಳಕು ಹರಿದರೂ ಇಬ್ಬರೂ ನದಿಯ ನಡುವಿನಲ್ಲಿ ಉಳಿದುಕೊಂಡಿದ್ದಾರೆ. ಹೀಗಿರುವಾಗಲೇ ಇವರನ್ನು ಕಾಪಾಡುವ ಸಲುವಾಗಿ ಯಾರೋ ಒಬ್ಬರು ಬಂದು ಇಬ್ಬರನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ, ಇಬ್ಬರೂ ಅವಾರ್ಡ್ ಕಾರ್ಯಕ್ರಮಕ್ಕೆ ಹೋಗುತ್ತಾರಾ ಗೊತ್ತಿಲ್ಲ.

ಮತ್ತಿನಲ್ಲಿ ತೇಲಾಡುತ್ತಿರುವ ದಿವ್ಯಾ
ಬಾಲ ಬೇಕಂತಲೇ ದಿವ್ಯಾಳಿಗೆ ಮತ್ತು ಬರುವ ಜ್ಯೂಸ್ ಕೊಡುತ್ತಾನೆ. ಕುಡಿತಾ ಕುಡಿತಾ ದಿವ್ಯಾ ತನಗೆ ಬಾಲನ ಮೇಲಿರುವ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ. ಈ ಮತ್ತಿನಲ್ಲೇ ಇರುವ ದಿವ್ಯಾಳನ್ನು ಬಾಲ ಮಗುವನ್ನು ಮಾಡಿಕೊಳ್ಳೋಣ ಎಂದು ಕೇಳುತ್ತಾನೆ. ಆದರೆ, ದಿವ್ಯಾ ಇದಕ್ಕೆ ಜಗಳವಾಡುತ್ತಾಳೆ. ಈಗಾಗಲೇ ನಾನು ಬಿಕಾರಿಯಂತೆ ಬದುಕುತ್ತಿದ್ದೇನೆ. ಇನ್ನು ಮಗು ಮಾಡಿಕೊಂಡು ಒದ್ದಾಡೋದಿಕ್ಕೆ ಆಗಲ್ಲ ಎಂದು ಹೇಳುತ್ತಾಳೆ. ಅಪ್ಪನಿಗಾಗಿ ಮಗು ಮಾಡಿಕೊಂಡರೆ, ಅವರ ಮನಸ್ಸು ಕರಗುತ್ತದೆ ಎಂದು ಹೇಳುತ್ತಾನೆ. ಇದಕ್ಕೂ ದಿವ್ಯಾ ಕೋಪ ಮಾಡಿಕೊಳ್ಳುತ್ತಾಳೆ. ನಿಮ್ಮ ಅಪ್ಪನನ್ನು ನಂಬಿದರೆ ನಮಗೆ ಚಿಪ್ಪೇ ಗತಿ ಎಂದು ಹೇಳುತ್ತಾಳೆ.

ಬಾಲನ ಬಲೆಗೆ ಬಿದ್ದ ಬಾಲೆ
ಆಗ ಬಾಲನಿಗೆ ಒಂದು ಫೋನ್ ಬರುತ್ತದೆ. ಯಾರು ಎಂದು ಕೇಳಿದ್ದಕ್ಕೆ ಅಪ್ಪನ ಫ್ರೆಂಡ್ ಎಂದು ಹೇಳುತ್ತಾನೆ. ಮೊದಲು ಕಾಲ್ ಅನ್ನು ರಿಸೀವ್ ಮಾಡುವುದಿಲ್ಲ. ನಂತರ ರಿಸೀವ್ ಮಾಡಿದಾಗ, ಆತ ನಿಮ್ಮ ಅಪ್ಪ ನಿನ್ನ ಬಗ್ಗೆ ಮಾತನಾಡಿದರು. ದಿವ್ಯಾ ಆತನ ಮಾತನ್ನು ಕೇಳುತ್ತಿರುವುದಕ್ಕೆ ಖುಷಿ ಪಟ್ಟಿದ್ದಾರೆ. ಆದರೆ, ನಿಮ್ಮಿಬ್ಬರ ಮೇಲಿನ ಕೋಪ ಹಾಗೆಯೇ ಇದೆ. ಒಂದು ಮಗುವಾದರೆ, ಅವರ ಮನಸ್ಸು ಕರಗುತ್ತದೆ ಎಂದು ಹೇಳಿ ಫೋನ್ ಇಡುತ್ತಾರೆ. ಇದನ್ನು ಸ್ಪೀಕರ್ ಹಾಕಿದ್ದ ಕಾರಣ ದಿವ್ಯಾ ಕೂಡ ಕೇಳಿಸಿಕೊಳ್ಳುತ್ತಾಳೆ. ಬಳಿಕ ನಾವು ಮಕ್ಕಳನ್ನು ಮಾಡಿಕೊಳ್ಳೋಣ ಬಾಲ ಎಂದು ಹೇಳುತ್ತಾಳೆ. ಪದೇ ಪದೇ ಬಾಲನ ಸುಳ್ಳಿನ ಚಕ್ರವ್ಯೂಹದಲ್ಲಿ ಸಿಲುಕುತ್ತಿದ್ದಾಳೆ.

ಅವಾರ್ಡ್ ಕಾರ್ಯಕ್ರಮಕ್ಕೆ ಸತ್ಯ-ಕಾರ್ತಿಕ್?
ಇತ್ತ ಲಕ್ಷ್ಮಣನಿಗೆ ರಿತು ಹಾಗೂ ರಾಕೇಶ್ ಪ್ರೀತಿ ಬಗ್ಗೆ ತಿಳಿದ ಮೇಲೆ ಯಾರಿಗೂ ಫೋನ್ ಮಾಡಿ ರಾಕಿಯನ್ನು ಹೆದರಿಸಲು ಹೇಳಿರುತ್ತಾನೆ. ಆದರೆ, ಕೀರ್ತನಾ ಆತನಿಗೆ ಫೋನ್ ಮಾಡಿ ದೊಡ್ಡ ಪ್ಲ್ಯಾನ್ ಅನ್ನೇ ಹೇಳಿದ್ದಾಳೆ. ಈ ಮೂಲಕ ಸತ್ಯಳಿಗೆ ಬಲವಾಗಿರುವ ರಾಕಿಯನ್ನು ಕಂಪ್ಲೀಟ್ ಆಗಿ ಇಲ್ಲದಂತೆ ಮಾಡಬೇಕು ಎಂದು ಅಂದುಕೊಂಡಿದ್ದಾಳೆ. ಇತ್ತ ಕೀರ್ತನಾ ಕೂಡ ಮಂಗಳೂರಿಗೂ ಬಂದಿದ್ದಾಳೆ. ಇಲ್ಲೇನು ಮಾಡುತ್ತಾಳೋ ಗೊತ್ತಿಲ್ಲ.


Click it and Unblock the Notifications











