Sathya: ಪದ್ಮಳಿಗೆ ಲಕ್ಷ್ಮಣ ಹಣ ಕೊಟ್ಟಿದ್ದನ್ನು ನೋಡಿದ ಸತ್ಯ

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಸದ್ಯ ಲಕ್ಷ್ಮಣ ಮತ್ತು ಪದ್ಮ ಕಥೆ ನಡೆಯುತ್ತಿದೆ. ಸತ್ಯಳಿಗೆ ಈಗ ಇವರಿಬ್ಬರ ಸಂಬಂಧದ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಬೇಕಿದೆ. ಹೀಗಾಗಿ ಕಾಕ್ರೋಜ್‌ನನ್ನು ಲಕ್ಷ್ಮಣನ ಹಿಂದೆ ಬಿಟ್ಟಿದ್ದಾಳೆ. ಲಕ್ಷ್ಮಣ ಮತ್ತು ಪದ್ಮ ನಡುವೆ ಏನು ನಡೆಯುತ್ತಿದೆ. ಇವರಿಬ್ಬರನ್ನು ದೂರ ಇಡುವುದು ಹೇಗೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾಳೆ.

ಇತ್ತ ದಿವ್ಯಾಳಿಗೆ ಸದಾ ಹಣ ಮಾಡುವುದು, ಅದರಿಂದ ಶಾಪಿಂಗ್ ಮಾಡಿ ಮಜಾ ಮಾಡುವುದರದ್ದೇ ಯೋಚನೆ ಆಗಿದೆ. ಆದರೆ, ಬಾಲ ಸಂಪೂರ್ಣವಾಗಿ ಬದಲಾಗಿದ್ದಾನೆ.

Sathya Serial 21th August episode written update

ಇತ್ತೀಚೆಗೆ ದಿವ್ಯಾ ಯಾರದೋ ಹಣದಲ್ಲಿ ಶಾಪಿಂಗ್ ಮಾಡಿದ್ದಕ್ಕೆ ಬಾಲ ಕೋಪ ಬಂದು ಹೊಡೆದಿದ್ದ. ಹಣವನ್ನು ಹೇಗಾದರೂ ಮಾಡಿ ಹೊಂದಿಸಿ ಕೊಡು ಎಂದು ದಿವ್ಯಾಳಿಗೆ ವಾರ್ನಿಂಗ್ ಕೊಟ್ಟಿದ್ದ. ದಿವ್ಯಾ ಕೂಡ ತಲೆ ಕೆಡಿಸಿಕೊಳ್ಳದೇ, ಕೀರ್ತನಾಳನ್ನು ಬ್ಲ್ಯಾಕ್ ಮೇಲ್ ಮಾಡಿ ಹಣ ತಂದು ಕೊಟ್ಟಿದ್ದಳು.

ದಿವ್ಯಾ ಕ್ಷಮೆ ಕೇಳಿದ ಬಾಲ

ಬಾಲ ಹೊಡೆದ ಎಂಬ ಕಾರಣಕ್ಕೆ ಕೋಪ ಮಾಡಿಕೊಂಡಿದ್ದಳು. ಬಾಲ, ದಿವ್ಯಾಳನ್ನು ಮಾತನಾಡಿಸಲು ಪ್ರಯತ್ನಿಸುತ್ತಾನೆ. ಆದರೆ, ದಿವ್ಯಾಳಿಗೆ ಕೋಪವಿರುತ್ತದೆ. ಎಲ್ಲರ ಮುಂದೆ ಹೊಡೆದು, ಈಗ ಕ್ಷಮೆ ಕೇಳುತ್ತೀಯಾ. ನಿನಗೆ ದುಡಿದು ಹೆಂಡತಿಯನ್ನು ನೋಡಿಕೊಳ್ಳುವ ಯೋಗ್ಯತೆ ಇಲ್ಲ ಬಿಡು ಎಂದೆಲ್ಲಾ ಆಡಿ ಕೊಂಡಳು. ಜೈಲಿಗೆ ಕಳಿಸಬೇಕಿತ್ತು. ಪೊಲೀಸ್ ಸ್ಟೇಷನ್‌ಗೆ ಅಲೆದಾಡಿಸಬೇಕಿತ್ತು ಎಂದು ಹೆದರಿಸುತ್ತಾಳೆ. ಅಲ್ಲದೇ, ಬಾಲ ಕ್ಷಮೆ ಕೇಳಿದರೂ ಬೈದು ಕಳಿಸುತ್ತಾಳೆ.

Sathya Serial 21th August episode written update

ಡೈಮೆಂಡ್ ನೆಕ್ಲೇಸ್‌ಗೆ ಆಸೆ

ಇನ್ನು ಪೇಪರ್‌ನಲ್ಲಿ ಜಾಹೀರಾತು ಬಂದಿರುತ್ತದೆ. ಅದು ಜ್ಯುವೆಲರಿ ಜಾಹೀರಾತು. ಡೈಮೆಂಡ್ ನೆಕ್ಲೇಸ್ ಜಾಹಿರಾತು ನೀಡಿರುತ್ತಾರೆ. ಅದನ್ನು ನೋಡಿದ ದಿವ್ಯಾಳಿಗೆ ಆಸೆ ಆಗುತ್ತದೆ. ಗಿರಿಜಮ್ಮನ ಬಳಿ ತೋರಿಸಿ ಇದನ್ನು ಖರೀದಿಸಬೇಕು ಎಂದು ಹೇಳುತ್ತಾಳೆ. ಆಗ ಗಿರಿಜಮ್ಮ ಹಾಸಿಗೆ ಇದ್ದಷ್ಟೇ ಕಾಲು ಚಾಚು. ಏನೇನಕ್ಕೋ ಆಸೆ ಪಡಬೇಡ. ನಮ್ಮಿಂದ ಅದೆಲ್ಲಾ ಆಗೋದಿಲ್ಲ. ಬಾಲನಿಗೂ ಹೆಚ್ಚು ಸಂಪಾದನೆ ಇಲ್ಲ ಎಂದು ಹೇಳುತ್ತಾಳೆ. ಆದರೆ, ದಿವ್ಯಾ ಇಲ್ಲ ಇದನ್ನು ನಾನು ತಗೊಂಡೇ ತಂಗೊಳ್ತೀನಿ ಎಂದು ಹೇಳುತ್ತಾಳೆ. ಅದರಲ್ಲೂ ಅಜ್ಜಿ, ಸತ್ಯ ರೀತಿ ಇರು ಎಂದು ಹೇಳಿದ್ದಕ್ಕೆ ಉರಿದುಕೊಳ್ಳುವ ದಿವ್ಯಾ, ಕೀರ್ತನಾಳಿಗೆ ನೆಕ್ಲೇಸ್ ಫೋಟೋ ಕಳಿಸಿ, ತನಗೆ ಕೊಡಿಸುವಂತೆ ಕೇಳುತ್ತಾಳೆ.

ಲಕ್ಷ್ಮಣನ ಹಿಂದೆ ಕಾಕ್ರೋಜ್ ಸ್ಪೈ

ಇತ್ತ ಲಕ್ಷ್ಮಣ 2 ಲಕ್ಷ ಹಣಕ್ಕಾಗಿ ಒದ್ದಾಡುತ್ತಿರುತ್ತಾನೆ. ರಾಯರ ಬಳಿ ಹೋಗಿ ಹಣ ಕೇಳುತ್ತಾನೆ. ಆಗ ರಾಯರು ತೆಗೆದುಕೊಂಡು ಹೋಗು ಎಂದು ಹೇಳಿ ಕಳಿಸುತ್ತಾರೆ. ಸತ್ಯ ಇದನ್ನೆಲ್ಲಾ ಗಮನಿಸುತ್ತಾಳೆ. ಲಕ್ಷ್ಮಣ ಮನೆಯಿಂದ ಹೊರಟ ಕೂಡಲೇ ಕಾಕ್ರೋಜ್‌ಗೆ ಫಾಲೋ ಮಾಡಲು ಹೇಳುತ್ತಾಳೆ. ಕಾಕ್ರೋಜ್, ಲಕ್ಷ್ಮಣನನ್ನು ಫಾಲೋ ಮಾಡಿ ಸತ್ಯಳಿಗೆ ವೀಡಿಯೋ ಕಾಲ್ ಮಾಡುತ್ತಾನೆ.

ದುಡ್ಡಿಗಾಗಿ ಲಕ್ಷ್ಮಣನ ಹಿಂದಿದ್ದಾಳಾ ಪದ್ಮ?

ಲಕ್ಷ್ಮಣ, ಪದ್ಮ ಜೊತೆಗೆ ಪಾರ್ಕ್‌ನಲ್ಲಿ ಕೂತು ಮಾತನಾಡುತ್ತಿರುತ್ತಾನೆ. ಆದರೆ, ಇಬ್ಬರೂ ಏನು ಮಾತನಾಡುತ್ತಿದ್ದಾರೆ ಎಂಬುದು ಸತ್ಯಳಿಗೆ ಕೇಳಿಸುವುದಿಲ್ಲ. ಆದರೆ, ಪದ್ಮ ತನ್ನ ಮಗನಿಗೆ ಹುಷಾರಿಲ್ಲ ಅದಕ್ಕೆ ಹಣ ಬೇಕು ಎಂದು ಲಕ್ಷ್ಮಣನನ್ನು ಕೇಳಿರುತ್ತಾಳೆ. ಪದ್ಮ ಹಣಕ್ಕಾಗಿ ಲಕ್ಷ್ಮಣನ ಹಿಂದೆ ಬಿದ್ದಿದ್ದಾಳಾ? ಎಂಬ ಅನುಮಾನ ಸತ್ಯಳಿಗೆ ಮೂಡಿದೆ. ಪದ್ಮ ಮತ್ತು ಲಕ್ಷ್ಮಣನ ಹಿಂದಿನ ಕಥೆಯನ್ನು ಮುಂದಿನ ಸಂಚಿಕೆಗಳಿಂದಲೇ ತಿಳಿದು ಬರಬೇಕಿದೆ.

More from Filmibeat

English summary
Sathya Kannada serial today episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X