Sathya: ದಿವ್ಯಾ ಅನುಮಾನಕ್ಕೆ ಪುಷ್ಠಿ ನೀಡಿದ ಬಾಲನ ವರ್ತನೆ

By ಪ್ರಿಯಾ ದೊರೆ

'ಸತ್ಯ' ಧಾರಾವಾಹಿಯಲ್ಲಿ ದಿವ್ಯಾಳಿಗೆ ಬಾಲನ ಮೇಲಿನ ಅನುಮಾನ ಹೆಚ್ಚಾಗಿದೆ. ಬಾಲ ಸುಳ್ಳಿನ ಗೋಪುರವನ್ನು ಕಟ್ಟಿದ್ದಾನೆ ಎಂದು ದಿವ್ಯಾ ಊಹಿಸಿದ್ದಾಳೆ. ಹೀಗಾಗಿ ಇದನ್ನು ಪರಿಹಾರ ಮಾಡಿಕೊಳ್ಳಲು ಮುಂದಾಗಿದ್ದಾಳೆ.

ಈಗಾಗಲೇ ದಿವ್ಯಾ ಜಲಜಾ ಹಾಗೂ ಛೋಟಾ ಬಳಿ ಪ್ರಶ್ನೆ ಮಾಡಿದ್ದಾಳೆ. ಆದರೆ ಇಬ್ಬರೂ ಸುಳ್ಳು ಹೇಳಿ ಎಸ್ಕೇಪ್ ಆಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ದಿವ್ಯಾ, ಬಾಲನ ಬಳಿಯೂ ಹೋಗಿದ್ದಾಳೆ.

ಇತ್ತ ಸೀತಾ, ಸತ್ಯಳಿಗೆ ವಾರ್ನಿಂಗ್ ಕೊಟ್ಟಿದ್ದಾಳೆ. ನೀನು ನನ್ನ ಮನಸ್ಸನ್ನು ಗೆದ್ದಿಲ್ಲ. ಇಷ್ಟರಲ್ಲೇ ಮನೆ ಬಿಟ್ಟು ಹೋಗಬೇಕು. ಅದಕ್ಕೆ ಮೊದಲು ತಯಾರಾಗು ಎಂದು ಹೇಳುತ್ತಾಳೆ.

ಸತ್ಯಳಿಗೆ ಈಗ ಬೇಸರ

ಸತ್ಯಳಿಗೆ ಈಗ ಬೇಸರ

ಇದರಿಂದ ಸತ್ಯ ಬೇಸರಗೊಂಡಿರುತ್ತಾಳೆ. ಊರ್ಮಿಳಾ ಅಕ್ಕ ಏನು ಹೇಳಿದರು ಎಂದು ಕೇಳಿದಾಗ, ಸತ್ಯ ನಿಜ ಹೇಳುವುದಿಲ್ಲ. ಅಕ್ಕ-ತಮ್ಮನ ವಿಷಯಕ್ಕೆ ಮಧ್ಯದಲ್ಲಿ ಹೋಗಬೇಡ ಎಂದರು ಅಷ್ಟೇ ಎನ್ನುತ್ತಾಳೆ. ಇನ್ನು ಕಾರ್ತಿಕ್‌ಗೆ ಊಟ ತೆಗೆದುಕೊಂಡು ಹೊರಡುತ್ತಾಳೆ. ಇದೇ ವೇಳೆಗೆ ಬರುವ ಸೀತಾ, ಸತ್ಯಳನ್ನು ತಡೆಯುತ್ತಾಳೆ. ನೀನು ಇನ್ನು ಮೇಲಿಂದ ಆಫೀಸಿಗೆ ಹೋಗಬೇಡ. ಅಲ್ಲಿರುವವರ ನೆಮ್ಮದಿಯನ್ನು ಹಾಳು ಮಾಡಬೇಡ. ಇಲ್ಲೇ ಇರು ಎಂದು ಸೀತಾ ಬೈಯುತ್ತಾಳೆ. ಸತ್ಯಗೆ ಇಷ್ಟವಿಲ್ಲದಿದ್ದರೂ, ಅತ್ತೆಯ ಮಾತಿಗೆ ಎದುರಾಡದೇ, ಸುಮ್ಮನಾಗುತ್ತಾಳೆ. ಕಾರ್ತಿಕ್ ಇದೇ ಬೇಸರದಲ್ಲಿರುವಾಗ ಕಾರ್ತಿಕ್ ಫೋನ್ ಮಾಡಿ ಮಾತನಾಡುತ್ತಾನೆ.

ಕಾರ್ತಿಕ್ ಹೆಸರು ನೋಡಿ ಶಾಕ್

ಕಾರ್ತಿಕ್ ಹೆಸರು ನೋಡಿ ಶಾಕ್

ಇನ್ನು ಆಫೀಸಿನಲ್ಲಿ ಕಾರ್ತಿಕ್‌ಗೆ ಊಟ ಮಾಡುವಂತೆ ಕೀರ್ತನಾ ಹೇಳುತ್ತಾಳೆ. ಇದರಿಂದ ಕಾರ್ತಿಕ್,ಸತ್ಯ ತೆಗೆದುಕೊಂಡ ಕ್ಲಾಸ್ ವರ್ಕೌಟ್ ಆಗಿದೆ ಎಂದು ಅಂದುಕೊಳ್ಳುತ್ತಾನೆ. ಇನ್ನು ಅವಾರ್ಡ್ ವಿನ್ನಿಂಗ್‌ಗೆ ಕಳಿಸಿದ್ದ ಪ್ರಾಜೆಕ್ಟ್ ಲಿಸ್ಟ್ ಚೆಕ್ ಮಾಡಲು ಕೀರ್ತನಾ ಹೇಳುತ್ತಾಳೆ. ಅದರಲ್ಲಿ ಅವರ ಕಂಪನಿಯ ಹೆಸರು ಇರುವುದಿಲ್ಲ. ಕೀರ್ತನಾಳಿಗೆ ಕೋಪ ಬರುತ್ತದೆ. ಆದರೆ, ಕಾರ್ತಿಕ್ ಹೆಸರು ಇರುತ್ತದೆ. ಇದನ್ನು ನೋಡಿ, ಸೆಕ್ರೆಟರಿ ಶಾಕ್ ಆಗುತ್ತಾಳೆ. ಕಾರ್ತಿಕ್‌ನನ್ನು ಕರೆದು ತೋರಿಸುತ್ತಾಳೆ. ಕಾರ್ತಿಕ್‌ಗೂ ತನ್ನ ಪ್ರಾಜೆಕ್ಟ್ ಯಾರು ಅಪ್‌ಲೋಡ್ ಮಾಡಿದರು ಎಂಬುದೇ ತಿಳಿಯುವುದಿಲ್ಲ. ಶಾಕ್ ಆಗುತ್ತದೆ.

ಬಾಲನನ್ನು ಪ್ರಶ್ನಿಸಿದ ದಿವ್ಯಾ

ಬಾಲನನ್ನು ಪ್ರಶ್ನಿಸಿದ ದಿವ್ಯಾ

ದಿವ್ಯಾಗೆ ಬಾಲನ ಮೇಲೆ ಅನುಮಾನ. ಹಾಗಾಗಿ ಜಲಜಾ ಮತ್ತು ಛೋಟಾನನ್ನು ವಿಚಾರಿಸಿದ ಬಳಿ ಬಾಲನನ್ನು ಪ್ರಶ್ನೆ ಮಾಡಿದ್ದಾಳೆ. ಜಲಜಾಗೆ ಹಣ ಏಕೆ ಕೊಟ್ಟೆ ಎಂದು ಕೇಳುತ್ತಾಳೆ. ಬಾಲ, ಜಲಜಾ ಅವರ ಗಂಡನಿಗೆ ಗಿಫ್ಟ್ ತರಲು ಕೊಟ್ಟೆ ಎಂದು ಸುಳ್ಳು ಹೇಳುತ್ತಾನೆ. ಆದರೆ, ಜಲಜಾ ಮನೆಗೆ ರೇಷನ್ ತರಲು ಸಾಲ ಪಡೆದೆ ಎಂದು ಹೇಳಿರುತ್ತಾಳೆ. ಇಬ್ಬರಲ್ಲಿ ಒಬ್ಬರು ಸುಳ್ಳು ಹೇಳಿರುವುದು ದಿವ್ಯಾಗೆ ಸ್ಪಷ್ಟವಾಗುತ್ತದೆ. ಆದರೆ, ಸುಳ್ಳು ಹೇಳಿರುವುದಕ್ಕೆ ಕಾರಣ ತಿಳಿಯುವುದಿಲ್ಲ.

ನಿನ್ನ ಬಿಟ್ಟು ಹೋಗ್ತೀನಿ ಎಂದ ದಿವ್ಯಾ

ನಿನ್ನ ಬಿಟ್ಟು ಹೋಗ್ತೀನಿ ಎಂದ ದಿವ್ಯಾ

ಬಾಲ, ದಿವ್ಯಾ ಮಾಡುವ ಪ್ರತಿಯೊಂದು ಪ್ರಶ್ನೆಗಳಿಗೂ ಸಬೂಬು ಕೊಡುತ್ತಾನೆ. ಹೇಗಾದರೂ ಮಾಡಿ ಎಸ್ಕೇಪ್ ಆಗಬೇಕು ಎಂದು ಪ್ರಯತ್ನಿಸುತ್ತಾನೆ. ಆದರೆ, ದಿವ್ಯಾ ನಿನ್ನ ಟೇಪರೇಕಾರ್ಡರ್ ಅನ್ನು ಎತ್ತಿಡು. ನೀನು ನನಗೆ ಮೋಸ ಮಾಡಿದ್ದೀಯಾ ಅನಿಸುತ್ತಿದೆ ಎಂದು ಹೇಳುತ್ತಾಳೆ. ಅಲ್ಲದೇ, ಇನ್ನು ನಿನ್ನ ಜೊತೆಗೆ ಇರೋದಕ್ಕೆ ಸಾಧ್ಯವಿಲ್ಲ. ನಾನು ಇಲ್ಲಿಂದ ಹೊರಡುತ್ತೇನೆ ಎನ್ನುತ್ತಾಳೆ. ಈ ಮಾತನ್ನು ಕೇಳಿ ಬಾಲನಿಗೆ ಶಾಕ್ ಆಗುತ್ತೆ. ಬಾಲ ದಿವ್ಯಾಳನ್ನು ಕಳೆದುಕೊಳ್ಳುತ್ತಾನಾ ಕಾದು ನೋಡಬೇಕಿದೆ..?

More from Filmibeat

English summary
Sathya serial 22nd February Episode Written Update. Divya didnt trust bala. So she is ready to leave him and go.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X