Sathya: ಹಣದಾಹಿಯಾದ ದಿವ್ಯಾಳಿಗೆ ಜಾನಕಿ ಹೇಳಿದ್ದೇನು..?

By ಪ್ರಿಯಾ ದೊರೆ

Article desc : ಸತ್ಯ ಧಾರಾವಾಹಿಯಲ್ಲಿ ಲಕ್ಷ್ಮಣನ ಎರಡನೇ ಸಂಬಂಧದ ಹಿಂದೆ ಸತ್ಯ ಬಿದ್ದಿದ್ದಾಳೆ. ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ಸತ್ಯ ಹೋರಾಡುತ್ತಿದ್ದಾಳೆ.

ಮನೆಯಲ್ಲಿ ಯಾರಿಗೂ ಸತ್ಯ ಹೇಳದೆ, ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾಳೆ. ಆದರೆ, ಸತ್ಯಳಲ್ಲಿ ಈಗ ಕೊಂಚ ಬದಲಾವಣೆಗಳು ಕಂಡು ಬಂದಿವೆ.

sathya Serial 23rd August episode written update

ಯಾವಾಗಲೂ ಏನಾದರೂ ಒಂದು ಯೋಚನೆ ಮಾಡುತ್ತಿರುತ್ತಾಳೆ. ಸದಾ ಯೋಚಿಸುತ್ತಿರುವ ಸತ್ಯ ಯಾರೇ ಕೂಗಿದರೂ, ಏನೇ ಕೆಲಸ ಹೇಳಿದರೂ ಅದರಲ್ಲಿ ಗಮನ ಇರುವುದಿಲ್ಲ. ಕಾಕ್ರೋಜ್ ವೀಡಿಯೋ ಕಾಲ್ ನಲ್ಲಿ ಸತ್ಯಳಿಗೆ ಲಕ್ಷ್ಮಣ ಹಾಗೂ ಪದ್ಮ ಮಾತುಗಳನ್ನು ತೋರಿಸುತ್ತಿದ್ದ. ಸೀತಾ ಏನೇ ಹೇಳಿದರೂ, ಹೂ ಹೂ ಎಂದು ಹೂ ಗುಡುತ್ತಲೇ ವೀಡಿಯೋ ಕಾಲ್‌ನಲ್ಲಿ ಬ್ಯುಸಿಯಾಗಿದ್ದಳು. ಸೀತಾ ಬೈದರೂ ತಲೆ ಕೆಡಿಸಿಕೊಂಡಿರಲಿಲ್ಲ. ಸತ್ಯ ಮೊಬೈಲ್ ನೋಡುತ್ತಾ ಮೈಮರೆತು ನಿಂತಾಗ ರಿತು ಬರುತ್ತಾಳೆ. ಏನಾಯ್ತು ಎಂದು ವಿಚಾರಿಸುತ್ತಾಳೆ.

ಸತ್ಯ ಉತ್ತರ ನೀಡುವ ಮೊದಲೇ ಮೊಬೈಲ್‌ನಲ್ಲಿ ಏನಿದೆ ನನಗೂ ತೋರಿಸಿ ಎಂದು ಕಿತ್ತುಕೊಂಡು ನೋಡುತ್ತಾಳೆ. ಮೊಬೈಲ್ ನೋಡುತ್ತಿದ್ದಂತೆ ರಿತು ಶಾಕ್ ಆಗುತ್ತಾಳೆ. ತಕ್ಷಣವೇ ಊರ್ಮಿಳಾಳನ್ನು ಕರೆದು ಅವಳಿಗೆ ಮೊಬೈಲ್ ತೋರಿಸುತ್ತಾಳೆ. ಆಗ ಸತ್ಯ, ಲಕ್ಷ್ಮಣ ಮತ್ತು ಪದ್ಮಳನ್ನು ನೋಡಿದರು ಎಂದು ಭಾವಿಸುತ್ತಾರೆ. ಆದರೆ, ಅಷ್ಟೊತ್ತಿಗೆ ಕಾಕ್ರೋಜ್ ಫೋನ್ ಕಾಲ್ ಕಟ್ ಮಾಡಿರುತ್ತಾನೆ.

sathya Serial 23rd August episode written update

ಸೀತಾಳಿಗೆ ಹೆಚ್ಚಿದ ಕಾಳಜಿ

ಸತ್ಯ ಫೋನ್‌ನಲ್ಲಿರುವ ಸೀತಾ ವಾಲ್ ಪೇಪರ್ ಅನ್ನು ನೋಡಿ ಇಬ್ಬರೂ ಶಾಕ್ ಆಗಿರುತ್ತಾರೆ. ಬಳಿಕ ಸೀತಾಳನ್ನು ಕರೆದು ತಮಾಷೆ ಮಾಡುತ್ತಾರೆ. ಸತ್ಯಳಿಗೆ ನಿಜವಾಗಲೂ ನಿಮ್ಮ ಮೇಲೆ ಲವ್ ಆಗಿದೆ ಎಂದು ಹೇಳುತ್ತಾಳೆ. ನಂತರ ಸುಮ್ಮನಾಗುತ್ತಾರೆ. ಸತ್ಯ ಅಂತೂ ಒಬ್ಬಳೇ ಯೋಚಿಸುತ್ತಾ ನಿಂತಿರುತ್ತಾಳೆ. ಸೀತಾ ಬಂದು ಏನಾಗಿದೆ ನಿನಗೆ ಯಾಕೆ ಯಾವಾಗಲೂ ಏನಾದರೂ ಯೋಚಿಸುತ್ತಿರುತ್ತೀಯಾ ಎಂದು ಕೇಳುತ್ತಾಳೆ. ಆಗ ಸತ್ಯ ಶಾಕ್ ಆಗುತ್ತಾಳೆ. ಕೋಪದಲ್ಲಿ ಸೀತಾಳನ್ನು ನೋಡುತ್ತಾಳೆ. ಇದರಿಂದ ಸೀತಾಳಿಗೂ ಗಾಬರಿಯಾಗುತ್ತದೆ.

ಕೀರ್ತನಾಳನ್ನು ಪೀಡಿಸುತ್ತಿರುವ ದಿವ್ಯಾ

ಇತ್ತ ದಿವ್ಯಾ, ಕೀರ್ತನಾಳನ್ನು ಪ್ರತಿಯೊಂದಕ್ಕೂ ಪೀಡಿಸುತ್ತಿದ್ದಾಳೆ. ಹಣ ಬೇಕಿದ್ದಾಗ ಕೇಳುತ್ತಾಳೆ. ಈಗ ಡೈಮೆಂಡ್ ನೆಕ್ಲೇಸ್ ಬೇಕೇ ಬೇಕು ಎಂದು ಹೇಳಿದ್ದಾಳೆ. ಕೀರ್ತನಾ ಕೂಡ ಬೇರೆ ದಾರಿ ಇಲ್ಲದ ದಿವ್ಯಾ ಹೇಳಿದ್ದಕ್ಕೆಲ್ಲಾ ಕೇಳುತ್ತಿದ್ದಾಳೆ. ಇದರ ಜೊತೆಗೆ ದಿವ್ಯಾ ಆದಷ್ಟು ಬೇಗ ನಿನ್ನ ಮನೆಗೆ ನನ್ನನ್ನು ಕರೆಸಿಕೊ ಎಂದು ಹೇಳಿದ್ದಾಳೆ. ಕೀರ್ತನಾ ಅದು ಅಷ್ಟು ಸುಲಭವಲ್ಲ. ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ತಾಳ್ಮೆಯಿಂದ ಇರು ಎಂದು ಹೇಳುತ್ತಾಳೆ. ಆದರೆ, ದಿವ್ಯಾ ಇಲ್ಲ ನನಗೆ ಈ ಮನೆಯಲ್ಲಿ ಇರೋದಕ್ಕೆ ಆಗುತ್ತಿಲ್ಲ. ಬೇರೆ ದಾರಿ ಇಲ್ಲದೇ ಇದ್ದೀನಿ. ಆದಷ್ಟು ಬೇಗ ನಿಮ್ಮ ಮನೆಗೆ ಕರೆಸಿಕೋ ಎಂದು ಹೇಳುತ್ತಾಳೆ.

ದುಡ್ಡಿನ ದುರಾಸೆಯಲ್ಲಿರುವ ದಿವ್ಯಾ

ಇನ್ನು ಮನೆಯಲ್ಲಿ ಹಬ್ಬಕ್ಕೆ ತಯಾರಿ ನಡೆಯುತ್ತಿರುತ್ತದೆ. ಬಾಲ ಕೂಡ ಮನೆಗೆ ಮಾವಿನ ತೋರಣವನ್ನು ಕಟ್ಟುತ್ತಿರುತ್ತಾನೆ. ಜಾನಕಿ ಹಾಗೂ ಗಿರಿಜಮ್ಮ ಕೂಡ ಹಬ್ಬಕ್ಕೆ ತಯಾರಿ ನಡೆಸುತ್ತಿರುತ್ತಾರೆ. ಆದರೆ, ದಿವ್ಯಾಳಿಗೆ ಹಬ್ಬ ಎಂಬುದು ಗೊತ್ತಿರುವುದಿಲ್ಲ. ಹಾಗಾಗಿ ಏನಾಗುತ್ತಿದೆ ಮನೆಯಲ್ಲಿ ಎಂದು ಕೇಳುತ್ತಾಳೆ. ಇದಕ್ಕೆ ಜಾನಕಿ ನಾಳೆ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬ. ಬಾಲ ಕಾಳಜಿಯಿಂದ ಹಬ್ಬಕ್ಕೆ ತಯಾರಿ ನಡೆಸುತ್ತಿದ್ದಾನೆ. ಹೆಣ್ಣಾಗಿ ನಿನಗೆ ಹಬ್ಬ ಯಾವತ್ತೂ ಅನ್ನೋದೇ ಗೊತ್ತಿಲ್ವಾ ಎಂದು ಕೇಳುತ್ತಾಳೆ. ಆಗ ದಿವ್ಯಾ ಗಂಡಸಾಗಿ ಒಂದು ಲಕ್ಷ ಸಂಪಾದಿಸುವ ಯೋಗ್ಯತೆ ಇಲ್ಲ ಎಂದು ಹೀಯಾಳಿಸುತ್ತಾಳೆ. ಈಗ ದಿವ್ಯಾ ಹಣದ ಹಿಂದೆ ಬಿದ್ದಿದ್ದಾಳೆ.

More from Filmibeat

English summary
sathya Serial 23rd August episode written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X