Sathya: ಆತ್ಮಹತ್ಯೆಗೆ ಯತ್ನಿಸಿದ ಬಾಲ: ದಿವ್ಯಾ ಕತೆ ಮುಗೀತಾ..?
'ಸತ್ಯ' ಧಾರಾವಾಹಿಯಲ್ಲಿ ದಿವ್ಯಾ, ಬಾಲನನ್ನು ಬಿಟ್ಟು ಹೋಗುವ ಮಾತನಾಡಿದ್ದಾಳೆ. ಇದು ಬಾಲನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ದಿವ್ಯಾ ಹೋದರೆ, ತನ್ನ ಮುಂದಿನ ಬದುಕೇನು ಎಂಬ ಪ್ರಶ್ನೆ ಉದ್ಭವಿಸಿದೆ.
ಇತ್ತ ಸತ್ಯ ಪ್ರಾಜೆಕ್ಟ್ ಅನ್ನು ರಾಕೇಶ್ ಸಹಾಯ ಪಡೆದು ಅಪ್ ಲೋಡ್ ಮಾಡಿದ್ದಾಳೆ. ಆದರೆ, ಈ ವಿಚಾರವನ್ನು ಕಾರ್ತಿಕ್ ಬಳಿ ಹೇಳಿಕೊಂಡಿರಲಿಲ್ಲ.
ಇದೀಗ ಪ್ರಾಜೆಕ್ಟ್ ಸೆಲೆಕ್ಟ್ ಆಗಿದ್ದು, ಇದೆಲ್ಲಾ ಸತ್ಯಳ ಕೆಲಸವಿರಬೇಕು ಎಂದು ಕಾರ್ತಿಕ್ ಖುಷಿಯಾಗಿದ್ದಾನೆ. ಇನ್ನು ಪ್ರಾಜೆಕ್ಟ್ ಸೆಲೆಕ್ಟ್ ಆಗಿರುವುದು ಖುಷಿಯನ್ನೂ ತಂದಿದೆ.

ಅಕ್ಕನಿಗೆ ಅವಾಜ್ ಹಾಕಿದ ತಮ್ಮ
ಆಫೀಸಿನಲ್ಲಿ ತನ್ನ ಪ್ರಾಜೆಕ್ಟ್ ಸೆಲೆಕ್ಟ್ ಆಗಿರುವುದಕ್ಕೆ ಖುಷಿ ಪಡುವ ಕಾರ್ತಿಕ್ ಮೊದಲು ಕೀರ್ತನಾ ಚೇಂಬರ್‌ಗೆ ಹೋಗುತ್ತಾನೆ. ಜೋರು ಮಾಡುವ ಕೀರ್ತನಾಳ ಬಾಯನ್ನು ಮುಚ್ಚಿಸಲು ತನ್ನ ಪ್ರಾಜೆಕ್ಟ್ ಬಗ್ಗೆ ಹೇಳುತ್ತಾನೆ. ನೀನು ನನ್ನ ಪ್ರಾಜೆಕ್ಟ್ ಅನ್ನು ರಿಜೆಕ್ಟ್ ಮಾಡಿದೆ. ಆದರೆ, ಇಂಟರ್ ನ್ಯಾಷನಲ್ ಅವಾರ್ಡ್‌ಗೆ ನನ್ನ ಪ್ರಾಜೆಕ್ಟ್ ಸೆಲೆಕ್ಟ್ ಆಗಿದೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಕೀರ್ತನಾಳಿಗೆ ಶಾಕ್ ಆಗುತ್ತದೆ. ಅದು ಹೇಗೆ ನೀನು ಪ್ರಾಜೆಕ್ಟ್ ಅನ್ನ ಅಪ್ ಲೋಡ್ ಮಾಡಿದೆ. ನನ್ನ ಆಫೀಸಿನಲ್ಲಿ ಇದನ್ನೆಲ್ಲಾ ನಿನಗೆ ಹೇಳಿಕೊಟ್ಟವರಾರು ಎಂದು ಕೀರ್ತನಾ ಕೂಗಾಡುತ್ತಾಳೆ. ಆದರೆ, ಕಾರ್ತಿಕ್ ಯಾವುದಕ್ಕೂ ಏನು ಹೇಳುವುದಿಲ್ಲ.

ಕೆಲಸಗಾರರಿಗೆ ಬೈದ ಕೀರ್ತನಾ
ತಕ್ಷಣವೇ ಕೀರ್ತನಾ ಉದ್ಯೋಗಿಗಳ ಬಳಿ ಹೋಗುತ್ತಾಳೆ. ಎಲ್ಲರಿಗೂ ಬಾಯಿಗೆ ಬಂದಂತೆ ಬೈಯುತ್ತಾಳೆ. ಆಫೀಸ್ ಗುಟ್ಟನ್ನು ಹೇಳೋದಕ್ಕೆ ಯಾರು ಪರ್ಮಿಷನ್ ಕೊಟ್ಟರು. ಕಾರ್ತಿಕ್‌ಗೆ ಯಾರು ಹೇಳಿಕೊಟ್ಟಿದ್ದು ಎಂದು ಒಂದೇ ಸಮನೇ ಬಡಬಡಾಯಿಸುತ್ತಿರುತ್ತಾಳೆ. ಈ ಸಂದರ್ಭವನ್ನು ಮಜಾ ತೆಗೆದುಕೊಳ್ಳುವ ಕಾರ್ತಿಕ್, ಸತ್ಯ ಕೂಡ ಕೇಳಿಸಿಕೊಳ್ಳಲಿ ಎಂದು ಫೋನ್‌ಗೆ ಟ್ರೈ ಮಾಡುತ್ತಾನೆ. ಆದರೆ, ಸತ್ಯ ಫೋನ್ ರಿಸೀವ್ ಮಾಡುವುದಿಲ್ಲ. ಕಾರ್ತಿಕ್ ಮಾತ್ರ ಎಂಜಾಯ್ ಮಾಡುತ್ತಿರುತ್ತಾನೆ.

ಎಲ್ಲರ ಎದುರು ಕೂಗಾಡಿದ ಬಾಲ
ಇತ್ತ ಬಾಲನ ಸಂಕಟ ಅವನೊಬ್ಬನಿಗೆ ಅರ್ಥವಾಗಬೇಕು. ಗೊಗ್ಗಯ್ಯ, ಛೋಟಾ ಹಾಗೂ ಜಲಜಾಳನ್ನ ಕರೆದು ಬಾಲ ವಿಚಾರಿಸುತ್ತಾನೆ. ದಿವ್ಯಾ ನಿಮ್ಮ ಬಳಿ ಬಂದು ಪ್ರಶ್ನೆ ಮಾಡಿದಾಗಲೇ ನನಗೆ ಫೋನ್ ಮಾಡಿ ವಿಷಯ ತಿಳಿಸಬೇಕಿತ್ತು. ಈಗ ನೋಡಿ ದಿವ್ಯಾ ಮನೆ ಬಿಟ್ಟು ಹೋಗುತ್ತೀನಿ ಎನ್ನುತ್ತಿದ್ದಾಳೆ. ನನ್ನನ್ನು ಬಿಟ್ಟು ಹೋದರೆ, ನಾನೇನು ಮಾಡಲಿ ಇಷ್ಟು ದಿನ ಪಟ್ಟ ಕಷ್ಟವೆಲ್ಲಾ ವೇಸ್ಟ್ ಆಯ್ತು ಎಂದು ಕೂಗಾಡುತ್ತಾನೆ. ಆಗ ಗೊಗ್ಗಯ್ಯ ಸಮಾಧಾನವಾಗಿರು. ಅವಳಿಗೆ ಇನ್ನೂ ಯಾವ ಸತ್ಯವೂ ಗೊತ್ತಾಗಿಲ್ಲ ಎಂದು ಹೇಳಿದರೂ ಕೇಳದೇ ಹೋಗಿ ಮನೆ ಬಾಗಿಲನ್ನು ಹಾಕಿಕೊಳ್ಳುತ್ತಾನೆ.

ದಿವ್ಯಾ ಮುಂದಿನ ನಡೆ ಏನು..?
ಇದೇ ಸಮಯಕ್ಕೆ ದಿವ್ಯಾ ಬಂದಾಗ ಗೊಗ್ಗಯ್ಯ ಹಾಗೂ ಛೋಟಾ ದಿವ್ಯಾಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ನಿನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿರುವ ಬಾಲನಿಗೆ ಹೀಗೆಲ್ಲಾ ಮಾಡಬಾರದಿತ್ತು ಎಂದು ಬೈಯುತ್ತಾರೆ. ಆದರೆ ದಿವ್ಯಾ, ಬಾಲನದ್ದು ನಾಟಕ ಎಂದು ಹೇಳುತ್ತಾಳೆ. ಆದರೆ, ಕಿಟಕಿ ಬಳಿ ಹೋಗಿ ನೋಡಿದಾಗ ಬಾಲ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿರುತ್ತಾನೆ. ಇದನ್ನು ನೋಡಿದ ಎಲ್ಲರೂ ಶಾಕ್ ಆಗುತ್ತಾರೆ. ಕೊನೆಗೆ ಬಾಗಿಲು ಒಡೆದು ಹೋಗಿ ಬಾಲನನ್ನು ಊಳಿಸಿಕೊಳ್ಳುತ್ತಾರೆ. ದಿವ್ಯಾ ಭಯಬೀಳುತ್ತಾಳೆ. ಗೊಗ್ಗಯ್ಯ, ದಿವ್ಯಾಳನ್ನು ಆಚೆಗೆ ಕಳಿಸಿ, ಬಾಲನಿಗೆ ಬುದ್ಧಿ ಹೇಳುತ್ತಾನೆ. ಬಾಲ ನಾಟಕ ಮಾಡೋದಕ್ಕೆ ಹೋದೆ ಅದು ಸೀರಿಯಸ್ ಆಯ್ತು ಎನ್ನುತ್ತಾನೆ. ಈಗ ಇಬ್ಬರೂ ಸೇರಿ ಹೊಸ ಪ್ಲ್ಯಾನ್ ಮಾಡುತ್ತಿದ್ದಾರೆ.


Click it and Unblock the Notifications











