Sathya: ಸತ್ಯ ಮೇಲೆ ಗೂಬೆ ಕೂರಿಸಿದ ಮನೆಯವರು

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ಹುಡುಗರು ರಾಕೇಶ್ ನನ್ನು ಹುಡುಕುತ್ತಿದ್ದಾರೆ. ರಾಕೇಶ್ ರೂಮ್‌ನಲ್ಲೂ ಇಲ್ಲ. ಫೋನ್ ಕೂಡ ಸ್ವಿಚ್ ಆಫ್ ಮಾಡಿದ್ದಾನೆ. ಇದರಿಂದ ಹುಡುಗರಿಗೆ ಗಾಬರಿಯಾಗಿದೆ. ಈ ವಿಚಾರವನ್ನು ಹೇಳಬೇಕು ಎಂದೇ ಹುಡುಗರು ಸತ್ಯಳಿಗೆ ಫೋನ್ ಮಾಡಿದ್ದಾರೆ. ಆದರೆ ಎಂಗೇಜ್‌ಮೆಂಟ್ ಬ್ಯುಸಿ ಇದ್ದ ಕಾರಣ ರಿಸೀವ್ ಮಾಡುವುದಿಲ್ಲ. ನಂತರ ರಾಯರ ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದಿದೆ.

ಹೀಗಾಗಿ ಹುಡುಗರು ರಾಕೇಶ್‌ಗಾಗಿ ಎಲ್ಲಾ ಕಡೆಗಳಲ್ಲೂ ಹುಡುಕಾಡುತ್ತಿದ್ದಾರೆ. ರಾಕಿ ಹಾಗೂ ರಿತು ನೋಡಿದರೆ, ಮನೆಯಿಂದ ಎಸ್ಕೇಪ್ ಆಗಿ ಎಲ್ಲಿಗೆ ಹೊರಟಿದ್ದಾರೆ ಎಂಬುದೇ ಗೊತ್ತಿಲ್ಲ. ನಿಶ್ಚಿತಾರ್ಥ ರಿತು ಮನೆ ಬಿಟ್ಟು ಹೋಗಿದ್ದರಿಂದ ನಿಂತು ಹೋಗಿದೆ. ಇದರಿಂದ ಮನೆಯಲ್ಲಿ ಎಲ್ಲರಿಗೂ ಗಾಬರಿ ಜೊತೆಗೆ ಅವಮಾನವೂ ಆಗಿದೆ.

Sathya Serial 23rd May episode written update

ಬೀಗರು ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ಇದೆಲ್ಲದರಿಂದ ಮನೆಯವರಿಗೆ ನೋವಾಗಿದೆ. ರಾಯರು ಎಲ್ಲರ ಪರವಾಗಿ ಬೀಗರ ಬಳಿ ಕ್ಷಮೆ ಕೇಳಿದ್ದಾರೆ. ಇಂಥಹ ಪರೀಸ್ಥಿತಿ ಬರುತ್ತದೆ ಎಂದು ನಾವು ಕೂಡ ಊಹಿಸಿರಲಿಲ್ಲ. ನಮ್ಮಿಂದಾದ ತೊಂದರೆಗೆ ಕ್ಷಮೆ ಇರಲಿ ಎಂದು ರಾಯರು ಹೇಳುತ್ತಾರೆ. ಕ್ಷಮೆ ಕೇಳಿದ ಮೇಲೂ ಕೂಡ ಬೀಗರು ಬೈದು ಅಲ್ಲಿಂದ ಹೊರಡುತ್ತಾರೆ.

ಸೀತಾಳಿಗೆ ಬೈದ ರಾಯರು

ಬೀಗರು ಹೊರಡುತ್ತಿದ್ದಂತೆಯೇ ರಾಯರು ಸೀತಾ ದೇವಿಗೆ ಬೈಯುತ್ತಾರೆ. ಗುರುಗಳು ಹೇಳಿದಂತೆಯೇ ಆಯ್ತು. ಬೇಡ ಅಂದರೂ ಒಬ್ಬರೂ ನನ್ನ ಮಾತನ್ನು ಕೇಳಲಿಲ್ಲ. ಸಂಪ್ರದಾಯ ಎಂದು ಬಾಯಿ ಬಡಿದುಕೊಳ್ಳುತ್ತಿದ್ದೆಯಲ್ಲ. ಈಗ ಏನಾಯ್ತು ನೋಡು ಸೀತಾ. ಕೋಟೆಮನೆ ಮರ್ಯಾದೆ ಬೀದಿಯಲ್ಲಿ ಹರಾಜಾಯ್ತು ಎಂದು ಬೈಯುತ್ತಾರೆ. ರಿತುಗೆ ಇಷ್ಟವಿಲ್ಲದಿದ್ದರೂ ಈ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದು, ನಮ್ಮ ತಪ್ಪು ಎನ್ನುತ್ತಾರೆ. ಆಗ ಲಕ್ಷ್ಮಣ ಮತ್ತು ಸೀತಾ ಇಬ್ಬರೂ ಸತ್ಯಳನ್ನು ದೂಷಿಸುತ್ತಾರೆ.

Sathya Serial 23rd May episode written update

ಸೀತಾ, ಸತ್ಯಳಿಗೆ ಅದು ಯಾವ ಘಳಿಗೆಯಲ್ಲಿ ಮನೆಗೆ ಬಂದೆ. ನಿನ್ನಿಂದಾಗಿ ಈ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ. ನನ್ನ ಮಗನನ್ನು ಅದು ಯಾವಾಗ ಬುಟ್ಟಿಗೆ ಹಾಕಿಕೊಂಡೆಯೋ. ಎಲ್ಲವೂ ಹಾಳಾಗಿ ಹೋಯ್ತು ಎಂದು ಬೈಯುತ್ತಾಳೆ. ಲಕ್ಷ್ಮಣ್ ಕೂಡ ಸತ್ಯ ಮೇಲೆ ಕೂಗಾಡುತ್ತಾನೆ.

ಸತ್ಯಳನ್ನು ದೂಷಿಸಿದ ಮನೆಯವರು

ಕೀರ್ತನಾ ಸಿಕ್ಕಿದ್ದೇ ಚಾನ್ಸ್ ಎಂದು ಸತ್ಯಳನ್ನು ಮನಸೋಇಚ್ಛೆ ಬೈಯುತ್ತಾಳೆ. ಇವಳು ಮನೆಗೆ ಬಂದಾಗಿನಿಂದ ಇದೇ ಆಯ್ತು. ಈ ಮನೆಯನ್ನು ಒಡೆಯಬೇಕು ಎಂದೇ ಸತ್ಯ ತನ್ನ ತಮ್ಮ ರಾಕೇಶ್ ಜೊತೆಗೆ ರಿತು ಲವ್ ಮಾಡುವಂತೆ ಮಾಡಿದ್ದಾಳೆ. ಈಗ ರಿತು, ರಾಕಿ ಜೊತೆಗೆ ಓಡಿ ಹೋಗಿದ್ದಾನೆ. ಇದೆಲ್ಲವೂ ಕೂಡ ಸತ್ಯ ಪ್ಲಾನ್. ಅವಳಿಂದ ನಮ್ಮ ಮನೆಯಲ್ಲಿ ದಿನ ಒಂದು ಡ್ರಾಮಾ ನಡೆಯುತ್ತದೆ. ಎಲ್ಲರೂ ಬಿಟ್ಟಿಯಾಗಿ ನೋಡುತ್ತಿದ್ದೇವೆ ಎಂದು ಹೇಳುತ್ತಾಳೆ.

ಲಕ್ಷ್ಮಣ ಕೂಡ ಸತ್ಯ, ಕಾರ್ತಿಕ್ ಹಾಗೂ ಊರ್ಮಿಳಾ ಮೇಲೆ ಕೂಗಾಡುತ್ತಾನೆ. ಕಾರ್ತಿಕ್ ಸತ್ಯ ತಪ್ಪಿಲ್ಲದಿದ್ದರೂ ಎಲ್ಲರೂ ಅವಳನ್ನೇ ದೂಷಿಸುತ್ತಿರುವುದಕ್ಕೆ ಕೋಪ ಮಾಡಿಕೊಳ್ಳುತ್ತಿರುತ್ತಾನೆ.

ಮನೆಯನ್ನು ಬಿಟ್ಟು ಹೊರಟ ದಿವ್ಯಾ

ಇತ್ತ ದಿವ್ಯಾ ಕೂತಲ್ಲೇ ಕುಳಿತಿರುತ್ತಾಳೆ. ಬಾಲ ಬಂದು ಊಟವನ್ನು ತಂದು ಕೊಡುತ್ತಾನೆ. ದಿವ್ಯಾ ಮೊದಲು ನಿರಾಕರಿಸುತ್ತಾಳೆ. ಬಳಿಕ ಊಟವನ್ನು ಮಾಡುತ್ತಾಳೆ. ಆಗ ಬಾಲ ದಿವ್ಯಾ ಕೋಪ ಕಡಿಮೆ ಆಯ್ತು ಎಂದು ತಿಳಿದು ಅವನೇ ದಿವ್ಯಾಳಿಗೆ ಊಟ ಮಾಡಿಸುತ್ತಾನೆ. ಆದರೆ ದಿವ್ಯಾ ಈ ಮನೆಯಿಂದ ಹೊರಗೆ ಹೋಗುವುದಕ್ಕಾಗಿ ಹೀಗೆ ನಾಟಕ ಮಾಡುತ್ತಾಳೆ.

ಜಾನಕಿ ಹಾಗೂ ಗಿರಿಜಮ್ಮ ವಾಪಸ್ ತಮ್ಮ ಊರಿಗೆ ಹೊರಟಾಗ ದಿವ್ಯಾ ಕೂಡ ಹಠ ಮಾಡಿಕೊಂಡು ಹೊರಡುತ್ತಾಳೆ. ಇದನ್ನು ತಿಳಿದು ಬಾಲ ಬಂದು ಕರೆದಾಗ ಜೋರು ಮಾಡಿ ಗಲಾಟೆ ಮಾಡುತ್ತಾಳೆ.

More from Filmibeat

English summary
Sathya Serial 23rd May episode written update. here is detials about Divya leaves village with her mother and granny for her house. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X