Sathya: ಮನೆಗ ಬಂದು ಕೂಗಾಡಿದ ಕೀರ್ತನಾ: ಮನೆಯವರೆಲ್ಲಾ ಫುಲ್ ಖುಷ್
'ಸತ್ಯ' ಧಾರಾವಾಹಿಯಲ್ಲಿ ಬಾಲ ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕೆ ದಿವ್ಯಾ ಹೆದರಿಕೊಂಡಿದ್ದಾಳೆ. ನಾನೇನಾದರೂ ಮಾಡಿ ಬಾಲ ಅವರ ತಂದೆ ಮನಸನ್ನು ಒಲಿಸಿಕೊಳ್ಳೋಣ ಎಂದರೆ, ಇವನು ಏನೋ ಮಾಡಿದನಲ್ಲ ಎಂದು ಬೇಸರ ಮಾಡಿಕೊಂಡಿದ್ದಾಳೆ.
ಇತ್ತ ಕೀರ್ತನಾಗೆ ಕಾರ್ತಿಕ್ ಮೇಲೆ ಹೊಟ್ಟೆ ಉರಿ ಜೊತೆಗೆ ಕೋಪವೂ ಬಂದಿದೆ. ತನ್ನ ಆಫೀನಲ್ಲಿ ಇದ್ದು ಕೊಂಡೇ ಕಾರ್ತಿಕ್ ಮೋಸ ಮಾಡಿದ ಎಂದು ಗರಂ ಆಗಿದ್ದಾಳೆ.
ಕಾರ್ತಿಕ್‌ಗಂತೂ ತನ್ನ ಪ್ರಾಜೆಕ್ಟ್ ಸೆಲೆಕ್ಟ್ ಆಗಿರುವುದಕ್ಕೆ ಫುಲ್ ಖುಷಿಯಾಗಿರುತ್ತಾನೆ. ಈ ಸಂತಸವನ್ನು ಸತ್ಯ ಜೊತೆಗೆ ಹಂಚಿಕೊಳ್ಳಬೇಕು ಎಂದು ಕಾರ್ತಿಕ್ ಕಾತುರರಾಗಿದ್ದಾನೆ.

ಸುಳ್ಳು ಹೇಳಿದ ಊರ್ಮಿಳಾ
ಆಫೀಸಿನಿಂದ ಮನೆಗೆ ಬರುವ ಕಾರ್ತಿಕ್, ಸತ್ಯಳನ್ನು ಹುಡುಕಾಡುತ್ತಾನೆ. ಆದರೆ ಎಲ್ಲೂ ಕಾಣಿಸುವುದಿಲ್ಲ. ಊರ್ಮಿಳಾ ಬಳಿ ಬಂದು ಸತ್ಯ ಎಲ್ಲಿ ಎಂದು ಕೇಳುತ್ತಾನೆ. ಇದೇ ಸಮಯಕ್ಕೆ ಸೀತಾ ಕೂಡ ಬರುತ್ತಾಳೆ. ಸತ್ಯ ಮನೆಯಲ್ಲಿ ಇಲ್ಲ. ನಿನ್ನ ಮೇಲೆ ಕೋಪ ಮಾಡಿಕೊಂಡು ತವರು ಮನೆಗೆ ಹೋದಳು ಎಂದು ಸುಳ್ಳು ಹೇಳುತ್ತಾಳೆ. ಈ ಮಾತನ್ನು ಕೇಳಿದ ಕಾರ್ತಿಕ್ ಹಾಗೂ ಸೀತಾ ಇಬ್ಬರೂ ಶಾಕ್ ಆಗುತ್ತಾರೆ. ಇನ್ನು ಸತ್ಯ ಬಂದು ನಾನು ಇಲ್ಲೇ ಇದ್ದೀನಿ ಎಂದು ಹೇಳುತ್ತಾಳೆ. ಸುಮ್ಮನೆ ಸುಳ್ಳು ಹೇಳಿದ್ದು ಎಂದು ತಿಳಿದರೂ ಸೀತಾ, ಸತ್ಯ ಮೇಲೆ ಕೋಪ ಮಾಡಿಕೊಂಡು ಬೈಯುತ್ತಾಳೆ.

ತಲೆ ಕೆಡಿಸಿಕೊಂಡ ದಿವ್ಯಾ
ಇತ್ತ ದಿವ್ಯಾ ಬಾಲ ಹೀಗೆ ಮಾಡಿಕೊಂಡನಲ್ಲ ಮುಂದೇನು ಮಾಡುವುದು ಎಂದು ಯೋಚಿಸುತ್ತಿರುತ್ತಾಳೆ. ಇದೇ ಸಮಯವನ್ನೇ ಬಳಸಿಕೊಂಡ ಛೋಟಾ ಹಾಗೂ ಜಲಜಾ ದಿವ್ಯಾ ಬಳಿ ಬಂದು ಮಾತನಾಡುತ್ತಾರೆ. ದಿವ್ಯಾಗೆ ನೀನು ಬಾಲನನ್ನು ಬೈಯಬಾರದಿತ್ತು. ಅವನು ನಿನ್ನನ್ನು ತುಂಬಾನೇ ಪ್ರೀತಿಸುತ್ತಾನೆ. ಅದಕ್ಕೆ ಅವನಿಗೆ ಎಲ್ಲಾ ಇದ್ದರೂ ಬಿಟ್ಟು ನಿನ್ನ ಪ್ರೀತಿ ಹಿಂದೆ ಬಂದಿದ್ದಾನೆ ಎಂದು ಛೋಟಾ ಹೇಳುತ್ತಾನೆ. ದಿವ್ಯಾ ಮೊದಲು ರೇಗಾಡುತ್ತಾಳೆ. ಜಲಜಾ ಕೂಡ ಮೊದಲು ದಿವ್ಯಾಳನ್ನು ಸಪೋರ್ಟ್ ಮಾಡಿ ಮಾತನಾಡುತ್ತಾಳೆ. ಬಳಿಕ ಬಾಲ ಪಾಪ ಎಂಬಂತೆ ಮಾತನಾಡುತ್ತಾಳೆ. ಛೋಟಾ ಮತ್ತು ಜಲಜಾ ಇಬ್ಬರ ಮಾತುಗಳನ್ನು ಕೇಳುವ ದಿವ್ಯಾಗೆ ಈಗ ಏನು ಮಾಡುವುದು ಎಂಬುದೇ ತಿಳಿಯುವುದಿಲ್ಲ. ದಿವ್ಯಾ ಅಳಲು ಮುಂದಾಗುತ್ತಾಳೆ. ಛೋಟಾ ಈಗ ಹೋಗಿ ಬಾಲನ ಜೊತೆಗೆ ನಗು ನಗುತಾ ಮಾತನಾಡಿ ಎಂದು ಹೇಳುತ್ತಾನೆ. ದಿವ್ಯಾ ಈಗ ಬಾಲನನ್ನು ಒಲಿಸಿಕೊಳ್ಳಬೇಕಿದೆ.

ಖುಷಿ ಹಂಚಿಕೊಳ್ಳುವ ಕಾತುರದಲ್ಲಿ ಕಾರ್ತಿಕ್
ಇನ್ನು ಊಟ ಮಾಡಲು ಸತ್ಯ ಮನೆಯಲ್ಲಿ ಎಲ್ಲರೂ ಕುಳಿತಿರುತ್ತಾರೆ. ಕಾರ್ತಿಕ್‌ಗೆ ತನ್ನ ಪ್ರಾಜೆಕ್ಟ್ ಸೆಲೆಕ್ಟ್ ಆಗಿರುವ ವಿಚಾರವನ್ನು ಹೇಳಿಕೊಂಡು ಖುಷಿ ಪಡಬೇಕು. ಆದರೆ, ಸಮಯ ಆಗುತ್ತಿಲ್ಲ. ಹಾಗಾಗಿ ಡೈನಿಂಗ್ ಟೇಬಲ್ ಮೇಲೆ ಕುಳಿತಿದ್ದರೂ, ಊಟ ಮಾಡದೇ, ಒದ್ದಾಡುತ್ತಿದ್ದಾನೆ. ಕಾರ್ತಿಕ್ ನಡೆದುಕೊಳ್ಳುತ್ತಿರುವುದನ್ನು ಊರ್ಮಿಳಾ ನೋಡುತ್ತಿರುತ್ತಾಳೆ. ಇಬ್ಬರೂ ಹೀಗೆ ಖುಷಿಯಾಗಿ ಇರಲಿ ಎಂದು ಊರ್ಮಿಳಾ ಮನದಲ್ಲೇ ಬಯಸುತ್ತಾಳೆ.

ಪ್ರಾಜೆಕ್ಟ್ ಸೆಲೆಕ್ಟ್ ಆಗಿದ್ದಕ್ಕೆ ಸತ್ಯ ಖುಷ್
ಈ ವೇಳೆಗೆ ಕೀರ್ತನಾ ಬರುತ್ತಾಳೆ. ಬಂದು ಕಾರ್ತಿಕ್ ಮೇಲೆ ಕೂಗಾಡುತ್ತಾಳೆ. ನಮ್ಮ ಆಫೀಸಿನಲ್ಲೇ ಇದ್ದು ನಮಗೆ ಮೋಸ ಮಾಡಿದ್ದಾನೆ ಎಂದು ರಾಮಚಂದ್ರ ರಾಯರಿಗೆ ಹೇಳುತ್ತಿರುತ್ತಾಳೆ. ಏನಾಯ್ತು ಎಂದು ಕೇಳಿದ್ದಕ್ಕೆ, ನಾವು ರಿಜೆಕ್ಟ್ ಮಾಡಿದ್ದನ್ನೇ ಸಬ್ಮಿಟ್ ಮಾಡಿದ್ದಾನೆ. ಅದು ಈಗ ಸೆಲೆಕ್ಟ್ ಆಗಿದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ರಾಮಚಂದ್ರ ರಾಯರು ಹಾಗೂ ಸೀತಾ ಇಬ್ಬರೂ ಖುಷಿ ಪಡುತ್ತಾರೆ. ಮುಂದೆ ಕಾರ್ತಿಕ್‌ಗೆ ಮತ್ತೆ ಆಫೀಸ್ ಜವಾಬ್ದಾರಿಯನ್ನು ಕೊಡುತ್ತಾರಾ ಕಾದು ನೋಡಬೇಕಿದೆ.

Click it and Unblock the Notifications