Sathya: ಕೀರ್ತನಾ ಆಟ ಸೋತಾಯ್ತು: ಸತ್ಯ ಹಾಗೂ ಕಾರ್ತಿಕ್ ಗೆದ್ದಾಯ್ತು..
'ಸತ್'ಯ ಧಾರಾವಾಹಿಯಲ್ಲಿ ಕೀರ್ತನಾ ಪ್ಲ್ಯಾನ್ ಒಂದು ಕಡೆ ಸಕ್ಸಸ್ ಆದರೂ ಕೂಡ ಮತ್ತೊಂದು ಕಡೆ ಸೋತು ಹೋಗಿದ್ದಾಳೆ. ತನ್ನ ಪ್ಲ್ಯಾನ್ ಏನೇ ಮಾಡಿದರೂ ಉಲ್ಟಾ ಆಗುತ್ತಿದೆ. ರಿತು ಹಾಗೂ ರಾಕಿಯನ್ನು ದೂರ ಮಾಡುವ ಜೊತೆಗೆ ರಾಕಿಯಿಂದ ಸತ್ಯಗೆ ಆಗುತ್ತಿದ್ದ ಸಹಾಯವನ್ನು ತಪ್ಪಿಸಲು, ರೌಡಿಗಳಿಗೆ ಹಣ ಕೊಟ್ಟು, ರಾಕಿಯನ್ನು ಹೊಡೆಸಿದ್ದಾಳೆ.
ಇತ್ತ ಸತ್ಯ ಹಾಗೂ ಕಾರ್ತಿಕ್ ಅವಾರ್ಡ್ ಫಂಕ್ಷನ್‌ಗೆ ಹೋಗಬಾರದು ಎಂದು ಪ್ಲ್ಯಾನ್ ಮಾಡಿದ್ದಳು. ಆದರೆ, ಅದು ಫ್ಲಾಪ್ ಆಗಿದ್ದು, ಕೀರ್ತನಾ ಪ್ಲ್ಯಾನ್‌ನಿಂದಾಗಿ ಸತ್ಯ ಹಾಗೂ ಕಾರ್ತಿಕ್‌ಗೆ ಒಳ್ಳೆಯದೇ ಆಗಿದೆ. ಅವಾರ್ಡ್ ಫಂಕ್ಷನ್‌ಗೆ ಬರಬಾರದು ಎಂದು ಸತ್ಯ ಹಾಗೂ ಕಾರ್ತಿಕ್ ದಾರಿಯನ್ನು ಸುಹಾಸ್ ತಪ್ಪಿಸಿದ್ದ. ಆದರೂ ಕೂಡ ಸಮಯಕ್ಕೆ ಸರಿಯಾಗಿ ಸತ್ಯ ಮತ್ತು ಕಾರ್ತಿಕ್ ಇಬ್ಬರೂ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಕೀರ್ತನಾ ಕೂಡ ಬೆಂಗಳೂರಿನಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಈಗ ಮತ್ತೊಂದು ಪ್ಲ್ಯಾನ್ ಮಾಡಿದ್ದಾಳೆ.

ಕಾರ್ತಿಕ್ ವಾಶ್ ರೂಂಗೆ ಹೋಗುತ್ತಿದ್ದಂತೆಯೇ ಸುಹಾಸ್ ವಾಶ್ ರೂಂ ಅನ್ನು ಆಚೆಯಿಂದ ಬೀಗ ಹಾಕಿದ್ದಾನೆ. ಇದರಿಂದ ಅವಾರ್ಡ್ ಅನ್ನು ಪಡೆಯಲು ಸತ್ಯಾನೇ ಸ್ಟೇಜ್ ಮೇಲೆ ಹೋಗಿದ್ದಾಳೆ. ಸತ್ಯ ವೇದಿಕೆ ಹತ್ತಿ ಗಾಬರಿಯಾಗಿದ್ದಾಳೆ. ಏನು ಮಾತನಾಡುವುದು ಎಂಬುದು ತಿಳಿಯದೆಯೇ ಸುಮ್ಮನೆ ನಿಂತಿದ್ದಾಳೆ.
ಇತ್ತ ರಾಕೇಶ್ ಗೆ ಬೆದರಿಸಲು ಲಕ್ಷ್ಮಣ ಹೇಳಿರುತ್ತಾನೆ. ಆದರೆ, ಕೀರ್ತನಾ ಅವನಿಗೆ ಹೊಡೆಯಲು ಸೂಚನೆ ಕೊಟ್ಟಿರುತ್ತಾಳೆ. ಅದೂ ಕೂಡ ರಿತು ಇರುವಾಗಲೇ ಈ ಕೆಲಸವನ್ನು ಮಾಡಲು ಹೇಳಿರುತ್ತಾಳೆ. ಇದರಿಂದ ಮನೆಯಲ್ಲಿನ ನೆಮ್ಮದಿ ಹಾಳು ಮಾಡಿ, ಮನೆಯಲ್ಲಿ ಎಲ್ಲರಿಗೂ ಸತ್ಯ ಮೇಲೆ ಕೋಪ ಬಂದು ಆಕೆಯನ್ನು ಹೊರಗೆ ಹಾಕಲಿ ಎಂಬುದು ಕೀರ್ತನಾಳ ಪ್ಲಾನ್ ಆಗಿದೆ. ಹೀಗಾಗಿ ಕೀರ್ತನಾ ಮನೆಯಲ್ಲಿ ಎಲ್ಲರನ್ನು ಸತ್ಯ ವಿರುದ್ಧ ಎತ್ತಿಕಟ್ಟಲು ಮುಂದಾಗಿದ್ದಾಳೆ. ಈಗಾಗಲೇ, ಸೀತಾ ಸಂಪೂರ್ಣವಾಗಿ ಸತ್ಯ ಮೇಲೆ ಕೋಪದಲ್ಲಿದ್ದು, ಈಗ ಲಕ್ಷ್ಮಣನಿಗೆ ಅನುಮಾನ ಶುರುವಾಗಿದೆ. ಇನ್ನು ಊರ್ಮಿಳಾ ಕೂಡ ಮುಂದೆ ಕೀರ್ತನಾ ಮಾತನ್ನು ನಂಬುವ ಸಾಧ್ಯತೆ ಇದೆ.

ರಿತು, ರಾಕಿ ಹಾಗೂ ಸತ್ಯ ಹುಡುಗರೆಲ್ಲಾ ಒಟ್ಟಿಗೆ ಇರುವಾಗ ಬರುವ ರೌಡಿಗಳು ಎಲ್ಲರನ್ನೂ ಕಟ್ಟಿ ಹಾಕಿ ರಾಕಿ ಬಲಗೈಗೆ ಜೋರು ಏಟು ಆಗುವಂತೆ ಹೊಡೆದಿದ್ದಾರೆ. ರಿತು ಹಿಂದೆ ಬೀಳ್ತಿಯಾ ಎಂದು ಬೆದರಿಸಿದ್ದಾರೆ. ರಾಕೇಶ್ ಇನ್ಯಾವತ್ತು ಏನನ್ನು ಬರೆಯದಂತೆ ಬೆರಳಿಗೆ ಏಟು ಮಾಡಿರುತ್ತಾರೆ. ರಿತು ಅವನು ಇವತ್ತು ಪರೀಕ್ಷೆಗೆ ಹೋಗಬೇಕು. ಬಿಟ್ಟು ಬಿಡಿ ಎಂದು ಕೇಳಿಕೊಂಡರೂ ಬಿಡುವುದಿಲ್ಲ. ಈಗ ರಾಕಿ ಬಲಗೈಗೆ ಏಟಾಗಿರುವುದರಿಂದ ಸತ್ಯ ಕನಸಿನಂತೆ ರಾಕಿ ಪರೀಕ್ಷೆ ಬರೆದು ಐಎಎಸ್ ಆಗಲು ಸಾಧ್ಯವಿಲ್ಲ. ಇದು ಸತ್ಯಗೆ ತಿಳಿದರೆ ಮುಂದೆ ಏನಾಗುತ್ತೋ ಗೊತ್ತಿಲ್ಲ.
ಇನ್ನು ಸತ್ಯ ಸ್ಟೇಜ್ ಮೇಲೆ ಕನ್ನಡದಲ್ಲೇ ಮಾತನಾಡುತ್ತಾಳೆ. ಹೇಗೆ ಈ ಪ್ರಾಜೆಕ್ಟ್ ಐಡಿಯಾ ಬಂತು ಎಂದು ಹೇಳುತ್ತಾಳೆ. ಆಗ ಸತ್ಯ ಓದಿನ ಬಗ್ಗೆ ಕೇಳುತ್ತಾರೆ. ಇದೇ ಸಂದರ್ಭಕ್ಕೆ ಬರುವ ಕಾರ್ತಿಕ್, ಸತ್ಯ ಬಗ್ಗೆ ಹೇಳುತ್ತಾನೆ. ಏನೂ ಓದದಿದ್ದರೂ ಸತ್ಯ ಈ ಪ್ರಾಜೆಕ್ಟ್ ಮಾಡಿದ್ದಾಳೆ. ಇದು ಅವಳ ಅನುಭವದಿಂದ ಸಾಧ್ಯವಾಯ್ತು ಎಂದು ಹೇಳಿದ್ದಾನೆ. ಇದರಿಂದ ಕೀರ್ತನಾಗೆ ಕೋಪ ಬಂದಿದೆ. ಕೀರ್ತನಾ ಪ್ಲ್ಯಾನ್ ಉಲ್ಟಾ ಆಗಿದ್ದು, ಮುಂದೇನು ಮಾಡುತ್ತಾಳೋ ಗೊತ್ತಿಲ್ಲ.


Click it and Unblock the Notifications











