ದಿವ್ಯಾ ಕಣ್ಣಿಗೆ ಬಿದ್ದ ಬಾಲನ ತಂದೆ : ಮುಂದೆ ಬಾಲ ಪರಿಸ್ಥಿತಿ ಏನೋ..?

By ಪ್ರಿಯಾ ದೊರೆ

ಸತ್ಯ ಧಾರಾವಾಹಿಯಲ್ಲಿ ರಿತು ಮದುವೆ ಮಾಡಲು ಮನೆಯಲ್ಲಿ ಪ್ಲಾನ್ ಮಾಡುತ್ತಿದ್ದಾರೆ. ರಿತು ಹಾಗೂ ರಾಕಿ ಪ್ರೀತಿಸುತ್ತಿರುವುದು ಎಲ್ಲರಿಗೂ ಗೊತ್ತಾಗಿದೆ. ಹಾಗಾಗಿ ಸೀತಾ ಮತ್ತು ಲಕ್ಷ್ಮಣ ಇಬ್ಬರೂ ಸೇರಿ ರಿತುಗೆ ಬೇಗ ಮದುವೆ ಮಾಡಬೇಕು ಎಂದು ಪ್ಲಾನ್ ಮಾಡುತ್ತಿದ್ದಾರೆ. ರಿತುಗೆ ಹುಡುಗನನ್ನು ಆಯ್ಕೆ ಮಾಡುತ್ತಿದ್ದಾರೆ. ಇದನ್ನು ಒಪ್ಪು ಸತ್ಯ ಸಿದ್ಧಳಿಲ್ಲ. ಆದರೆ ಆಕೆ ಮಾತು ಕೇಳುವವರಿಲ್ಲ.

ರಿತುಗೆ ಇಷ್ಟು ಬೇಗ ಮದುವೆ ಮಾಡುವುದು ಸರಿಯಲ್ಲ. ಅವಳು ಆರಾಮಾಗಿ ಬಿಟ್ಟು, ಅವಳಿಷ್ಟದಂತೆ ಮದುವೆ ಮಾಡಬೇಕು ಎನ್ನುತ್ತಿದ್ದಾಳೆ. ಮನೆಯಲ್ಲಿ ರಿತು ಮದುವೆ ವಿಚಾರ ಹೊತ್ತಿ ಉರಿಯುತ್ತಿರುವಾಗಲೇ ಕೀರ್ತನಾ ಇನ್ನಷ್ಟು ತುಪ್ಪವನ್ನು ಸುರಿದಿದ್ದಾಳೆ. ರಿತು ತಲೆ ಕೆಡಿಸಿರುವುದೇ ಸತ್ಯ. ರಾಕೇಶ್ ಹಾಗೂ ರಿತು ತಲೆ ಕೆಡಿಸಿ ಇಬ್ಬರೂ ಪ್ರೀತಿಸುವಂತೆ ಮಾಡಿದ್ದಾಳೆ. ಕೋಟೆ ಮನೆ ಮಾನ ಮರ್ಯಾದೆ ತೆಗೆಯಲು ಮುಂದಾಗಿದ್ದಾಳೆ ಅಂತ ಪದೇ ಪದೇ ಹೇಳುತ್ತಿದ್ದಾಳೆ.

Sathya Serial 26th April episode written update

ಕೀರ್ತನಾ ಮಾತು ಕೇಳಿ ಸೀತಾ, ಸತ್ಯಳಿಗೆ ಮತ್ತಷ್ಟು ಕ್ಲಾಸ್ ತೆಗೆದುಕೊಂಡಿದ್ದಾಳೆ. ಇನ್ಯಾವುದೇ ಕಾರಣಕ್ಕೂ ರಿತು ವಿಚಾರಕ್ಕೆ ತಲೆ ಹಾಕಬಾರದು ಎಂದು ಹೇಳಿದ್ದಾಳೆ. ಲಕ್ಷ್ಮಣ ಕೂಡ ಇಲ್ಲಿ ಯಾರ ಮಾತನ್ನೂ ಕೇಳುವುದಕ್ಕೆ ತಯಾರಿಲ್ಲ. ಅತ್ತಿಗೆ ಹೇಳಿದಂತೆ ಮಗಳ ಮದುವೆಯನ್ನು ಮಾಡಲು ಹುಡುಗನನ್ನು ಹುಡುಕಿದ್ದಾನೆ. ಎಂಗೇಜ್ ಮೆಂಟ್ ಮಾಡಲು ದಿನಾಂಕ ನೋಡುತ್ತಿದ್ದು, ಇಷ್ಟರಲ್ಲೇ ರಿತು ಮದುವೆಯನ್ನು ಮಾಡಿ ಮುಗಿಸಬೇಕು ಎಂದು ತೀರ್ಮಾನಿಸಿದ್ದಾನೆ.

ರಿತು ತನಗೆ ಈ ಮದುವೆ ಬೇಡ. ತಾನು ಮದುವೆಯಂತಾದರೆ ಅದು ರಾಕೇಶ್‌ನನ್ನು ಮಾತ್ರವೇ ಎಂದು ಹೇಳಿದ್ದಾಳೆ. ಆದರೆ, ಲಕ್ಷ್ಮಣ ಮತ್ತು ಸೀತಾ ಇಬ್ಬರೂ ರಿತು ಮಾತನ್ನು ಕೇಳಲು ತಯಾರಿಲ್ಲ. ಎಂಗೇಜ್ ಮೆಂಟ್ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಸತ್ಯ ಪರ ನಿಂತಿರುವ ಕಾರ್ತಿಕ್‌ಗೆ ಕೂಡ ರಿತುಗೆ ಇಷ್ಟವಿಲ್ಲದ ಮದುವೆ ಮಾಡುವುದು ಬೇಕಿಲ್ಲ. ಆದರೆ, ಇವರ ಯಾರ ಮಾತನ್ನು ಕೇಳದೇ ಈಗ ರಿತು ಮದುವೆಗೆ ತಯಾರಿ ನಡೆಯುತ್ತಿದೆ. ಹಾಗಾಗಿ ಸತ್ಯ ಮತ್ತು ಕಾರ್ತಿಕ್ ಹೇಗಾದರೂ ಮಾಡಿ ಈ ಮದುವೆಯನ್ನು ತಡೆಯಬೇಕು ಎಂದು ಆಲೋಚಿಸುತ್ತಿದ್ದಾರೆ.

ಇಷ್ಟವಿಲ್ಲದ ಮದುವೆಯಾದರೆ ಎಷ್ಟು ಕಷ್ಟ ಎಂದು ತಮ್ಮ ಬದುಕನ್ನೇ ಉದಾಹರಣೆಯಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೆ, ರಿತುಗೆ ಬಂದಿರುವ ಸಂಕಷ್ಟವನ್ನು ಹೇಗೆ ದೂರ ಮಾಡುತ್ತಾರೋ ಗೊತ್ತಿಲ್ಲ.

Sathya Serial 26th April episode written update

ಇತ್ತ ದಿವ್ಯಾಗೆ ಹಳ್ಳಿ ಜೀವನ ಸಾಕಾಗಿ ಹೋಗಿದೆ. ಯಾವಾಗ ದೊಡ್ಡ ಮನೆಗೆ ಹೋಗುತ್ತೀನಿ. ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತೀನಿ ಎಂದು ಯೋಚಿಸುತ್ತಿದ್ದಾಳೆ. ಈ ನಡುವೆ ದಿವ್ಯಾಳಿಗೆ ನನ್ನ ತಂದೆ ಎಂದು ಬಾಲ ಹಣ ಕೊಟ್ಟು ಪರಿಚಯಿಸಿದ್ದ ವ್ಯಕ್ತಿ ಕಾಣಿಸಿಕೊಂಡಿದ್ದಾನೆ. ಹಾಗಾಗಿ ಆತನನ್ನು ಮಾತನಾಡಿಸಲು ಹೋಗಿದ್ದಾಳೆ. ಶೂಟಿಂಗ್‌ಗೆ ಎಂದು ಸೂಟ್ ಧರಿಸಿ ಬಂದಿರುವ ವ್ಯಕ್ತಿಯ ಕಾಲು ಹಿಡಿದ ದಿವ್ಯಾ ಕ್ಷಮೆಯಾಚಿಸಿದ್ದಾಳೆ. ತಮ್ಮ ಮದುವೆಯನ್ನು ಒಪ್ಪಿ ಮನೆಗೆ ಕರೆಸಿಕೊಳ್ಳಿ ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದಾಳೆ.

ದಿವ್ಯಾಳ ಮಾತುಗಳನ್ನು ಕೇಳಿದ ಆ ವ್ಯಕ್ತಿ ದಂಗಾಗಿದ್ದಾನೆ. ನಿಮ್ಮ ಪತಿಯನ್ನು ಕರೆದುಕೊಂಡು ಬಾ ಎಂದು ಹೇಳಿ ಕಳಿಸಿದ್ದಾನೆ. ಈಗ ದಿವ್ಯಾ ಖುಷಿಯ ಮೂಡ್ ನಲ್ಲಿದ್ದು, ಬಾಲನನ್ನು ಆ ವ್ಯಕ್ತಿಯ ಬಳಿ ಕರೆದುಕೊಂಡು ಹೋಗಲು ತಯಾರಾಗಿದ್ದಾಳೆ. ಖುಷಿಯಲ್ಲಿರುವ ದಿವ್ಯಾ, ಬಾಲನ ಜೊತೆಗೆ ಪ್ರೀತಿಯಿಂದ ಮಾತನಾಡಿರುವುದು ಶಾಕ್ ಆಗಿದೆ. ಆದರೆ, ಬಾಲನಿಗೆ ದಿವ್ಯಾ ಭೇಟಿ ಮಾಡಿರುವ ವ್ಯಕ್ತಿಯ ಬಗ್ಗೆ ಇನ್ನೂ ಗೊತ್ತಾಗಿಲ್ಲ.

ಅಪ್ಪ ಎಂದು ಪರಿಚಯ ಮಾಡಿಸಿದ್ದವನು ದಿವ್ಯಾ ಕಣ್ಣಿಗೆ ಬಿದ್ದಿರುವುದು ಬಾಲನಿಗೆ ತಿಳಿದರೆ, ಮತ್ತೇನು ಪ್ಲಾನ್ ಮಾಡುತ್ತಾನೋ. ಆತ ಬಾಲನ ತಂದೆ ಅಲ್ಲ ಎಂಬ ಸತ್ಯ ತಿಳಿದರೆ ದಿವ್ಯಾ ಏನು ಮಾಡುತ್ತಾಳೋ ಗೊತ್ತಿಲ್ಲ.

More from Filmibeat

English summary
Sathya Serial 26th April episode written update. here is detials about Seethe and lakshmana planned to marry ritu. They are discussing about engagement. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X